ಟಾಟಾಸ್ಕೈಗೆ ಕಂಟಕವಾಗಲಿದೆಯಾ 'ಏರ್‌ಟೆಲ್ ಟಿವಿ ಮತ್ತು ಡಿಶ್‌ಟಿವಿ'ಯ ದೋಸ್ತಿ!

|

ಸದ್ಯ ದೇಶದ ಡಿಟಿಎಚ್ ಟೆಲಿವಿಷನ್ ವಲಯದಲ್ಲಿ ಪೂರೈಕೆದಾರ ಸಂಸ್ಥೆಗಳ ನಡುವೆ ಸ್ಪರ್ಧೆ ಜೋರಾಗಿಯೇ ನಡೆಯುತ್ತಿದೆ. ಆ ಪೈಕಿ ಏರ್‌ಟೆಲ್, ಡಿಶ್‌ಟಿವಿ, ವಿಡಿಯೊಕಾನ್, ಸಂಸ್ಥೆಗಳ ಉತ್ತಮ ಸ್ಥಾನದಲ್ಲಿದ್ದು, ಆದ್ರೆ, ಟಾಟಾಸ್ಕೈ ಸಂಸ್ಥೆಯು ಪ್ರಸ್ತುತ ಡಿಟಿಎಚ್‌ನಲ್ಲಿಯೇ ಮುಂಚೂಣಿಯಲ್ಲಿ ಹಾಗೂ ವಿಸ್ತೃತ ನೆಟವರ್ಕ ಆಗಿ ಗುರುತಿಸಿಕೊಂಡಿದೆ. ಆದರೆ ಇತ್ತೀಚಿನ ಕೆಲವು ಬೆಳೆವಣಿಗೆಗಳು ಟಾಟಾಸ್ಕೈ ನಂಬರ್‌ ನಂ.1 ಸ್ಥಾನಕ್ಕೆ ಕುತ್ತು ತರುವ ಲಕ್ಷಣಗಳನ್ನು ಸೂಚಿಸಿವೆ.

ಏರ್‌ಟೆಲ್ ಮತ್ತು ಡಿಶ್‌ಟಿವಿ

ಹೌದು, ಸದ್ಯ ಟೆಲಿವಿಷನ್ ಕ್ಷೇತ್ರದಲ್ಲಿ ಏರ್‌ಟೆಲ್ ಮತ್ತು ಡಿಶ್‌ಟಿವಿ ಸಂಸ್ಥೆಗಳು ಒಂದಾಗುವ (ವಿಲಿನಗೊಳ್ಳುವ-ಮರ್ಜ) ನಿರ್ಧಾರದ ಮಾತುಕತೆ ನಡೆಯುತ್ತಿದೆ. ಈ ಎರಡು ಡಿಟಿಎಚ್‌ ಸಂಸ್ಥೆಗಳು ಒಂದಾದರೇ ಡಿಟಿಎಚ್‌ನಲ್ಲಿ ಪ್ರಬಲವಾದ ನೆಟವರ್ಕ ಅನಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಆಗ ಪ್ರಸ್ತುತ ಮುಂಚೂಣಿಯಲ್ಲಿ ಹಾಗೂ ವಿಸ್ತೃತ ನೆಟವರ್ಕ ಸ್ಥಾನದಲ್ಲಿರುವ ಟಾಟಾಸ್ಕೈಗೆ ಭಾರಿ ಹಿನ್ನಡೆ ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆದ್ರೆ, ಆ ಬಗ್ಗೆ ಕಂಪನಿಗಳು ಇನ್ನು ಅಧಿಕೃತವಾಗಿ ಯಾವುದೇ ಮಾಹಿತಿ ತಿಳಿಸಿಲ್ಲ.

ಟಾಟಾಸ್ಕೈ

ಟಾಟಾಸ್ಕೈ ಸಂಸ್ಥೆಯು ಇತ್ತೀಚಿಗೆ ಹೊಸದಾಗಿ ಕೆಲವು ಚಾನೆಲ್‌ ಪ್ಯಾಕ್‌ಗಳನ್ನು ತನ್ನ ಡಿ2ಎಚ್‌ ಗ್ರಾಹಕರಿಗೆ ಪರಿಚಯಿಸಿದೆ. ಈ ಹೊಸ ಪ್ಯಾಕ್‌‌ಗಳಲ್ಲಿ ಕನ್ನಡ ಭಾಷೆಯ ಚಾನೆಲ್‌ಗಳಗೆ ಮೂರು ಚಾನೆಲ್ ಗುಚ್ಛಗಳನ್ನು ಪರಿಚಯಿಸಿದೆ. ಈ ಪ್ಲ್ಯಾನ್‌ಗಳನ್ನು ತಿಂಗಳ, ಆರು ತಿಂಗಳ ಮತ್ತು ವಾರ್ಷಿಕ ಎಂದು ವಿಂಗಡಣೆ ಮಾಡಲಾಗಿದೆ. ಹಾಗಾದರೇ ಟಾಟಾಸ್ಕೈ ಕನ್ನಡ ಚಾನೆಲ್‌ ಪ್ಯಾಕ್‌ಗಳ ಬಗ್ಗೆ ಮುಂದೆ ತಿಳಿಯೋಣ.

ತಿಂಗಳ ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್

ತಿಂಗಳ ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್

ಟಾಟಾಸ್ಕೈನ್ ಈ ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್‌ನಲ್ಲಿ 45 ಸ್ಟ್ಯಾಂಡರ್ಡ್ ಡೆಫಿನಿಶನ್‌ (ಎಸ್‌ಡಿ) ಚಾನೆಲ್ಸ್‌ಗಳು ಲಭ್ಯವಾಗುತ್ತವೆ. ಅವುಗಳಲ್ಲಿ ಒಟ್ಟು 12 ಕನ್ನಡ ಪ್ರಾದೇಶಿಕ ಚಾನೆಲ್ಸ್‌ಗಳು ಇರುತ್ತವೆ. ಜೊತೆಗೆ ಒಂದು ಹಿಂದಿ ಮ್ಯೂವಿಸ್‌, ಎರಡು ಹಿಂದಿ ನ್ಯೂಸ್‌, ಮೂರು ಕಿಡ್ಸ್‌ ಚಾನೆಲ್ಸ್, ಆರು ತೆಲಗು ಪ್ರಾದೇಶಿಕ ಚಾನೆಲ್ಸ್‌, ಒಂದು ಇಂಗ್ಲೀಷ್‌ ನ್ಯೂಸ್ ಚಾನೆಲ್, ಎಂಡು ತಮಿಳ ಪ್ರಾದೇಶಿಕ ಚಾನೆಲ್ಸ್, ಎರಡು ಉರ್ದು, ಒಂದು ಮ್ಯೂಸಿಕ್, ಮೂರು ನಾಲೆಡ್ಜ್ ಚಾನೆಲ್ಸ್‌ ಮತ್ತು ಆರು ಮಲಯಾಳಂ ಚಾನೆಲ್ಸ್‌ಗಳು ಸೇರಿರುತ್ತವೆ.

ಆರು ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್

ಆರು ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್

ಟಾಟಾಸ್ಕೈ ಪರಿಚಯಿಸಿರುವ ಆರು ತಿಂಗಳ ಕನ್ನಡ ಪ್ಯಾಕ್‌ನಲ್ಲಿ ಒಟ್ಟು 74 ಚಾನೆಲ್ಸ್‌ಗಳು ಲಭ್ಯವಾಗುತ್ತವೆ. ಅವುಗಳಲ್ಲಿ ಒಟ್ಟು 12 ಕನ್ನಡ ಪ್ರಾದೇಶಿಕ ಚಾನೆಲ್ಸ್‌ಗಳು ಸೇರಿದಂತೆ ಮಲಯಾಳಂ ಚಾನೆಲ್ಸ್, ತಮಿಳ, ತೆಲಗು, ಕಿಡ್ಸ್‌, ನ್ಯೂಸ್‌, ಹಿಂದಿಯ ಕೆಲವು ಆಯ್ದ ಚಾನೆಲ್ಸ್‌ಗಳು ಸಹ ಲಭ್ಯವಾಗಲಿವೆ. ಜೊತೆಗೆ ಸ್ಪೋರ್ಟ್ಸ್‌ ಚಾನೆಲ್ಸ್‌ಗಳು ಸಹ ದೊರೆಯುತ್ತವೆ.

ವಾರ್ಷಿಕ್ ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್

ವಾರ್ಷಿಕ್ ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್

ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್‌ನಲ್ಲಿರುವಂತೆ 'ವಾರ್ಷಿಕ್ ಕನ್ನಡ ಲೈಟ್‌ ಪ್ಲಸ್‌' ಪ್ಯಾಕ್‌ನಲ್ಲಿಯೂ ಸಹ 45 ಸ್ಟ್ಯಾಂಡರ್ಡ್ ಡೆಫಿನಿಶನ್‌ (ಎಸ್‌ಡಿ) ಚಾನೆಲ್ಸ್‌ಗಳು ಲಭ್ಯವಾಗುತ್ತವೆ. ಅವುಗಳಲ್ಲಿ ಒಟ್ಟು 12 ಕನ್ನಡ ಪ್ರಾದೇಶಿಕ ಚಾನೆಲ್ಸ್‌ಗಳು ಇರುತ್ತವೆ. ಜೊತೆಗೆ ಒಂದು ಹಿಂದಿ ಮ್ಯೂವಿಸ್‌, ಎರಡು ಹಿಂದಿ ನ್ಯೂಸ್‌, ಮೂರು ಕಿಡ್ಸ್‌ ಚಾನೆಲ್ಸ್, ಆರು ತೆಲಗು ಪ್ರಾದೇಶಿಕ ಚಾನೆಲ್ಸ್‌, ಒಂದು ಇಂಗ್ಲೀಷ್‌ ನ್ಯೂಸ್ ಚಾನೆಲ್, ಎಂಡು ತಮಿಳ ಪ್ರಾದೇಶಿಕ ಚಾನೆಲ್ಸ್, ಎರಡು ಉರ್ದು, ಒಂದು ಮ್ಯೂಸಿಕ್, ಮೂರು ನಾಲೆಡ್ಜ್ ಚಾನೆಲ್ಸ್‌ ಮತ್ತು ಆರು ಮಲಯಾಳಂ ಚಾನೆಲ್ಸ್‌ಗಳು ಸೇರಿರುತ್ತವೆ.

ಪ್ಯಾಕ್‌ಗಳ ಬೆಲೆ

ಪ್ಯಾಕ್‌ಗಳ ಬೆಲೆ

ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್ ತಿಂಗಳ ಮೊತ್ತ 249ರೂ. ಆಗಿದ್ದು, ಇದು ಟಾಕ್ಸ್‌ ಮತ್ತು NCFಯನ್ನು ಒಳಗೊಂಡಿರುತ್ತದೆ. ಹಾಗೆಯೇ ಆರು ತಿಂಗಳ ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್ ಮೊತ್ತ 1,878ರೂ.ಗಳಾಗಿದೆ. ವಾರ್ಷಿಕ್ ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್ ಮೊತ್ತ 2,988ರೂ.ಗಳಾಗಿದೆ. 1,878ರೂ.ಗಳ ಆರು ತಿಂಗಳ ಕನ್ನಡ ಲೈಟ್‌ ಪ್ಲಸ್‌ ಪ್ಯಾಕ್, ತಿಂಗಳಿಗೆ ನೋಡುವುದಾದರೇ 313ರೂ. ಆಗುತ್ತದೆ ಎನ್ನಲಾಗಿದೆ.

Most Read Articles
Best Mobiles in India

English summary
The talks about Dish TV and Airtel Digital TV merger are in last stages and the two companies might soon merge their operations. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X