ಪ್ರಸಕ್ತ ವರ್ಷದಲ್ಲಿ ಡಿಜೊ ಸಂಸ್ಥೆಯಿಂದ 16 ಹೊಸ ಸ್ಮಾರ್ಟ್ ಉತ್ಪನ್ನಗಳು ಲಾಂಚ್!
ಹಲವು ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳು ಈಗಾಗಲೇ ಭಾರತದಲ್ಲಿ ಅನೇಕ TWS ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದರೂ, ಹೊಸ ಬ್ರಾಂಡ್‌ಗಳು ಇನ್ನೂ ಅದೇ ವಿಭಾಗಕ್ಕೆ ಮುಂದಾಗುತ್ತಿವೆ. ಅಂತೆಯೇ, ರಿಯಲ್‌ಮಿ ಪಾಲುದಾರ ಬ್ರಾಂಡ್ ಆಗಿರುವ ಡಿಜೊ ಇತ್ತೀಚೆಗೆ TWS ಮತ್ತು ವೈರ್‌ಲೆಸ್ ಇಯರ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಆದಾಗ್ಯೂ, ಕಂಪನಿಯು ಭಾರತೀಯ ಮಾರುಕಟ್ಟೆಗೆ ಬೃಹತ್ ಯೋಜನೆಗಳನ್ನು ಹೊಂದಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಏತನ್ಮಧ್ಯೆ, ಕಂಪನಿಯ ಮುಂಬರುವ ಉತ್ಪನ್ನಗಳು ಮತ್ತು ಇತರ ಫೀಚರ್ ಫೋನ್ ಪ್ಲೇಯರ್‌ಗಳೊಂದಿಗೆ ಸ್ಪರ್ಧೆಯ ಕುರಿತು ಡಿಜೋ ಸಿಇಒ ಅಭಿಲಾಷ್ ಪಾಂಡಾ ಅವರು ಗಿಜ್‌ಬಾಟ್ ನೊಂದಿಗಿನ ವಿಶೇಷವಾದ ಸಂವಾದದಲ್ಲಿ ತಿಳಿಸಿದ್ದಾರೆ.
ಡಿಜೊ ಮುಂಬರುವ ಉತ್ಪನ್ನಗಳು
ಡಿಜೋ ಮುಂಬರುವ ಉತ್ಪನ್ನಗಳು ಕಂಪನಿಯು ಮಾರುಕಟ್ಟೆಯಲ್ಲಿ ನಾಲ್ಕು ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ ಮತ್ತು ಈ ವರ್ಷದ ಅಂತ್ಯದ ವೇಳೆಗೆ ಹೆಚ್ಚಿನ ಉತ್ಪನ್ನಗಳನ್ನು ಸೇರಿಸಲು ಯೋಜಿಸಿದೆ. ಸ್ಮಾರ್ಟ್ ಹೋಮ್, ಆಕ್ಸೆಸರಿಸ್, ಸ್ಮಾರ್ಟ್ ಕೇರ್ ಮತ್ತು ಸ್ಮಾರ್ಟ್ ಎಂಟರ್ಟೈನಮೆಂಟ್ ವಿಭಾಗಗಳಲ್ಲಿ 16 ಹೊಸ ಉತ್ಪನ್ನಗಳನ್ನು ಪರಿಚಯಿಸುವ ಯೋಜನೆಗಳಿವೆ ಎಂದು ಅಭಿಲಾಷ್ ಪಾಂಡಾ ಹೇಳಿದರು.

ಮುಂದಿನ ಎರಡು ವರ್ಷಗಳಲ್ಲಿ ಕಂಪನಿಯು ಮೊದಲನೇ ಟಿಡಬ್ಲ್ಯೂಎಸ್ ಬ್ರಾಂಡ್ ಆಗಲು ಬಯಸುತ್ತದೆ ಎಂದು ಅವರು ಗಿಜ್‌ಬಾಟ್‌ಗೆ ಪ್ರತ್ಯೇಕವಾಗಿ ಮಾಹಿತಿ ನೀಡಿದರು. ಕಂಪನಿಯು ಸ್ಮಾರ್ಟ್ ಎಂಟರ್‌ಟೈನ್‌ಮೆಂಟ್ ವಿಭಾಗವನ್ನು ಕೇಂದ್ರೀಕರಿಸಲಿದೆ ಮತ್ತು 2021 ರಲ್ಲಿ ಹೆಚ್ಚಿನ ಆಡಿಯೋ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ಕುರಿತು ಬೆಳಕು ಚೆಲ್ಲುತ್ತಾ, ಅವಕಾಶವಿದೆ ಎಂದು ಅವರು ಹೇಳಿದರು. ಆದರೆ ನಮ್ಮ ಗಮನವು ಹೆಚ್ಚಿನ AIoT ಉತ್ಪನ್ನಗಳನ್ನು ತರುವುದು, ಅಲ್ಲಿಯೇ ನಾವು ಸಾಕಷ್ಟು ಬೆಳವಣಿಗೆಯನ್ನು ಕಾಣುತ್ತೇವೆ. ಪ್ರಸ್ತುತ, ಕಂಪನಿಯು ನಾಲ್ಕು ವಿಭಾಗಗಳಿಗೆ (ಸ್ಮಾರ್ಟ್ ಹೋಮ್, ಆಕ್ಸೆಸರೀಸ್, ಸ್ಮಾರ್ಟ್ ಕೇರ್ ಮತ್ತು ಸ್ಮಾರ್ಟ್ ಎಂಟರ್ಟೈನ್ಮೆಂಟ್ ಸೆಗ್ಮೆಂಟ್) ಅಂಟಿಕೊಳ್ಳಲು ಬಯಸುತ್ತದೆ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ.

ಇತರ ಫೀಚರ್ ಫೋನ್ ಪ್ಲೇಯರ್‌ಗಳೊಂದಿಗೆ ಸ್ಪರ್ಧೆಯಲ್ಲಿ ಡಿಜೋ ವೀಕ್ಷಣೆ
ಲಾವಾ ಮತ್ತು ಜಿಯೋಫೋನ್ ಭಾರತದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಹೊರತಾಗಿಯೂ, ಡಿಜೋ ಎರಡು ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅವು ಕ್ರಮವಾಗಿ ಡಿಜೊ ಸ್ಟಾರ್ 300 ಮತ್ತು ಡಿಜೊ ಸ್ಟಾರ್ 500 ಫೀಚರ್ ಫೋನ್‌ಗಳಾಗಿವೆ. ಇನ್ನು ಈ ಫೋನ್‌ಗಳ ಬೆಲೆಗಳು ಕ್ರಮವಾಗಿ 1,299ರೂ ಮತ್ತು 1,799ರೂ.ಗಳಾಗಿವೆ.
ಪ್ರಸ್ತುತ, ನಾವು ಸ್ಪರ್ಧೆಯತ್ತ ಗಮನ ಹರಿಸುತ್ತಿಲ್ಲ ಏಕೆಂದರೆ ನಾವು ಮೊದಲು ಗ್ರಾಹಕರ ಅಗತ್ಯವನ್ನು ಅರ್ಥಮಾಡಿಕೊಳ್ಳಲು ಬಯಸುತ್ತೇವೆ ಎಂದು ಕಂಪನಿಯ ಉನ್ನತ ವ್ಯಕ್ತಿ ಪ್ರಮುಖ ಫೀಚರ್ ಫೋನ್ ಬ್ರಾಂಡ್‌ಗಳೊಂದಿಗೆ ಸ್ಪರ್ಧೆಯ ಕುರಿತು ಕೇಳಿದಾಗ ಉತ್ತರಿಸಿದರು.
ಪ್ರಸ್ತುತ ಗ್ರಾಹಕರು ಒಂದೇ ಬೆಲೆ ವಿಭಾಗದಲ್ಲಿ ವಿಭಿನ್ನ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ಆದ್ದರಿಂದ ನಾವು ಅವರಿಗೆ ವಿಭಿನ್ನ ತಂತ್ರಜ್ಞಾನಗಳನ್ನು ಒದಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು. ಇದಲ್ಲದೆ, ಕಂಪನಿಯು ಭಾರತದಲ್ಲಿ ತನ್ನ ಫೀಚರ್ ಫೋನ್‌ಗಳನ್ನು ಜೋಡಿಸುತ್ತಿದೆ ಮತ್ತು ಡಿಜೊ ಬೆಳೆದಂತೆ ಅದು ಹೆಚ್ಚು ಸ್ಥಳೀಕರಣ ಅವಕಾಶಗಳನ್ನು ಹುಡುಕಲು ಆರಂಭಿಸುತ್ತದೆ ಎಂದು ಪಾಂಡಾ ಮಾಹಿತಿ ನೀಡಿದರು.


Click it and Unblock the Notifications