ನಿಮ್ಮ ನಗರದ ವಾಯು ಮಾಲಿನ್ಯದ ಬಗ್ಗೆ ತಿಳಿಯಬೇಕೆ? ಈ ಆಪ್‌ಗಳನ್ನು ಬಳಸಿ

|

ಜೀವಿಸಲು ಗಾಳಿ ಅತ್ಯಂತ ಅವಶ್ಯಕ. ಆದರೆ, ಅತಿಯಾದ ವಾಯು ಮಾಲಿನ್ಯ ಹಲವು ರೀತಿಯಲ್ಲಿ ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತದೆ. ಅದರಲ್ಲೂ ಮಹಾ ನಗರಗಳಲ್ಲಿ ಹೆಚ್ಚಿನ ವಾಹನ ಸಂಚಾರದಿಂದ ಹಾಗೂ ಕಾರ್ಖಾನೆಯಿಂದ ಬರುವ ಕೆಟ್ಟ ಹೊಗೆ ದಾಖಲೆ ಮಟ್ಟದಲ್ಲಿ ಗಾಳಿಯನ್ನು ಅಶುದ್ಧಗೊಳಿಸಿದೆ. ಕೆಲವು ನಗರಗಳಲ್ಲಿನ ವಾಯು ಮಾಲಿನ್ಯವು ಅಪಾಯಕಾರಿ ಮಟ್ಟದಲ್ಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ದೆಹಲಿ

ಹೌದು, ದೆಹಲಿ, ನೋಯ್ಡಾ, ಗುರುಗ್ರಾಮ್, ಫರಿದಾಬಾದ್ ಮತ್ತು ಗಾಜಿಯಾಬಾದ್‌ನಂತಹ ನಗರಗಳನ್ನು ಒಳಗೊಂಡಿರುವ ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ಪ್ರಸ್ತುತ ಫೈನ್ ಪರ್ಟಿಕ್ಯುಲೇಟ್ ಮ್ಯಾಟರ್ (PM2.5) ಕಣಗಳು 300 ಮತ್ತು ಅದಕ್ಕಿಂತ ಹೆಚ್ಚಿನದ್ದಾಗಿವೆ. ಇದರಿಂದ ವಾತಾವರಣವೆಲ್ಲವೂ ಭಾರೀ ಹೊಗೆಯಿಂದ ಆವೃತವಾಗಿದೆ. ನೀವೇನಾದರೂ ಮಹಾನಗರಗಳಲ್ಲಿ ಸಂಚಾರ ಮಾಡಲು ಮುಂದಾದರೆ ಮುಂದಾಲೋಚನೆಯಿಂದ ಅಲ್ಲಿನ ವಾಯುಗುಣದ ಬಗ್ಗೆ ಪೂರ್ವದಲ್ಲಿಯೇ ತಿಳಿದುಕೊಳ್ಳುವುದು ಸೂಕ್ತ. ಇದಕ್ಕಾಗಿಯೇ ಹವಾಮಾನದ ಬಗ್ಗೆ ಮಾಹಿತಿ ನೀಡುವ ಕೆಲವು ಆಪ್‌ಗಳ ವಿವರ ನೀಡಿದ್ದೇವೆ ಓದಿರಿ.

ಡಿಪಿಸಿಸಿ(DPCC) ಟ್ರ್ಯಾಕಿಂಗ್

ಡಿಪಿಸಿಸಿ(DPCC) ಟ್ರ್ಯಾಕಿಂಗ್

ನೀವು ಪ್ರಮುಖವಾಗಿ ದೆಹಲಿ ನಗರದಲ್ಲಿ ಸಂಚಾರ ಮಾಡಲು ಬಯಸಿದರೆ ಈ ಆಪ್‌ ಅನುಕೂಲವಾಗಲಿದೆ. ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ (DPCC) ವಾಯು ಗುಣಮಟ್ಟದ ಟ್ರ್ಯಾಕರ್ ಇದಾಗಿದೆ. ದೆಹಲಿಯ ವಿವಿಧ ಸ್ಥಳಗಳಿಂದ ಸೆರೆಹಿಡಿಯಲಾದ ಇತ್ತೀಚಿನ ಗಾಳಿಯ ಗುಣಮಟ್ಟದ ಡೇಟಾವನ್ನು ಈ ಆಪ್‌ ನಿರಂತರವಾಗಿ ನೀಡುತ್ತಿರುತ್ತದೆ. ಇದರ ಜೊತೆಗೆ ಡಿಪಿಸಿಸಿ ಟ್ರ್ಯಾಕಿಂಗ್ ವೆಬ್‌ಸೈಟ್ ಸಹ ಸಾಕಷ್ಟು ವಿವರವಾದ ಡೇಟಾವನ್ನು ನೀಡಲಿದೆ. PM2.5, PM10 ಕಣಗಳು ಮತ್ತು ಇತರ ಮಾಲಿನ್ಯಕಾರಕ ಅನಿಲಗಳ ಬಗ್ಗೆ ಇದರಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಸಫರ್ ಏರ್

ಸಫರ್ ಏರ್

ಸಫರ್ ಏರ್ ಆಪ್‌ ಅನ್ನು ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯ ನಿಯಂತ್ರಣ ಮಾಡುತ್ತದೆ. ಹಾಗೆಯೇ ವೆಬ್‌ಸೈಟ್‌ಸಹ ಇದೆ. ಇನ್ನು ಪ್ರಮುಖವಾಗಿ ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮಾಹಿತಿ ಇದರಲ್ಲಿ ಲಭ್ಯವಾಗಲಿದ್ದು, ಪುಣೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯಾಲಜಿಯಲ್ಲಿನ ಡೇಟಾವನ್ನು ಇದು ಬಳಕೆ ಮಾಡಿಕೊಂಡು ನಿಖರ ಮಾಹಿತಿ ನೀಡುತ್ತದೆ. ಈ ಆಪ್‌ ಮೂಲಕ ಮೆಟ್ರೋ ನಗರಗಳಾದ ದೆಹಲಿ, ಪುಣೆ, ಮುಂಬೈ ಮತ್ತು ಅಹಮದಾಬಾದ್‌ನ ಹವಾಮಾನ ವರದಿ ಲಭ್ಯವಾಗುತ್ತದೆ. ಇದಿಷ್ಟೇ ಅಲ್ಲದೆ, ಈ ಆಪ್‌ ಇಂಗ್ಲಿಷ್, ಹಿಂದಿ, ಗುಜರಾತಿ ಮತ್ತು ಮರಾಠಿ ಭಾಷೆಗೂ ಬೆಂಬಲ ನೀಡಲಿದೆ.

ಐಕ್ಯೂಏರ್ ಏರ್ ವಿಶ್ಯುವಲ್

ಐಕ್ಯೂಏರ್ ಏರ್ ವಿಶ್ಯುವಲ್

ಏರ್ ವಿಶ್ಯುವಲ್ ಜಗತ್ತಿನ ಸುಮಾರು 10,000 ನಗರಗಳ ಹವಾಮಾನದ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುತ್ತದೆ. ಈ ಆಪ್‌ ಮೂಲಕ ಹಿಸ್ಟಾರಿಕಲ್‌ ಡೇಟಾ ಮತ್ತು ಮುನ್ಸೂಚನೆಗಳ ಮಾಹಿತಿ ಪಡೆಯಬಹುದಾಗಿದ್ದು, ನೀವೇನಾದರೂ ಬೇರೆ ಪ್ರದೇಶಕ್ಕೆ ಹೋಗಲು ನಿರ್ಧಾರ ಮಾಡಿದರೆ ಯಾವ ದಿನ ಉತ್ತಮ ಯಾವ ಸಮಯ ಉತ್ತಮವಾಗಿರಲಿದೆ ಎಂಬ ಮಾಹಿತಿಯನ್ನು ಇದು ಒದಗಿಸುತ್ತದೆ. ಈ ಆಪ್‌ ಉಚಿತವಾಗಿದ್ದು, ಜಾಹೀರಾತು ಸಹ ಇರುವುದಿಲ್ಲ.

ಬ್ರೀಜೋಮೀಟರ್

ಬ್ರೀಜೋಮೀಟರ್

ಬ್ರೀಜೋಮೀಟರ್ ಆಪ್‌ ಮೂಲಕ ನಿಮ್ಮ ನಗರದ ಗಾಳಿಯ ಗುಣಮಟ್ಟದ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಹಾಗೆಯೇ ನಿಮ್ಮ ಸುತ್ತಮುತ್ತಲಿನ ಗಾಳಿಯಲ್ಲಿ ಯಾವ ಮಾಲಿನ್ಯಕಾರಕ ಪ್ರಮಾಣ ಎಷ್ಟಿಗೆ ಎಂಬುದನ್ನು ತಿಳಿದುಕೊಳ್ಳಬಹುದು. ಇದಿಷ್ಟೇ ಅಲ್ಲದೆ, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ನೀವು ಏನು ಮಾಡಬೇಕು ಎಂಬುದರ ಕುರಿತು ಸಲಹೆ ಹಾಗೂ ಮಾರ್ಗದರ್ಶನ ಕೂಡ ಇದು ನೀಡುತ್ತದೆ.

ಸಮೀರ್

ಸಮೀರ್

ಸಮೀರ್ ಆಪ್‌ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕೃತ ಆಪ್ ಆಗಿದೆ. ಇನ್ನು CPCB ಪ್ರಕಟಿಸಿದ ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕದ ಅಪ್‌ಡೇಟ್‌ ಅನ್ನು ಈ ಆಪ್ ಮೂಲಕ ಪಡೆಯಬಹುದಾಗಿದೆ. ಇದಿಷ್ಟೇ ಅಲ್ಲದೆ, ಬಳಕೆದಾರರು ಆಪ್‌ ಮೂಲಕವೇ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ದೂರುಗಳನ್ನು ದಾಖಲು ಮಾಡಬಹುದಾದ ಆಯ್ಕೆಯನ್ನು ನೀಡಲಾಗಿದೆ.

ಶೂಟ್! ಐ ಸ್ಮೋಕ್

ಶೂಟ್! ಐ ಸ್ಮೋಕ್

ಶೂಟ್! ಐ ಸ್ಮೋಕ್ AQI ಅನ್ನು ಬಳಕೆ ಮಾಡದೆ ಮಾಹಿತಿ ನೀಡುವ ಆಪ್‌ ಅಗಿದೆ. ಈ ಆಪ್‌ನಲ್ಲಿ ಸಿಗರೇಟ್ ಹೊಗೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಹಾಗೆಯೇ ನೀವು ಸೇದಿರುವ ಸಿಗರೆಟ್‌ಗಳ ಸಂಖ್ಯೆಯನ್ನು ಇದು ತೋರಿಸುತ್ತದೆ, ಆದರೂ ನೀವು ನಿಖರವಾದ ಮಾಹಿತಿ ಪಡೆಯಬೇಕು ಎಂದು ಕೊಂಡರೆ 'ಸೀ ಡೀಟೈಲ್ಡ್ ಇನ್ಫೋ' ಮೇಲೆ ಟ್ಯಾಪ್‌ ಮಾಡಿ. ಇದರಲ್ಲಿ ನಿಮ್ಮ ಪ್ರದೇಶದಲ್ಲಿನ ವಾಯು ಮಾಲಿನ್ಯದ ವಿವರ ಹಾಗೂ ಯಾವ ಕಾರಣಕ್ಕೆ ಮಾಲಿನ್ಯವಾಗಿದೆ ಎಂಬ ಮಾಹಿತಿಯನ್ನು ಇದು ನೀಡುತ್ತದೆ. ಜೊತೆಗೆ ನಿಮಗೆ ಹತ್ತಿರವಿರುವ ಏರ್‌ ಕ್ವಾಲಿಟಿ ಸ್ಟೇಷನ್‌ ಬಗ್ಗೆಯೂ ಇದರಲ್ಲಿ ಮಾಹಿತಿ ಪಡೆದುಕೊಳ್ಳಬಹುದು.

ವರ್ಲ್ಡ್ ಏರ್ ಕ್ವಾಲಿಟಿ ಇಂಡೆಕ್ಸ್

ವರ್ಲ್ಡ್ ಏರ್ ಕ್ವಾಲಿಟಿ ಇಂಡೆಕ್ಸ್

ವರ್ಲ್ಡ್ ಏರ್ ಕ್ವಾಲಿಟಿ ಇಂಡೆಕ್ಸ್ ಭಾರತದ ಬಹುಪಾಲು ಎಲ್ಲಾ ನಗರಗಳ ಹವಾಮಾನದ ಬಗ್ಗೆ ಮಾಹಿತಿ ನೀಡುತ್ತದೆ. ಇದು 2007 ರಲ್ಲಿ ಪ್ರಾರಂಭವಾದ ಲಾಭರಹಿತ ಯೋಜನೆಯಾಗಿದ್ದು, 130 ಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆಯಾಗುತ್ತಿದೆ. ಹಾಗೆಯೇ ಜಗತ್ತಿನಾದ್ಯಂತ 30,000 ಕ್ಕೂ ಹೆಚ್ಚಿನ ಏರ್‌ ಕ್ವಾಲಿಟಿ ಸ್ಟೇಷನ್‌ ಗಳನ್ನು ಒಳಗೊಂಡಿದ್ದು, ನಿಮ್ಮ ಸಮೀಪದ ಏರ್‌ ಕ್ವಾಲಿಟಿ ಸ್ಟೇಷನ್ ಗಳನ್ನು ಈ ಆಪ್‌ ಮೂಲಕ ಕಂಡುಕೊಳ್ಳಬಹುದು.

Best Mobiles in India

English summary
As the number of vehicles increases, air pollution also increases. This article explains about apps that provide information about air pollution.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X