ಡಿಜಿಟಲ್ ಹೆಲ್ತ್ ಐಡಿ ಕಾರ್ಡ್ ಘೋಷಣೆ; ಪ್ರಯೋಜನಗಳೆನು!

|

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಸೆ.27) ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಆರಂಭಿಸಿದರು. ದೇಶದ ನಾಗರೀಕರ ಆರೋಗ್ಯ ಭದ್ರತೆಗಾಗಿ ಪ್ರತಿಯೊಬ್ಬರು ಡಿಜಿಟಲ್ ಹೆಲ್ತ್ ಐಡಿ ಕಾರ್ಡ್‌ ಅನ್ನು ಪರಿಚಯಿಸಿದರು.

ಡಿಜಿಟಲ್ ಹೆಲ್ತ್ ಐಡಿ ಕಾರ್ಡ್ ಘೋಷಣೆ; ಪ್ರಯೋಜನಗಳೆನು!

ಏನಿದು ಡಿಜಿಟಲ್ ಹೆಲ್ತ್ ಐಡಿ ಕಾರ್ಡ್?
ನಾಗರಿಕರ ಆರೋಗ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲು NDHM ನಿಂದ ರೂಪಿಸಲಾದ 14 ಅಂಕೆಗಳ ಗುರುತಿನ ಐಡಿ ಆಗಿದೆ. ನಾಗರಿಕರು ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು ಅವರ ಹೆಲ್ತ್ ಐಡಿ ಮೂಲಕ ಆರೋಗ್ಯ ದಾಖಲೆಗಳು ಡಿಜಿಟಲ್ ರೂಪದಲ್ಲಿ ಲಭ್ಯವಾಗಿಸುವುದು ಇದರ ಉದ್ದೇಶ ಆಗಿದೆ.

ಡಿಜಿಟಲ್ ಹೆಲ್ತ್ ಐಡಿ ಕಾರ್ಡ್ ಘೋಷಣೆ; ಪ್ರಯೋಜನಗಳೆನು!

ಡಿಜಿಟಲ್ ಹೆಲ್ತ್ ಐಡಿ ಕಾರ್ಡ್ ಪ್ರಮುಖ ಅಂಶಗಳು
* NDHM ಅಡಿಯಲ್ಲಿ, ಪ್ರತಿಯೊಬ್ಬ ನಾಗರಿಕನು ಆರೋಗ್ಯ ID ಯನ್ನು ಹೊಂದಿರುತ್ತಾರೆ, ಅದು ಅವರ ಆರೋಗ್ಯ ಖಾತೆಯಂತೆಯೂ ಕಾರ್ಯನಿರ್ವಹಿಸುತ್ತದೆ. ಅದಕ್ಕೆ ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಲಿಂಕ್ ಮಾಡಬಹುದು ಮತ್ತು ಮೊಬೈಲ್ ಅಪ್ಲಿಕೇಶನ್ನ ಸಹಾಯದಿಂದ ಅವರ ಆರೋಗ್ಯ ಇತಿಹಾಸವನ್ನು ನೋಡಬಹುದು.
* ಇದು, ಹೆಲ್ತ್‌ಕೇರ್ ಪ್ರೊಫೆಷನಲ್ಸ್ ರಿಜಿಸ್ಟ್ರಿ ಮತ್ತು ಹೆಲ್ತ್‌ಕೇರ್ ಫೆಸಿಲಿಟೀಸ್ ರಿಜಿಸ್ಟ್ರಿ, ಆಧುನಿಕ ಮತ್ತು ಸಾಂಪ್ರದಾಯಿಕ ವೈದ್ಯಕೀಯ ತಜ್ಞರಿಗಾಗಿ ಆರೋಗ್ಯ ಸೇವಾ ಪೂರೈಕೆದಾರರಿಗೆ ಉತ್ತಮ ದತ್ತಾಂಶ ಸಂಗ್ರಹವಾಗಿ ಕಾರ್ಯನಿರ್ವಹಿಸುತ್ತದೆ.
* ಇದು ವೈದ್ಯರು ಹಾಗೂ ಆಸ್ಪತ್ರೆಗಳು ಮತ್ತು ಆರೋಗ್ಯ ಪೂರೈಕೆದಾರರಿಗೆ ಸುಲಭವಾಗಿ ವ್ಯವಹಾರವನ್ನು ಖಚಿತಪಡಿಸುತ್ತದೆ ಎಂದು ಆಶಿಸಲಾಗಿದೆ.

ಡಿಜಿಟಲ್ ಹೆಲ್ತ್ ಐಡಿ ಕಾರ್ಡ್ ಘೋಷಣೆ; ಪ್ರಯೋಜನಗಳೆನು!

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ಆರೋಗ್ಯ ಕಾರ್ಡ್ ಅನ್ನು ಘೋಷಿಸಿದ್ದಾರೆ. ಇದನ್ನು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಕಾರ್ಡ್ ಮಿಷನ್ ಅನ್ನು ಸ್ವಾತಂತ್ರ್ಯದ ವಿಶೇಷ ದಿನದಂದು ಘೋಷಿಸಲಾಯಿತು. ಇದರಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಒಂದೇ ಆರೋಗ್ಯ ಕಾರ್ಡ್ ಐಡಿ ನೀಡಲಾಗುತ್ತದೆ. ಆರೋಗ್ಯ ರಕ್ಷಣೆಯ ಈ ಧ್ಯೇಯವು ಹೊಂದಿರುವವರ ಆರೋಗ್ಯ ಮಾಹಿತಿಯನ್ನು ಹೊಂದಿರುತ್ತದೆ. ಆನ್‌ಲೈನ್‌ ಮೂಲಕ ಡಿಜಿಟಲ್ ಹೆಲ್ತ್ ಐಡಿ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.

ಹೆಲ್ತ್ ಕಾರ್ಡ್ ಪಡೆಯಲು ಈ ಕ್ರಮ ಅನುಸರಿಸಿ:
* ಮೊದಲು ಅಧಿಕೃತ ndhm.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು
* ಹೋಮ್‌ ಪೇಜ್‌ನಲ್ಲಿ ndhm ಐಡಿ ಅಪ್ಲಿಕೇಷನ್ ಡೌನ್‌ಲೋಡ್ ಮಾಡಬೇಕು
* ಅಪ್ಲಿಕೇಷನ್ ಓಪನ್ ಮಾಡಿದ ಬಳಿಕ ನೋಂದಣಿ (Registration) ಅರ್ಜಿಯನ್ನು ಭರ್ತಿ ಮಾಡಬೇಕು.
* ನಿಮ್ಮ ಮೊಬೈಲ್‌ ನಂಬರ್‌ನ್ನು ನೋಂದಣಿ ಮಾಡಬೇಕು, ಒಟಿಪಿ ಬರುತ್ತದೆ, ಬಳಿಕ ಒಟಿಪಿ ಹಾಗೂ ನಿಮ್ಮ ಹೆಸರನ್ನು ನಮೂದಿಸಬೇಕು.
* ಬಳಿಕ ನಿಮ್ಮ ಹುಟ್ಟಿದ ದಿನಾಂಕ, ಲಿಂಗ, ಹೆಸರು, ತಂದೆಯ ಹೆಸರು ಸೇರಿದಂತೆ ಇರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು
* ಎಲ್ಲಾ ಮಾಹಿತಿ ಭರ್ತಿ ಮಾಡಿದ ಬಳಿಕ ಸಬ್‌ಮಿಟ್ ಕೊಡಬೇಕು
*ಪ್ರತಿ ವ್ಯಕ್ತಿಯ ವಿಶಿಷ್ಟ ಗುರುತು ಸಂಖ್ಯೆಯನ್ನು ರಾ.ಡಿಜಿಟಲ್ ಆರೋಗ್ಯ ಯೋಜನೆಗೆ ಲಿಂಕ್ ಮಾಡಬೇಕು.

Most Read Articles
Best Mobiles in India

English summary
Digital Health ID Card 2021 Announced: Registration, Benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X