ಬರೀ 49ರೂ.ಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ!..ಇಲ್ಲಿದೆ ಪೂರ್ಣ ಮಾಹಿತಿ!
ಜನಪ್ರಿಯ ಓಟಿಟಿ ಪ್ಲಾಟ್‌ಫ್ಲಾರ್ಮ್‌ಗಳ ಪೈಕಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸಹ ಒಂದಾಗಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಚಂದಾದಾರಿಕೆಯ ಯೋಜನೆಗಳ ಆಯ್ಕೆ ಹೊಂದಿದೆ. ಡಿಸ್ನಿ+ ಹಾಟ್‌ಸ್ಟಾರ್ ಈಗ ನೂತನವಾಗಿ ಆಯ್ದ ಆಂಡ್ರಾಯ್ಡ್ ಬಳಕೆದಾರರಿಗಾಗಿ ಹೊಸ ಮಾಸಿಕ ಮೊಬೈಲ್ ಯೋಜನೆಯನ್ನು ಪರೀಕ್ಷಿಸುತ್ತಿದೆ. ಆಯ್ದ ಪಾವತಿ ವಿಧಾನಗಳಲ್ಲಿ ತಿಂಗಳಿಗೆ 49 ರೂ.ಗಳಿಗೆ ಮೊಬೈಲ್ ಪ್ಲಾನ್ ಬಳಕೆದಾರರಿಗೆ ಲಭ್ಯವಿದೆ.

ಡಿಸ್ನಿ+ ಹಾಟ್‌ಸ್ಟಾರ್ ತಿಳಿಸಿರುವ ಹೊಸ ಯೋಜನೆಯು ಜಾಹೀರಾತು ಬೆಂಬಲಿತವಾಗಿದೆ. ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಸಂಪೂರ್ಣ ಡಿಸ್ನಿ+ ಹಾಟ್‌ಸ್ಟಾರ್ ಕ್ಯಾಟಲಾಗ್‌ಗೆ ಚಂದಾದಾರರಿಗೆ ಪ್ರವೇಶವನ್ನು ನೀಡುತ್ತದೆ. ಆದಾಗ್ಯೂ, ಬಳಕೆದಾರರು ಒಂದು ಸಮಯದಲ್ಲಿ ಒಂದು ಸಾಧನವನ್ನು ಮಾತ್ರ ಲಾಗ್ ಇನ್ ಮಾಡಲು ಸಾಧ್ಯವಾಗುತ್ತದೆ. ಈ ಯೋಜನೆಯಲ್ಲಿ ಬಳಕೆದಾರರು 720p ಹೆಚ್‌ಡಿ ವೀಡಿಯೊ ರೆಸಲ್ಯೂಶನ್ ಮತ್ತು ಸ್ಟಿರಿಯೊ ಆಡಿಯೊ ಗುಣಮಟ್ಟಕ್ಕೆ ಪ್ರವೇಶ ಸಿಗುತ್ತದೆ.
ಹಾಗೆಯೇ ಡಿಸ್ನಿ+ ಹಾಟ್‌ಸ್ಟಾರ್ ತನ್ನ ಮೊಬೈಲ್ ಪ್ಲಾನ್‌ನಲ್ಲಿ 100ರೂ. ರಿಯಾಯಿತಿಯನ್ನು ನೀಡುತ್ತಿದ್ದು, ಇದು 6 ತಿಂಗಳ ಚಂದಾದಾರಿಕೆಗೆ ಲಭ್ಯವಿದೆ. ತಿಂಗಳಿಗೆ 299 ರೂಪಾಯಿಗಳ ಮೊಬೈಲ್ ಪ್ಲಾನ್ ಆರು ತಿಂಗಳವರೆಗೆ ಚಂದಾದಾರರಾಗಿದ್ದರೆ ತಿಂಗಳಿಗೆ 199ರೂ. ಗಳಿಗೆ ಲಭ್ಯ ಆಗಲಿದೆ. ಸೆಪ್ಟೆಂಬರ್‌ನಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಹೊಸ ಚಂದಾದಾರಿಕೆ ಪ್ಯಾಕ್‌ಗಳನ್ನು ಘೋಷಿಸಿತು. ಅವುಗಳು ಸೆಪ್ಟೆಂಬರ್ 1 ರಂದು ಚಾಲ್ತಿ ಆಗಿವೆ.

ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಸೇರಿದಂತೆ ಮೂರು ಹೊಸ ಯೋಜನೆ ಹೊಂದಿದೆ. ಅವುಗಳು ಕ್ರಮವಾಗಿ ಒಂದು ವರ್ಷಕ್ಕೆ 499ರೂ, ಸೂಪರ್ 899ರೂ. ವಾರ್ಷಿಕ ಯೋಜನೆ ಮತ್ತು ಪ್ರೀಮಿಯಂ 1499ರೂ. ವಾರ್ಷಿಕ ಯೋಜನೆ. ಪ್ರೀಮಿಯಂ ಯೋಜನೆಯಲ್ಲಿ 4K ಗುಣಮಟ್ಟದ ವಿಡಿಯೋ ಜೊತೆಗೆ ನಾಲ್ಕು ಡಿವೈಸ್‌ಗಳಿಗೆ ಆಕ್ಸಸ್ ಲಭ್ಯ. ಸೂಪರ್ ವಾರ್ಷಿಕ ಯೋಜನೆಯಲ್ಲಿ ಹೆಚ್‌ಡಿ ಗುಣಮಟ್ಟದ ವಿಡಿಯೋ ಜೊತೆಗೆ ಎರಡು ಡಿವೈಸ್‌ಗಳಿಗೆ ಆಕ್ಸಸ್ ಸಿಗಲಿದೆ. ಇನ್ನು 499ರೂ. ವಾರ್ಷಿಕ ಯೋಜನೆಯಲ್ಲಿ ಒಂದು ಮೊಬೈಲ್ ಆಕ್ಸಸ್ ಮಾತ್ರ ಸಿಗಲಿದೆ.
ಇದೇ ಡಿಸೆಂಬರ್ 14, 2021 ರಿಂದ ಅಮೆಜಾನ್ ಪ್ರೈಮ್ ಚಂದಾದಾರಿಕೆ ಶೇಕಡಾ 50 ರಷ್ಟು ಬೆಲೆ ಏರಿಕೆ ಮಾಡಿದೆ. ಅಮೆಜಾನ್ ಪ್ರೈಮ್ ವಾರ್ಷಿಕ ಸದಸ್ಯತ್ವ ಸೇರಿದಂತೆ ಇತರೆ ಅಲ್ಪಾವಧಿಯ ಯೋಜನೆಗಳ ಬೆಲೆಯಲ್ಲಿ ಹೆಚ್ಚಳ ಆಗಿವೆ. ಮೂರು ತಿಂಗಳ ಅಮೆಜಾನ್ ಪ್ರೈಮ್ ಯೋಜನೆಯು 329 ರೂ.ಗೆ ಬದಲಾಗಿ 459 ರೂ. ಗಳಾದರೆ, ಸದ್ಯ 129 ರೂ.ಗಳಿಗೆ ಲಭ್ಯವಿದ್ದ ಒಂದು ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಯೋಜನೆಯು 179 ರೂ.ಗಳಿಗೆ ಹೆಚ್ಚಳ ಆಗಲಿದೆ. ಹಾಗೆಯೇ 999 ರೂ.ಗಳ ಅಮೆಜಾನ್ ಪ್ರೈಮ್ ವಾರ್ಷಿಕ ಪ್ರಧಾನ ಸದಸ್ಯತ್ವ ಯೋಜನೆಯು, ಬೆಲೆ ಹೆಚ್ಚಳದಿಂದ 1,499ರೂ. ಆಗಿದೆ. ಇನ್ನು ನೆಟ್‌ಫ್ಲಿಕ್ಸ್ ತನ್ನ ಚಂದಾದಾರಿಕೆ ಯೋಜನೆಗಳ ಬೆಲೆಗಳನ್ನು ಈಗ 149ರೂ. ರಿಂದ ಪ್ರಾರಂಭಿಸುತ್ತದೆ.

ಕೆಲವು ಜನಪ್ರಿಯ ಓಟಿಟಿಗಳ ಬಗ್ಗೆ ಇಲ್ಲಿದೆ ಮಾಹಿತಿ:
ನೆಟ್‌ಫ್ಲಿಕ್ಸ್ OTT ಆಪ್
ನೆಟ್‌ಫ್ಲಿಕ್ಸ್ ತಾಣ ನಿಮಗೆಲ್ಲಾ ತಿಳಿದಿರುವ ಪ್ರಮುಖ ಓಟಿಟಿ ಅಪ್ಲಿಕೇಶನ್ ಆಗಿದೆ. ಈ ತಾಣದಲ್ಲಿ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು, ಸೇಕ್ರೆಡ್ ಗೇಮ್ಸ್, ಸ್ಟ್ರೇಂಜರ್ ಥಿಂಗ್ಸ್, ಡೇರ್‌ಡೆವಿಲ್, ಪನಿಷರ್, ಆರೆಂಜ್ ಈಸ್ ದಿ ನ್ಯೂ ಬ್ಲ್ಯಾಕ್, ನಾರ್ಕೋಸ್, ಹೌಸ್ ಆಫ್ ಕಾರ್ಡ್ಸ್, ಕಾರ್ಯಕ್ರಮಗಳು ಹೆಚ್ಚು ಅಟ್ರ್ಯಾಕ್ಟ್ ಆಗಿವೆ. ಈ ಆಪ್ ನಾಲ್ಕು ವಿಭಿನ್ನ ಚಂದಾದಾರಿಕೆ ಯೋಜನೆಗಳನ್ನು ಹೊಂದಿದ್ದು, ಒಂದು ಸಮಯದಲ್ಲಿ 4 ಡಿವೈಸ್‌ಗಳ ಸ್ಕ್ರೀನ್‌ಗಳಲ್ಲಿ ಈ ಆಪ್ ಬಳಸುವ ಚಂದಾದಾರಿಕೆಯ ಪ್ಲ್ಯಾನ್ ಸಹ ಇದೆ.
ಅಮೆಜಾನ್ ಪ್ರೈಮ್ ವಿಡಿಯೊ
ನೆಟ್‌ಫ್ಲಿಕ್ಸ್‌ಗೆ ನೇರ ಪೈಪೋಟಿ ನೀಡುತ್ತಿರುವ ಪ್ರಮುಖ ಓಟಿಟಿ ಆಪ್ ಅಂದ್ರೇ ಅದು ಅಮೆಜಾನ್ ಪ್ರೈಮ್ ವಿಡಿಯೊ ಆಗಿದೆ. ಈ ತಾಣದಲ್ಲಿ ಬಳಕೆದಾರರು ಚಲನಚಿತ್ರಗಳ ಜೊತೆಗೆ ಭಿನ್ನ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಬಹುದು. ದಿ ಮ್ಯಾನ್ ಇನ್ ದಿ ಹೈ ಕ್ಯಾಸಲ್, ಮೇಡ್ ಇನ್ ಹೆವನ್ ಹಾಗೂ ಹಾಸ್ಯ ಕಾರ್ಯಕ್ರಮಗಳು ಈ ಆಪ್‌ನಲ್ಲಿ ಸೇರಿವೆ. ಅಮೆಜಾನ್ ಪ್ರೈಮ್ ವಿಡಿಯೊ ಎರಡು ಚಂದಾದಾರಿಕೆ ಆಯ್ಕೆಗಳನ್ನು ಹೊಂದಿದ್ದು, ಮಾಸಿಕ ಮತ್ತು ವಾರ್ಷಿಕ.
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ OTT ಆಪ್
ಕ್ರೀಡಾ ಅಭಿಮಾನಿಗಳಿಂಗತೂ ಹಾಟ್‌ಸ್ಟಾರ್ ಹಾಟ್ ಫೇವರೇಟ್ ಆಗಿದೆ. ಯಾಕಂದ್ರೆ ಈ ಆಪ್ ಕ್ರಿಕೆಟ್, ಐಪಿಎಲ್ ಮ್ಯಾಚ್ ಸೇರಿದಂತೆ ಇತರೆ ಕ್ರೀಡೆಗಳ ನೇರ ಪ್ರಸಾರಗಳನ್ನು ಪ್ರದರ್ಶನ ಮಾಡುತ್ತದೆ. ಜೊತೆಗೆ ಸಿನಿಮಾ ಹಾಗೂ ವಿಶೇಷ ಕಾರ್ಯಕ್ರಮಗಳ ಪ್ರಸಾರದ ಆಯ್ಕೆಗಳನ್ನು ಈ ತಾಣವು ಹೊಂದಿದೆ. ಇನ್ನು ಹಾಟ್‌ಸ್ಟಾರ್ ಭಿನ್ನ ಚಂದಾದಾರಿಕೆಯ ಆಯ್ಕೆಗಳನ್ನು ಒಳಗೊಂಡಿದೆ.


Click it and Unblock the Notifications