ವಾಟ್ಸಾಪ್ ಸಂದೇಶ ಅಳಿಸಿದಿರಾ? ನಿಮ್ಮ ಕೈಗೆ ಕೋಳ ಖಂಡಿತ

By Shwetha
|

ಎಲ್ಲಾ ಎನ್‌ಕ್ರಿಪ್ಟ್ ಮಾಡಲಾದ ಮಾಹಿತಿ ಅಂದರೆ ವೈಯಕ್ತಿಕ ಇಮೇಲ್‌ಗಳು, ಸಂದೇಶಗಳು ಅಥವಾ ಖಾಸಗಿ ವ್ಯವಹಾರ ಸರ್ವರ್‌ನಲ್ಲಿ ಸಂಗ್ರಹಿಸಲಾದ ಸಂದೇಶಗಳನ್ನು ಸರಕಾರ ಪ್ರವೇಶಿಸಲಿದೆ. ಎಂಬುದಾಗಿ ಹೊಸ ಎನ್‌ಕ್ರಿಪ್ಶನ್ ನೀತಿ ನಿನ್ನೆ ತಿಳಿಸಿದ್ದು ಇಂದು ಈ ನೀತಿಯನ್ನು ಡ್ರಾಫ್ಟ್ ನ್ಯಾಶನಲ್ ಎನ್‌ಕ್ರಿಪ್ಶನ್ ಪಾಲಿಸಿ ಹಿಂದಕ್ಕೆ ತೆಗೆದುಕೊಂಡಿದೆ.

ಓದಿರಿ: ವಾಟ್ಸಾಪ್‌ನಲ್ಲಿ ನಿಮ್ಮ ಅತ್ಯುತ್ತಮ ಸ್ನೇಹಿತರು ಯಾರು?

ಡ್ರಾಫ್ಟ್ ನ್ಯಾಶನಲ್ ಎನ್‌ಕ್ರಿಪ್ಶನ್ ಪಾಲಿಸಿ ಬಳಕೆದಾರರಿಗೆ ಎಲ್ಲಾ ಎನ್‌ಕ್ರಿಪ್ಟ್ ಮಾಡಲಾದ ಸಂವಹನವನ್ನು ಕನಿಷ್ಟ ಪಕ್ಷ 90 ದಿನಗಳ ಒಳಗೆ ಸಂಗ್ರಹಿಸಲು ತಿಳಿಸಿದ್ದು ಭದ್ರತಾ ಏಜೆನ್ಸಿಗಳಿಗೆ ಇದನ್ನು ಲಭ್ಯವಾಗಿಸುವಂತೆ ತಿಳಿಸಿದೆ. ಅಗತ್ಯವಿದ್ದಲ್ಲಿ, ಸರಕಾರಕ್ಕೆ ತಮ್ಮ ಎನ್‌ಕ್ರಿಪ್ಶನ್ ಕೀಗಳನ್ನು ಒಪ್ಪಿಸಬೇಕಾಗಿತ್ತು. ಕಂಪೆನಿ ತೆಗೆದುಕೊಂಡ ಮಾಹಿತಿಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.

ಇಲೆಕ್ಟ್ರಾನಿಕ್ಸ್ ಮತ್ತು ಇನ್‌ಫಾರ್ಮೇಶನ್ ಟೆಕ್ನಾಲಜಿ

ಇಲೆಕ್ಟ್ರಾನಿಕ್ಸ್ ಮತ್ತು ಇನ್‌ಫಾರ್ಮೇಶನ್ ಟೆಕ್ನಾಲಜಿ

ಈ ಡ್ರಾಫ್ಟ್ ಅನ್ನು ಇಲೆಕ್ಟ್ರಾನಿಕ್ಸ್ ಮತ್ತು ಇನ್‌ಫಾರ್ಮೇಶನ್ ಟೆಕ್ನಾಲಜಿ 84A ಅಡಿಯಲ್ಲಿ ಹೊಂದಿಸಲಾಗಿದ್ದು ಪ್ರತಿಯೊಂದು ಸಂದೇಶ ಸೇವೆ ಮತ್ತು ಇಮೇಲ್ ಅಂದರೆ ವಾಟ್ಸಾಪ್ ಹಾಗೂ ಜಿಮೇಲ್ ಸೇರಿದಂತೆ ಎಲ್ಲಾ ತ್ವರಿತ ಸಂದೇಶಗಳು ಮತ್ತು ಇಮೇಲ್‌ಗಳನ್ನು ಕವರ್ ಮಾಡಬಹುದಾಗಿದೆ.

ಇಂಟರ್ನೆಟ್ ನಿಯಮ

ಇಂಟರ್ನೆಟ್ ನಿಯಮ

ಹೆಚ್ಚಿನವರು ಇಂಟರ್ನೆಟ್ ನಿಯಮಗಳನ್ನು ಮುರಿಯುತ್ತಿರುವುದರಿಂದ ಈ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸೈಬರ್ ಲಾ ಅನುಭವಿ ಪವನ್ ಡಗ್ಗಲ್ ತಿಳಿಸಿದ್ದಾರೆ.

ಎನ್‌ಕ್ರಿಪ್ಶನ್ ಉತ್ಪನ್ನ

ಎನ್‌ಕ್ರಿಪ್ಶನ್ ಉತ್ಪನ್ನ

ಸರಕಾರದ ಮಾನ್ಯ ಏಜೆನ್ಸಿಯೊಂದಿಗೆ ಎನ್‌ಕ್ರಿಪ್ಶನ್ ಉತ್ಪನ್ನಗಳ ಎಲ್ಲಾ ವೆಂಡೋರ್‌ಗಳು ತಮ್ಮ ಉತ್ಪನ್ನಗಳನ್ನು ನೋಂದಾಯಿಸಬಹುದಾಗಿದೆ.

ಸಾರ್ವಜನಿಕ ಪ್ರತಿಕ್ರಿಯೆ

ಸಾರ್ವಜನಿಕ ಪ್ರತಿಕ್ರಿಯೆ

ಪ್ರತಿಕ್ರಿಯೆಯನ್ನು ತೆಗೆದುಕೊಂಡ ನಂತರವೇ ಅಂತಿಮ ಪಾಲಿಸಿಯನ್ನು ತೆಗೆದುಕೊಳ್ಳಲಾಗುತ್ತದೆ. ಸಾರ್ವಜನಿಕ ಪ್ರತಿಕ್ರಿಯೆ ಇಲ್ಲಿ ಮುಖ್ಯವಾಗಿದ್ದು ಎಲ್ಲಾ ಇಂಟರ್ನೆಟ್ ಬಳಕೆದಾರರ ಮೇಲೆ ಇದು ಪರಿಣಾಮವನ್ನು ಬೀರಲಿದೆ.

ಗೂಢಲಿಪೀಕರಣ

ಗೂಢಲಿಪೀಕರಣ

ಎಲ್ಲಾ ಆಧುನಿಕ ಸಂದೇಶ ಸೇವೆಗಳಾದ ವಾಟ್ಸಾಪ್, ವೈಬರ್, ಲೈನ್, ಗೂಗಲ್ ಚಾಟ್, ಯಾಹೂ ಮೆಸೆಂಜರ್ ಹೆಚ್ಚಿನ ಮಟ್ಟದ ಗೂಢಲಿಪೀಕರಣದೊಂದಿಗೆ ಬಂದಿದ್ದು ಭದ್ರತಾ ಸಿಬ್ಬಂದಿಗಳಿಗೆ ಈ ಸಂದೇಶಗಳನ್ನು ಪ್ರವೇಶಿಸುವುದು ಕಷ್ಟಾಸಾಧ್ಯವಾಗುತ್ತಿದೆ.

ಕಾನೂನು ಜಾರಿ ಏಜೆನ್ಸಿ

ಕಾನೂನು ಜಾರಿ ಏಜೆನ್ಸಿ

90 ದಿನಗಳಿಗಾಗಿ ಸಂಬಂಧಪಟ್ಟ ಬಿಸಿ ಘಟಕದಲ್ಲಿ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದು ಇದನ್ನು ಕಾನೂನು ಜಾರಿ ಏಜೆನ್ಸಿಗಳಿಗೆ ದೊರೆಯುವಂತೆ ಮಾಡಲಾಗುತ್ತಿದೆ ಎಂದು ಡ್ರಾಫ್ಟ್ ತಿಳಿಸಿದೆ.

ಶಾಸನ ಬದ್ಧ ಸಂಸ್ಥೆ

ಶಾಸನ ಬದ್ಧ ಸಂಸ್ಥೆ

ಬಿ ವರ್ಗವು ಎಲ್ಲಾ ಶಾಸನ ಬದ್ಧ ಸಂಸ್ಥೆಗಳು, ಕಾರ್ಯನಿರ್ವಾಹಕ ಸಂಸ್ಥೆಗಳು, ವ್ಯಾಪಾರ ಮತ್ತು ಎಲ್ಲಾ ಸಾರ್ವಜನಿಕ ವಲಯಗಳು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳನ್ನು ಒಳಗೊಳ್ಳಲಿದೆ.

ಅಧಿಕೃತವಲ್ಲ

ಅಧಿಕೃತವಲ್ಲ

ಇನ್ನು ಸಿ ವರ್ಗವು ಎಲ್ಲಾ ಜನರು ಅಂದರೆ ವೈಯಕ್ತಿಕ ಸರಕಾರ ಮತ್ತು ವ್ಯವಹಾರ ಕಾರ್ಯನಿರ್ವಹಣೆಯ ಅಧಿಕೃತವಲ್ಲದ ಇವುಗಳನ್ನು ಒಳಗೊಳ್ಳಲಿದೆ.

ನೋಂದಾಯಿಸಬೇಕು

ನೋಂದಾಯಿಸಬೇಕು

ಭಾರತದ ಒಳಗೆ ಮತ್ತು ಹೊರಗೆ ಇರುವ ಎಲ್ಲಾ ಸೇವೆ ಒದಗಿಸುವವರು ಭಾರತದಲ್ಲಿ ಸೇವೆಯನ್ನು ನೀಡುತ್ತಿರುವವರು ಡ್ರಾಫ್ಟ್ ಪ್ರಕಾರ ಸರಕಾರದೊಂದಿಗೆ ತಮ್ಮನ್ನು ನೋಂದಾಯಿಸಬೇಕು.

ಸಮಾಜ ಬಾಹಿರ ಕೃತ್ಯ

ಸಮಾಜ ಬಾಹಿರ ಕೃತ್ಯ

ಹ್ಯಾಕರ್‌ಗಳ ಮತ್ತು ಸಮಾಜ ಬಾಹಿರ ಕೃತ್ಯಗಳನ್ನು ತಡೆಯುವುದಕ್ಕಾಗಿ ಸರಕಾರ ಈ ಕ್ರಮವನ್ನು ಕೈಗೊಂಡಿದೆ ಎಂಬುದು ಮಾಹಿತಿಗಳಿಂದ ತಿಳಿದು ಬಂದಿದೆ.

Most Read Articles
Best Mobiles in India

English summary
Every message that you send--be it through WhatsApp, SMS, Email or any such service--must be mandatorily stored in plain text format for 90 days and made available on demand to security agencies under a draft New Encryption Policy that has triggered privacy concerns.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more