ಏರ್‌ಟೆಲ್, ವೊಡಾ, ಐಡಿಯಾ ಆಫರ್‌ಗಳಿಗೆ ಕುತ್ತು: ಟ್ರಾಯ್‌ನಿಂದ ಹೊಸ ನೀತಿ.!!

Written By:

ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ವಂಚನೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ಟ್ರಾಯ್ ಬ್ರೇಕ್ ಹಾಕಲು ಮುಂದಾಗಿದೆ. ಗ್ರಾಹಕರಿಗೆ ಆಗುತ್ತಿರುವ ವಂಚನೆ ಮತ್ತು ಗ್ರಾಹಕರಿಗೆ ಸರಿಯಾದ ತಿಳುವಳಿಕೆಯನ್ನು ನೀಡಲು ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ತನ್ನ ನಿಯಾಮವಳಿಯಲ್ಲಿ ಪಾರದರ್ಶಕತೆಯನ್ನು ತರಲು ಮುಂದಾಗಿದೆ.

ಏರ್‌ಟೆಲ್, ವೊಡಾ, ಐಡಿಯಾ ಆಫರ್‌ಗಳಿಗೆ ಕುತ್ತು: ಟ್ರಾಯ್‌ನಿಂದ ಹೊಸ ನೀತಿ.!!

ಓದಿರಿ: ಸ್ವಾತಂತ್ರ್ಯ ದಿನಾಚರಣೆಗೆ ನೋಕಿಯಾ ದಿಂದ ಬಂಪರ್ ಗಿಫ್ಟ್.!

ಈಗಾಗಲೇ ಟೆಲಿಕಾಂ ವಲಯದಲ್ಲಿ ಜಿಯೋ ಕಾಲಿಟ್ಟ ನಂತರದಲ್ಲಿ ದರ ಸಮರವೂ ಜೋರಾಗಿ ನಡೆಯುತ್ತಿದ್ದು, ಇದಿಂದಾಗಿ ಗ್ರಾಹಕರಿಗೆ ಮೇಲಿನಿಂದ ಮೇಲೆ ಹೊಸ ಆಫರ್ ಗಳ ಸುರಿಮಳೆಯೇ ಸುರಿಯುತ್ತಿದೆ. ಆದರೆ ಇದರಿಂದಾಗಿ ಗ್ರಾಹಕರು ಗೊಂದಲಕ್ಕೆ ಸಿಲುಕಿದ್ದಾರೆ. ಯಾವುದು ಉತ್ತಮವಾದ್ದು ಎಂದು ಆಯ್ಕೆ ಮಾಡಿಕೊಳ್ಳಲು ಪರದಾಡುತ್ತಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೆಬ್‌ಸೈಟಿನಲ್ಲಿ ಸಂಫೂರ್ಣ ಜಾತಕ:

ವೆಬ್‌ಸೈಟಿನಲ್ಲಿ ಸಂಫೂರ್ಣ ಜಾತಕ:

ಈ ಹಿನ್ನಲೆಯಲ್ಲಿ ಟ್ರಾಯ್ ತನ್ನ ವೆಬ್‌ಸೈಟಿನಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳ ಟ್ಯಾರಿಫ್ ಕುರಿತ ಮಾಹಿತಿಯನ್ನು ಪ್ರಕಟಿಸಲಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ವಂಚನೆ ಮಾಡುತ್ತಿದ್ದ ಏರ್‌ಟೆಲ್‌, ವೊಡಾಪೋನ್ ಮತ್ತು ಐಡಿಯಾ ಕಂಪನಿಗಳು ಸೇರಿದಂತೆ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ನಡುಕ ಶುರುವಾಗಿದೆ.

ಟೆಲಿಕಾಂ ಕಂಪನಿಗಳ ವಂಚನೆಗೆ ಬ್ರೇಕ್:

ಟೆಲಿಕಾಂ ಕಂಪನಿಗಳ ವಂಚನೆಗೆ ಬ್ರೇಕ್:

ಇದಲ್ಲದೇ ಟಿಲಿಕಾಂ ಕಂಪನಿಗಳು ಹೇಳುವುದೇ ಒಂದು ಆಫರ್ ಆದರೆ ನೀಡುವುದು ಮತ್ತೊಂದು. ಇದಕ್ಕೆಲ್ಲಾ ಬ್ರೇಕ್ ಹಾಕಿ, ತಾನು ನೀಡುವ ಆಫರ್ ಅನ್ನು ಮಾತ್ರವೇ ಜನರಿಗೆ ತಿಳಿಸಬೇಕು ಮತ್ತು ಯಾವುದೇ ರೀತಿಯಲ್ಲಿಯೂ ವಂಚನೆ ಮಾಡಬಾರದು ಎಂದು ಷರತ್ತು ವಿಧಿಸಿದ್ದು, ಟ್ಯಾರಿಫ್‌ ಪ್ಲಾನ್‌ಗಳನ್ನು ಪಾರದರ್ಶಕವಾಗಿ ವೆಬ್‌ಸೈಟಿನಲ್ಲಿ ಪ್ರದರ್ಶಿಸಲಿದೆ.

ಗ್ರಾಹಕರಿಗೆ ಆಯ್ಕೆ ಸುಲಭ:

ಗ್ರಾಹಕರಿಗೆ ಆಯ್ಕೆ ಸುಲಭ:

ಟ್ರಾಯ್ ವೆಬ್‌ಸೈಟಿನಲ್ಲಿ ಎಲ್ಲಾ ಕಂಪನಿಗಳ ಪ್ಲಾನ್‌ಗಳು ಒಂದೇ ಸೂರಿನಲ್ಲಿ ದೊರೆಯುವುದರಿಂದ ನೀವು ಆಫರ್ ಗಳ ನಡುವೆ ತುಲನೆ ಮಾಡಿ, ನಿಮಗೆ ಸೂಕ್ತವಾದ ಆಫರ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ಗ್ರಾಹಕರಿಗೆ ಹೆಚ್ಚಿನ ಸ್ವಾತಂತ್ರ ದೊರೆಯಲಿದೆ.

ಕಡಿಮೆಯಾಗಲಿದೆ ದರಗಳು:

ಕಡಿಮೆಯಾಗಲಿದೆ ದರಗಳು:

ಒಂದೇ ವೇದಿಕೆಯಲ್ಲಿ ಬೆಲೆಗಳನ್ನು ಪ್ರದರ್ಶಿಸುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಕಂಪನಿಗಳು ತಮ್ಮ ಟ್ಯಾರಿಫ್ ದರಗಳನ್ನು ಮತ್ತಷ್ಟು ಕಡಿಮೆ ಮಾಡಲಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಲಾಭವಾಗಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Telecom subscribers will be able to soon check tariff plans of different operators on the regulator's website, improving transparency over rate. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot