ಕಿಟ್‌ಕ್ಯಾಟ್‌ ಚಾಕಲೇಟ್‌ ತಿನ್ನಿ ಗೂಗಲ್‌ ನೆಕ್ಸಸ್‌ ಟ್ಯಾಬ್ಲೆಟ್‌ ಗೆಲ್ಲಿ

By Ashwath
|

ಮುಂದೆ ಬಿಡುಗಡೆಯಾಗಲಿರುವ ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ ಓಎಸ್‌ ಹೆಸರನ್ನು ಭಾರತದಲ್ಲಿ ಜನಪ್ರಿಯಗೊಳಿಸಲು ಗೂಗಲ್‌ 'ಕಿಟ್‌ಕ್ಯಾಟ್‌ ಚಾಕಲೇಟ್‌ ತಿನ್ನಿ ನೆಕ್ಸಸ್‌ ಟ್ಯಾಬ್ಲೆಟ್‌ ಗೆಲ್ಲಿ' ಸ್ಪರ್ಧೆ‌ಯನ್ನು ಆರಂಭಿಸಿದೆ. ಸ್ಪರ್ಧೆ‌ಯಲ್ಲಿ ವಿಜೇತರಾದವರಿಗೆ ನೆಕ್ಸಸ್‌ 7 ಟ್ಯಾಬ್ಲೆಟ್‌ ನೀಡಲಾಗುವುದು ಎಂದು ಗೂಗಲ್‌ ಪ್ರಕಟಿಸಿದೆ.

ಸ್ಪರ್ಧೆ‌ಯಲ್ಲಿ ಹೀಗೆ ಭಾಗವಹಿಸಿ:
ಮೊದಲನೇಯದಾಗಿ ಕಿಟ್‌ಕ್ಯಾಟ್‌ ಚಾಕಲೇಟ್‌ನ್ನು ಖರೀದಿಸಬೇಕು.ಆ ಚಾಕಲೇಟ್‌ ಕವರ್‍ ಒಳಗಡೆ ಎಂಟು ಅಂಕಿಗಳ ಸಂಖ್ಯೆ ಇರುತ್ತದೆ. ನಂತರ KITKAT ಟೈಪ್‌ ಮಾಡಿ ಒಂದು ಸ್ಪೇಸ್‌ ಬಿಟ್ಟು ಎಂಟು ಅಂಕಿಗಳ ಸಂಖ್ಯೆಯನ್ನು ಬರೆದು ಒಂದು ಸ್ಪೇಸ್‌ ಬಿಟ್ಟು 09880298802 ನಂಬರ್‌ಗೆ ಕಳುಹಿಸಬೇಕು. ನಿನ್ನೆಯಿಂದ ಈ ಸ್ಪರ್ಧೆ ಆರಂಭಗೊಂಡಿದ್ದು ನವೆಂಬರ್‌ 15ರವರೆಗೂ ಈ ಸ್ಪರ್ಧೆ‌ಯಲ್ಲಿ ಭಾಗವಹಿಸಬಹುದು.

ಮೆಸೇಜ್‌ ಕಳುಹಿಸುವವರು ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಏಳು ಗಂಟೆಯವರಗೆ ಕಳುಹಿಸಬೇಕು.ಪ್ರತಿ ಒಂದು ಗಂಟೆಗೆ ಒಮ್ಮೆ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ನೆಸ್ಟ್ಲೆ ಇಂಡಿಯಾ ಹೇಳಿದೆ.ಈ ಸ್ಪರ್ಧೆ ಕಿಟ್‌ಕ್ಯಾಟ್‌ 2ಎಫ್‌‌,4 ಎಫ್‌‌ ಮತ್ತು KIT KAT Dark ಚಾಕಲೇಟ್‌ಗೆ ಮಾತ್ರ ಅನ್ವಯವಾಗಲಿದೆ.

ಈ ಸ್ಪರ್ಧೆ‌ಯ ಸಂಪೂರ್ಣ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ:www.kitkat.in

ಕಿಟ್‌ಕ್ಯಾಟ್‌ ಚಾಕಲೇಟ್‌ ತಿನ್ನಿ ಗೂಗಲ್‌ ನೆಕ್ಸಸ್‌ ಟ್ಯಾಬ್ಲೆಟ್‌ ಗೆಲ್ಲಿ

ಇದೇ ತಿಂಗಳ ಆರಂಭದಲ್ಲಿ ಗೂಗಲ್‌ ತನ್ನ ಹೊಸ 4.4 ಆಂಡ್ರಾಯ್ಡ್‌ ಓಎಸ್‌ಗೆ ಕಿಟ್‌ಕ್ಯಾಟ್‌ ಎಂದು ಹೆಸರನ್ನಿರಿಸಿದೆ ಎಂದು ಆಂಡ್ರಾಯ್ಡ್‌ ಮುಖ್ಯಸ್ಥ ಭಾರತೀಯ ಮೂಲದ ಸುಂದರ್‌ ಪಿಚಾಯ್‌ ತಮ್ಮ ಗೂಗಲ್‌ ಪ್ಲಸ್‌ನಲ್ಲಿ ಪ್ರಕಟಿಸಿದ್ದರು. ಹೊಸ ಓಎಸ್‌ ಮುಂದಿನ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಗೂಗಲ್‌ ನೆಕ್ಸಸ್‌ ಟ್ಯಾಬ್ಲೆಟ್‌ ಬೆಲೆ ದಿಢೀರ್‌ ಇಳಿಕೆ

Most Read Articles
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X