Home
ಸುದ್ದಿಜಾಲ

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್‌ಫೇಕ್‌ ದೊಡ್ಡ ಕಳವಳಕಾರಿ ಎಂದ ಮೋದಿ

ಭಾರತ ತಂತ್ರಜ್ಞಾನ ವಿಭಾಗದಲ್ಲಿ ಶೀಘ್ರವಾಗಿ ಬೆಳೆಯುತ್ತಿದೆ. ಇದರ ಬೆಳವಣಿಗೆ ಇತರೆ ರಾಷ್ಟ್ರಗಳು ನಿಬ್ಬೆರಗಾಗಿ ನೋಡುವಂತೆ ಮಾಡಿದೆ. ಅದಾಗ್ಯೂ ಇತ್ತೀಚಿನ ಎಐ (AI) ಬೆಳವಣಿಗೆ ಕೆಲವು ಸಮಸ್ಯೆಗಳನ್ನೂ ಸಹ ಉಂಟು ಮಾಡುತ್ತಿದ್ದು, ಈ ಬಗ್ಗೆ ದೇಶದ ಪ್ರಧಾನಿ ಮೋದಿ (P M Narendra modi) ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಹೌದು, ಎಐ ಬಳಕೆ ವ್ಯಾಪಕವಾಗಿದ್ದು, ಈ ಮೂಲಕ ಜನರು ವಿವಿಧ ರೀತಿಯಲ್ಲಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಅದಾಗ್ಯೂ ಕೆಲವರು ಇದನ್ನು ದುರಪಯೋಗ ಮಾಡಿಕೊಂಡು ದೇಶಕ್ಕೆ ಕಂಟಕ ತರುವ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಈ ಕೃತಕ ಬುದ್ಧಿಮತ್ತೆಯು ಎಲ್ಲಾ ರೀತಿಯಲ್ಲೂ ದೊಡ್ಡ ಅವಕಾಶವನ್ನು ನೀಡಲಿದ್ದು, ಶಕ್ತಿಶಾಲಿ ತಂತ್ರಜ್ಞಾನವನ್ನು ಕೌಶಲ್ಯರಹಿತ ಕೈಯಲ್ಲಿ ಇರಿಸಿದರೆ ದುರ್ಬಳಕೆ, ಅದರಲ್ಲೂ ಡೀಪ್‌ಫೇಕ್‌ಗಳ ಗಮನಾರ್ಹ ಅಪಾಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಾಗಿದ್ರೆ, ಮೋದಿ ಯಾಕೆ ಈ ರೀತಿ ಹೇಳಿಕೆ ನೀಡಿದ್ದಾರೆ. ಈ ಎಐ ನಿಂದ ಆಗುವ ಸಮಸ್ಯೆಗಳು ಏನು ಅನ್ನೋದನ್ನು ತಿಳಿಸಿಕೊಡಲಾಗಿದೆ ಓದಿರಿ.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್‌ಫೇಕ್‌ ದೊಡ್ಡ ಕಳವಳಕಾರಿ ಎಂದ ಮೋದಿ

ಬಿಲ್ ಗೇಟ್ಸ್ ಹಾಗೂ ಮೋದಿ ನಡುವೆ ಸಂವಾದ: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಮತ್ತು ಬಿಲಿಯನೇರ್ ಬಿಲ್ ಗೇಟ್ಸ್ (Bill Gates) ಅವರು ಮೋದಿಗೆ ಒಂದು ಪ್ರಶ್ನೆ ಹಾಕಿದರು. ಅದುವೇ ಭಾರತವು ಎಐ ಅನ್ನು ಹೇಗೆ ನೋಡುತ್ತದೆ ಎಂದ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮೋದಿ ಇದೊಂದು ದೊಡ್ಡ ಅವಕಾಶವಾಗಿದೆ. ಆದರೆ, ತನ್ನದೇ ಆದ ಸವಾಲುಗಳೊಂದಿಗೆ ಇದು ಬರಲಿದೆ, ಎಐ ನಂತಹ ತಂತ್ರಜ್ಞಾನಗಳನ್ನು ನಿರ್ವಹಿಸಲು ಸರಿಯಾದ ತರಬೇತಿ ಅಗತ್ಯ ಎಂದು ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ನಾನು ಎಐ ಮತ್ತು ಅದರ ಅಪಾಯಗಳ ಬಗ್ಗೆ ಪ್ರಮುಖವಾಗಿ ಕೇಂದ್ರೀಕರಿಸಿದ್ದೇನೆ. ತಪ್ಪು ಮಾಹಿತಿಯನ್ನು ತಡೆಗಟ್ಟಲು ಎಐ ರಚಿತವಾದ ಕಂಟೆಂಟ್‌ ಮೇಲೆ ಸ್ಪಷ್ಟವಾದ ವಾಟರ್‌ಮಾರ್ಕ್‌ ನೀಡಬೇಕಾಗುತ್ತದೆ. ಈ ಸಂಬಂಧ ನಾನು ಸಲಹೆ ನೀಡಿದ್ದೇನೆ. ಇದರ ಜೊತೆಗೆ ಎಐ ರಚಿತವಾದ ಕಂಟೆಂಟ್‌ನ ಸರಿಯಾದ ಮೂಲಗಳನ್ನು ಸಹ ಆ ವೇಳೆ ಉಲ್ಲೇಖ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್‌ಫೇಕ್‌ ದೊಡ್ಡ ಕಳವಳಕಾರಿ ಎಂದ ಮೋದಿ

ಚುನಾವಣೆ ಹಿನ್ನೆಲೆ ಡೀಪ್‌ಫೇಕ್ ಸಮಸ್ಯೆ: ಡೀಪ್‌ಫೇಕ್ ಅನ್ನೋ ವಿಚಾರ ಬಹುಪಾಲು ಭಾರತೀಯರಿಗೆ ತಿಳಿದಿದೆ. ಯಾಕೆಂದರೆ ಈ ಮೊದಲು ಖ್ಯಾತ ನಟಿಯರನ್ನು ಕೆಟ್ಟದಾಗಿ ಚಿತ್ರಿಸಿ ವೈರಲ್‌ ಮಾಡಲಾಗಿತ್ತು, ಈ ವಿಡಿಯೋ ನೈಜ ವಿಡಿಯೋದ ತಲೆ ಮೇಲೆ ಥಟ್ಟನೆ ಹೊಡೆದಂತೆ ಇತ್ತು. ಅಷ್ಟರಮಟ್ಟಿಗೆ ಎಐ ಬಳಕೆ ಮಾಡಿಕೊಂಡು ಡೀಪ್‌ಫೇಕ್ ವಿಡಿಯೋಗಳನ್ನು ಕ್ರಿಯೇಟ್‌ ಮಾಡಲಾಗುತ್ತಿದೆ.

ಈ ಸಂಬಂಧ ಮೋದಿ ಪ್ರತಿಕ್ರಿಯೆ ನೀಡಿ, ಯಾರಾದರೂ ಜನರನ್ನು ಮೋಸಗೊಳಿಸಲು ನನ್ನ ಧ್ವನಿಯನ್ನು ದುರುಪಯೋಗಪಡಿಸಿಕೊಳ್ಳಬಹುದು ಮತ್ತು ಅಂತಹ ಡೀಪ್‌ಫೇಕ್ ವ್ಯಾಪಕ ಕೋಲಾಹಲವನ್ನು ಉಂಟು ಮಾಡಲಿದೆ. ಡೀಪ್‌ಫೇಕ್‌ ವಿಷಯದಲ್ಲಿ ಮಾಡಬೇಕಾದ ಮತ್ತು ಮಾಡಬಾರದಂತಹದನ್ನು ವಿಷಯಗಳ ಬಗ್ಗೆ ನಾವು ಯೋಚಿಸಬೇಕಾಗಿದೆ ಎಂದು ಗೇಟ್ಸ್ ಅವರಿಗೆ ಉತ್ತರ ನೀಡಿದ್ದಾರೆ.

