Home
ಸುದ್ದಿಜಾಲ

ಡಿಶ್‌ಟಿವಿ ಗ್ರಾಹಕರಿಗೆ ಸಿಹಿಸುದ್ದಿ: ಈ ಚಾನೆಲ್‌ ಸಂಪೂರ್ಣ ಉಚಿತ!

ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರೇಜ್ ಪ್ರಪಂಚದಾದ್ಯಂತದ ಎಲ್ಲಾ ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸಿದೆ. ಇದೀಗ ಚಾಲ್ತಿ ಇರುವ ಐಪಿಎಲ್‌ ಪಂದ್ಯಾವಳಿಗಳು ಇದೇ ಮೇ 29 ರವರೆಗೆ ಮುಂದುವರಿಯುತ್ತದೆ. ಈ ವರ್ಷ, ಪಂದ್ಯಾವಳಿಯ ಸ್ಟ್ರೀಮಿಂಗ್ ಹಕ್ಕುಗಳು ಬದಲಾಗಿವೆ ಮತ್ತು ಮುಖೇಶ್ ಅಂಬಾನಿ ಮಾಲೀಕತ್ವದ ಜಿಯೋಸಿನಿಮಾ ಪಂದ್ಯಗಳನ್ನು ಉಚಿತವಾಗಿ ಸ್ಟ್ರೀಮ್ ಮಾಡುತ್ತಿದೆ. ಇನ್ನು ಟಿವಿಯಲ್ಲಿ ನೋಡುವವರು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಪಂದ್ಯಗಳನ್ನು ವೀಕ್ಷಿಸಬಹುದು.

ಅಂದಹಾಗೆ ಸ್ಟಾರ್ ಸ್ಪೋರ್ಟ್ಸ್ ಚಾನಲ್ ಸೇವೆಗೆ ಸೇರಿಸಲು ಬಳಕೆದಾರರು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ಡಿಶ್ ಟಿವಿ (Dish TV) ಈಗ ಹೊಸ ಕೊಡುಗೆಯನ್ನು ಘೋಷಿಸಿದ್ದು, ಬಳಕೆದಾರರು ಸ್ಟಾರ್ ಸ್ಪೋರ್ಟ್ಸ್ 1 ಚಾನಲ್ ಅನ್ನು ಉಚಿತವಾಗಿ ಪಡೆಯಬಹುದು. ಹಾಗಾದರೆ ಐಪಿಎಲ್ 2023 ವೀಕ್ಷಿಸಲು ಡಿಶ್ ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ 1 ಚಾನೆಲ್ ಅನ್ನು ಉಚಿತವಾಗಿ ಹೇಗೆ ಪಡೆಯುವುದು ಎಂಬುದರ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಶ್‌ಟಿವಿ ಗ್ರಾಹಕರಿಗೆ ಸಿಹಿಸುದ್ದಿ: ಈ ಚಾನೆಲ್‌ ಸಂಪೂರ್ಣ ಉಚಿತ!

ಡಿಶ್ ಟಿವಿ ಬಳಕೆದಾರರಿಗೆ ಸ್ಟಾರ್ ಸ್ಪೋರ್ಟ್ಸ್ ಉಚಿತ : ಡಿಶ್ ಟಿವಿ ಪ್ರಸ್ತುತ ಸ್ಟಾರ್ ಸ್ಪೋರ್ಟ್ಸ್ 1 ಚಾನೆಲ್ ಅನ್ನು ಉಚಿತವಾಗಿ ನೀಡುತ್ತಿದೆ. ಡಿಶ್ ಟಿವಿ ಅಥವಾ ಜಿಂಗ್ ಸೂಪರ್ ಡಿ2ಎಚ್ ಬಾಕ್ಸ್ ಹೊಂದಿರುವವರು ಉಚಿತವಾಗಿ ಚಾನೆಲ್ ಪಡೆಯಬಹುದಾಗಿದೆ. ಅಂದಗಹಾಗೆ ಏಪ್ರಿಲ್ 9 ರವರೆಗೆ ಈ ಚಾನೆಲ್ ಉಚಿತವಾಗಿರುತ್ತದೆ ಎಂಬುದನ್ನು ಬಳಕೆದಾರರು ಗಮನಿಸಬೇಕು.

ಡಿಶ್ ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಅನ್ನು ಸೇರಿಸುವುದು ಹೇಗೆ?: ನೀವು ಡಿಶ್ ಟಿವಿ ಬಳಕೆದಾರರಾಗಿದ್ದರೆ ಮತ್ತು ಇನ್ನೂ ನಿಮ್ಮ ಯೋಜನೆಗೆ ಸ್ಟಾರ್ ಸ್ಪೋರ್ಟ್ಸ್ ಅನ್ನು ಸೇರಿಸದಿದ್ದರೆ, ಚಾನೆಲ್‌ ಸೇರಿಸಬಹುದು. ಐಪಿಎಲ್ 2023 ಅನ್ನು ಡಿಶ್ ಟಿವಿಯಲ್ಲಿ ವೀಕ್ಷಿಸಲು, ನೀವು ಎಸ್‌ಎಂಎಸ್ ಅಥವಾ ಆನ್‌ಲೈನ್ ಮೂಲಕ ನಿಮ್ಮ ಯೋಜನೆಗೆ ಸ್ಟಾರ್ ಸ್ಪೋರ್ಟ್ಸ್ ಅನ್ನು ಸೇರಿಸುವ ಅಗತ್ಯವಿದೆ. ಈ ಮುಂದಿನ ಕ್ರಮಗಳನ್ನು ಅನುಸರಿಸಿ.

ಡಿಶ್‌ಟಿವಿ ಗ್ರಾಹಕರಿಗೆ ಸಿಹಿಸುದ್ದಿ: ಈ ಚಾನೆಲ್‌ ಸಂಪೂರ್ಣ ಉಚಿತ!

ಎಸ್‌ಎಮ್‌ಎಸ್‌ ಮೂಲಕ ಡಿಶ್ ಟಿವಿಯಲ್ಲಿ ಚಾನಲ್ ಸೇರಿಸಬಹುದು : ಎಸ್‌ಎಂಎಸ್ ಮೂಲಕ ಡಿಶ್ ಟಿವಿಯಲ್ಲಿ ಚಾನಲ್ ಅನ್ನು ಸೇರಿಸಲು, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಡಿಶ್‌ಟಿವಿ ಪಡೆಯಿರಿ 57575 ಗೆ ಎಸ್‌ಎಮ್‌ಎಸ್‌ ಕಳುಹಿಸಿ.

ಡಿಶ್‌ಟಿವಿ ಗ್ರಾಹಕರಿಗೆ ಸಿಹಿಸುದ್ದಿ: ಈ ಚಾನೆಲ್‌ ಸಂಪೂರ್ಣ ಉಚಿತ!

ಆನ್‌ಲೈನ್‌ ಮೂಲಕ ಡಿಶ್ ಟಿವಿ ಚಾನಲ್ ಸೇರಿಸಬಹುದು : ಎಸ್‌ಎಂಎಸ್ ಮೂಲಕ ಡಿಶ್ ಟಿವಿಯಲ್ಲಿ ಚಾನಲ್ ಅನ್ನು ಸೇರಿಸಲು, ಕೇವಲ ಡಿಶ್‌ಟಿವಿ.ಇನ್‌ಗೆ ಹೋಗಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ. ಪ್ಯಾಕ್‌ಗಳು ಮತ್ತು ಚಾನಲ್‌ಗಳ ಟ್ಯಾಬ್ ಅಡಿಯಲ್ಲಿ, ಆಡ್-ಆನ್ ಪ್ಯಾಕ್ ಅನ್ನು ಕ್ಲಿಕ್ ಮಾಡಿ. ನಿಮ್ಮ ಪ್ರಸ್ತುತ ಯೋಜನೆಯ ಅಡಿಯಲ್ಲಿ ನೀವು ಈಗ ಹೊಸ ಚಾನಲ್‌ಗಳನ್ನು ಸೇರಿಸಬಹುದು.

ಡಿಶ್‌ಟಿವಿ ಗ್ರಾಹಕರಿಗೆ ಸಿಹಿಸುದ್ದಿ: ಈ ಚಾನೆಲ್‌ ಸಂಪೂರ್ಣ ಉಚಿತ!

ಜಿಯೋ ಸಿನಿಮಾ : ಮುಕೇಶ್‌ ಅಂಬಾನಿ ಒಡೆತನದ ಜಿಯೋಸಿನಿಮಾ ಅಪ್ಲಿಕೇಶನ್‌ ಐಪಿಎಲ್‌ 2023-27 ಸೀಸನ್‌ ಪ್ರಸಾರದ ಹಕ್ಕುಗಳನ್ನು ಹೊಂದಿದೆ. ಆದರಿಂದ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಐಪಿಎಲ್‌ ಕ್ರಿಕೆಟ್‌ ಪಂದ್ಯಗಳನ್ನು ಲೈವ್‌ ಸ್ಟ್ರೀಮ್‌ ಮಾಡಲಾಗುತ್ತದೆ. ಇನ್ನು ಜಿಯೋ ಎಲ್ಲಾ IPL ಪಂದ್ಯಗಳನ್ನು 4K ಗುಣಮಟ್ಟದಲ್ಲಿ ಉಚಿತವಾಗಿ ಸ್ಟ್ರೀಮ್ ಮಾಡುವುದಾಗಿ ಹೇಳಿಕೊಂಡಿದೆ. ಇದಲ್ಲದೆ ಜಿಯೋ ಸಿನಿಮಾದಲ್ಲಿ ಐಪಿಎಲ್‌ ಕ್ರಿಕೆಟ್‌ ಪಂದ್ಯಗಳನ್ನು 12 ವಿವಿಧ ಭಾಷೆಗಳಲ್ಲಿ ಸ್ಟ್ರೀಮ್ ಮಾಡಲಿದೆ

ಡಿಸ್ನಿ+ ಹಾಟ್‌ಸ್ಟಾರ್ : ಇನ್ನು ಎಂದಿನಂತೆ ಈ ವರ್ಷವೂ ಕೂಡ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಅಪ್ಲಿಕೇಶನ್‌ನಲ್ಲಿ ಐಪಿಎಲ್‌ ಪಂದ್ಯಗಳನ್ನು ಲೈವ್‌ ಸ್ಟ್ರೀಮ್‌ ಮಾಡಬಹುದಾಗಿದೆ. ಆದರೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಐಪಿಎಲ್‌ ಪಂದ್ಯಗಳ್ನು ವೀಕ್ಷಿಸಬೇಕಾದರೆ ಚಂದಾದಾರಿಕೆ ಪ್ಲಾನ್‌ಗಳನ್ನು ಹೊಂದಿರಬೇಕಾಗುತ್ತದೆ. ಇದಕ್ಕಾಗಿ ಈಗಾಗಲೇ ದೇಶದ ಪ್ರಮುಖ ಟೆಲಿಕಾಂ ಕಂಪೆನಿಗಳಾದ ಏರ್‌ಟೆಲ್‌, ಜಿಯೋ, ವಿ ಟೆಲಿಕಾಂಗಳು ತಮ್ಮ ಹಲವು ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆಯನ್ನು ಘೋಷಣೆ ಮಾಡಿವೆ.

Best Mobiles in India

English summary
Dish TV makes Star Sports 1 channel free for users to watch IPL 2023. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+