Home
ಸುದ್ದಿಜಾಲ

ದೀಪಾವಳಿ ಹಬ್ಬದ ಸೇಲ್‌ನಲ್ಲಿ ಅಗ್ಗದ ಸ್ಮಾರ್ಟ್‌ಫೋನ್‌ಗಳು ಇನ್ನಷ್ಟು ಅಗ್ಗ!

ಜನಪ್ರಿಯ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಗಳು ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ ತಾಣಗಳು ಪ್ರತಿ ತಿಂಗಳು ಏನಾದರೊಂದು ಆಫರ್‌ ಇರುತ್ತವೆ. ಅದರಲ್ಲಿಯೂ ಹಬ್ಬದ ಸಂದರ್ಭಗಳಲ್ಲಿ ಡಿಸ್ಕೌಂಟ್‌ ಪ್ರಮಾಣ ತುಸು ಅಧಿಕ ಎನ್ನಬಹುದು. ಇದೀಗ ದೀಪಾವಳಿ ಪ್ರಯುಕ್ತ ಗ್ರಾಹಕರು ಈ ಎರಡು ಇ-ಕಾಮರ್ಸ್‌ ದೈತ್ಯ ತಾಣಗಳ ಮೂಲಕ ಆಫ್‌ರನಲ್ಲಿ ಅಗ್ಗದ ಸ್ಮಾರ್ಟ್‌ಫೋನ್‌ ಖರೀದಿಸಬಹುದಾಗಿದೆ.

ಅಮೆಜಾನ್

ಹೌದು, ಪ್ರಸ್ತುತ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ ಗಳು ದೀಪಾವಳಿ ಹಬ್ಬದ ವಿಶೇಷ ಸೇಲ್ ಶುರು ಮಾಡಿವೆ. ಈ ಸೇಲ್‌ನಲ್ಲಿ ಅಗ್ಗದ ಸ್ಮಾರ್ಟ್‌ಫೋನ್‌ಗಳಿಂದ ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳಿಗೂ ರಿಯಾಯಿತಿ ಘೋಷಿಸಲಾಗಿದೆ. ಹೀಗಾಗಿ ಬಜೆಟ್‌ ಬೆಲೆಯಲ್ಲಿ ಇತ್ತೀಚಿಗಿನ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಬೇಕೆ ಎನ್ನುವ ಗ್ರಾಹಕರಿಗೆ ಈಗ ಸಕಾಲ. ಹಾಗಾದರೇ ಈ ಸೇಲ್‌ನಲ್ಲಿ 10000ರೂ. ಒಳಗೆ ಲಭ್ಯ ವಿರುವ ಟಾಪ್‌ ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಮೊಟೊ G9

ಮೊಟೊ G9

ಮೊಟೊ G 9 ಫೋನ್ 6.5 ಇಂಚಿನ ಹೆಚ್‌ಡಿ + IPS TFT LCD ಮ್ಯಾಕ್ಸ್ ವಿಷನ್ ಡಿಸ್ಪ್ಲೇ ಹೊಂದಿದ್ದು, 1600 × 720 ಪಿಕ್ಸೆಲ್ ರೆಸಲ್ಯೂಶನ್ ಮತ್ತು ವಾಟರ್‌ಡ್ರಾಪ್ ಸ್ಟೈಲ್ ನಾಚ್ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 662 ಪ್ರೊಸೆಸರ್ ಅನ್ನು ಹೊಂದಿದೆ. ಹಾಗೆಯೇ ಟ್ರಿಪಲ್ ಕ್ಯಾಮೆರಾ ರಚನೆ ಇದೆ. ಇದು ಫಾರೆಸ್ಟ್ ಗ್ರೀನ್ ಮತ್ತು ನೀಲಿ ಬಣ್ಣದ ಆಯ್ಕೆಗಳು ಇವೆ. ಸದ್ಯ ಫ್ಲಿಪ್‌ಕಾಟ್‌ನಲ್ಲಿ ಇದರ ಬೆಲೆ 9,999ರೂ. ಆಗಿದೆ.

ರಿಯಲ್‌ ಮಿ C15

ರಿಯಲ್‌ ಮಿ C15

ರಿಯಲ್‌ ಮಿ C15 ಫೋನ್ 1600 × 720 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.52-ಇಂಚಿನ ಹೆಚ್‌ಡಿ + ಪರದೆಯನ್ನು ಹೊಂದಿದೆ. ಕ್ವಾಡ್‌ ಕ್ಯಾಮರಾ ರಚನೆ ಇದ್ದು, ಮುಖ್ಯ ಕ್ಯಾಮೆರಾವು 13ಎಂಪಿ ಆಗಿದೆ. ಹಾಗೆಯೇ 6,000 mAh ಬ್ಯಾಟರಿ ಪ್ರಮುಖ ಆಕರ್ಷಣೆ ಅನಿಸಿದೆ. ಇನ್ನು ಈ ಹಬ್ಬದ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಬೇಸ್‌ ವೇರಿಯಂಟ್‌ 8,999ರೂ. ಗಳಿಗೆ ಲಭ್ಯ.

ಒಪ್ಪೋ A5s

ಒಪ್ಪೋ A5s

ಒಪ್ಪೋ A5s ಫೋನ್ 1520×720 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ದೊಂದಿಗೆ 6.2 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇನ್ನು ಈ ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಇನ್ನು ಈ ಹಬ್ಬದ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಬೇಸ್‌ ವೇರಿಯಂಟ್‌ 8,999ರೂ. ಗಳಿಗೆ ಲಭ್ಯ.

ಸ್ಯಾಮ್‌ಸಂಗ್ M01s

ಸ್ಯಾಮ್‌ಸಂಗ್ M01s

ಸ್ಯಾಮ್‌ಸಂಗ್ M01s ಫೋನ್ 720 × 1520 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.2-ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಈ ಫೋನ್ 4,000 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಸದ್ಯ ಅಮೆಜಾನ್ ತಾಣದಲ್ಲಿ ಈ ಫೋನ್ 9,499ರೂ. ಗಳಿಗೆ ಲಭ್ಯವಿದೆ.

ರೆಡ್ಮಿ 9 ಪ್ರೈಮ್‌

ರೆಡ್ಮಿ 9 ಪ್ರೈಮ್‌

ರೆಡ್ಮಿ 9 ಪ್ರೈಮ್‌ ಸ್ಮಾರ್ಟ್‌ಫೋನ್ 6.53 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 5020mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಹಾಗೆಯೇ 4GB RAM + 64GB ಮತ್ತು 4GB RAM + 128GB ಸ್ಟೋರೇಜ್‌ನ ಎರಡು ಆಯ್ಕೆಗಳನ್ನು ಹೊಂದಿದೆ. ಸದ್ಯ ಹಬ್ಬದ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಬೇಸ್‌ ವೇರಿಯಂಟ್‌ 9,999ರೂ. ಗಳಿಗೆ ಲಭ್ಯ.

Best Mobiles in India

English summary
If you are looking to buy a smartphone that costs below Rs 10,000, here are a few phones that have received a price cut during the Diwali sale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+