Home
ಸುದ್ದಿಜಾಲ

ದೀಪಾವಳಿ ಸೇಲ್‌: ಶಿಯೋಮಿಯ ಈ ಫ್ಲ್ಯಾಗ್‌ಶಿಪ್‌ ಫೋನಿಗೆ ಸಖತ್‌ ಆಫರ್‌ ಘೋಷಣೆ!

ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಗಳಂತೆ ಮೊಬೈಲ್‌ ಸಂಸ್ಥೆಗಳು ಇತ್ತೀಚಿಗೆ ಹಬ್ಬದ ಪ್ರಯುಕ್ತ ವಿಶೇಷ ಸೇಲ್‌ ಮೇಳಗಳನ್ನು ಆಯೋಜಿಸುತ್ತಾ ಗ್ರಾಹಕರನ್ನು ಸೆಳೆಯುತ್ತಿವೆ. ಇದೀಗ ಶಿಯೋಮಿ ಸಂಸ್ಥೆಯು ದೀಪಾವಳಿ ವಿತ್ ಮಿ (Diwali with Mi) ಸೇಲ್‌ ಮೇಳವನ್ನು ಘೋಷಿಸಿದ್ದು, ಮೊಬೈಲ್‌ ಪ್ರಿಯರನ್ನು ತನ್ನತ್ತ ಸೆಳೆದಿದೆ.

ಹೌದು, ಶಿಯೋಮಿ ಸಂಸ್ಥೆಯು ದೀಪಾವಳಿ ವಿತ್ ಮಿ ಮಾರಾಟ ತಿಳಿಸಿದ್ದು, ಈ ಮಾರಾಟ ಮೇಳದಲ್ಲಿ ತನ್ನ ಕೆಲವು ಆಯ್ದ ಉತ್ಪನ್ನಗಳಿಗೆ ಭಾರೀ ಡಿಸ್ಕೌಂಟ್‌ ಲಭ್ಯ ಮಾಡಿದೆ. ಆ ಪೈಕಿ ತನ್ನ ಜನಪ್ರಿಯ ಶಿಯೋಮಿ 11T ಪ್ರೊ 5G ಫ್ಲ್ಯಾಗ್‌ಶಿಪ್‌ ಫೋನಿಗೂ ಸಖತ್‌ ರಿಯಾಯಿತಿ ಘೋಷಿಸಿದೆ. ಈ ಫೋನ್‌ 12 GB + 256 GB ವೇರಿಯಂಟ್‌ ಬೆಲೆಯು 54,999ರೂ. ಆಗಿದ್ದು, ಆಫರ್‌ನಲ್ಲಿ 31,999ರೂ. ಗಳಿಗೆ ಖರೀದಿಸಬಹುದು.

ದೀಪಾವಳಿ ಸೇಲ್‌: ಶಿಯೋಮಿಯ ಈ ಫ್ಲ್ಯಾಗ್‌ಶಿಪ್‌ ಫೋನಿಗೆ ಸಖತ್‌ ಆಫರ್‌ ಘೋಷಣೆ!

ಅಂದಹಾಗೆ ಶಿಯೋಮಿ 11T ಪ್ರೊ 5G ಮೊಬೈಲ್‌ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, 108 ಮೆಗಾಪಿಕ್ಸಲ್‌ ಸೆನ್ಸಾರ್‌ ನಲ್ಲಿದೆ. ಜೊತೆಗೆ ಇದು 8GB + 128GB, 8GB + 256GB ಮತ್ತು 12GB + 256GB ಸಾಮರ್ಥ್ಯದ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗಾದರೆ ಶಿಯೋಮಿ 11T ಪ್ರೊ 5G ಮೊಬೈಲ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ ಹೀಗಿದೆ
ಶಿಯೋಮಿ 11T ಪ್ರೊ 5G ಮೊಬೈಲ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ ಅನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇ 120Hz ಡೈನಾಮಿಕ್ ರಿಫ್ರೆಶ್ ರೇಟ್‌ ಹೊಂದಿದ್ದು, 10 ಬಿಟ್ ಟ್ರೂಲಿ ಕಲರ್‌ ಫ್ಲಾಟ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ.

ಈ ಡಿಸ್‌ಪ್ಲೇ ಡಾಲ್ಬಿ ವಿಷನ್ ಬೆಂಬಲಿಸಲಿದ್ದು, 480Hz ವರೆಗೆ ಟಚ್‌ ಸ್ಯಾಂಪ್ಲಿಂಗ್‌ ರೇಟ್‌ ಹೊಂದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಪಡೆದಿದೆ.

ಪ್ರೊಸೆಸರ್‌ ಕಾರ್ಯವೈಖರಿ ಹೀಗಿದೆ
ಶಿಯೋಮಿ 11T ಪ್ರೊ 5G ಮೊಬೈಲ್‌ ಆಕ್ಟಾ ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 888 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದೆ. ಇದು ಆಂಡ್ರಾಯ್ಡ್ 11 ನಲ್ಲಿ MIUI 12.5 ಜೊತೆಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB + 128GB, 8GB + 256GB ಮತ್ತು 12GB + 256GB ಸಾಮರ್ಥ್ಯದ ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ಜೊತೆಗೆ 3GB ವರ್ಚುವಲ್ RAM ವಿಸ್ತರಣೆಗೆ ಸಪೋರ್ಟ್‌ ಪಡೆದಿದೆ.

ಕ್ಯಾಮೆರಾ ಸೆನ್ಸಾರ್ ಮಾಹಿತಿ
ಶಿಯೋಮಿ 11T ಪ್ರೊ 5G ಮೊಬೈಲ್‌ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಲೆನ್ಸ್‌ ಹೊಂದಿದೆ. ಸೆಕೆಂಡರಿ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾ ವೈಡ್ ಎಫ್/2.2 ಲೆನ್ಸ್‌ ಹೊಂದಿದೆ. ತೃತೀಯ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಟೆಲಿಮ್ಯಾಕ್ರೋ ಲೆನ್ಸ್‌ ಅನ್ನು ಪಡೆದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ.

ಬ್ಯಾಟರಿ ಮತ್ತು ಇತರೆ ಆಯ್ಕೆಗಳು
ಏನಿವೆ ಶಿಯೋಮಿ 11T ಪ್ರೊ 5G ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು 120W ಹೈಪರ್‌ಚಾರ್ಜ್ ವೇಗದ ವೈರ್ಡ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್, GPS/ A-GPS/ NavIC, NFC, ಇನ್ಫ್ರಾರೆಡ್ (IR) ಬ್ಲಾಸ್ಟರ್, ಮತ್ತು USB ಟೈಪ್-C ಪೋರ್ಟ್ ಸೇರಿವೆ.

Best Mobiles in India

English summary
big discount on Xiaomi 11T Pro 5G Flagship Phone on Diwali with Mi sale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+