ರಿಲಾಯನ್ಸ್ ಜಿಯೋ ಬಗ್ಗೆ ಈ 5 ಕುತೂಹಲಕಾರಿ ಮಾಹಿತಿಗಳನ್ನು ಯಾರು ತಿಳಿದೇಯಿಲ್ಲ..!

Written By:

ನಿಮಗೆಲ್ಲಾ ತಿಳಿದಿರುವಂತೆ ಡಿಸೆಂಬರ್ 1 2016 ರಂದು ರಿಲಾಯನ್ಸ್ ಜಿಯೋ 'ಹ್ಯಾಪಿ ನ್ಯೂ ಇಯರ್' ಆಫರ್‌ ಅನ್ನು ಪ್ರಕಟಣೆ ಗೊಳಿಸಿದೆ. ಈ ಆಫರ್‌ನಿಂದ ರಿಲಾಯನ್ಸ್ ಜಿಯೋ ಎಲ್ಲಾ ಬಳಕೆದಾರರು ಮಾರ್ಚ್‌ 31 2017 ರವರೆಗೆ ಉಚಿತ ಸೇವೆಗಳನ್ನು ಪಡೆಯಬಹುದು.

ರಿಲಾಯನ್ಸ್ ಜಿಯೋ ಬಗ್ಗೆ ಈ 5 ಕುತೂಹಲಕಾರಿ ಮಾಹಿತಿಗಳನ್ನು ಯಾರು ತಿಳಿದೇಯಿಲ್ಲ..!

ಅಂದಹಾಗೆ ಜಿಯೋ ಸೆಪ್ಟೆಂಬರ್ 5 ರಂದು ನೀಡಿದ್ದ ವೆಲ್ಕಮ್ ಆಫರ್ 90 ದಿನಗಳನ್ನು ಮುಗಿಸಿದ್ದು, ಇಂದಿಗೆ ಅಂತ್ಯ. ಟ್ರಾಯ್‌ ಪ್ರಕಾರ ಯಾವುದೇ ಸರ್ವೀಸ್‌ ಪ್ರೊವೈಡರ್‌ಗಳು 90 ದಿನಗಳಿಗಿಂತ ಹೆಚ್ಚು ದಿನ ಪ್ರೊಮೋಶನಲ್ ಆಫರ್‌ ಅನ್ನು ನೀಡುವ ಹಾಗಿಲ್ಲ. ಆದ್ದರಿಂದ ರಿಲಾಯನ್ಸ್ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಅನ್ನು ವೆಲ್ಕಮ್‌ ಆಫರ್‌ ವಿಸ್ತರಣೆ ಆಗಿ ನೀಡುತ್ತಿದೆ.

ಹ್ಯಾಪಿ ನ್ಯೂ ಇಯರ್ ಆಫರ್: ಜಿಯೋ ಸಿಮ್ ಖರೀದಿಗೆ 5 ಕಾರಣಗಳು

ಇಂದಿನಿಂದ ಯಾರು ಜಿಯೋ ಸಿಮ್‌ ಅನ್ನು ಪಡೆಯುತ್ತಾರೋ ಅವರು ಹ್ಯಾಪಿ ನ್ಯೂ ಇಯರ್ ಪ್ಲಾನ್‌ ಅನ್ನು ವೆಲ್ಕಮ್‌ ಆಫರ್ ಆಗಿ ಪಡೆಯಬಹುದು. ವೆಲ್ಕಮ್‌ ಆಫರ್ ಮತ್ತು ಹ್ಯಾಪಿ ನ್ಯೂ ಇಯರ್ ಪ್ಯಾಕ್‌ಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ವೆಲ್ಕಮ್‌ ಆಫರ್‌ ಅಂತ್ಯದೊಂದಿಗೆ, ಪುನಃ ಮೂರು ತಿಂಗಳು ರಿಲಾಯನ್ಸ್ ಜಿಯೋ ಉಚಿತ ಡೇಟಾ, ಕರೆ ಮೆಸೇಜ್‌ ಆಫರ್‌ಗಳನ್ನು ನೀಡುತ್ತಿದೆ. ಅಂದಹಾಗೆ ರಿಲಾಯನ್ಸ್ ಜಿಯೋ ಕುರಿತ 5 ಕುತೂಹಲಕಾರಿ ಮಾಹಿತಿಗಳನ್ನು ನೀವು ಇಂದಿಗೂ ಸಹ ತಿಳಿದಿಲ್ಲ. ತಿಳಿಯಲು ಮುಂದೆ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ರಿಲಾಯನ್ಸ್ ಜಿಯೋ ಪ್ರಪಂಚದ ದೊಡ್ಡ ಟೆಲಿಕಾಂ ಸಂಸ್ಥೆ

ರಿಲಾಯನ್ಸ್ ಜಿಯೋ ಪ್ರಪಂಚದ ದೊಡ್ಡ ಟೆಲಿಕಾಂ ಸಂಸ್ಥೆ

ರಿಲಾಯನ್ಸ್ ಜಿಯೋ ನೆಟ್‌ವರ್ಕ್‌ ರೂ.150,000 ಕೋಟಿ ಬಂಡವಾಳ ಹೊಂದಿದೆ. ಮುಕೇಶ್‌ ಅಂಬಾನಿ ಮಾರ್ಚ್‌ 2016 ರಂದು ಜಿಯೋ ಪ್ರಪಂಚದ ದೊಡ್ಡ್ ಟೆಕ್‌ ಸಂಸ್ಥೆ ಎಂದು ಕರೆದಿದ್ದಾರೆ.

