ಚಾಕಲೇಟ್‌ ತಿಂದರೂ ಟ್ಯಾಬ್ಲೆಟ್‌ ವಿತರಿಸದ ಕಿಟ್‌ಕ್ಯಾಟ್‌

Posted By:

ಕಿಟ್‌ಕ್ಯಾಟ್‌ ಚಾಕಲೇಟ್‌ ತಿನ್ನಿ ಗೂಗಲ್‌ ನೆಕ್ಸಸ್‌ ಟ್ಯಾಬ್ಲೆಟ್‌ ಗೆಲ್ಲಿ ಹೆಸರಿನ ಸ್ಪರ್ಧೆ‌ ನಡೆಸಿದ ಕಿಟ್‌ಕ್ಯಾಟ್‌ ಕಂಪೆನಿ, ಈಗ ಸ್ಪರ್ಧೆ‌ಯಲ್ಲಿ ವಿಜೇತರಾದವರಿಗೆ ಗೂಗಲ್‌ ನೆಕ್ಸಸ್‌ ಟ್ಯಾಬ್ಲೆಟ್‌ ನೀಡದೆ ವಂಚಿಸಲು ಆರಂಭಿಸಿದೆ.

ಕಿಟ್‌ಕ್ಯಾಟ್‌ ಕಂಪೆನಿ ಕಳೆದ ಸೆಪ್ಟೆಂಬರ್‌ನಲ್ಲಿ  ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ ಓಎಸ್‌ ಹೆಸರನ್ನು ಭಾರತದಲ್ಲಿ ಜನಪ್ರಿಯಗೊಳಿಸಲು 'ಕಿಟ್‌ಕ್ಯಾಟ್‌ ಚಾಕಲೇಟ್‌ ತಿನ್ನಿ ನೆಕ್ಸಸ್‌ ಟ್ಯಾಬ್ಲೆಟ್‌ ಗೆಲ್ಲಿ' ಸ್ಪರ್ಧೆ‌ಯನ್ನು ನಡೆಸಿತ್ತು. ಸ್ಪರ್ಧೆ‌ಯಲ್ಲಿ ವಿಜೇತರಾದವರಿಗೆ ಗೂಗಲ್‌‌ನ ಹೊಸ ನೆಕ್ಸಸ್‌ 7(2013) ಟ್ಯಾಬ್ಲೆಟ್‌ ನೀಡಲಾಗುವುದು ಎಂದು ಹೇಳಿತ್ತು.

ಸ್ಪರ್ಧೆ‌ ನಡೆದು ಎರಡು ತಿಂಗಳು ಕಳೆದರೂ ಕಿಟ್‌ಕ್ಯಾಟ್‌ ವಿಜೇತರಾದ ಎಲ್ಲರಿಗೂ ಟ್ಯಾಬ್ಲೆಟ್‌ ವಿತರಣೆ ಮಾಡಿಲ್ಲ.ಕೆಲವರಿಗೆ ಟ್ಯಾಬ್ಲೆಟ್‌ ವಿತರಣೆ ಮಾಡಿದ್ರೂ ಗೂಗಲ್‌ ಹಳೇಯ ನೆಕ್ಸಸ್‌ 7 ಟ್ಯಾಬ್ಲೆಟ್‌ನ್ನು‌ ಕೊರಿಯರ್‌ ಮೂಲಕ ಕಳುಹಿಸಿ ಕೊಟ್ಟಿತ್ತು.ಹಳೇಯ ನೆಕ್ಸಸ್‌ ಟ್ಯಾಬ್ಲೆಟ್‌ ವಿತರಣೆ ಮಾಡಿದ್ದು ಯಾಕೆ ಎಂದು ವಿಜೇತರಾದವರು ಕೇಳಿದ ಮೇಲೆ ತಪ್ಪನ್ನು ಒಪ್ಪಿಕೊಂಡ ಕಿಟ್‌ಕ್ಯಾಟ್‌ ವಿಜೇತರಾದವರಿಗೆ ಗೂಗಲ್‌‌ನ ಹೊಸ ನೆಕ್ಸಸ್‌ 7 ಟ್ಯಾಬ್ಲೆಟ್‌ನ್ನೇ ನೀಡಲಾಗುವುದು ಎಂದು ಫೇಸ್‌‌ಬುಕ್‌‌ನಲ್ಲಿ  ಪ್ರಕಟಿಸಿತ್ತು.

Post by Kit Kat.

ಕಿಟ್‌ಕ್ಯಾಟ್‌ ಭಾರತದಲ್ಲಿ ಮಾತ್ರ ಈ ರೀತಿಯ ಸ್ಪರ್ಧೆ ನಡೆಸದೇ ಅಮೆರಿಕ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ನಡೆಸಿತ್ತು. ಅಮೆರಿಕದಲ್ಲಿ ವಿಜೇತರಾದ ವ್ಯಕ್ತಿಗಳಿಗೆ 15 ದಿನದ ಒಳಗೆ ಹೊಸ ಟ್ಯಾಬ್ಲೆಟ್‌ನ್ನು ವಿತರಣೆ ಮಾಡಿತ್ತು. ಆದರೆ ಭಾರತದಲ್ಲಿ ನವೆಂಬರ್‌ನಲ್ಲಿ ಸ್ಪರ್ಧೆ ನಡೆದು ಇನ್ನೂ ಟ್ಯಾಬ್ಲೆಟ್‌ನ್ನು ಸರಿಯಾಗಿ ವಿತರಣೆ ಮಾಡಲು ಕಿಟ್‌ಕ್ಯಾಟ್‌ನಿಂದ‌ ಸಾಧ್ಯವಾಗಿಲ್ಲ.ವಿಶ್ವದ ಟಾಪ್‌ ಚಾಕಲೇಟ್‌ ತಯಾರಕ ಬ್ರ್ಯಾಂಡ್‌ ಕಂಪೆನಿ ಕಿಟ್‌ಕ್ಯಾಟ್‌ನ ತಾರತಮ್ಯ ನೀತಿಯನ್ನು ಖಂಡಿಸಿ ಫೇಸ್‌ಬುಕ್‌ ಮತ್ತು ಟ್ವೀಟರ್‌ನಲ್ಲಿ ವಿಜೇತರಾದವರು ಪ್ರಶ್ನಿಸುತ್ತಿದ್ದಾರೆ.

Unfair @KitKatIndia never expected this from you
— Harisha Kumar K (@HKumarK) December 9, 2013

@GizbotKa Yes you are right waiting to get the prize. Sad for being a winner from no service area @KitKatIndia
— Harisha Kumar K (@HKumarK) January 25, 2014

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot