ಕನ್ನಡ ರಾಜ್ಯೋತ್ಸವಕ್ಕೆ ಡಿಜಿಟಲ್ ಸ್ಪರ್ಶ: ಮೊಬೈಲ್ ನಲ್ಲೇ ನಾಡು-ನುಡಿ

Written By:

ನವೆಂಬರ್ 1, ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ರಾಜ್ಯ ಪೂರ್ತಿ ಈ ತಿಂಗಳು ಕನ್ನಡ ಮಯವಾಗಲಿದ್ದು, ಕೆಂಪು ಹಳದಿ ಬಾವುಟ ಮುಗಿಲೆತ್ತರಕ್ಕೆ ಹಾರಲಿದೆ. ಈ ಬಾರಿ ರಾಜ್ಯೋತ್ಸವ ಮತ್ತಷ್ಟು ಕಳೆಕಟ್ಟಲಿದೆ. ರಾಜ್ಯೋತ್ಸವಕ್ಕೂ ಡಿಜಿಟಲ್ ಸ್ಪರ್ಶವನ್ನು ನೀಡುವ ಪ್ರಯತ್ನವನ್ನು ಮಾಡಲಾಗುತ್ತಿದೆ.

ಕನ್ನಡ ರಾಜ್ಯೋತ್ಸವಕ್ಕೆ ಡಿಜಿಟಲ್ ಸ್ಪರ್ಶ: ಮೊಬೈಲ್ ನಲ್ಲೇ ನಾಡು-ನುಡಿ

ಓದಿರಿ: ಜಿಯೋಫೋನ್ ಉತ್ಪಾದನೆ ಸ್ಥಗಿತ: ಅಂಬಾನಿ ಹೊಸ ಪ್ಲಾನ್ ಕೇಳಿ ತಲ್ಲಣಗೊಂಡ ಸ್ಮಾರ್ಟ್‌ಫೋನ್ ಲೋಕ..!

ಮೊಬೈಲ್ ನಲ್ಲಿ ಇಡೀ ತಿಂಗಳು ರಾಜ್ಯೋತ್ಸವದ ಸಂಭ್ರಮವನ್ನು ಆಚರಿಸುವ ಸಲುವಾಗಿ ಐಪೊಮೊ ಕಮ್ಯೂನಿಕೇಷನ್ ಕಂಪನಿಯೂ ಆಪ್ ವೊಂದನ್ನು ಪರಿಚಯಿಸಿದೆ. ಈ ಆಪ್ ನಲ್ಲಿ ತಿಂಗಳು ಪೂರ್ತಿ ಕನ್ನಡಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು:

ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು:

ಮೊಬೈಲ್‌ನಲ್ಲಿ ರಾಜ್ಯೋತ್ಸವದ ಸಂಭ್ರಮವನ್ನು ಪಡೆಯುವ ಸಲುವಾಗಿ 'ipomohashrooms' ಆಪ್‌ ಅನ್ನು ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. ಇದರ ಮೂಲಕ ನೀವು ರಾಜ್ಯೋತ್ಸವ ಸಂಭ್ರಮದಲ್ಲಿ ಭಾಗಿಯಾಗಬಹುದಾಗಿದೆ.

ಆನ್‌ಲೈನ್ ರಸಪ್ರಶ್ನೆ:

ಆನ್‌ಲೈನ್ ರಸಪ್ರಶ್ನೆ:

ಈ ಆಪ್‌ನಲ್ಲಿ ಕನ್ನಡಕ್ಕೆ ಸಂಬಂಧಿಸಿದ ರಸಪ್ರಶ್ನೆಗಳು ಇದರಲ್ಲಿದ್ದು, ಆನ್‌ಲೈನಿನಲ್ಲಿ ನೀವು ಸಹ ಭಾಗಿಯಾಗಬಹುದಾಗಿದೆ. ಸಾಹಿತ್ಯ, ಕಲೆ, ರಾಜಕೀಯ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಇದರಲ್ಲಿ ಇರಲಿದೆ.

ದಿನಕ್ಕೊಂದು ವಿಷಯ-ಬಹುಮಾನ:

ದಿನಕ್ಕೊಂದು ವಿಷಯ-ಬಹುಮಾನ:

ಇದಲ್ಲದೇ ಆಪ್‌ನಲ್ಲಿ ದಿನಕ್ಕೊಂದು ವಿಷಯಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ ಸೇರಿದಂತೆ ಚರ್ಚೆ, ಲೇಖನ ಮುಂತಾದ ಚಟುವಟಿಕೆಗಳು ನಡೆಯಲಿದ್ದು, ವಿಜೇತರಾದವರಿಗೆ ಬಹುಮಾನವನ್ನು ಸಹ ನೀಡಲಾಗುವುದು ಎನ್ನಲಾಗಿದೆ.

ರಾಜ್ಯೋತ್ಸವದ ಕಂಪು ಸೂಸಲು:

ರಾಜ್ಯೋತ್ಸವದ ಕಂಪು ಸೂಸಲು:

ರಾಜ್ಯೋತ್ಸವದ ಕಂಪನನ್ನು ಮೊಬೈಲ್ ಮೂಲಕ ಮನೆ-ಮನ ತಲುಪಿಸುವ ಕಾರ್ಯ ಇದಾಗಿದೆ. ಎಲ್ಲರ ಕೈನಲ್ಲೂ ಮೊಬೈಲ್ ಇದ್ದು, ಅದರ ಮೂಲಕ ನಾಡು-ನುಡಿಯ ಪರಿಚಯವನ್ನು ಮಾಡುವ ಪ್ರಯತ್ನ ಇದಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
digital kannada rajyotsava. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot