ಲಾಲ್‌ಬಾಗ್‌ನಲ್ಲಿ ಡಿಜಿಟಲ್ ಕ್ಯಾಮೆರಾ ನಿ‍ಷೇಧ: ಕಾರಣ ಏನು?

|

ಗಾರ್ಡನ್‌ ಸಿಟಿ ಬೆಂಗಳೂರಿನಲ್ಲಿ ಲಾಲ್‌ಬಾಗ್ ಬೊಟಾನಿಕಲ್ ಉದ್ಯಾನವನ ಪ್ರಮುಖ ಆಕರ್ಷಣಿಯ ಸ್ಥಳಗಳಲ್ಲಿ ಒಂದಾಗಿದೆ. ಲಾಲ್‌ಬಾಗ್‌ ಉದ್ಯಾನ ಕಣ್ಮನ ಸೆಳೆಯುವಂತಿದ್ದು, ಉದ್ಯಾನವನಕ್ಕೆ ಭೇಟಿ ನೀಡುವವರು ಫೋಟೊ ತೆಗೆದುಕೊಳ್ಳುತ್ತಾರೆ. ಇದೀಗ ಡಿಜಿಟಲ್ ಕ್ಯಾಮರಾ ನಿಷೇಧ ಮಾಡಲಾಗಿದೆ. ಹೀಗಾಗಿ ಯಾವುದೇ ಡಿಜಿಟಲ್ ಕ್ಯಾಮೆರಾಗಳನ್ನು ಅನುಮತಿಸಲಾಗುವುದಿಲ್ಲ.

ಲಾಲ್‌ಬಾಗ್‌ನಲ್ಲಿ ಡಿಜಿಟಲ್ ಕ್ಯಾಮೆರಾ ನಿ‍ಷೇಧ: ಕಾರಣ ಏನು?

ಲಾಲ್‌ಬಾಗ್‌ನಲ್ಲಿ ಡಿಜಿಟಲ್ ಕ್ಯಾಮರಾ ನಿಷೇಧ ಮಾಡುವ ಪ್ರಸ್ತಾವನೆಯನ್ನು ಸಲಹಾ ಸಮಿತಿ ಮುಂದೆ ತರಲಾಗಿತ್ತು. ಸಮಿತಿ ಒಪ್ಪಿಗೆ ನೀಡಿದ ಮೇಲೆ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಡಿಜಿಟಲ್ ಕ್ಯಾಮರಾವನ್ನು ಲಾಲ್‌ಬಾಗ್ ಒಳಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ 500 ರೂ. ದಂಡ ವಿಧಿಸಲಾಗುತ್ತದೆ.

ಪ್ರವೇಶ ಶುಲ್ಕದೊಂದಿಗೆ 50 ರೂ. ಕೊಟ್ಟು ಕ್ಯಾಮೆರಾವನ್ನು ಉದ್ಯಾನದ ಒಳಗೆ ಕೊಂಡೊಯ್ಯಲು ಈ ಹಿಂದೆ ಅನುಮತಿ ಇತ್ತು. ಆದರೆ, ಕ್ಯಾಮೆರಾ ಒಳಗೆ ಕೊಂಡೊಯ್ದವರಲ್ಲಿ ಹಲವರು ದುರ್ಬಳಕೆ ಮಾಡಿಕೊಂಡ ದೂರುಗಳು ಕೇಳಿ ಬಂದಿದ್ದವು. ಹೀಗಾಗಿ ಕ್ಯಾಮೆರಾವನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸಲು ರಾಜ್ಯ ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಸಾರ್ವಜನಿಕರ ಮಾಹಿತಿಗಾಗಿ ಉದ್ಯಾನದ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಫಲಕಗಳನ್ನು ಅಳವಡಿಸಿದೆ.

ಲಾಲ್‌ಬಾಗ್‌ನಲ್ಲಿ ಡಿಜಿಟಲ್ ಕ್ಯಾಮೆರಾ ನಿ‍ಷೇಧ: ಕಾರಣ ಏನು?

ಒಂದು ವೇಳೆ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ಗೆ ಹೋಗುತ್ತಿದ್ದರೆ, ನೀವು ಆವರಣದಲ್ಲಿ ಡಿಜಿಟಲ್ ಕ್ಯಾಮೆರಾಗಳನ್ನು ಒಯ್ಯುವಂತಿಲ್ಲ. ಅಧಿಕಾರಿಗಳು ಈ ಉದ್ಯಾನದಲ್ಲಿ ಡಿಜಿಟಲ್ ಕ್ಯಾಮೆರಾಗಳನ್ನು ನಿಷೇಧಿಸಿದ್ದಾರೆ ಮತ್ತು ಉಲ್ಲಂಘಿಸುವವರಿಗೆ ರೂ 500 ದಂಡ ವಿಧಿಸಲಾಗುವುದು ಎಂದಿದ್ದಾರೆ. ಕಳೆದವಾರ ಜೋಡಿಯೊಂದು ಕ್ಯಾಮರಾ ತೆಗೆದುಕೊಂಡು ಹೋಗಿ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿತ್ತು, 500 ರೂ. ದಂಡ ಕಟ್ಟಿದ್ದರು. ಇನ್ನು ನಿಷೇಧಕ್ಕೆ ಪ್ರಮುಖ ಕಾರಣವೆಂದರೆ ಫ್ಲ್ಯಾಷ್ ಬಳಕೆ ಯಿಂದ ಪಕ್ಷಿಗಳಿಗೆ ತೊಂದರೆ ಉಂಟಾಗುತ್ತದೆ. ಹಾಗೂ ಜೇನು ನೊಣಗಳು ದಾಳಿ ಮಾಡುವ ಸಾಧ್ಯತೆಯೂ ಇದೆ.

ಅದೇ ರೀತಿ ಲಾಲ್‌ಬಾಗ್‌ ಉದ್ಯಾನವನದಲ್ಲಿ, ಪ್ರೀ ವೆಡ್ಡಿಂಗ್ ಫೋಟೋಶೂಟ್‌ಗಳು ಅಥವಾ ಬೇಬಿ ಶವರ್‌ಗಳಂತಹ ವೃತ್ತಿಪರ ಕ್ಯಾಮೆರಾಗಳನ್ನು ಸಹ ಅನುಮತಿಸಲಾಗುವುದಿಲ್ಲ, ಏಕೆಂದರೆ ಇದು ಸಂದರ್ಶಕರಿಗೆ ತೊಂದರೆಯಾಗಿದೆ. ಈಗ, ಲಾಲ್‌ಬಾಗ್‌ನ ಪ್ರತಿ ಗೇಟ್‌ನಲ್ಲಿ, ಪ್ರವಾಸಿಗರನ್ನು ಪ್ರವೇಶ ಬಿಂದುವಿನಲ್ಲಿ ಡಿಜಿಟಲ್ ಕ್ಯಾಮೆರಾಗಳಿಗಾಗಿ ಪರಿಶೀಲಿಸಲಾಗುತ್ತದೆ ಮತ್ತು ನಂತರ ಐಕಾನಿಕ್ ಗಾರ್ಡನ್‌ಗೆ ಪ್ರವೇಶಿಸಲು ಅನುಮತಿಸಲಾಗುತ್ತದೆ.

Best Mobiles in India

English summary
Digital Cameras Banned in Lalbagh Botanical Garden.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X