Home
ಸುದ್ದಿಜಾಲ

Deepfake video: ಸಚಿನ್ ತೆಂಡೂಲ್ಕರ್ ಆಯ್ತು ಈಗ ವಿರಾಟ್ ಕೊಹ್ಲಿ ಸರದಿ.. ಭೂತದಂತೆ ಕಾಡುತ್ತಿದೆ ಡೀಪ್‌ಫೇಕ್

ಡೀಪ್‌ಫೇಕ್ (Deepfake) ಇಂದು ಕೆಲವು ಸೆಲೆಬ್ರಿಟಿಗಳ ಜೀವನದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡುತ್ತಿದೆ. ಕೆಲವು ದಿನಗಳ ಹಿಂದೆ ಖ್ಯಾತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಫೇಕ್ ವಿಡಿಯೋ ಬಹಳಷ್ಟು ಸದ್ದು ಮಾಡಿತ್ತು. ಅಲ್ಲದೆ ಆ ಸಂಬಂಧ ಕಾನೂನು ಕ್ರಮಗಳನ್ನೂ ತೆಗೆದುಕೊಳ್ಳಲಾಗಿತ್ತು. ಆದರೆ, ಈಗ ಈಗ ಡೀಪ್‌ಫೇಕ್ ಪೆಡಂಭೂತ ಖ್ಯಾತ ಕ್ರಿಕೆಟ್‌ ತಾರೆ ವಿರಾಟ್ ಕೊಹ್ಲಿಗೂ (Virat Kohli) ಕಾಡುತ್ತಿದೆ.

ಹೌದು, ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಇದೀಗ ಈ ಡೀಪ್‌ಫೇಕ್‌ ವಿಡಿಯೋ ಸಂಬಂಧ ಮುನ್ನೆಲೆಗೆ ಬಂದಿದ್ದಾರೆ. ಅದೂ ಸಹ ಬೆಟ್ಟಿಂಗ್‌ ಆಪ್‌ ವಿಚಾರಕ್ಕೆ ಸಂಬಂಧಿಸಿಂತೆ. ಈ ವಿಡಿಯೋ ನೋಡಿದ್ರೆ ಥೇಟ್‌ ಕೊಹ್ಲಿ ಅವರೇ ಈ ಬೆಟ್ಟಿಂಗ್‌ ಆಪ್‌ ಅನ್ನು ಪ್ರಚಾರ ಮಾಡುತ್ತಿದ್ದಾರೆ ಎಂಬಂತೆ ಭಾಸವಾಗುತ್ತದೆ. ಅಷ್ಟರ ಮಟ್ಟಿದೆ ಈ ವಿಡಿಯೋ ಸೃಷ್ಟಿ ಮಡಲಾಗಿದೆ. ಹಾಗಿದ್ರೆ, ಲೀಕ್‌ ಆಗಿರುವ ವಿಡಿಯೋದಲ್ಲಿ ಕಂಡು ಬಂದಿದ್ದೇನು ಅನ್ನೋ ವಿವರ ಇಲ್ಲಿದೆ ನೋಡಿ.

Deepfake video: ಸಚಿನ್ ತೆಂಡೂಲ್ಕರ್ ಆಯ್ತು ಈಗ ವಿರಾಟ್ ಕೊಹ್ಲಿ ಸರದಿ..

ವಿರಾಟ್ ಕೊಹ್ಲಿ ಡೀಪ್‌ಫೇಕ್ ವಿಡಿಯೋ: ಏವಿಯೇಟರ್ (aviator) ಎಂಬ ಬೆಟ್ಟಿಂಗ್ ಆಪ್‌ ಅನ್ನು ಪ್ರಚಾರ ಮಾಡಲು ಈ ಕೃತ್ಯ ಎಸಗಲಾಗಿದೆ. ಈ ವಿಡಿಯೋದಲ್ಲಿ ಕೊಹ್ಲಿ ಹಿಂದಿಯಲ್ಲಿ ಸಂದೇಶವನ್ನು ನೀಡುತ್ತಿರುವುದನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲದೆ ಇದೇ ವಿಡಿಯೋದಲ್ಲಿ ಪ್ರಸಿದ್ಧ ಟಿವಿ ಪತ್ರಕರ್ತೆ ಅಂಜನಾ ಓಂ ಕಶ್ಯಪ್ ಅವರ ತುಣುಕನ್ನು ಸಹ ಬಳಕೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಎಬಿಪಿಲೈವ್‌ ವರದಿ ಮಾಡಿದೆ.

ಈ ಮೂಲಕ ಇದೊಂದು ಲೈವ್ ಸುದ್ದಿ ಕಾರ್ಯಕ್ರಮದ ಸಮಯದಲ್ಲಿ ಜಾಹೀರಾತು ಪ್ರಸಾರವಾಗಿದೆ ಎಂಬಂತೆ ಬಿಂಬಿಸಲಾಗಿದೆ. ಹಾಗೆಯೇ ಭಾರೀ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಕೊಹ್ಲಿ ಗಣನೀಯ ಲಾಭವನ್ನು ಗಳಿಸಿದ್ದಾರೆ ಎಂದು ಜಾಹೀರಾತಿನಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಈ ವಿಡಿಯೋ ಕ್ರಿಯೇಟ್ ಮಾಡಿದವರು ವಿರಾಟ್ ಕೊಹ್ಲಿಯ ಗ್ರಹಾಂ ಬೆನ್‌ಸಿಂಗರ್ ಅವರ ಪ್ರಸಿದ್ಧ ಸಂದರ್ಶನದ ಒಂದು ಭಾಗವನ್ನು ಕದ್ದಿರುವಂತೆ ಕಾಣುತ್ತದೆ.

Deepfake video: ಸಚಿನ್ ತೆಂಡೂಲ್ಕರ್ ಆಯ್ತು ಈಗ ವಿರಾಟ್ ಕೊಹ್ಲಿ ಸರದಿ..

ಕೊಹ್ಲಿಯ ಮೂಲ ಧ್ವನಿಯ ಮೇಲೆ ನಕಲಿ ಧ್ವನಿತೆ ಸೃಷ್ಠಿಸಲಾಗಿದ್ದು, ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ತುಟಿ ಚಲನೆಯನ್ನು ಸಿಂಕ್ರೊನೈಸ್ ಮಾಡಲಾಗಿದೆ. ವಿಷಯ ಏನೆಂದರೆ ಕೊಹ್ಲಿ ಈವರೆಗೂ ಇಂತಹ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಯಾವುದೇ ಪ್ರಚಾರ ಮಾಡಿಲ್ಲ. ಆದರೆ, ಈ ವಿಡಿಯೋ ತದ್ವಿರುದ್ಧವಾಗಿದೆ. ಆ ಜಾಹೀರಾತಿನ ಪ್ರಕಾರ, ಕೊಹ್ಲಿ ಮೂರು ದಿನಗಳ ಅವಧಿಯಲ್ಲಿ ಕೇವಲ 1,000 ಹೂಡಿಕೆ ಮಾಡುವ ಮೂಲಕ 81,000 ಗಳಿಸಿದ್ದಾರಂತೆ. ಇನ್ನು ಈ ಡೀಪ್‌ಫೇಕ್ ವಿಡಿಯೋ ಮತ್ತು ಅದರ ಕಂಟೆಂಟ್‌ಗೆ ಸಂಬಂಧಿಸಿದಂತೆ ಕೊಹ್ಲಿಯಿಂದ ಯಾವುದೇ ಅಧಿಕೃತ ಹೇಳಿಕೆ ಇನ್ನೂ ಬಂದಿಲ್ಲ.

ಸಚಿನ್ ತೆಂಡೂಲ್ಕರ್‌ಗೂ ಸಹ ಇದೇ ಸಮಸ್ಯೆ ಉಂಟಾಗಿತ್ತು: ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರ ಡೀಪ್‌ಫೇಕ್ ವಿಡಿಯೋ ಸಹ ಬಹಳ ಸದ್ದು ಮಾಡಿತ್ತು. ಅವರು ಗೇಮಿಂಗ್ ಆಪ್‌ ಅನ್ನು ಅನುಮೋದಿಸಿದ್ದಾರೆ ಎಂದು ತೋರಿಸಲಾಗಿತ್ತು. ತೆಂಡೂಲ್ಕರ್ ಮತ್ತು ಅವರ ಮಗಳು ಸಾರಾ ತೆಂಡೂಲ್ಕರ್ ಅವರು ನಿರ್ದಿಷ್ಟ ಆನ್‌ಲೈನ್ ಗೇಮ್‌ನಲ್ಲಿ ಭಾಗವಹಿಸುವ ಮೂಲಕ ಗಣನೀಯ ಮೊತ್ತದ ಹಣವನ್ನು ಗಳಿಸಿದ್ದಾರೆ ಎಂಬ ತಪ್ಪು ಕಲ್ಪನೆಯನ್ನು ಡೀಪ್‌ಫೇಕ್ ಮೂಲಕ ತಿಳಿಸಲಾಗಿತ್ತು.

Deepfake video: ಸಚಿನ್ ತೆಂಡೂಲ್ಕರ್ ಆಯ್ತು ಈಗ ವಿರಾಟ್ ಕೊಹ್ಲಿ ಸರದಿ..

ಇದರ ಜೊತೆಗೆ ನಟಿ ರಶ್ಮಿಕಾ ಮಂದಣ್ಣರನ್ನೂ ಸಹ ಅಶ್ಲೀಲವಾಗಿ ಚಿತ್ರಿಸಲಾಗಿತ್ತು. ಈ ಮೂಲಕ ಭವಿಷ್ಯದಲ್ಲಿ ಡೀಪ್‌ಫೇಕ್‌ನಿಂದ ಆಗುವ ಸಮಸ್ಯೆಗಳ ಬಗ್ಗೆ ಆತಂಕ ಎದುರಾಗಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಪ್ರಮುಖ ಸಂಸ್ಥೆಗಳು ಡೀಪ್‌ಫೇಕ್‌ ಸಂಬಂಧ ಎಚ್ಚರಿಕೆ ನೀಡುತ್ತಿವೆ. ಅದರಲ್ಲೂ ವಾಟ್ಸಾಪ್‌ ಒಂದು ಮುಂದೆ ಹೆಜ್ಜೆ ಇಟ್ಟಿದೆ. ಅಂದರೆ ಡೀಪ್‌ಫೇಕ್‌ಗಳನ್ನು ಪರಿಹರಿಸಲು ವಾಟ್ಸಾಪ್‌ನಲ್ಲಿ ಮೀಸಲಾದ ಸಹಾಯವಾಣಿಯನ್ನು ಪ್ರಾರಂಭಿಸಲು ಸಜ್ಜಾಗಿದೆ.

Best Mobiles in India

English summary
India's star cricketer Virat Kohli has now come to the fore regarding this deepfake video. That too is related to the betting app issue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+