ಇನ್ನು ಎಐ ಅನ್ನು ಮಾಂತ್ರಿಕ ಟೂಲ್ಸ್‌ ಆಗಿ ಬಳಸುವುದು ಅಥವಾ ಪತ್ರಗಳನ್ನು ಬರೆಯಲು ಚಾಟ್‌ಜಿಪಿಟಿ ಅನ್ನು ಕೇಳುವ ಕೆಲಸ ಮಾಡುತ್ತಿರುವುದು ಈ ಅದ್ಭುತ ತಂತ್ರಜ್ಞಾನಕ್ಕೆ ದೊಡ್ಡ ಅನ್ಯಾಯ ಮಾಡಿದಂತೆ ಆಗಿದೆ. ನಾವು ನಮ್ಮನ್ನು ಸುಧಾರಿಸಿಕೊಳ್ಳಲು ಎಐ ಯೊಂದಿಗೆ ಸ್ಪರ್ಧಿಸಬೇಕು ಹಾಗೆಯೇ ನಿಜ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಮತ್ತಷ್ಟು ಹೊಸತನವನ್ನು ಕಂಡುಕೊಳ್ಳಬೇಕಿದೆ ಎಂದಿದ್ದಾರೆ.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್‌ಫೇಕ್‌ ದೊಡ್ಡ ಕಳವಳಕಾರಿ ಎಂದ ಮೋದಿ

ಅದರಲ್ಲೂ ಭಾರತವು ಅಸಂಖ್ಯಾತ ಭಾಷೆಗಳು ಮತ್ತು ಉಪಭಾಷೆಗಳನ್ನು ಹೊಂದಿರುವ ದೇಶವಾಗಿದೆ. ಪರಿಣಾಮ ಜನರಿಗೆ ಸಹಾಯ ಮಾಡಲು, ಪರಸ್ಪರ ಹೊಂದಿಕೊಳ್ಳುವಂತೆ ಮಾಡಲು ಎಐ ಎಐಗೆ ಹೆಚ್ಚಿನ ಮಹತ್ವ ನೀಡಬೇಕಿದೆ. ಅದರಲ್ಲೂ ನಾನು ಯಂತ್ರ ಅಥವಾ ರೋಬೋಟ್‌ನೊಂದಿಗೆ ಮಾತನಾಡಲು ಅವಕಾಶ ಸಿಕ್ಕಾಗಲೆಲ್ಲಾ ಎಐ ಗೆ ನಿರಂತರವಾಗಿ ಹೊಸ ಸವಾಲುಗಳನ್ನು ಪ್ರಸ್ತುತಪಡಿಸುತ್ತಲೇ ಇರುತ್ತೇನೆ, ಇದು ಅದರ ಬೆಳವಣಿಗೆ ಮತ್ತು ಹೊಂದಾಣಿಕೆಯನ್ನು ಉತ್ತೇಜಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ನಿಮ್ಮ ಗಮನಕ್ಕೆ: ಇನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸರ್ಕಾರದ ಆಸಕ್ತಿಯ ಪ್ರಮುಖ ಕ್ಷೇತ್ರವಾಗಿದ್ದು, ಕ್ಯಾಬಿನೆಟ್ 10,371.92 ಕೋಟಿ ರೂ.ಗಳ ಬಜೆಟ್‌ನೊಂದಿಗೆ ವ್ಯಾಪಕವಾದ ಇಂಡಿಯಾಎಐ ಮಿಷನ್ ಅನ್ನು ಮಂಜೂರು ಮಾಡಿದೆ. ಈ ಉಪಕ್ರಮವು ಸಾರ್ವಜನಿಕ ಮತ್ತು ಖಾಸಗಿ ವಲಯಗಳೆರಡನ್ನೂ ಒಳಗೊಂಡಿರುವ ಕಾರ್ಯತಂತ್ರದ ಉಪಕ್ರಮಗಳು ಮತ್ತು ಸಹಯೋಗಗಳ ಮೂಲಕ ಎಐ ಆವಿಷ್ಕಾರವನ್ನು ಉತ್ತೇಜಿಸುವ ದೃಢವಾದ ಗುರಿಯನ್ನು ಹೊಂದಲಾಗಿದೆ.

Best Mobiles in India

English summary
Microsoft co-founder, billionaire Bill Gates talks about AI with PM narendra Modi.In this, Modi raises concerns about AI deepfake.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+