Subscribe to Gizbot

ಟಿವಿ ಕ್ಷೇತ್ರದಲ್ಲಿ ಕ್ರಾಂತಿಗೆ ಮುಂದಾದ ಡಿಷ್ ಟಿವಿ: TRP ಮಾಪನವೇ ಬದಲು ಮಾಡುವ ಯೋಜನೆ.!

Written By:

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಿರುವ ಜಿಯೋ, DTH ಕ್ಷೇತ್ರಕ್ಕೂ ಕಾಲಿಡುವ ಸಾಧ್ಯತೆ ಇದೆ, ಇದೇ ಸಂದರ್ಭದಲ್ಲಿ ರಿಲಯನ್ಸ್ ಮಾಲೀಕತ್ವದ ಬಿಗ್ ಟಿವಿ ಸಹ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಸಲುವಾಗಿ ಒಂದು ವರ್ಷದ ಉಚಿತ ಸೇವೆಯನ್ನು ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಹೊಸ ದೊಂದು ಪ್ರಯತ್ನಕ್ಕೆ ZEE ಮಾಲೀಕತ್ವದ ಡಿಷ್ ಟಿವಿ ಮುಂದಾಗಿದೆ.

ಟಿವಿ ಕ್ಷೇತ್ರದಲ್ಲಿ ಕ್ರಾಂತಿಗೆ ಮುಂದಾದ ಡಿಷ್ ಟಿವಿ:

ತನ್ನ ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳುವ ಸಲುವಾಗಿ ಡಿಷ್ ಟಿವಿ ತನ್ನ ಬಳಕೆದಾರರಿಗೆ HD ಟೆಕ್ನಾಲಜಿಯನ್ನು ಹೊಂದಿರುವ ಹೈ ಬ್ರಿಡ್ ಸೆಟಪ್ ಬಾಕ್ಸ್ ಗಳನ್ನು ನೀಡಲು ಮುಂದಾಗಿದೆ. ಇದರ ಮೂಲಕ ತನ್ನ ಬಳಕೆದಾರರು ಯಾವ ಚಾನಲ್‌ಗಳನ್ನು ಹೆಚ್ಚು ನೋಡುತ್ತಿದ್ದಾರೆ. ಮತ್ತು ಅವರ ಆಸಕ್ತಿದಾಯಕ ವಿಷಯಗಳು ಯಾವುವು ಎಂಬುದನ್ನು ತಿಳಿದುಕೊಳ್ಳವ ಪ್ಲಾನ್ ಮಾಡಿದೆ. ಇದರಿಂದ ಆದಾಯವನ್ನು ಗಳಿಸುವ ಯೋಜನೆ ರೂಪಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
TRP ನಿರ್ಧಾರ:

TRP ನಿರ್ಧಾರ:

ಸದ್ಯ ಮಾರುಕಟ್ಟೆಯಲ್ಲಿ TRP ಅಳೆತೆ ಮಾಡಲು ಅನೇಕ ಮಾನದಂಡಗಳಿದ್ದು, ಅದನ್ನು ಬದಲಾಯಿಸುವ ಕಾರ್ಯಕ್ಕೆ ಡಿಷ್ ಟಿವಿ ಮುಂದಾಗಿದೆ. ಇದಕ್ಕಾಗಿ ರಿಟರ್ನ್ ಪಾಥ್ ಡೇಟಾ ಟೆಕ್ನಾಲಜಿಯನ್ನು ಬಳಕೆ ಮಾಡಿಕೊಂಡಿದ್ದು, ಈ ಮೂಲಕ ತನ್ನ ಬಳಕೆದಾರರು ನೋಡುವ ಚಾನಲ್‌ಗಳ ಮಾಹಿತಿಯನ್ನು ಪಡೆದುಕೊಳ್ಳಲು ಮುಂದಾಗಿದೆ.

BARCಗೆ ಸ್ಪರ್ಧೆ:

BARCಗೆ ಸ್ಪರ್ಧೆ:

ದೇಶದಲ್ಲಿ ಟಿವಿ ಚಾನಲ್‌ಗಳ ರೇಟಿಂಗ್ ಮಾಪನ ಮಾಡುವ BARC ನೊಂದಿಗೆ ಡಿಷ್ ಟಿವಿ ಸ್ಪರ್ಧಿಸಲಿದೆ ಎನ್ನಲಾಗಿದೆ. ಇದರಿಂದಾಗಿ ತನ್ನ ವೀಕ್ಷಕರು ಯಾವ ಟಿವಿ ಚಾನಲ್‌ಗಳನ್ನು ಹೆಚ್ಚು ನೋಡಿದ್ದಾರೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಲು ಮುಂದಾಗಿದೆ.

TRP ವಿಧಾವವೇ ಬದಲು:

TRP ವಿಧಾವವೇ ಬದಲು:

ಇದರಿಂದಾಗಿ ದೇಶಿಯ ಟಿವಿ ಮಾರುಕಟ್ಟೆಯಲ್ಲಿ ಹೊಸ ಅಲೆಯೂ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಸದ್ಯ ಕೆಲವೇ ಕೆಲವು ಮನೆಗಳಲ್ಲಿ ಮಾತ್ರವಿರುವ TRP ಮಾಪನಕ್ಕಿಂತ ಇದು ಹೆಚ್ಚು ಪರಿಣಾಮಕಾರಿಯಾಗಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?

ಓದಿರಿ: ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ಈ ಆಪ್ ಇದ್ರೆ ನೀವು ಟಿಕೇಟ್ ಇಲ್ಲವೇ ಪ್ರಯಾಣ ಮಾಡಬಹುದು..!

English summary
Dish TV to Introduce Return Path Data Technology. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot