Diwali Offers: ದೀಪಾವಳಿ ವಿಶೇಷ ಸೇಲ್: ಆಪಲ್, ಸ್ಯಾಮ್‌ಸಂಗ್, ವಿವೋ, ಒಪ್ಪೋ ಫೋನ್‌ಗಳಿಗೆ ಏನೆಲ್ಲಾ ಡಿಸ್ಕೌಂಟ್!
ದೀಪಾವಳಿ (Diwali) ಭಾರತೀಯರಿಗೆ ದೊಡ್ಡ ಸಂಭ್ರಮ. ಈ ವೇಳೆ ಹೊಸ ವಸ್ತುಗಳನ್ನು ಖರೀದಿ ಮಾಡುವುದು ವಾಡಿಕೆ. ಅದರಲ್ಲೂ ಸ್ಮಾರ್ಟ್‌ಫೋನ್, ಸ್ಮಾರ್ಟ್‌ಟಿವಿ (Smartphone, SmartTV) ಸೇರಿದಂತೆ ಅನೇಕ ಸ್ಮಾರ್ಟ್‌ಡಿವೈಸ್‌ಗಳನ್ನು ಮನೆಗೆ ತರುತ್ತಾರೆ. ಈ ಕಾರಣಕ್ಕೆ ಈ ಪ್ರಮುಖ ಸ್ಮಾರ್ಟ್ ಡಿವೈಸ್ ತಯಾರಿಕಾ ಸಂಸ್ಥೆಗಳು ಸಹ ದೀಪಾವಳಿ ಸಂಭ್ರಮಕ್ಕೆ ಜೊತೆಯಾಗಿವೆ.
ಹೌದು, ದೀಪಾವಳಿ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ. ಈ ವಿಶೇಷ ಸಂದರ್ಭವನ್ನು ಇನ್ನಷ್ಟು ಹೆಚ್ಚಿಗೆ ಮಾಡಲು ಜನರು ಹೊಸ ಹೊಸ ಫೋನ್ ಖರೀದಿ ಮಾಡಲು ಸಜ್ಜಾಗಿದ್ದಾರೆ. ಈ ನಡುವೆ ಆಪಲ್, ಸ್ಯಾಮ್‌ಸಂಗ್, ರಿಯಲ್‌ಮಿ, ಒನ್‌ಪ್ಲಸ್, ಶಿಯೋಮಿ (Apple, Samsung, Realme, OnePlus, Xiaomi) ಸೇರಿದಂತೆ ಅನೇಕ ಬ್ರ್ಯಾಂಡ್‌ನ ಫೋನ್‌ಗಳು ಆಫರ್ ದರದಲ್ಲಿ ಲಭ್ಯ ಆಗಲಿವೆ. ಈಗಾಗಲೇ ದೀಪಾವಳಿ ಆಫರ್‌ಗಳು ಲೈವ್ ಆಗಿದ್ದು, ಬನ್ನಿ ಯಾವೆಲ್ಲಾ ಫೋನ್‌ಗಳಿಗೆ ಏನೆಲ್ಲಾ ಡಿಸ್ಕೌಂಟ್ ಇದೆ ನೋಡೋಣ.

ಆಪಲ್ ಐಫೋನ್‌ಗಳಲ್ಲಿ 6000 ರೂಪಾಯಿಗಳವರೆಗೆ ರಿಯಾಯಿತಿ: ಈ ದೀಪಾವಳಿ ವಿಶೇಷ ಸೇಲ್‌ನಲ್ಲಿ ಆಪಲ್ ಐಫೋನ್‌ಗಳ ಮೇಲೆ 6,000 ರೂಪಾಯಿಗಳವರೆಗೆ ರಿಯಾಯಿತಿ ಸಿಗಲಿದೆ. ಐಫೋನ್ 15 ಸರಣಿಯ ಖರೀದಿಯ ಮೇಲೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ದಾರರಿಗೆ (HDFC Bank Card) ತ್ವರಿತ ಕ್ಯಾಶ್ ಬ್ಯಾಕ್ ಅನ್ನು ಸಹ ನೀಡುತ್ತಿದೆ.
ಈ ರಿಯಾಯಿತಿಗಳು ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಖರೀದಿಯ ಮೇಲೆ 6,000 ರೂ., ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಮೇಲೆ 5,000 ರೂ., ರಿಯಾಯಿತಿ ಸಿಗಲಿದೆ. ಇದರೊಂದಿಗೆ ಐಫೋನ್ 13 ಖರೀದಿಯ ಮೇಲೆ 3,000 ರೂ., ಮತ್ತು ಐಫೋನ್ ಎಸ್ಇ ನಲ್ಲಿ 2,000 ರೂ. ಆಪಲ್ ಸಿಗಲಿದೆ. ಇದರೊಂದಿಗೆ ಬ್ಯಾಂಕ್ ಆಫರ್ ಸಹ ಲಭ್ಯ ಆಗಲಿವೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್‌ಗಳಿಗೆ 25 % ವರೆಗೆ ರಿಯಾಯಿತಿ: ಸ್ಯಾಮ್‌ಸಂಗ್ ವಿಚಾರಕ್ಕೆ ಬಂದರೆ ಈ ಫೋನ್‌ಗಳಲ್ಲಿ 25% ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಸ್ಯಾಮ್‌ಸಂಗ್ ಇತ್ತೀಚೆಗೆ ಬಿಡುಗಡೆಯಾದ ಗ್ಯಾಲಕ್ಸಿ S23 ಎಫ್‌ಇ ಅನ್ನು 25% ರಿಯಾಯಿತಿಯೊಂದಿಗೆ 49,999 ರೂಗಳಲ್ಲಿ ಖರೀದಿ ಮಾಡಬಹುದಾಗಿದೆ. ಇದರ ಜೊತೆಗೆ ಗ್ಯಾಲಕ್ಸಿ S23 ಅನ್ನು 61,999 ರೂ.ಗಳಿಗೆ ಖರೀದಿ ಮಾಡಬಹುದಾಗಿದ್ದು, ಗ್ಯಾಲಕ್ಸಿ F23, ಗ್ಯಾಲಕ್ಸಿ M13 ಮತ್ತು ಗ್ಯಾಲಕ್ಸಿ M04 ಅನ್ನೂ ಸಹ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ.

ಒನ್‌ಪ್ಲಸ್ ಫೋನ್‌ಗಳಿಗೆ ಏನಿದೆ ಆಫರ್: ಒನ್‌ಪ್ಲಸ್ ನ ನಾರ್ಡ್, ಫ್ಲ್ಯಾಗ್‌ಶಿಪ್ ಸರಣಿಯ ಮೇಲೆ ದೀಪಾವಳಿ ರಿಯಾಯಿತಿಗಳು ಲಭ್ಯ ಇವೆ. ಒನ್‌ಪ್ಲಸ್ ನಾರ್ಡ್ 3 5G ಗೆ 3,000 ರೂಪಾಯಿಗಳ ತ್ವರಿತ ಬ್ಯಾಂಕ್ ರಿಯಾಯಿತಿ ಸಿಗಲಿದ್ದು, ಒನ್‌ಪ್ಲಸ್ ನಾರ್ಡ್ ಸಿಇ 3 5G ಮೇಲೆ 2,000 ರೂಪಾಯಿಗಳ ತ್ವರಿತ ಬ್ಯಾಂಕ್ ರಿಯಾಯಿತಿ, ಒನ್‌ಪ್ಲಸ್ 11R 5G ಮತ್ತು ಒನ್‌ಪ್ಲಸ್ 11R 5G ಸೋಲಾರ್ ರೆಡ್ ವಿಶೇಷ ಆವೃತ್ತಿಗೆ 2,000 ರೂ.ಗಳ ರಿಯಾಯಿತಿ ಸಿಗಲಿದೆ.
ಒಪ್ಪೋ ಫೋನ್ ಖರೀದಿ ಮೇಲೆ ರಿಯಾಯಿತಿ, ಕ್ಯಾಶ್ ಬ್ಯಾಕ್: ಒಪ್ಪೋ ಫೈಂಡ್ N3 ಫ್ಲಿಪ್ ಅನ್ನು ನೀವೀಗ ಆಫರ್ ಬೆಲೆ 94,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ಗ್ರಾಹಕರು ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ 12,000 ರೂ. ವರೆಗೆ ಕ್ಯಾಶ್ ಬ್ಯಾಕ್ ಅನ್ನು ಪಡೆದುಕೊಳ್ಳಬಹುದು. ಇದರೊಂದಿಗೆ 8,000 ರೂಪಾಯಿಗಳವರೆಗೆ ವಿನಿಮಯ ಬೋನಸ್ ಸಹ ಸಿಗಲಿದೆ. ಹಾಗೆಯೇ ಒಪ್ಪೋ ರೆನೋ 10 ಪ್ರೊ+ 5G ಅನ್ನು 54,999 ರೂಗಳಲ್ಲಿ, ಒಪ್ಪೋ ರೆನೋ 10 ಪ್ರೊ ಅನ್ನು 39,999 ರೂ.ಗಳಿಗೆ, ಒಪ್ಪೋ ರೆನೋ 10 ಅನ್ನು 32,999 ರೂ.ಗಳಿಗೆ ಮತ್ತು ಒಪ್ಪೋ A79 5G ಅನ್ನು 19,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

ಶಿಯೋಮಿ ಮತ್ತು ರೆಡ್ಮಿ ಫೋನ್‌ಗಳಿಗೆ 50 % ವರೆಗೆ ರಿಯಾಯಿತಿ: ಇನ್ನು ಶಿಯೋಮಿ ಮತ್ತು ರೆಡ್ಮಿ ಸ್ಮಾರ್ಟ್‌ಫೋನ್ ಖರೀದಿ ಮಾಡಲು ಇಚ್ಚಿಸಿದ್ರೆ ಈ ಫೋನ್‌ಗಳ ಮೇಲೆ 50% ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ರೆಡ್ಮಿ ನೋಟ್ 12 ಪ್ರೊ 5G ಅನ್ನು 17,999ರೂ.ಗಳಲ್ಲಿ ಖರೀದಿಸಬಹುದು ಮತ್ತು ಗ್ರಾಹಕರು 3,000 ರೂ.ಗಳ ವಿನಿಮಯ ಬೋನಸ್ ಪಡೆಯಬಹುದು. ಜೊತೆಗೆ ರೆಡ್ಮಿ A2 ಫೋನ್ 5,299 ರೂಗಳಲ್ಲಿ ಲಭ್ಯವಿದ್ದು, ಶಿಯೋಮಿ 13 ಪ್ರೊ ಅನ್ನು 69,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

ರಿಯಲ್‌ಮಿ ಫೋನ್‌ಗೆ ಏನಿದೆ ಆಫರ್?: ರಿಯಲ್‌ಮಿ 'ಡೇರ್ ಟು ಶೈನ್' ಎಂಬ ದೀಪಾವಳಿ ಅಭಿಯಾನವನ್ನು ಆರಂಭ ಮಾಡಿದೆ. ಇದರಲ್ಲಿ ತನ್ನ ಉತ್ಪನ್ನಗಳ ಶ್ರೇಣಿಯ ಮೇಲೆ ರಿಯಾಯಿತಿಗಳನ್ನು ನೀಡುತ್ತಿದೆ. ರಿಯಲ್‌ಮಿ 11 ಪ್ರೊ 5G ಸರಣಿ ಮತ್ತು ರಿಯಲ್‌ಮಿ 11 5G ಸರಣಿಗಳೆರಡೂ 4,000 ವರೆಗೆ ರಿಯಾಯಿತಿಯೊಂದಿಗೆ ಲಭ್ಯವಿರುತ್ತವೆ. ಹಾಗೆಯೇ ರಿಯಲ್‌ಮಿ C53 ಅನ್ನು 9,999 ರೂಗಳಲ್ಲಿ ಖರೀದಿಸಬಹುದು ಮತ್ತು ರಿಯಲ್‌ಮಿ C55 ಮತ್ತು ರಿಯಲ್‌ಮಿ C51 ಕ್ರಮವಾಗಿ 8,999ರೂ., ಮತ್ತು 7,999 ರೂ.ಗಳಿಗೆ ಲಭ್ಯ ಇವೆ.

ವಿವೋ ಫೋನ್‌ಗಳಿಗೆ 8,000 ರೂಪಾಯಿಗಳವರೆ ಡಿಸ್ಕೌಂಟ್: ವಿವೋ X90 ಮತ್ತು V29 ಸರಣಿ 4 ನಲ್ಲಿ ಕೊಡುಗೆಗಳನ್ನು ನೀಡಲಾಗಿದೆ. ಅಂದರೆ ಐಸಿಐಸಿಐ, ಎಸ್‌ಬಿಐ, ಹೆಚ್‌ಎಸ್‌ಬಿಸಿ, ಯಸ್ ಬ್ಯಾಂಕ್ , ಬ್ಯಾಂಕ್ ಆಫರ್ ಬರೋಡ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಒನ್‌ಕಾರ್ಡ್ ಜೊತೆಗೆ ವಿವೋ X90 ಸರಣಿಯಲ್ಲಿ 10,000ರೂ., ಮತ್ತು V29 ಸರಣಿಯಲ್ಲಿ 4,000 ವರೆಗೆ ಕ್ಯಾಶ್‌ಬ್ಯಾಕ್ ಸಿಗಲಿದ್ದು, ಈ ಮೂಲಕ ಗ್ರಾಹಕರು 8,000 ರೂಪಾಯಿಗಳವರೆಗೆ ವಿನಿಮಯ ಬೋನಸ್ ಅನ್ನು ಪಡೆಯಬಹುದಾಗಿದೆ.


Click it and Unblock the Notifications








