ಭಾರೀ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ Dish TV ಸೆಟ್‌ಟಾಪ್‌ ಬಾಕ್ಸ್‌!

|

ದೇಶದ ಡೈರೆಕ್ಟ್-ಟು-ಹೋಮ್ (DTH) ವಲಯದಲ್ಲಿ ಪೈಪೋಟಿ ಜೋರಾಗಿದೆ. ಟಾಟಾಸ್ಕೈ, ಏರ್‌ಟೆಲ್‌, ಜೊತೆಗೆ ಡಿಶ್‌ ಟಿವಿ ಕಂಪನಿಗಳು ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ. ಡಿಟಿಎಚ್‌ ಸಂಸ್ಥೆಗಳು ಹೆಚ್‌ಡಿ ಹಾಗೂ ಎಸ್‌ಡಿ ಮಾದರಿಯ ಸೆಟ್‌ಅಪ್‌ ಬಾಕ್ಸ್‌ಗಳ ಜೊತೆಗೆ ಹೊಸ ಮಾದರಿಯ ಸೇವೆಗಳನ್ನು ಗ್ರಾಹಕರಿಗೆ ಪರಿಚಯಿಸಿವೆ. ಆ ಪೈಕಿ ಡಿಶ್‌ ಟಿವಿ ಸಹ ಒಂದಾಗಿದೆ. ಆದ್ರೆ ಇದೀಗ ಡಿಶ್‌ ಟಿವಿ ಗ್ರಾಹಕರಿಗೆ ಭರ್ಜರಿ ಗುಡ್‌ ನ್ಯೂಸ್‌ ಹೊರಹಾಕಿದೆ.

ಭಾರೀ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ Dish TV ಸೆಟ್‌ಟಾಪ್‌ ಬಾಕ್ಸ್‌!

ಹೌದು, ಡಿಟಿಹೆಚ್‌ ವಲಯದಲ್ಲಿ ಹೆಚ್ಚು ಸ್ಪರ್ಧಾತ್ಮಕ ವಾತಾವರಣ ಇದ್ದು, ಪೂರೈಕೆದಾರ ಸಂಸ್ಥೆಗಳು ಹೊಸ ಗ್ರಾಹಕರನ್ನು ಆಕರ್ಷಿಸಲು ಅತ್ಯುತ್ತಮ ಕೊಡುಗೆಗಳನ್ನು ಘೋಷಿಸುತ್ತವೆ. ಅದೇ ರೀತಿ ಡಿಶ್‌ ಟಿವಿ ಈಗ ಡಿಶ್ ಟಿವಿ ತನ್ನ ಹೆಚ್‌ಡಿ ಸೆಟ್-ಟಾಪ್ ಬಾಕ್ಸ್ (ಎಸ್‌ಟಿಬಿ) ಅನ್ನು ಡಿಸ್ಕೌಂಟ್‌ ದರದಲ್ಲಿ ಒದಗಿಸುತ್ತಿದೆ. 1,690ರೂ.ಗಳ ಬದಲಿಗೆ, ಡಿಶ್ ಟಿವಿ HD ಸೆಟ್-ಟಾಪ್ ಬಾಕ್ಸ್ ಈಗ 1,590ರೂ. ಬೆಲೆಯಲ್ಲಿ (ಜಿಎಸ್‌ಟಿ ಹೊರತು ಪಡಿಸಿ) ಲಭ್ಯವಿದೆ.

ಭಾರೀ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ Dish TV ಸೆಟ್‌ಟಾಪ್‌ ಬಾಕ್ಸ್‌!

ಈ ಯೋಜನೆಯು ಒಂದು ತಿಂಗಳು ಮತ್ತು ಆರು ತಿಂಗಳುಗಳ ವ್ಯಾಲಿಡಿಟಿಯ ಎರಡು ಆಯ್ಕೆ ಪಡೆದಿದೆ. ಹಾಗೆಯೇ ಇದು ಸೀಮಿತ ಅವಧಿಯ ಕೊಡುಗೆ ಎನ್ನಲಾಗಿದೆ. ಗ್ರಾಹಕರು ಡಿಸ್‌ ಟಿವಿ ಅಧಿಕೃತ ವೆಬ್‌ಸೈಟ್‌ ನಿಂದ ಖರೀದಿಸಬಹುದಾಗಿದೆ. ಹಾಗೆಯೇ ಡೆಮೊ ಸೇವೆಯ ಅವಕಾಶ ಸಹ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ. ಇನ್ನು ಹೆಚ್ಚುವರಿಯಾಗಿ ಚಂದಾದಾರರು ಕೂಪನ್ ದುನಿಯಾದಿಂದ 2,000ರೂ ಮೌಲ್ಯದ ಕೂಪನ್‌ಗಳು ಸಿಗಲಿವೆ.

ಡಿಶ್‌ ಟಿವಿಯು ಡಿಶ್‌ನೆಕ್ಟ್ಸ್‌ ಸೆಟ್‌ಟಾಪ್‌ ಬಾಕ್ಸ್ ಉತ್ತಮ ಗುಣಮಟ್ಟದ ಸ್ಟೀರಿಯೊ ಸೌಂಡ್‌ ಗುಣಮಟ್ಟ ಸೌಲಭ್ಯ ಪಡೆದಿದೆ. ಪಿಚ್ಚರ್ ಕ್ವಾಲಿಟಿಯು ಡಿಜಿಟಲ್‌ ಗುಣಮಟ್ಟದಲ್ಲಿ ಸಿಗಲಿದೆ. ಹಾಗೆಯೇ ರೀಮೈಂಡರ್ ಸೇರಿಸಬಹುದು, ಫೇವರೇಟ್ ಚಾನೆಲ್‌ಗಳನ್ನು ಮಾರ್ಕ್ ಮಾಡಬಹುದಾಗಿದೆ. ಹಾಗೆಯೇ ಡಿಶ್‌ ಟಿವಿ ನೆಕ್ಟ್ಸ್‌ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ ಸಹ ಸ್ಟೀರಿಯೊ ಸೌಂಡ್‌ ಗುಣಮಟ್ಟ ಹೊಂದಿದ್ದು, ಹೆಚ್‌ಡಿ ಪಿಚ್ಚರ್ ಕ್ವಾಲಿಟಿ ಇರಲಿದೆ. ಜೊತೆಗೆ ಅಲೆಕ್ಸಾ ಬೆಂಬಲ ಪಡೆದಿದೆ. ಉಳಿದಂತೆ ರೀಮೈಂಡರ್ ಸೇರಿಸಬಹುದು ಜೊತೆಗೆ ಫೇವರೇಟ್ ಚಾನೆಲ್‌ಗಳನ್ನು ಮಾರ್ಕ್ ಮಾಡಬಹುದಾಗಿದೆ.

ಹಾಗೆಯೇ ಡಿಶ್‌ ಟಿವಿಯ ಆಂಡ್ರಾಯ್ಡ್‌ ಆಧಾರಿತ 'ಡಿಶ್‌ ಸ್ಮಾರ್ಟ್‌ ಹಬ್' (Dish SMRT Hub) ಆಯ್ಕೆ ಹೊಂದಿದೆ. ಡಿಶ್‌ ಸ್ಮಾರ್ಟ್‌ ಹಬ್' (Dish SMRT Hub) ಸೆಟ್‌ಟಾಪ್‌ ಬಾಕ್ಸ್ ಇದು ಡಿಶ್‌ ಟಿವಿಯ ಇಂಟರ್ನೆಟ್ ಆಧಾರಿತ ಹೊಸ ಸೆಟ್‌ಟಾಪ್‌ ಬಾಕ್ಸ್ ಮಾದರಿಯಾಗಿದೆ. ಈ ಸೆಟ್‌ಟಾಪ್‌ ಬಾಕ್ಸ್‌ ಆಂಡ್ರಾಯ್ಡ್‌ ಟಿವಿ ಬೆಂಬಲಿತವಾಗಿದ್ದು, ಇದ್ರಲ್ಲಿ ಅಮೆಜಾನ್ ಪ್ರೈಮ್‌, ಹಾಟ್‌ಸ್ಟಾರ್‌, ವಾಚೋ(Watcho) ಸೇರಿದಂತೆ ಇತರೆ OTT ಆಪ್ಸ್‌ಗಳ ಸೇವೆಗಳನ್ನು ಪಡೆಯಬಹುದಾಗಿದೆ. ಹಾಗೆಯೇ ಲಭ್ಯವಾಗುವ OTT ಆಪ್ಸ್‌ಗಳಿಂದ ಸ್ಯಾಟಲೇಟ್‌ ಟಿವಿಗಳ ಪ್ಲೇಬ್ಯಾಕ್‌ ಆಯ್ಕೆ ಇರಲಿದೆ. ಇದರೊಂದಿಗೆ ಗ್ರಾಹಕರು ಹೆಚ್ಚುವರಿಯಾಗಿ ಗೇಮ್ಸ್, ಆಪ್ಸ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದು.

ಭಾರೀ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ Dish TV ಸೆಟ್‌ಟಾಪ್‌ ಬಾಕ್ಸ್‌!

ಭಿನ್ನ ಮಾದರಿಯಲ್ಲಿ ಟಾಟಾಸ್ಕೈ ಸೆಟ್‌ಟಾಪ್‌ ಬಾಕ್ಸ್‌ ಆಯ್ಕೆ:

ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌ ಆರಂಭಿಕ ಸೆಟ್‌ಅಪ್ ಬಾಕ್ಸ್‌ ಮಾಡೆಲ್ ಆಗಿದೆ. ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್ ಡಿವಿಡಿ ಕ್ವಾಲಿಟಿಯ ವಿಡಿಯೊ ಗುಣಮಟ್ಟ ಪಡೆದಿರುತ್ತದೆ. ಆಡಿಯೊ ಗುಣಮಟ್ಟವು ಸಿಡಿ ಕ್ವಾಲಿಟಿಯಲ್ಲಿರುತ್ತದೆ. ವಿವಿಧ ಚಾನೆಲ್ ಲಿಸ್ಟ್‌ ಇದ್ದು, ಗ್ರಾಹಕರು ಅವರಿಷ್ಟದ ಚಾನಲ್‌ ಗುಚ್ಛ ಆಯ್ಕೆ ಮಾಡಿಕೊಳ್ಳಬಹುದು.

ಟಾಟಾಸ್ಕೈ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ 1080i ವಿಡಿಯೊ ಕ್ವಾಲಿಟಿ ಹೊಂದಿರುವುದರೊಂದಿಗೆ, 16:9 ಅನುಪಾತ ರಚನೆ ಇರುತ್ತದೆ. ಜೊತೆಗೆ ಡಾಲ್ಬಿ ಸರೌಂಡ್‌ ಸೌಂಡ್‌ ಸೌಲಭ್ಯವನ್ನು ಹೊಂದಿರುತ್ತದೆ. vivid ಕಲರ್‌ ಸೌಲಭ್ಯ ಪಡೆದಿದೆ. ಹೊಸ ಮಾದರಿಯ ಸ್ಮಾರ್ಟ್‌ಟಿವಿ ಇದ್ದರೇ ಹೆಚ್‌ಡಿ ಸೆಟ್‌ಟಾಪ್‌ ಆಯ್ಕೆಯೇ ಉತ್ತಮ.

ಇದು ಟಾಟಾ ಸ್ಕೈ ನೀಡುವ ಅತ್ಯಂತ ದುಬಾರಿ ಎಸ್‌ಟಿಬಿ ಆಗಿದೆ. ಟಾಟಾ ಸ್ಕೈ + ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ ಮತ್ತು ಟಾಟಾ ಸ್ಕೈ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಇದು 1080i ರೆಸಲ್ಯೂಶನ್ ವೀಡಿಯೊ ಬೆಂಬಲ ಮತ್ತು ಡಾಲ್ಬಿ ಡಿಜಿಟಲ್ ಸರೌಂಡ್ ಸೌಂಡ್ ಬೆಂಬಲದೊಂದಿಗೆ ಬರುತ್ತದೆ. ಆದರೆ ಎರಡು ಎಸ್‌ಟಿಬಿಗಳ ನಡುವಿನ ಒಂದು ಪ್ರಮುಖ ವ್ಯತ್ಯಾಸವೆಂದರೆ ಟಾಟಾ ಸ್ಕೈ + ಎಚ್‌ಡಿ ಸೆಟ್-ಟಾಪ್ ಬಾಕ್ಸ್ ಒಂದೇ ಸಮಯದಲ್ಲಿ ಮೂರು ವಿಭಿನ್ನ ಚಾನಲ್‌ಗಳನ್ನು ರೆಕಾರ್ಡ್ ಮಾಡಬಹುದು.

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌, ಸಾಮಾನ್ಯ ಡಿಟಿಎಚ್ ಸೆಟ್‌ಟಾಪ್‌ಗಳಿಗಿಂತ ಭಿನ್ನವಾಗಿದೆ. ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಇಂಟರ್ನೆಟ್ ಆಧಾರಿತ ಸೇವೆಗಳು ದೊರೆಯುತ್ತವೆ. ಗೂಗಲ್ ಪ್ಲೇ ಸ್ಟೋರ್ ಸೌಲಭ್ಯ ಇರುತ್ತದೆ ಹಾಗೂ ಅಸಿಸ್ಟಂಟ್ ಅಸಿಸ್ಟಂಟ್ ಆಧಾರಿತ ವಾಯಿಸ್ ಸರ್ಚ್ ಆಯ್ಕೆಯು ಒಳಗೊಂಡಿರುತ್ತದೆ. ಹೀಗಾಗಿ ಸೆಟ್‌ಟಾಪ್‌ ಬಾಕ್ಸ್‌ ಅನ್ನು ವಾಯಿಸ್‌ ಮೂಲಕವೇ ನಿಯಂತ್ರಣ ಮಾಡಬಹುದಾಗಿದೆ.

ಅಮೆಜಾನ್ ಹಾಗೂ ಶಿಯೋಮಿ ಫೈರ್‌ ಟಿವಿ ಸ್ಟಿಕ್
ಅಮೆಜಾನ್ ಫೈರ್ ಟಿವಿ ಸ್ಟಿಕ್ 4ಕೆ ತನ್ನದೇ ಆದ ಸಾಫ್ಟ್‌ವೇರ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮತ್ತು ಕ್ವಾಡ್-ಕೋರ್ ಪ್ರೊಸೆಸರ್ನೊಂದಿಗೆ 1.7GHz ಗಡಿಯಾರದೊಂದಿಗೆ 8 ಜಿಬಿ ಸಂಗ್ರಹದ ಬೆಂಬಲ ಪಡೆದಿದೆ. ಇನ್ನು ಶಿಯೋಮಿಯ ಮಿ ಬಾಕ್ಸ್ 4ಕೆ 64-ಬಿಟ್ ಕ್ವಾಡ್-ಕೋರ್ ಪ್ರೊಸೆಸರ್ ಮತ್ತು ಮಾಲಿ -450 ಜಿಪಿಯು ಹೊಂದಿದ್ದು, 2 ಜಿಬಿ ರಾಮ್ ಮತ್ತು 8 ಜಿಬಿ ಫ್ಲ್ಯಾಷ್ ಸ್ಟೋರೇಜ್ ಅನ್ನು ಹೊಂದಿದೆ.

ಅಮೆಜಾನ್ ಫೈರ್ ಟಿವಿ ಸ್ಟಿಕ್ 4ಕೆ ಸ್ಕ್ರೀನ್ ಮಿರರಿಂಗ್, ಕಾಸ್ಟಿಂಗ್ ಜೊತೆಗೆ 802.11ac ನೆಟ್‌ವರ್ಕ್‌ಗಳನ್ನು ಬೆಂಬಲಿಸುವ ಬ್ಲೂಟೂತ್ 5.0+ ಹೊಂದಿದೆ. ಡ್ಯುಯಲ್-ಆಂಟೆನಾ ವೈ-ಫೈ ಸಹ ಇದ್ದು, ಮೈಕ್ರೋ-ಯುಎಸ್‌ಬಿ ಮೂಲಕ ಶಕ್ತಿಯನ್ನು ಬೆಂಬಲಿಸುತ್ತದೆ. ಇದರೊಂದಿಗೆ ಅಲೆಕ್ಸಾ ಬೆಂಬಲಿತ ವಾಯಿಸ್‌ ರಿಮೋಟ್ ಅನ್ನು ಸಹ ಬಳಸಬಹುದು.

ಶಿಯೋಮಿಯ ಮಿ ಬಾಕ್ಸ್ 4ಕೆ ಕ್ರೋಮ್‌ಕಾಸ್ಟ್‌ನ ಸೌಲಭ್ಯ ಬರುತ್ತದೆ, ಹಾಗೆಯೇ ಮಿ ಬಾಕ್ಸ್ 4ಕೆ ಡಿವೈಸ್‌ ಗೂಗಲ್ ಅಸಿಸ್ಟೆಂಟ್ ವಾಯಿಸ್‌ ಸರ್ಚ್ ಸೌಲಭ್ಯವನ್ನು ಬೆಂಬಲಿಸುತ್ತದೆ. ಬ್ಲೂಟೂತ್ ಸ್ಪೀಕರ್‌ಗಳು, ಹೆಡ್‌ಸೆಟ್‌ಗಳು ಮತ್ತು ಗೇಮಿಂಗ್ ನಿಯಂತ್ರಕಗಳನ್ನು ಸಂಪರ್ಕಿಸಲು ಇದು ಬ್ಲೂಟೂತ್ 4.2 ಅನ್ನು ಸಹ ಹೊಂದಿದೆ.

Best Mobiles in India

Read more about:
English summary
Dish TV HD Set-Top Box Available At Discount Price in November.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X