'ಉಚಿತವಾಗಿ IPL ನೋಡಿ': ಆಫರ್ ಹೆಸರಿನಲ್ಲಿ ಏರ್‌ಟೆಲ್ ಮಹಾ ಮೋಸ...!
ದೇಶಿಯ ಪ್ರತಿಷ್ಠಿತ IPL ಕ್ರಿಕೆಟ್ ಪಂದ್ಯಾವಳಿಗಳು ಶುರುವಾದ ಹಿನ್ನಲೆಯಲ್ಲಿ ಟೆಲಿಕಾಂ ಕಂಪನಿಗಳು ಹೊಸ ಬಳಕೆದಾರರನ್ನು ಸೆಳೆಯುವ ಸಲುವಾಗಿ ಹೊಸ ಹೊಸ ಆಫರ್ ಗಳನ್ನು ನೀಡಿದ್ದವು. ಇದೇ ಮಾದರಿಯಲ್ಲಿ ಏರ್‌ಟೆಲ್ 'ಸಿಸನ್ ಪಾಸ್' ಹೆಸರಿನಲ್ಲಿ ಆಫರ್ ವೊಂದನ್ನು ನೀಡಿತ್ತು. ಇದರಲ್ಲಿ 4G ಸಿಮ್ ಪಡೆಯಿರಿ ಉಚಿತವಾಗಿ IPL ನೋಡಿ ಎಂದು ಹೇಳಿತ್ತು. ಆದರೆ ಈ ಕುರಿತು ರಿಲಯನ್ಸ್ ಜಿಯೋ ದನಿ ಎತ್ತಿದ್ದಲ್ಲದೇ ಕೋರ್ಟ್ ಮೇಟ್ಟಿಲು ಏರಿತ್ತು. ಈ ಮೂಲಕ ದರ ಸಮರವನ್ನು ಕಾನೂನು ಮೂಲಕ ನಡೆಸಲು ಮುಂದಾಗಿತ್ತು.

ಗ್ರಾಹಕರು IPL ಪಂದ್ಯಗಳ ಲೈವ್ ಮತ್ತು ಉಚಿತ ಸೇವೆ ನೀಡುವುದಾಗಿ ಏರ್‌ಟೆಲ್ ತಪ್ಪು ಜಾಹೀರಾತು ನೀಡುತ್ತಿದೆ. ಕೇವಲ 4G ಸಿಮ್ ಪಡೆದು ಏರ್‌ಟೆಲ್ ಆಪ್ ಇನ್‌ಸ್ಟಾಲ್ ಮಾಡಿ IPL ಲೈವ್ ಮತ್ತು ಉಚಿತ ಸೇವೆ ಪಡೆಯಿರಿ ಎಂದು ತಪ್ಪಾಗಿ ಜಾಹೀರಾತು ನೀಡುತ್ತಿದೆ ಎಂದು ಜಿಯೋ ಕೋರ್ಟ್ ಮೇಟ್ಟಲು ಏರಿತ್ತು.

ಜಿಯೋ ದಾಳಿ:
ಹಾಟ್ ಸ್ಟಾರ್ ಇನ್ ಸ್ಟಾಲ್ ಮಾಡಿಕೊಂಡರೆ ಯಾರು ಬೇಕಾದರು ಉಚಿತವಾಗಿ IPL ಪಂದ್ಯಗಳನ್ನು ಲೈವ್ ಆಗಿ ನೋಡಬಹುದು, ಆದರೆ ಇದಕ್ಕೆ ಡೇಟಾ ಖರ್ಚಾಗಲಿದೆ. ಆದರೆ ಇದನ್ನು ಮೆರೆಮಾಚಿರುವ ಏರ್‌ಟೆಲ್ ತನ್ನ 4G ಸಿಮ್ ಉಚಿತವಾಗಿ IPL ಪಂದ್ಯಗಳನ್ನು ನೋಡುವ ಕೀಲಿಕೈ ಎಂಬಂತೆ ಜಾಹಿರಾತು ನೀಡುತ್ತಿದೆ, ಇದು ಜನರನ್ನು ದಾರಿ ತಪ್ಪಿಸುವ ಜೊತೆಗೆ ವಂಚಿಸುತ್ತಿದೆ ಎಂದು ಜಿಯೋ ದೆಹಲಿ ಹೈಕೋರ್ಟ್ ಮೇಟ್ಟಿಲು ಏರಿತ್ತು.

ತಲೆಗ್ಗಿಸಿದ ಏರ್‌ಟೆಲ್:
ಜಿಯೋ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್‌ಟೆಲ್ ಮತ್ತೊಮ್ಮೆ ತಲೆತಗ್ಗಿದಿದೆ. IPL ಪಂದ್ಯಗಳನ್ನು ನೋಡುವ ಸಲುವಾಗಿ ‘ಲೈವ್ ಮತ್ತು ಫ್ರೀ ಅಕ್ಸೆಸ್' ಆಫರ್ ಕುರಿತಂತೆ ಏರ್‌ಟೆಲ್ ಪ್ರಸಾರ ಮಾಡುತ್ತಿರುವ ಜಾಹೀರಾತನ್ನು ಬದಲಾವಣೆಯಾಗಲಿದೆ. ದೆಹಲಿ ಹೈಕೋರ್ಟ್ಗೆ ಈ ಕುರಿತು ಮಾಹಿತಿಯನ್ನು ನೀಡಿರುವ ಏರ್‌ಟೆಲ್, 'ಉಚಿತವಾಗಿ IPL ನೋಡಿ' ಜಾಹಿರಾತು ಬಳಕೆದಾರರನ್ನು ಹಾದಿ ತಪ್ಪಿಸುವಂತೆ ಇದೆ. ಅದನ್ನು ಬದಲಾಸುವುದಾಗಿ ತಿಳಿಸಿದೆ.
ಜಾಹಿರಾತು:
IPL ಪ್ರಸಾರ ಹಾಟ್ ಸ್ಟಾರ್ ಚಂದಾದಾರರಿಗೆ ಮಾತ್ರವೇ ಉಚಿತವಾಗಿರಲಿದೆ ಮತ್ತು ಇದರಲ್ಲಿ ಮ್ಯಾಚ್ ನೋಡಲು ಡೇಟಾ ಶುಲ್ಕಗಳು ಅನ್ವಯವಾಗುತ್ತವೆ ಎಂದು ಜಾಹಿರಾತಿನಲ್ಲಿ ಬದಲಾವಣೆಗಳನ್ನು ಮಾಡುವುದಾಗಿ ಏರ್‌ಟೆಲ್ ತಿಳಿಸಿದೆ.

ಈ ಹಿಂದೆಯೂ ಆಗಿತ್ತು:
ಭಾರತದ ಅತೀ ವೇಗದ 4G ನೆಟ್‌ವರ್ಕ್ ಎಂಬ ಜಾಹಿರಾತು ನೀಡಿದ್ದ ಏರ್‌ಟೆಲ್, ಒಕ್ಲಾ ಎಂಬ ಖಾಸಗಿ ಕಂಪನಿ ನೀಡಿದ ಮಾಹಿತಿಯ ಅನ್ವಯ ಜಾಹಿರಾತು ಪ್ರಕಟಿಸಿತ್ತು. ಜಿಯೋ ಇದನ್ನು ಸಹ ಪ್ರಶ್ನಿಸಿ ಕೋರ್ಟ್ ಮೇಟ್ಟಿಲು ಏರಿದ್ದಲ್ಲದೇ, ಏರ್‌ಟೆಲ್ ಜಾಹಿರಾರು ಹಿಂಪಡೆಯುವಂತೆ ಮಾಡಿತ್ತು.

ಓದಿರಿ: ಕೇಬಲ್-ಇಂಟರ್ನೆಟ್ ಬೇಡ: ಬರಲಿದೆ ಜಿಯೋ ಹೋಮ್ TV..! ಉಚಿತ HD ಚಾನಲ್‌ಗಳು..!


Click it and Unblock the Notifications








