'ಡಿಶ್‌ ಟಿವಿ'ಯಿಂದ ಮೂರು ಹೊಸ ಡಿ2ಎಚ್‌ ಸೆಟ್‌ಟಾಪ್‌ ಬಾಕ್ಸ್ ಲಾಂಚ್!..ಬೆಲೆ?

|

ಕೇಬಲ್ ಮೂಲಕ ಟಿವಿಗಳಿಗೆ ಡಿಶ್‌ ಕನೆಕ್ಷನ್ ಪಡೆಯುವ ವ್ಯವಸ್ಥೆಗೆ ಡಿ2ಎಚ್‌ಗಳು ಎಂಟ್ರಿ ಭಾರಿ ಪೆಟ್ಟು ಕೊಟ್ಟಿರುವುದಂತು ನಿಜ. ಡಿ2ಎಚ್‌ ಸೇವೆಯಲ್ಲಿಯೂ ಈಗ ಸಾಕಷ್ಟು ಬದಲಾವಣೆಗಳು ಕಂಡಿದ್ದು, ಹಲವು ಡಿ2ಎಚ್‌ ಪೂರೈಕೆದಾರರು ಇಂಟರ್ನೆಟ್‌ ಟಚ್‌ ನೀಡಿದ್ದಾರೆ. ಅವುಗಳಲ್ಲಿ ಇತ್ತೀಚಿಗೆ ಏರ್‌ಟೆಲ್ ಸಂಸ್ಥೆಯು ಏರ್‌ಟೆಲ್‌ ಎಕ್ಸ್‌ಟ್ರಿಮ್‌ ಬಾಕ್ಸ್‌ ಅನ್ನು ಪರಿಚಯಿಸಿದೆ. ಹಾಗೆಯೇ ಡಿ2ಎಚ್‌ ಪೂರೈಕೆ ಸಂಸ್ಥೆ 'ಡಿಶ್‌ ಟಿವಿ'ಯು ಸಹ ಇದೀಗ ಹೊಸ ಸೆಟ್‌ಟಾಪ್‌ ಬಾಕ್ಸ್ ಪರಿಚಯಿಸಿದೆ.

ಡಿಶ್‌ಟಿವಿ' ಡಿ2ಎಚ್‌

ಹೌದು, ಗ್ರಾಹಕರಿಗೆ ಈಗಾಗಲೇ ಚಿರಪರಿಚಿತವಾಗಿರುವ 'ಡಿಶ್‌ಟಿವಿ' ಡಿ2ಎಚ್‌ ಪೂರೈಕೆದಾರ ಸಂಸ್ಥೆಯು ಮಾರುಕಟ್ಟೆಯಲ್ಲಿ ಎಸ್‌ಡಿ ಮತ್ತು ಹೆಚ್‌ಡಿ ಮಾದರಿಯ ಸೆಟ್‌ಟಾಪ್‌ ಬಾಕ್ಸ್‌ಗಳಿಂದ ತನ್ನದೇ ಗತ್ತನ್ನು ಹೊಂದಿದೆ. ಸಂಸ್ಥೆಯು ಈಗ ಹೊಸದಾಗಿ 'ಡಿಶ್‌ ಸ್ಮಾರ್ಟ್‌ ಹಬ್' ಸೇವೆಯನ್ನು ಶುರುಮಾಡಿದ್ದು, ಮೂರು ಮಾದರಿಗಳ ಆಯ್ಕೆಗಳನ್ನು ಹೊಂದಿದೆ. ಹಾಗಾದರೇ 'ಡಿಶ್‌ ಟಿವಿ'ಯ ಹೊಸ ಸೆಟ್‌ಟಾಪ್‌ ಬಾಕ್ಸ್ ಮಾದರಿಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಶ್‌ನೆಕ್ಸ್ಟ್- ಸೆಟ್‌ಟಾಪ್‌ ಬಾಕ್ಸ್‌