83 ದಿನಗಳಲ್ಲಿ 50 ದಶಲಕ್ಷ ಬಳಕೆದಾರರನ್ನು ಹೊಂದಿದೆ

83 ದಿನಗಳಲ್ಲಿ 50 ದಶಲಕ್ಷ ಬಳಕೆದಾರರನ್ನು ಹೊಂದಿದೆ

ಇದೇ ಮೊಟ್ಟ ಮೊದಲ ಬಾರಿಗೆ ಟೆಲಿಕಾಂ ಇಂಡಸ್ಟ್ರಿಯಲ್ಲಿ ರಿಲಾಯನ್ಸ್ ಜಿಯೋ ಕೇವಲ 83 ದಿನಗಳಲ್ಲಿ 50 ದಶಲಕ್ಷ ಬಳಕೆದಾರರನ್ನು ಕ್ರಿಯೇಟ್ ಮಾಡಿ ದಾಖಲೆ ಮಾಡಿದೆ. ಅಂದಹಾಗೆ ಸೆಪ್ಟೆಂಬರ್ 5 2016 ರಂದು ಜಿಯೋ ಸರ್ವೀಸ್ ಲಾಂಚ್‌ ಆದ ನಿಮಿಷದಲ್ಲಿ 1,000 ಚಂದಾದಾರರನ್ನು ಪಡೆದಿತ್ತು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತದ ಅತಿ ವೇಗದ ಬೆಳವಣಿಗೆಯ ಟೆಲಿಕಾಂ

ಭಾರತದ ಅತಿ ವೇಗದ ಬೆಳವಣಿಗೆಯ ಟೆಲಿಕಾಂ

ಏರ್‌ಟೆಲ್‌ 12 ವರ್ಷ, ವೊಡಾಫೋನ್‌ 13 ವರ್ಷ ಆದರೆ ರಿಲಾಯನ್ಸ್ ಜಿಯೋ 83 ದಿನಗಳು. ಇದನ್ನೇ ಹೇಳಿದ್ದು ಮೊದಲು ನಾವು. ಜಿಯೋ 83 ದಿನಗಳಲ್ಲಿ 50 ದಶಲಕ್ಷ ಚಂದಾದಾರನ್ನು ಕ್ರಿಯೇಟ್ ಮಾಡಿದೆ ಎಂದು. ಜಿಯೋ ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಲ್ಲಿ ಸಹ ಅತಿ ವೇಗದ ಬೆಳವಣಿಗೆಯ ಟೆಲಿಕಾಂ ಆಗಿದೆ.

ಭಾರತದ ಲೇಟೆಸ್ಟ್ 4G ಬಳಕೆದಾರರನ್ನು ಜಿಯೋ ಹೊಂದಿದೆ

ಭಾರತದ ಲೇಟೆಸ್ಟ್ 4G ಬಳಕೆದಾರರನ್ನು ಜಿಯೋ ಹೊಂದಿದೆ

ಜಿಯೋ 4G ನೆಟ್‌ವರ್ಕ್‌ಗೆ ಮಾತ್ರ ನಿರ್ಬಂಧ ಹೊಂದಿದ ಮೊದಲ ಟೆಲಿಕಾಂ ಆಪರೇಟರ್ ಆಗಿದೆ. ಜಿಯೋ, ಏರ್‌ಟೆಲ್‌'ಗಿಂತ 5 ಪಟ್ಟು 4G ಬಳಕೆದಾರರನ್ನು ಹೊಂದಿದೆ. ಏರ್‌ಟೆಲ್‌ 10 ದಶಲಕ್ಷ 4G ಚಂದಾದಾರನ್ನು ಭಾಗಶಃ ಹೊಂದಿರಬಹುದು ಅಷ್ಟೆ. ಐಡಿಯಾ ಕೇವಲ 3 ದಶಲಕ್ಷ 4G ಚಂದಾದಾರನ್ನು ಹೊಂದಿದೆ. ಆದರೆ ಜಿಯೋ 100 ದಶಲಕ್ಷ 4G ಚಂದಾದಾರನ್ನು ಹೊಂದುವ ಗುರಿಯೊಂದಿಗೆ ನೆಟ್‌ವರ್ಕ್‌ ಆಪರೇಟ್ ಮಾಡುತ್ತಿದೆ.

ಜಿಯೋ ವೇಗದ ಗ್ರಾಹಕರನ್ನು ಹೊಂದುತ್ತಿರುವ ಸಂಸ್ಥೆ

ಜಿಯೋ ವೇಗದ ಗ್ರಾಹಕರನ್ನು ಹೊಂದುತ್ತಿರುವ ಸಂಸ್ಥೆ

ರಿಲಾಯನ್ಸ್ ಜಿಯೋ ಅತೀ ವೇಗದ ಗ್ರಾಹಕರನ್ನು ಹೊಂದುತ್ತಿರುವ, ಪ್ರತಿ ನಿಮಿಷಕ್ಕೆ 1,000 ಚಂದಾದಾರನ್ನು ಇಂದಿಗೂ ಪಡೆಯುತ್ತಿರುವ ಟೆಲಿಕಾಂ ಆಗಿದೆ. ಈ ರೀತಿಯಲ್ಲಿ ಜಿಯೋ ಫೇಸ್‌ಬುಕ್, ವಾಟ್ಸಾಪ್ ಮತ್ತು ಇತರೆ ಪ್ರಖ್ಯಾತ ಕಂಪನಿಗಳಿಗೆ ಸ್ಪರ್ಧೆಯೊಡ್ಡುತ್ತಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Did You Know These 5 Interesting Facts About Reliance Jio? To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot