ಮೊಬೈಲ್ ಮಾರುಕಟ್ಟೆ ಏರಿಳಿತ, ಹಳೆಯ ನೊಟುಗಳಲ್ಲಿಯೇ ಮೊಬೈಲ್ ಖರೀದಿಸಿ?
ಮೊಬೈಲ್ ಕಂಪೆನಿಗಳ ಹಿತದೃಷ್ಟಿಯಿಂದ ಹಳೆಯ 500 ಮತ್ತು 1000 ರೂಪಾಯಿ ನೋಟುಗಳಲ್ಲಿಯೇ ಜನರಿಗೆ ಮೊಬೈಲ್ ಖರೀದಿಸಲು ಅವಕಾಶ ನೀಡಿ ಎಂದು ಕೇಳಿಕೊಂಡಿದೆ.
1೦೦೦ ಮತ್ತು 500 ರೂಪಾಯಿ ನೋಟು ರದ್ದು ಮಾಡಿದ ಪರಿಣಾಮ ಮೊಬೈಲ್ ಮಾರುಕಟ್ಟೆ ಮೇಲೆ ಭಾರಿ ಹೊಡೆತಬಿದ್ದಿದ್ದು, ಹಳೆಯ ನೋಟುಗಳಲ್ಲಿಯೇ ಮೊಬೈಲ್ ಖರೀದಿಸಲು ಜನರಿಗೆ ಅವಕಾಶ ನೀಡಿ ಎಂದು ಭಾರತೀಯ ಮೊಬೈಲ್ ಕೈಗಾರಿಕಾ ಒಕ್ಕೂಟ( ICA) ಸರ್ಕಾರವನ್ನು ವಿನಂತಿಸಿದೆ.

ಕೇಂದ್ರ ಹಣಕಾಸು ಸಚಿವ ಅರುಣ್ ಜೆಟ್ಲಿಯವರಿಗೆ ಪತ್ರದ ಮೂಲಕ ಮನವಿಮಾಡಿರುವ ಮೊಬೈಲ್ ಕೈಗಾರಿಕಾ ಒಕ್ಕೂಟ, ಹಣದ ರದ್ದು ನಂತರ ಮೊಬೈಲ್ ಮಾರಾಟ ದರದಲ್ಲಿ ಶೇ 5೦ ರಷ್ಟು ಇಳಿಕೆಯಾಗಿದೆ. ಇದು ಹೀಗೆಯೆ ಮುಂದುವರೆಯುವ ಸಾಧ್ಯತೆ ಇದ್ದು, ಮೊಬೈಲ್ ಕಂಪೆನಿಗಳ ಹಿತದೃಷ್ಟಿಯಿಂದ ಹಳೆಯ 500 ಮತ್ತು 1000 ರೂಪಾಯಿ ನೋಟುಗಳಲ್ಲಿಯೇ ಜನರಿಗೆ ಮೊಬೈಲ್ ಖರೀದಿಸಲು ಅವಕಾಶ ನೀಡಿ ಎಂದು ಕೇಳಿಕೊಂಡಿದೆ.

ಓದಿರಿ: ಪೇಟಿಎಂ ಮೂಲಕ ಬ್ಯಾಂಕ್ ಅಕೌಂಟ್‌ಗೆ ಹಣ ವರ್ಗಾವಣೆ ಹೇಗೆ?
ಮೊಬೈಲ್ ಮಾರುಕಟ್ಟೆಯ ಒಂದು ದಿನದ ವ್ಯವಹಾ 350 ರಿಂದ 400 ಕೋಟಿ ರೂಪಾಯಿಗಳಷ್ಟಿರಬೇಕು. ಆದರೆ, ಇದರ ಪ್ರಮಾಣ ಶೇ ೫೦ ರಷ್ಟು ಇಳಿಕೆಯಾಗಿದ್ದು, ಮೊಬೈಲ್ ಕಂಪೆನಿಗಳು ನಷ್ಟಕ್ಕೆ ದೂಡಲ್ಪಡುತ್ತಿವೆ . ಇನ್ನು ಹಳೆಯ ನೋಟುಗಳಲ್ಲಿಯೇ ಮೊಬೈಲ್ ಕೊಳ್ಳುವುದಕ್ಕೆ ಅವಕಾಶ ನೀಡಿದರೆ ಮಾರುಕಟ್ಟೆಯಲ್ಲಿ ಕ್ಯಾಶ್‌ಲೆಸ್ ವ್ಯವಹಾರಕ್ಕೂ ಸಹಾಯಕವಾಗುತ್ತದೆ. ಮೊಬೈಲ್‌ಗಳಲ್ಲಿಯೇ ಡಿಜಿಟಲ್ ಪೇಮೆಂಟ್‌ಮಾಡಲು ಅನುಕೂಲವಾಗುತ್ತದೆ ಎಂದು ಒಕ್ಕೂಟ ಹೇಳಿದೆ.

ಹಳೆಯ ನೋಟುಗಳಲ್ಲಿಯೇ ಮೊಬೈಲ್‌ಗಳನ್ನು ಖರೀದಿಸಲು ಅವಕಾಶ ನೀಡುವಂತೆ ಮನವಿಯನ್ನು ಸರ್ಕಾರ ಪರಿಶೀಲಿಸುವುದಾಗಿ ತಿಳಿಸಿದ್ದು, ಇದಕ್ಕೆ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ಭಾರತೀಯ ಮೊಬೈಲ್ ಕೈಗಾರಿಕಾ ಒಕ್ಕೂಟ ತಿಳಿಸಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications