Home
ಸುದ್ದಿಜಾಲ

Airtel: ಗ್ರಾಹಕರಿಗೆ ಶಾಕ್ ನೀಡಿದ ಏರ್‌ಟೆಲ್‌...ಈ ಪ್ಲ್ಯಾನ್‌ನಲ್ಲಿ ಇನ್ಮುಂದೆ ಈ ಸೌಲಭ್ಯ ಇಲ್ಲ!

ಪ್ರಮುಖ ಟೆಲಿಕಾಂ (Telecom) ಸಂಸ್ಥೆಗಳಲ್ಲಿ ಒಂದಾಗಿರುವ ಏರ್‌ಟೆಲ್‌ (Airtel) ತನ್ನ ಗ್ರಾಹಕರಿಗೆ ಹಲವಾರು ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತಾ ಬರುತ್ತಿದೆ. ಅದರಲ್ಲೂ ತನ್ನ ತೀವ್ರ ಪ್ರತಿಸ್ಪರ್ಧಿ ಜಿಯೋ ವಿರುದ್ಧ ಸೆಣಸುತ್ತಿರುಯವ ಏರ್‌ಟೆಲ್‌ ಕಾಲಕಾಲಕ್ಕೆ ವಿಶೇಷ ಪ್ಲ್ಯಾನ್‌ಗಳ ಮೂಲಕ ಟೆಲಿಕಾಂ ವಲಯದಲ್ಲಿ ಸಂಚಲನವನ್ನೇ ಉಂಟು ಮಾಡುತ್ತಿದೆ. ಈ ನಡುವೆ ಏರ್‌ಟೆಲ್‌ನ ಈ ಚಂದಾದಾರರಿಗೆ ಶಾಕಿಂಗ್‌ ನ್ಯೂಸ್‌ ನೀಡಿದೆ.

ಹೌದು, ಏರ್‌ಟೆಲ್‌ನ ಈ ಪ್ಲ್ಯಾನ್‌ನಲ್ಲಿ ಇದ್ದ ಓಟಿಟಿ (OTT) ಸೇವೆಯನ್ನು ತೆಗೆದುಹಾಕಲಾಗಿದೆ. ಕೆಲವು ದಿನಗಳು ಅಥವಾ ವಾರಗಳ ಹಿಂದೆ ಈ ಪ್ರಿಪೇಯ್ಡ್ ಯೋಜನೆಯೊಂದಿಗೆ ರೀಚಾರ್ಜ್ ಮಾಡುವ ಬಳಕೆದಾರರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಡಿಸ್ನಿ+ ಹಾಟ್‌ಸ್ಟಾರ್‌ಗೆ(Disney+ Hotstar) ಎಂಟ್ರಿಯಾಗಲು ಅರ್ಹರಾಗಿದ್ದರು.ಆದರೆ, ಇನ್ಮುಂದೆ ಅಸಾಧ್ಯ. ಹಾಗಿದ್ರೆ, ಏರ್‌ಟೆಲ್‌ನ ಹೊಸ ನಿಯಮ ಏನು?, ಇದರ ಬದಲಾಗಿ ಬೇರೆ ಏನಾದರೂ ಸೌಲಭ್ಯ ಕಲ್ಪಿಸಿಕೊಡುತ್ತಿದೆಯಾ ಎಂಬ ಮಾಹಿತಿ ಇಲ್ಲಿದೆ ನೋಡಿ.

ಗ್ರಾಹಕರಿಗೆ ಶಾಕ್ ನೀಡಿದ ಏರ್‌ಟೆಲ್‌...ಈ ಪ್ಲ್ಯಾನ್‌ನಲ್ಲಿ ಈ ಸೌಲಭ್ಯ ಇಲ್ಲ!

ಏರ್‌ಟೆಲ್ ತನ್ನ ಜನಪ್ರಿಯ ಪ್ಲ್ಯಾನ್‌ಗಳಲ್ಲಿ ಪ್ರಮುಖ ಸ್ಥಾನದಲ್ಲಿರುವ 399ರೂ.ಗಳ ಯೋಜನೆಯಿಂದ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ನ ಪ್ರಯೋಜನವನ್ನು ತೆಗೆದುಹಾಕಿದೆ. ಈ ಸೌಲಭ್ಯ ಈವರೆಗೂ ಲಭ್ಯ ಇತ್ತು. ಅದರಲ್ಲೂ ಈ ಪ್ರಿಪೇಯ್ಡ್ ಯೋಜನೆಯೊಂದಿಗೆ (Prepaid plan)ರೀಚಾರ್ಜ್ ಮಾಡುವ ಬಳಕೆದಾರರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಡಿಸ್ನಿ+ ಹಾಟ್‌ಸ್ಟಾರ್ ಸೇವೆ ಪಡೆಯಲು ಅರ್ಹರಾಗಿದ್ದರು. ಆದರೆ, ಈಗ ಏರ್‌ಟೆಲ್ ಈ ಯೋಜನೆಯಿಂದ ಪ್ರಯೋಜನವನ್ನು ತೆಗೆದುಹಾಕಿದೆ.

ಉಳಿದಂತೆ ಕೇವಲ 3 ಪ್ಲ್ಯಾನ್‌ಗಳಲ್ಲಿ ಈ ಪ್ರಯೋಜನಗಳನ್ನು ನೀಡಲಾಗಿದೆ. ಅವುಗಳಲ್ಲಿ 3359ರೂ.ಗಳು, 839ರೂ.ಗಳು ಮತ್ತು 499ರೂ.ಗಳಾಗಿದೆ. ಈ ಪ್ಲ್ಯಾನ್‌ಗಳು ಬಳಕೆದಾರರಿಗೆ ಅತ್ಯುತ್ತಮ ಸೇವೆಗಳನ್ನು ನೀಡಲಿದ್ದು, ಅನಿಯಮಿತ ಕರೆ ಸೌಲಭ್ಯ, 5G ಡೇಟಾ ಸೌಲಭ್ಯ(5G data facility) ಸೇರಿವೆ. ಬನ್ನಿ ಈ ಪ್ಲ್ಯಾನ್‌ಗಳಲ್ಲಿ ಏನೆಲ್ಲಾ ಹೆಚ್ಚುವರಿ ಪ್ರಯೋಜನಗಳಿವೆ ಎಂಬುದನ್ನು ಗಮನಿಸೋಣ.

ಏರ್‌ಟೆಲ್ 399ರೂ. ಪ್ಲ್ಯಾನ್: ಏರ್‌ಟೆಲ್‌ನ 399ರೂ.ಗಳ ಪ್ಲ್ಯಾನ್‌ನಲ್ಲಿ ಇನ್ನು ಮುಂದೆ ಡಿಸ್ನಿ + ಹಾಟ್‌ಸ್ಟಾರ್ ಅನ್ನು ನೀಡುವುದಿಲ್ಲ. ಆದರೆ 3GB ದೈನಂದಿನ ಡೇಟಾ, ಅನಿಯಮಿತ ವಾಯ್ಸ್‌ ಕಾಲ್‌, ಪ್ರತಿ ದಿನ 100 ಎಸ್‌ಎಮ್‌ಎಸ್‌ನೊಂದಿಗೆ ಅನಿಯಮಿತ 5G ಡೇಟಾ ಕೊಡುಗೆಯನ್ನು ಇದರಲ್ಲಿ ನೀಡಲಾಗುತ್ತದೆ. ಉಳಿದಂತೆ ಎಕ್ಸ್‌ಸ್ಟ್ರೀಮ್ ಪ್ಲೇ, ಅಪೊಲೊ 24|7 ಸರ್ಕಲ್‌ ಉಚಿತ ಹೆಲೋಟ್ಯೂನ್‌ ಮತ್ತು ವಿಂಕ್‌ ಮ್ಯೂಸಿಕ್ ಸೇವೆ ಪಡೆದುಕೊಳ್ಳಬಹುದು. ಇದರ ಮಾನ್ಯತೆ 28 ದಿನಗಳಾಗಿದೆ.

ಏರ್‌ಟೆಲ್ 499ರೂ.ಗಳ ಪ್ಲ್ಯಾನ್ : ಇನ್ನು ಡಿಸ್ನಿ+ ಹಾಟ್‌ಸ್ಟಾರ್ ಪ್ರಿಪೇಯ್ಡ್ ಯೋಜನೆಗಳ ಕಡೆ ಗಮನಹರಿಸುವುದಾದರೆ 499ರೂ.ಗಳ ಪ್ಲ್ಯಾನ್‌ನಲ್ಲಿ ಪ್ರತಿ ದಿನ 100 ಎಸ್‌ಎಮ್‌ಎಸ್‌, ಅನಿಯಮಿತ ವಾಯ್ಸ್‌ ಕಾಲ್‌, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ, 3GB ದೈನಂದಿನ ಡೇಟಾ ಮತ್ತು 3 ತಿಂಗಳವರೆಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಲಭ್ಯ ಇದೆ. ಇದರೊಂದಿಗೆ ಅನಿಯಮಿತ 5G ಡೇಟಾ ಆಫರ್, ಅಫೋಲೊ 24|7 ಸರ್ಕಲ್, ಉಚಿತ ಹೆಲೋಟ್ಯೂನ್ ಮತ್ತು ವಿಂಕ್‌ ಮ್ಯೂಸಿಕ್‌ ಪ್ರಯೋಜನ ಪಡೆದುಕೊಳ್ಳಬಹುದು. ಈ ಪ್ಲ್ಯಾನ್‌ 28 ದಿನಗಳ ಮಾನ್ಯತೆ ಪಡೆದಿದೆ.

ಗ್ರಾಹಕರಿಗೆ ಶಾಕ್ ನೀಡಿದ ಏರ್‌ಟೆಲ್‌...ಈ ಪ್ಲ್ಯಾನ್‌ನಲ್ಲಿ ಈ ಸೌಲಭ್ಯ ಇಲ್ಲ!

ಏರ್‌ಟೆಲ್‌ 839ರೂ.ಗಳ ಪ್ಲ್ಯಾನ್‌: ಈ ಯೋಜನೆಯಲ್ಲಿ ಬಳಕೆದಾರರು 2GB ದೈನಂದಿನ ಡೇಟಾ, ಅನಿಯಮಿತ ವಾಯ್ಸ್ ಕಾಲ್‌ ಮತ್ತು ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಹೊಂದಿದೆ. ಇದರೊಂದಿಗೆ ಗ್ರಾಹಕರಿಗೆ ಅನಿಯಮಿತ 5G ಡೇಟಾ, ರಿವಾರ್ಡ್ಸ್‌ಮಿನಿ ಚಂದಾದಾರಿಕೆ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗೆ 3 ತಿಂಗಳವರೆಗೆ ಪ್ರವೇಶ ಲಭ್ಯವಾಗಲಿದ್ದು, ಅಪೊಲೊ 24|7 ಸರ್ಕಲ್, ಉಚಿತ ಹೆಲೊಟ್ಯೂನ್ಸ್ ಮತ್ತು ವಿಂಕ್ ಸಂಗೀತಕ್ಕೆ ಚಂದಾದಾರಿಕೆ ಸಹ ಇದೆ. ಈ ಪ್ಲ್ಯಾನ್‌ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಏರ್‌ಟೆಲ್‌ನ 3359ರೂ.ಗಳ ಪ್ಲ್ಯಾನ್‌: ಈ ದೊಡ್ಡ ಮೊತ್ತದ ಪ್ಲ್ಯಾನ್‌ನಲ್ಲಿ 2.5GB ದೈನಂದಿನ ಡೇಟಾ, ನಿತ್ಯ 100 ಎಸ್‌ಎಮ್‌ಎಸ್‌, ಅನಿಯಮಿತ ವಾಯ್ಸ್‌ ಕಾಲ್‌ ಸೌಲಭ್ಯ ಲಭ್ಯ ಇದೆ. . ಇದರೊಂದಿಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯು ಒಂದು ವರ್ಷಕ್ಕೆ ಲಭ್ಯ ಇರಲಿದ್ದು, ಇದರ ಜೊತೆಗೆ ಬಳಕೆದಾರರು ಅಪೊಲೊ 24|7 ಸರ್ಕಲ್, ಉಚಿತ ಹೆಲೊಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್‌ಗೆ ಪ್ರವೇಶ ಪಡೆಯಬಹುದಾಗಿದೆ. ಈ ಪ್ಲ್ಯಾನ್ 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಅಂದರೆ ಬರೋಬ್ಬರಿ ಒಂದು ವರ್ಷ.

Best Mobiles in India

English summary
Disney+ Hotstar service has been discontinued in Airtel Rs 399 plan. Instead, this facility is provided in these three recharge plans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+