ಡಿಶ್‌ನೆಕ್ಸ್ಟ್- ಸೆಟ್‌ಟಾಪ್‌ ಬಾಕ್ಸ್‌

ಡಿಶ್‌ ಟಿವಿಯು ನೂತನವಾಗಿ DishNXT- ಡಿಶ್‌ನೆಕ್ಟ್ಸ್‌ ಸೆಟ್‌ಟಾಪ್‌ ಬಾಕ್ಸ್ ಅನ್ನು ಪರಿಚಯಸಿದೆ. ಈ ಸೆಟ್‌ಟಾಪ್‌ ಬಾಕ್ಸ್‌ ಬೆಲೆಯು 1,490ರೂ.ಗಳಾಗಿದ್ದು, ಒಂದು ತಿಂಗಳು ಆಫರ್ ಚಾನೆಲ್ಸ್‌ ಪ್ಯಾಕ್‌ ಉಚಿತವಾಗಿ ಲಭ್ಯವಾಗಲಿದೆ. ಇದರೊಂದಿಗೆ 2,000ರೂ. ಮೌಲ್ಯದ ದುನಿಯಾ ಕೋಪನ್ ಜೊತೆಗೆ ಲೈಫ್‌ ಟೈಮ್ ವಾರಂಟಿ ಸೌಲಭ್ಯವನ್ನು ನೀಡಲಿದೆ. ಇನ್ನು ಫೀಚರ್ಸ್‌ಗಳ ಬಗ್ಗೆ ನೋಡುವುದಾದರೇ ಇದರಲ್ಲಿ ಸ್ಟೀರಿಯೊ ಸೌಂಡ್‌ ಗುಣಮಟ್ಟ ಲಭ್ಯವಿದ್ದು, ಪಿಚ್ಚರ್ ಕ್ವಾಲಿಟಿಯು ಡಿಜಿಟಲ್‌ ಗುಣಮಟ್ಟದಲ್ಲಿ ಸಿಗಲಿದೆ. ಹಾಗೆಯೇ ರೀಮೈಂಡರ್ ಸೇರಿಸಬಹುದು, ಫೇವರೇಟ್ ಚಾನೆಲ್‌ಗಳನ್ನು ಮಾರ್ಕ್ ಮಾಡಬಹುದಾಗಿದೆ.

ಡಿಶ್‌ನೆಕ್ಸ್ಟ್ ಹೆಚ್‌ಡಿ- ಸೆಟ್‌ಟಾಪ್‌ ಬಾಕ್ಸ್‌

ಡಿಶ್‌ನೆಕ್ಸ್ಟ್ ಹೆಚ್‌ಡಿ- ಸೆಟ್‌ಟಾಪ್‌ ಬಾಕ್ಸ್‌

ಡಿಶ್‌ ಟಿವಿಯ ಎರಡನೇ ಸೆಟ್‌ಟಾಪ್‌ ಬಾಕ್ಸ್ ಮಾದರಿಯೆಂದರೇ ಅದು DishNXT HD- ಡಿಶ್‌ನೆಕ್ಟ್ಸ್‌ ಹೆಚ್‌ಡಿ ಆಗಿದೆ. ಈ ಸೆಟ್‌ಟಾಪ್‌ ಬಾಕ್ಸ್‌ ಬೆಲೆಯು 1,590 ರೂ.ಗಳಾಗಿದ್ದು, ಒಂದು ತಿಂಗಳು ಆಫರ್ ಚಾನೆಲ್ಸ್‌ ಪ್ಯಾಕ್‌ ಉಚಿತವಾಗಿ ಲಭ್ಯವಾಗಲಿದೆ. ಇಲ್ಲಿಯೂ ಸಹ 2,000ರೂ. ಮೌಲ್ಯದ ದುನಿಯಾ ಕೋಪನ್ ಜೊತೆಗೆ ಲೈಫ್‌ ಟೈಮ್ ವಾರಂಟಿ ಸೌಲಭ್ಯವನ್ನು ನೀಡಲಿದೆ. ಈ ಸೆಟ್‌ಟಾಪ್‌ ಬಾಕ್ಸ್‌ ಸಹ ಸ್ಟೀರಿಯೊ ಸೌಂಡ್‌ ಗುಣಮಟ್ಟ ಹೊಂದಿದ್ದು, ಹೆಚ್‌ಡಿ ಪಿಚ್ಚರ್ ಕ್ವಾಲಿಟಿ ಇರಲಿದೆ. ಜೊತೆಗೆ ಅಲೆಕ್ಸಾ ಬೆಂಬಲ ಪಡೆದಿದೆ. ಉಳಿದಂತೆ ರೀಮೈಂಡರ್ ಸೇರಿಸಬಹುದು ಜೊತೆಗೆ ಫೇವರೇಟ್ ಚಾನೆಲ್‌ಗಳನ್ನು ಮಾರ್ಕ್ ಮಾಡಬಹುದಾಗಿದೆ.

ಡಿಶ್‌ ಸ್ಮಾರ್ಟ್‌ ಹಬ್ - ಸೆಟ್‌ಟಾಪ್‌ ಬಾಕ್ಸ್‌

ಡಿಶ್‌ ಸ್ಮಾರ್ಟ್‌ ಹಬ್ - ಸೆಟ್‌ಟಾಪ್‌ ಬಾಕ್ಸ್‌

'ಡಿಶ್‌ ಸ್ಮಾರ್ಟ್‌ ಹಬ್' (Dish SMRT Hub) ಸೆಟ್‌ಟಾಪ್‌ ಬಾಕ್ಸ್ ಇದು ಡಿಶ್‌ ಟಿವಿಯ ಇಂಟರ್ನೆಟ್ ಆಧಾರಿತ ಹೊಸ ಸೆಟ್‌ಟಾಪ್‌ ಬಾಕ್ಸ್ ಮಾದರಿಯಾಗಿದ್ದು, ಈ ಸೆಟ್‌ಟಾಪ್‌ ಬಾಕ್ಸ್‌ ಬೆಲೆಯು 3,999ರೂ.ಗಳಾಗಿದೆ. ಈ ಸೆಟ್‌ಟಾಪ್‌ ಬಾಕ್ಸ್‌ ಆಂಡ್ರಾಯ್ಡ್‌ ಟಿವಿ ಬೆಂಬಲಿತವಾಗಿದ್ದು, ಇದ್ರಲ್ಲಿ ಅಮೆಜಾನ್ ಪ್ರೈಮ್‌, ಹಾಟ್‌ಸ್ಟಾರ್‌, ವಾಚೋ(Watcho) ಸೇರಿದಂತೆ ಇತರೆ OTT ಆಪ್ಸ್‌ಗಳ ಸೇವೆಗಳನ್ನು ಪಡೆಯಬಹುದಾಗಿದೆ. ಹಾಗೆಯೇ ಲಭ್ಯವಾಗುವ OTT ಆಪ್ಸ್‌ಗಳಿಂದ ಸ್ಯಾಟಲೇಟ್‌ ಟಿವಿಗಳ ಪ್ಲೇಬ್ಯಾಕ್‌ ಆಯ್ಕೆ ಇರಲಿದೆ. ಇದರೊಂದಿಗೆ ಗ್ರಾಹಕರು ಹೆಚ್ಚುವರಿಯಾಗಿ ಗೇಮ್ಸ್, ಆಪ್ಸ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದು.

ಸ್ಮಾರ್ಟ್‌ ಹಬ್ ಆಫರ್

ಸ್ಮಾರ್ಟ್‌ ಹಬ್ ಆಫರ್

ಡಿಶ್‌ ಟಿವಿಯ ಆಂಡ್ರಾಯ್ಡ್‌ ಆಧಾರಿತ 'ಡಿಶ್‌ ಸ್ಮಾರ್ಟ್‌ ಹಬ್' (Dish SMRT Hub) ಸೆಟ್‌ಟಾಪ್‌ ಬಾಕ್ಸ್ ಬೆಲೆಯು 3,999ರೂ.ಗಳಾಗಿದೆ. ಆದರೆ ಈಗಾಗಲೇ ಡಿಶ್‌ ಟಿವಿ ಡಿ2ಎಚ್‌ ಗ್ರಾಹಕರು ಹೊಸ 'ಡಿಶ್‌ ಸ್ಮಾರ್ಟ್‌ ಹಬ್‌' ಸೇವೆಗೆ ಅಪ್‌ಗ್ರೇಡ್‌ ಮಾಡುವುದಾದರೇ ಅವರಿಗೆ 2,499ರೂ.ಗಳಿಗೆ ಈ ಸೇವೆ ದೊರೆಯಲಿದೆ.

Best Mobiles in India

English summary
Dish TV has announced that it is now offering three types of set-top boxes to its subscribers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X