Home
ಸುದ್ದಿಜಾಲ

Smartphones: ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಅಪಾಯದಲ್ಲಿ! ಕೂಡಲೇ ಈ ಕೆಲಸ ಮಾಡಿ

ಭಾರತದಲ್ಲಿ ಸಾಕಷ್ಟು ಜನರು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳನ್ನು (Android Smartphones) ಬಳಕೆ ಮಾಡುತ್ತಾರೆ. ಆದರೆ, ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಆಗಾಗ್ಗೆ ವಿವಿಧ ರೀತಿಯ ಸಮಸ್ಯೆಗಳಿಗೆ ಒಳಗಾಗುತ್ತಿರುವುದು ಸಾಮಾನ್ಯವಾದ ವಿಚಾರವಾಗಿದ್ದು, ಅದರಂತೆ ಈಗ ಮತ್ತೊಂದು ದೊಡ್ಡ ದುರ್ಬಲತೆಯನ್ನು ವರದಿ ಮಾಡಲಾಗಿದೆ.

ಹೌದು, ನೀವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಾಗಿದ್ದರೆ ಕೂಡಲೇ ಈ ಬಗ್ಗೆ ಎಚ್ಚರಿಕೆ ವಹಿಸಿ. ಮೈಕ್ರೋಸಾಫ್ಟ್‌ನಿಂದ (Microsoft) ಆಂಡ್ರಾಯ್ಡ್‌ ಆಪ್‌ಗಳಲ್ಲಿ ಪ್ರಮುಖ ಭದ್ರತಾ ದುರ್ಬಲತೆಯನ್ನು ಗುರುತಿಸಲಾಗಿದೆ. ಇದು ನಿಮ್ಮ ಡಿವೈಸ್‌ನ ಅಪ್ಲಿಕೇಶನ್‌ಗಳನ್ನು ದೊಡ್ಡ ಅಪಾಯಕ್ಕೆ ಒಳಪಡಿಸುತ್ತದೆ ಎಂದು ತಿಳಿಸಲಾಗಿದೆ. ಹಾಗಿದ್ರೆ, ಏನಿದು ದುರ್ಬಲತೆ, ಈ ಫೋನ್‌ ಬಳಕೆದಾರರು ಮಾಡಬೇಕಿರುವುದು ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಅಪಾಯದಲ್ಲಿ! ಕೂಡಲೇ ಈ ಕೆಲಸ ಮಾಡಿ

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಅಪಾಯದಲ್ಲಿ: ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಹೊಸ ದುರ್ಬಲತೆ (vulnerability) ಕಂಡುಕೊಳ್ಳಲಾಗಿದ್ದು, ಇದಕ್ಕೆ ಡರ್ಟಿ ಸ್ಟ್ರೀಮ್ (Dirty stream) ಎಂದು ಕರೆಯಲಾಗುತ್ತಿದೆ. ದಾಳಿಯು ದುರುದ್ದೇಶಪೂರಿತ ಸ್ಕ್ಯಾಮರ್‌ಗಳಿಗೆ ಜನಪ್ರಿಯ ಆಪ್‌ಗಳನ್ನು ಹೈಜಾಕ್ ಮಾಡಲು ಅಥವಾ ಆಂಡ್ರಾಯ್ಡ್‌ ಆಪ್‌ಗಳಿಂದ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಅವಕಾಶವನ್ನು ನೀಡುತ್ತದೆ ಡರ್ಟಿ ಸ್ಟ್ರೀಮ್ ಮಾಲ್‌ವೇರ್ (Dirty Stream Malware) ನಿಮ್ಮ ಡಿವೈಸ್‌ನಲ್ಲಿ ಹಲವಾರು ಆಪ್‌ಗಳ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದ್ದು, ಯಾವುದೇ ಸಂಭಾವ್ಯ ವಂಚನೆಗಳನ್ನು ತಪ್ಪಿಸಲು ತುರ್ತು ಕ್ರಮದ ಅಗತ್ಯವಿದೆ ಎಂದು ತಿಳಿಸಲಾಗಿದೆ.

ಡರ್ಟಿ ಸ್ಟ್ರೀಮ್ ಎಂದರೇನು?: ಡರ್ಟಿ ಸ್ಟ್ರೀಮ್ ದಾಳಿಯು ಪಾತ್ ಟ್ರಾವರ್ಸಲ್ ಸಂಯೋಜಿತ ದುರ್ಬಲತೆಯ ಮಾದರಿ ಎನ್ನಲಾಗಿದೆ. ಇತ್ತೀಚಿನ ತನಿಖೆಯಲ್ಲಿ ಮೈಕ್ರೋಸಾಫ್ಟ್ ಇದನ್ನು ಕಂಡುಹಿಡಿದಿದೆ. ಮೈಕ್ರೋಸಾಫ್ಟ್ ವರದಿಯ ಪ್ರಕಾರ, ದುರ್ಬಲತೆಯು ನಿಮ್ಮ ಡಿವೈಸ್‌ ಅನ್ನು ಕುಶಲತೆಯಿಂದ ನಿರ್ವಹಿಸುವ ಸಾಮರ್ಥ್ಯವನ್ನು ಪಡೆದಿದೆಯಂತೆ, ನ್ಯೂನತೆಯ ಲಾಭವನ್ನು ಪಡೆಯಲು ಮತ್ತು ನಿಮ್ಮ ಆಂಡ್ರಾಯ್ಡ್‌ ಆಪ್‌ಗಳನ್ನು ಹ್ಯಾಕ್ ಮಾಡಲು ಹ್ಯಾಕರ್‌ಗಳಿಗೆ ಇದು ಅವಕಾಶವನ್ನು ನೀಡಲಿದೆ.

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಅಪಾಯದಲ್ಲಿ! ಕೂಡಲೇ ಈ ಕೆಲಸ ಮಾಡಿ

ಇನ್ನು ಈ ಬೆದರಿಕೆಯು ಆಂಡ್ರಾಯ್ಡ್‌ ಡಿವೈಸ್‌ಗಳನ್ನು ಅನಿಯಂತ್ರಿತ ಕೋಡ್ ಎಕ್ಸಿಕ್ಯೂಶನ್ ಮತ್ತು ಟೋಕನ್ ಕಳ್ಳತನಕ್ಕೆ ಒಡ್ಡಬಹುದು ಎಂದು ಕಂಪನಿಯು ಹೈಲೈಟ್ ಮಾಡಿದೆ. ಇತರ ಆಪ್‌ಗಳೊಂದಿಗೆ ಮಾಹಿತಿಯನ್ನು ಹೇಗೆ ಹಂಚಿಕೊಳ್ಳುತ್ತಾರೆ ಎಂಬ ವಿಷಯದಲ್ಲಿ ಹಲವಾರು ಜನಪ್ರಿಯ ಆಪ್‌ಗಳ ಮೇಲೆ ಈ ಆಪ್‌ ಪರಿಣಾಮ ಬೀರಲಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.

ಹಾಗೆಯೇ ನಾವು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನಾಲ್ಕು ಬಿಲಿಯನ್ ಇನ್‌ಸ್ಟಾಲ್‌ಗಳನ್ನು ಪ್ರತಿನಿಧಿಸುವ ಹಲವಾರು ದುರ್ಬಲ ಆಪ್‌ಗಳನ್ನು ಗುರುತಿಸಿದ್ದೇವೆ. ಈ ಜನಪ್ರಿಯ ಆಪ್‌ಗಳು ಶಿಯೋಮಿ Inc. ಫೈಲ್ ಮ್ಯಾನೇಜರ್, WPS ಆಫೀಸ್ ಮತ್ತು ಇತರವುಗಳನ್ನು ಹೊಂದಿವೆ. ಆದಾಗ್ಯೂ, ಆಪ್‌ನ ನವೀಕರಣದ ಮೂಲಕ ಮಾತ್ರ ಈ ಸಮಸ್ಯೆಯನ್ನು ಪರಿಹರಿಸಬಹುದು ಎಂದು ತಿಳಿಸಲಾಗಿದೆ.

ಆಂಡ್ರಾಯ್ಡ್‌ ಬಳಕೆದಾರರು ಈಗ ಮಾಡಬೇಕಿರುವುದು ಏನು?: ದುರುದ್ದೇಶಪೂರಿತ ಕೋಡ್‌ಗಳನ್ನು ಒಳಗೊಂಡಿರುವ ಆಪ್‌ಗಳನ್ನು ಸೈಡ್‌ಲೋಡ್ ಮಾಡುವುದನ್ನು ತಪ್ಪಿಸಬೇಕಾಗಿದೆ. ಗೂಗಲ್‌ ಪ್ಲೇ ಸ್ಟೋರ್‌, ಸ್ಯಾಮ್‌ಸಂಗ್‌ ಪ್ಲೇ ಸ್ಟೋರ್‌, ಅಮೆಜಾನ್‌ ಆಪ್ ಸ್ಟೋರ್ ನಂತಹ ಅಧಿಕೃತ ಆಪ್‌ ಸ್ಟೋರ್‌ಗಳಿಂದ ಮಾತ್ರ ಆಪ್‌ಗಳನ್ನು ಡೌನ್‌ಲೋಡ್ ಮಾಡಿ.ಈ ನಡುವೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಆಂಡ್ರಾಯ್ಡ್‌ ಆಪ್‌ಗಳಲ್ಲಿ ವೈರಸ್‌ಗಳನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡುವ ಸಲುವಾಗಿ ಗೂಗಲ್ ಪ್ಲೇ ರಕ್ಷಣೆಯನ್ನು ಸಕ್ರಿಯಗೊಳಿಸಿ.

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಅಪಾಯದಲ್ಲಿ! ಕೂಡಲೇ ಈ ಕೆಲಸ ಮಾಡಿ

ನಿಮ್ಮ ಡಿವೈಸ್‌ನಲ್ಲಿ ಹ್ಯಾಕಿಂಗ್, ದುರುದ್ದೇಶಪೂರಿತ ಕೋಡ್‌ಗಳು, ವೈರಸ್‌ಗಳು ಮತ್ತು ಇತರ ಬೆದರಿಕೆಗಳಿಂದ ರಕ್ಷಿಸಲು ಮ್ಯಾಕ್‌ಅಫೀ ನಂತಹ ಥರ್ಡ್‌ ಪಾರ್ಟಿ ಆಂಟಿವೈರಸ್ ಆಪ್‌ಗಳನ್ನು ಬಳಕೆ ಮಾಡಿಕೊಳ್ಳಬಹುದು. ಡಿವೈಸ್‌ನ ದೋಷಗಳನ್ನು ಸರಿಪಡಿಸಲು ಇತ್ತೀಚಿನ ಓಎಸ್‌ ಅಪ್‌ಗ್ರೇಡ್‌ಗಳು ಮತ್ತು ಭದ್ರತಾ ಪ್ಯಾಚ್‌ಗಳೊಂದಿಗೆ ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ಗಳನ್ನು ನವೀಕರಿಸಿ. ಇದು ನಿಮ್ಮ ಡಿವೈಸ್‌ ಅನ್ನು ಸುರಕ್ಷಿತವಾಗಿರಿಸುತ್ತದೆ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.

Best Mobiles in India

English summary
A major security vulnerability has been identified in Android Smartphones apps by Microsoft. This is named as dirty stream.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+