ಶಿಯೋಮಿ 'ಡಿಸೈನ್‌ ಕಂಟೆಸ್ಟ್' ಸ್ಪರ್ಧೆ!.ಉಚಿತ 'ಮಿ ಬ್ಯಾಂಡ್‌' ಗೆಲ್ಲುವ ಚಾನ್ಸ್!

|

ಶಿಯೋಮಿ ಕಂಪನಿಯು ಇತ್ತೀಚಿಗೆ 'ಮಿ ಸ್ಮಾರ್ಟ್‌ ಬ್ಯಾಂಡ್ 4' ಡಿವೈಸ್‌ ಅನ್ನು ಬಿಡುಗಡೆ ಮಾಡಿದ್ದು, ಈ ಡಿವೈಸ್‌ ದಾಖಲೆಯ ಮಾರಾಟ ಕಂಡಿದೆ. ಆದ್ರೆ ಇದೀಗ ಕಂಪನಿಯು ಈ ಡಿವೈಸ್‌ಗೆ ಗ್ರಾಹಕರಿಂದ ಅತ್ಯುತ್ತಮ ಡಿಸೈನ್‌ ನಿರೀಕ್ಷಿಸುತ್ತಿದ್ದು, ಅದಕ್ಕಾಗಿ 'ಡಿಸೈನ್‌ ವಿತ್ ಮಿ' ಹ್ಯಾಶ್‌ಟ್ಯಾಗ್‌ನಲ್ಲಿ ವಾಲ್‌ಪೇಪರ್ ಡಿಸೈನ್‌ ಮಾಡುವ ಕಂಟೆಸ್ಟ್‌ ಆಯೋಜಿಸಿದೆ. ಈ ಕಂಟೆಸ್ಟ್‌ನಲ್ಲಿ ವಿಜೇತರಾಗುವ ಗ್ರಾಹಕರಿಗೆ ಕಂಪನಿಯು ಸ್ಮಾರ್ಟ್‌ ಬ್ಯಾಂಡ್ ಡಿವೈಸ್‌ ಅನ್ನು ಉಚಿತವಾಗಿ ನೀಡಲಿದೆ.

ಶಿಯೋಮಿ 'ಡಿಸೈನ್‌ ಕಂಟೆಸ್ಟ್' ಸ್ಪರ್ಧೆ!.ಉಚಿತ 'ಮಿ ಬ್ಯಾಂಡ್‌' ಗೆಲ್ಲುವ ಚಾನ್ಸ್!

ಹೌದು, ಶಿಯೋಮಿ ಕಂಪನಿಯು 'ಮಿ ಸ್ಮಾರ್ಟ್‌ ಬ್ಯಾಂಡ್ 4 ಡಿಸೈನ್' ಕಂಟೆಸ್ಟ್‌ ಆಯೋಜಿಸಿದ್ದು, ಇದೇ 22ರಿಂದ (ನೆನ್ನೆ) ಆರಂಭವಾಗಿದ್ದು, ಇದೇ ಅಗಷ್ಟ್‌ 2ರ ವರೆಗೂ ಇರಲಿದೆ. ಗ್ರಾಹಕರು ಅತ್ಯುತ್ತಮ ವಾಲ್‌ಪೇಪರ್‌ಗಳನ್ನು ಡಿಸೈನ್‌ ಅನ್ನು ಕಂಪನಿಗೆ ನೀಡಬಹುದಾಗಿದ್ದು, ವಿಜೇತರಿಗೆ ಮಿ ಬ್ಯಾಂಡ್ 4 ಉಚಿತವಾಗಿ ದೊರೆಯಲಿದೆ. ಮಿ ಸ್ಮಾರ್ಟ್‌ ಬ್ಯಾಂಡ್ 4 ಈಗಾಗಲೇ ಸುಮಾರು ಒಂದು ಬಿಲಿಯನ್‌ಗಿಂತಲೂ ಹೆಚ್ಚಿನ ಗ್ರಾಹಕರು ಬಳಸುತ್ತಿದ್ದಾರೆ.

ಶಿಯೋಮಿ 'ಡಿಸೈನ್‌ ಕಂಟೆಸ್ಟ್' ಸ್ಪರ್ಧೆ!.ಉಚಿತ 'ಮಿ ಬ್ಯಾಂಡ್‌' ಗೆಲ್ಲುವ ಚಾನ್ಸ್!

ಕಂಪನಿಯು ನೀಡಿರುವ ಮೂರು ಟೆಂಪ್ಲೇಟ್‌ಗಳಲ್ಲಿ ಸ್ಪರ್ಧಿಗಳು ತಮ್ಮ ಕೆಲಸದ ಆಧಾರದ ಮೇಲೆ ಒಂದು ಟೆಂಪ್ಲೇಟ್‌ ಅನ್ನು ಸೆಲೆಕ್ಟ್‌ ಮಾಡಬೇಕು. ಕಂಪನಿಯ ಕ್ರಿಯೆಟಿವ್ ಟೀಮ್ ಲೀಡರ್ ಒಟ್ಟು ಭಾಗವಹಿಸಿದ ಸ್ಪರ್ಧಿಗಳಲ್ಲಿ ಶೇ.10%ರಷ್ಟು ಸ್ಪರ್ಧಿಗಳನ್ನು ಶಾರ್ಟ್‌ಲಿಸ್ಟ್‌ಗೆ ಆಯ್ಕೆ ಮಾಡಲಿದ್ದು, ಈ ಸ್ಫರ್ಧಿಗಳಿಗೆ 'ಬ್ಯಾಂಡ್ 4' ಸೀಗಲಿದೆ. ಮತ್ತು ಫೈನಲ್ ವಿಜೇತರನ್ನು ವೋಟಿಂಗ್ ಪ್ರಕ್ರಿಯೇ ಮೂಲಕ ನಿರ್ಧರಿಸಲಿದ್ದು, ಇವರಿಗೂ ಮಿ ಬ್ಯಾಂಡ್ 4 ಮತ್ತು ಅವರ ವಾಲ್‌ಪೇಪರ್ ಡಿಸೈನ್ ಕಂಪನಿಯ ಆಫೀಶಿಯಲ್ ಥೀಮ್ ಆಗಿ ಸೇರಲಿದೆ. ಹಾಗಾದರೇ 'ಮಿ ಸ್ಮಾರ್ಟ್‌ ಬ್ಯಾಂಡ್ 4' ಹೊಂದಿರುವ ಫೀಚರ್ಸ್‌ಗಳನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಜೆವಿಸಿಯಿಂದ ಹೊಸ ಸ್ಮಾರ್ಟ್‌ LED ಟಿವಿ ಲಾಂಚ್!.ಆರಂಭಿಕ ಬೆಲೆ 7,499ರೂ! ಓದಿರಿ : ಜೆವಿಸಿಯಿಂದ ಹೊಸ ಸ್ಮಾರ್ಟ್‌ LED ಟಿವಿ ಲಾಂಚ್!.ಆರಂಭಿಕ ಬೆಲೆ 7,499ರೂ!

ಫಿಟ್‌ನೆಸ್‌ ಡಿವೈಸ್

ಫಿಟ್‌ನೆಸ್‌ ಡಿವೈಸ್

ಶಿಯೋಮಿಯ ಮಿ ಬ್ಯಾಂಡ್ 4, 'ಹಾರ್ಟ್‌ರೇಟ್‌ ಮಾನಿಟರಿಂಗ್‌' ಆಯ್ಕೆಯನ್ನು ಒಳಗೊಂಡಿದ್ದು, ಬಳಕೆದಾರರ ಹೃದಯ ಬಡಿತದ ಕುರಿತು ಮಾಹಿತಿ ಒದಗಿಸುತ್ತದೆ. ಇದರೊಂದಿಗೆ ಫೋಟೊಥೆಸ್ಮೊಗ್ರಾಫಿ (PPG) ಎಂಬ ಹೊಸ ಫೀಚರ್‌ ನೀಡಲಾಗಿದ್ದು, ಈ ಆಯ್ಕೆಯು ರಕ್ತದ ಕುರಿತು ಕೇಲವು ಸೂಕ್ಷ್ಮ ಅಂಶಗಳನ್ನು ಗ್ರಹಿಸಿ ಮಾಹಿತಿಯನ್ನು ನೀಡಲಿದೆ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಶಿಯೋಮಿಯ 'ಮಿ ಬ್ಯಾಂಡ್‌ 4', ಡಿವೈಸ್‌ 240 x 120 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 0.95 ಇಂಚಿನ AMOLED ಕಲರ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಶೇ. 39.9%ರಷ್ಟು ದೊಡ್ಡ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಸಂಪೂರ್ಣ ಕಲರ್‌ ಡಿಸ್‌ಪ್ಲೇ ಮಾದರಿಯನ್ನು ಪಡೆದಿದೆ. ಮೇಲ್ಭಾಗದಲ್ಲಿ 2.5D ಟೆಂಪರ್ಡ್‌ ಗ್ಲಾಸ್‌ ರಚನೆಯನ್ನು ಸಹ ಹೊಂದಿದ್ದು, ಸ್ಕ್ರಾಚ್‌ ಮುಕ್ತವಾಗಿದೆ.

ಓದಿರಿ : ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!ಓದಿರಿ : ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

ಸೆನ್ಸಾರ್‌ ಶಕ್ತಿ

ಸೆನ್ಸಾರ್‌ ಶಕ್ತಿ

ಶಿಯೋಮಿಯ 'ಮಿ ಸ್ಮಾರ್ಟ್‌ ಬ್ಯಾಂಡ್ 4' ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದ್ದು, ವಿವಿಧ ಬಗೆಯ ಸ್ವೀಮಿಂಗ್ ಸ್ಟ್ರೋಕ್‌ಗಳನ್ನು ಗ್ರಹಿಸುತ್ತದೆ. ಅವುಗಳಲ್ಲಿ ಫ್ರಿಸ್ಟೈಲ್‌, ಬ್ಯಾಕ್‌ಸ್ಟ್ರೋಕ್, ಬಟರ್‌ಪ್ಲೈ ಸ್ಟ್ರೋಕ್ ಮತ್ತು ಮೆಡ್ಲಿ (Medley) ಸೇರಿವೆ. ಹಾಗೆಯೇ ರನ್ನಿಂಗ್, ಔಟ್‌ಡೋರ್‌ ರನ್ನಿಂಗ್, ಎಕ್ಸಸೈಜ್, ಸೈಕ್ಲಿಂಗ್, ವಾಕಿಂಗ್ ಚಟುವಟಿಕೆಗಳನ್ನು ಸಹ ಟ್ರಾಕ್‌ ಮಾಡಲಿದೆ.

ಎರಡು ವೇರಿಯಂಟ್‌ಗಳು

ಎರಡು ವೇರಿಯಂಟ್‌ಗಳು

ಶಿಯೋಮಿ ಬಿಡುಗಡೆ ಮಾಡಿರುವ 'ಮಿ ಸ್ಮಾರ್ಟ್‌ ಬ್ಯಾಂಡ್ 4' ಡಿವೈಸ್‌ 'ಎನ್‌ಎಫ್‌ಸಿ' ಮತ್ತು 'ನಾನ್‌-ಎನ್‌ಎಫ್‌ಸಿ' ಎಂಬ ಎರಡು ವರ್ಷನ್‌ಗಳ ಆಯ್ಕೆಗಳನ್ನು ಹೊಂದಿದೆ. ಅವುಗಳಲ್ಲಿ ಎನ್‌ಎಫ್‌ಸಿ ವರ್ಷನ್‌ ಮಾದರಿಯ ಸ್ಮಾರ್ಟ್‌ ಬ್ಯಾಂಡ್‌ ಮಾಡೆಲ್‌ ನಂಬರ್‌ XMSH08HM ಆಗಿದೆ ಮತ್ತು ನಾನ್‌-ಎನ್‌ಎಫ್‌ಸಿ ಡಿವೈಸ್‌ ಮಾಡೆಲ್‌ ನಂಬರ್ XMSH07HM ಆಗಿದೆ.

ಓದಿರಿ : ವಿಶ್ವದ ಮೊದಲ 64ಎಂಪಿ ಕ್ಯಾಮೆರಾ ಫೋನ್‌ ಬಿಡುಗಡೆಗೆ ಸಜ್ಜಾದ ಶಿಯೋಮಿ!ಓದಿರಿ : ವಿಶ್ವದ ಮೊದಲ 64ಎಂಪಿ ಕ್ಯಾಮೆರಾ ಫೋನ್‌ ಬಿಡುಗಡೆಗೆ ಸಜ್ಜಾದ ಶಿಯೋಮಿ!

ಬ್ಯಾಟರಿ ಲೈಫ್‌

ಬ್ಯಾಟರಿ ಲೈಫ್‌

ಶಿಯೋಮಿ ಮಿ ಬ್ಯಾಂಡ್ 4 135mAh ಸಾಮರ್ಥ್ಯದ ಬಿಗ್‌ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಒಮ್ಮೆ ಚಾರ್ಜ್‌ ಮಾಡಿದರೇ ಸುಮಾರು 20 ದಿನಗಳ ವರೆಗೂ ಬಾಳಿಕೆ ಬರಲಿದೆ. ಇದರೊಂದಿಗೆ ಅತ್ಯುತ್ತಮ ಚಾರ್ಜರ್‌ ಸೌಲಭ್ಯವನ್ನು ನೀಡಲಾಗಿದೆ. ಶಿಯೋಮಿ 'ಮಿ 3' ಸ್ಮಾರ್ಟ್‌ ಬ್ಯಾಂಡ್‌ 110mAh ಬ್ಯಾಟರಿ ಪವರ್‌ ಅನ್ನು ನೀಡಲಾಗಿತ್ತು. ಮಿ 4 ಸ್ಮಾರ್ಟ್‌ಬ್ಯಾಂಡ್‌ನಲ್ಲಿ ಬ್ಯಾಟರಿ ಹೆಚ್ಚಿಸಲಾಗಿದೆ.

<strong>ಓದಿರಿ : ನಿಮ್ಮ ವಾಟ್ಸಪ್‌ ಎಷ್ಟು ಸುರಕ್ಷಿತ?..ಈ ಸೆಕ್ಯುರಿಟಿ ಆಯ್ಕೆಗಳನ್ನು ಬಳಸಿದ್ದಿರಾ?</strong>ಓದಿರಿ : ನಿಮ್ಮ ವಾಟ್ಸಪ್‌ ಎಷ್ಟು ಸುರಕ್ಷಿತ?..ಈ ಸೆಕ್ಯುರಿಟಿ ಆಯ್ಕೆಗಳನ್ನು ಬಳಸಿದ್ದಿರಾ?

Best Mobiles in India

English summary
If you have a great idea for such a wallpaper, you can submit it to Xiaomi’s new design contest. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X