ಆನ್‌ಲೈನ್ ಶಾಪಿಂಗ್ - ಮೈಯೆಲ್ಲಾ ಕಣ್ಣಾಗಿರಲಿ!

Posted By:

ಶಾಪಿಂಗ್ ಮಾಡುವುದು ಯಾರಿಗೆ ಇಷ್ಟವಿಲ್ಲ ಹೇಳಿ? ಬಟ್ಟೆಗಳಿಂದ ಹಿಡಿದು ತಿನ್ನುವ ಆಹಾರ ಸಾಮಾಗ್ರಿ, ಪುಸ್ತಕಗಳು ಹೀಗೆ ಪ್ರತಿಯೊಂದರ ಶಾಪಿಂಗ್ ಕೂಡ ಅದರದ್ದೇ ಆದ ಮಜವನ್ನು ಹೊಂದಿದೆ. ಈಗೀಗ ಆಧುನಿಕ ಜೀವನ ಪದ್ಧತಿಗೆ ಅನುಗುಣವಾಗಿ ಆನ್‌ಲೈನ್ ಶಾಪಿಂಗ್ ಎಂಬ ಟ್ರೆಂಡ್ ಜಾರಿಯಾಗಿದ್ದು ಕುಳಿತಲ್ಲೇ ನಿಮ್ಮ ಮೆಚ್ಚಿನ ವಸ್ತುಗಳ ಖರೀದಿಯನ್ನು ನೀವು ಮಾಡಬಹುದು. ಆದರೆ ಇದು ಎಷ್ಟು ಪ್ರಯೋಜನವನ್ನು ಒಳಗೊಂಡಿದೆಯೋ ಅಷ್ಟೇ ದುಷ್ಪರಿಣಾಮವನ್ನು ಹೊಂದಿದೆ ಎಂಬುದು ಗೊತ್ತೇ?

ಓದಿರಿ: ಟಾಪ್ 10 ಉಚಿತ ಅಪ್ಲಿಕೇಶನ್‌ಗಳು: ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ

ಇಂದಿನ ಲೇಖನದಲ್ಲಿ ಆನ್‌ಲೈನ್ ಶಾಪಿಂಗ್ ಉಂಟುಮಾಡುವ ಸಮಸ್ಯೆಗಳನ್ನು ಕುರಿತು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಮಯ ತೆಗೆದುಕೊಳ್ಳುತ್ತದೆ

ಸಮಯ ತೆಗೆದುಕೊಳ್ಳುತ್ತದೆ

ವಿಳಂಬ

ನಿಮ್ಮ ವಸ್ತುವನ್ನು ನೀವು ಆರ್ಡರ್ ಮಾಡಿ ಕಾಯುವುದು ಆನ್‌ಲೈನ್ ಶಾಪಿಂಗ್‌ನ ಪರಿಣಾಮವಾಗಿದೆ. ನೀವು ಆರ್ಡರ್ ಮಾಡಿರುವ ಸಾಮಾಗ್ರಿ ನಿಮ್ಮ ಕೈಗೆ ಯಾವಾಗ ತಲುಪುತ್ತದೆ ಎಂಬುದೇ ತಿಳಿದಿರುವುದಿಲ್ಲ. ಹೇಳಿದ ಸಮಯಕ್ಕೆ ಈ ವಸ್ತುಗಳು ನಿಮ್ಮ ಕೈಯನ್ನು ತಲುಪಲು ಸಮಯ ತೆಗೆದುಕೊಳ್ಳುತ್ತದೆ.

ಉತ್ಪನ್ನದ ಗುಣಮಟ್ಟ

ಉತ್ಪನ್ನದ ಗುಣಮಟ್ಟ

ಕಳಪೆ ಮಟ್ಟದ ಉತ್ಪನ್ನ

ಉತ್ಪನ್ನದ ಗುಣಮಟ್ಟ ಹೇಗಿರುತ್ತದೆ ಎಂಬುದು ನಿಮಗೆ ತಿಳಿದಿರುವುದಿಲ್ಲ.

ಪಾವತಿಸಬೇಕಾಗುತ್ತದೆ

ಪಾವತಿಸಬೇಕಾಗುತ್ತದೆ

ಶಿಪ್ಪಿಂಗ್ ದರಗಳು

ನೀವು ಆರ್ಡರ್ ಮಾಡಿರುವ ವಸ್ತುಗಳಿಗೆ ಶಿಪ್ಪಿಂಗ್ ದರಗಳನ್ನು ವಿಧಿಸಬಹುದಾಗಿದ್ದು ಉತ್ಪನ್ನದ ದರಕ್ಕಿಂತ ಹೆಚ್ಚಿನದನ್ನು ನಿಮಗೆ ಪಾವತಿಸಬೇಕಾಗುತ್ತದೆ.

ಡ್ಯಾಮೇಜ್‌

ಡ್ಯಾಮೇಜ್‌

ವಿತರಣಾ ಸಮಸ್ಯೆಗಳು

ಕೆಲವೊಮ್ಮೆ ಡೆಲಿವರಿ (ವಿತರಣಾ) ಸಮಸ್ಯೆಗಳನ್ನು ನೀವು ಎದುರಿಸಬಹುದು. ಈ ಉತ್ಪನ್ನಗಳು ನಿಮ್ಮನ್ನು ತಲುಪುವಾಗ ಕೆಲವೊಂದು ಡ್ಯಾಮೇಜ್‌ಗಳು ಕಂಡುಬರಬಹುದು.

ವಸ್ತು ಅಸಲಿ

ವಸ್ತು ಅಸಲಿ

ವಂಚನೆ ಸಾಧ್ಯತೆ

ನಿಮಗೆ ಬೇಕಾದ ವಸ್ತುಗಳ ಖರೀದಿ ಇದೀಗ ಇನ್ನೂ ಸುಲಭ. ಆದರೆ ಇಲ್ಲಿ ವಂಚನೆಯ ಸಾಧ್ಯತೆ ಇರುತ್ತದೆ. ನೀವು ಖರೀದಿಸುತ್ತಿರುವ ವಸ್ತು ಅಸಲಿಯಾಗಿರುತ್ತದೆ ಎಂಬುದಕ್ಕೆ ಯಾವುದೇ ಖಾತ್ರಿ ಇರುವುದಿಲ್ಲ.

ವಿಶ್ವಾಸಾರ್ಹ ವೆಬ್‌ಸೈಟ್‌

ವಿಶ್ವಾಸಾರ್ಹ ವೆಬ್‌ಸೈಟ್‌

ಹಗರಣ ಸಾಧ್ಯತೆ

ಆನ್‌ಲೈನ್ ಶಾಪಿಂಗ್ ಹೆಚ್ಚಾದಂತೆ ಹಗರಣದ ಸಂಖ್ಯೆ ಕೂಡ ಅಧಿಕವಾಗುತ್ತಿದೆ. ಆದ್ದರಿಂದ ವಿಶ್ವಾಸಾರ್ಹ ವೆಬ್‌ಸೈಟ್‌ಗಳಿಂದಲೇ ನೀವು ವಸ್ತುಗಳ ಖರೀದಿಯನ್ನು ಮಾಡಬೇಕಾಗುತ್ತದೆ.

ಸ್ಟೋರ್‌ಗಳಿಂದ ಖರೀದಿ

ಸ್ಟೋರ್‌ಗಳಿಂದ ಖರೀದಿ

ಸ್ಟೋರ್‌ಗಳಿಂದ ಖರೀದಿ ಮಾಡುವುದು ಉತ್ತಮ

ನಿಮ್ಮ ಇಷ್ಟದ ವಸ್ತುವಿನ ಆಯ್ಕೆಯನ್ನು ಆನ್‌ಲೈನ್‌ನಿಂದ ಮಾಡುವುದಕ್ಕಿಂತ ನೈಜ ಸ್ಟೋರ್‌ಗಳಲ್ಲೇ ಮಾಡಿ. ಇದರಿಂದ ಮೋಸ ಹೋಗುವ ಸಾಧ್ಯತೆ ಕಡಿಮೆ ಇರುತ್ತದೆ.

ಆನ್‌ಲೈನ್ ಶಾಪಿಂಗ್ ಕಷ್ಟ

ಆನ್‌ಲೈನ್ ಶಾಪಿಂಗ್ ಕಷ್ಟ

ವಸ್ತುಗಳನ್ನು ಹಿಂತಿರುಗಿಸುವುದು ಕಷ್ಟ

ನೀವು ವಸ್ತುಗಳನ್ನು ಖರೀದಿಸಿದ ನಂತರ ಏನಾದರೂ ಸಮಸ್ಯೆಯಾದಲ್ಲಿ ಅದನ್ನು ಹಿಂತಿರುಗಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಆನ್‌ಲೈನ್ ಶಾಪಿಂಗ್ ಕಷ್ಟ.

ವಾರಂಟಿ

ವಾರಂಟಿ

ವಾರಂಟಿ ಸಮಸ್ಯೆಗಳು

ಕೆಲವೊಂದು ಅಂತರಾಷ್ಟ್ರೀಯ ವಸ್ತುಗಳಿಗೆ ವಾರಂಟಿ ಇರುವುದಿಲ್ಲ. ನೀವು ಖರೀದಿಸುವ ವಸ್ತುವಿಗೆ ವಾರಂಟಿ ಇದೆಯೇ ಎಂಬುದನ್ನು ನೋಡಿ.

ಸಮಸ್ಯೆ

ಸಮಸ್ಯೆ

ವಿವಿಧ ತೊಂದರೆಗಳು

ಕ್ರೆಡಿಟ್ ಕಾರ್ಡ್ ಮೋಸ, ಸ್ಪೈವೇರ್ ಮೊದಲಾದ ಸಮಸ್ಯೆಗಳು ಸಂಭವಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see the Disadvantages of Online Shopping.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot