ಇಂದು Dizo Watch R Talk Go ಫಸ್ಟ್ ಸೇಲ್; ಇದರ ಲುಕ್‌ಗೆ ನೀವು ಫಿದಾ ಆಗ್ತೀರಾ?
ಡಿಜೊ ಕಂಪೆನಿ ಇತ್ತೀಚಿಗಷ್ಟೆ ಭಾರತದಲ್ಲಿ ಬಿಡುಗಡೆ ಮಾಡಿರುವ ನೂತನ ಆರ್ ಟಾಕ್ ಗೋ ಸ್ಮಾರ್ಟ್‌ವಾಚ್ (Dizo Watch R Talk Go) ಸ್ಟೈಲಿಶ್ ಲುಕ್ ಹಾಗೂ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಇಂದು (ನವೆಂಬರ್ 30) ಈ ಸ್ಮಾರ್ಟ್‌ವಾಚ್‌ನ ಮೊದಲ ಸೇಲ್ ಪ್ರಾರಂಭವಾಗಲಿದೆ. ಇನ್ನು ಈ ಸ್ಮಾರ್ಟ್ ವಾಚ್ ಬ್ಲೂಟೂತ್ ಕಾಲಿಂಗ್, ಹೆಲ್ತ್ ಟ್ರ್ಯಾಕಿಂಗ್‌ಗಾಗಿ ಡಯಲ್ ಸೆನ್ಸಾರ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಹೌದು, ಡಿಜೊ ಕಂಪೆನಿ ಹೊಸ ಡಿಜೊ ವಾಚ್ ಆರ್ ಟಾಕ್ ಗೋ ಸ್ಮಾರ್ಟ್‌ವಾಚ್ (Dizo Watch R Talk Go) ಫ್ಲಿಪ್‌ಕಾರ್ಟ್‌ನಲ್ಲಿ ಇಂದು ಸೇಲ್ ಶುರು ಮಾಡಲಿದೆ. ಈ ಸ್ಮಾರ್ಟ್‌ವಾಚ್ 3,499ರೂ. ಗಳ ಪ್ರೈಸ್ ಟ್ಯಾಗ್ ಅನ್ನು ಹೊಂದಿದ್ದು, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ, ಶೇ.5% ಕ್ಯಾಶ್‌ಬ್ಯಾಕ್ ದೊರೆಯಲಿದೆ. ಹಾಗಾದರೆ ಡಿಜೊ ವಾಚ್ ಆರ್ ಟಾಕ್ ಗೋ ಡಿವೈಸ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಜೊ ವಾಚ್ ಆರ್ ಟಾಕ್ ಗೋ ಸ್ಮಾರ್ಟ್‌ವಾಚ್ 1.39 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 360 × 360 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 550 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದ್ದು, ಇದು 7H ಟೆಂಪರ್ಡ್ ಗ್ಲಾಸ್ ಲೇಯರ್ ಅನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್ 150 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಬೆಂಬಲಿಸುತ್ತದೆ.

ಈ ಸ್ಮಾರ್ಟ್‌ವಾಚ್ ಅಲ್ಯೂಮಿನಿಯಂ ರಿಮ್‌ನೊಂದಿಗೆ ರೌಂಡ್ ಡಯಲ್ ಅನ್ನು ಹೊಂದಿದ್ದು, 'ಡಿಜೊ' ಮತ್ತು 'ಬಿ ಡಿಫರೆಂಟ್' ಕೆತ್ತನೆಗಳನ್ನು ಹೊಂದಿದೆ. ಇದಲ್ಲದೆ ಈ ವಾಚ್‌ನಲ್ಲಿ ಎರಡು ಔತಿಕ ಬಟನ್‌ಗಳನ್ನು ನೀಡಲಾಗಿದೆ. ಇದರಲ್ಲಿ ಒಂದು ಬಟನ್ ಹೋಮ್ ಬಟನ್ ಆಗಿದ್ದರೆ, ಮತ್ತೊಂದು ಬಟನ್ ಸ್ಪೋರ್ಟ್ಸ್ ಮೋಡ್‌ಗಳನ್ನು ಪ್ರವೇಶಿಸಲು ಅವಕಾಶ ನೀಡಲಿದೆ. ಇದು ಸ್ಥಿರ ಸಂಪರ್ಕ ಮತ್ತು ಕಡಿಮೆ ವಿದ್ಯುತ್ ಬಳಕೆಗಾಗಿ ಸಿಂಗಲ್-ಚಿಪ್ ಬ್ಲೂಟೂತ್ ಕಾಲ್‌ಗೆ ಬೆಂಬಲವನ್ನು ಕೂಡ ನೀಡಲಿದೆ.

ಇನ್ನು ಡಿಜೊ ವಾಚ್ ಆರ್ ಟಾಕ್ ಗೋ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲ್ ಸಮಯದಲ್ಲಿ ನಾಯ್ಸ್ ಕ್ಯಾನ್ಸಲೇಶನ್ ಅನ್ನು ಸಹ ಬೆಂಬಲಿಸಲಿದೆ. ಇದಲ್ಲದೆ ಈ ವಾಚ್ ಹೆಲ್ತ್‌ಗೆ ಸಂಬಂಧಿಸಿದಂತೆ ಅನೇಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಡ್ಯುಯಲ್ ಹೆಲ್ತ್ ಸೆನ್ಸರ್, 24×7 ಹೃದಯ ಬಡಿತ ಟ್ರ್ಯಾಕಿಂಗ್, SpO2 ಸೆನ್ಸಾರ್ ಮತ್ತು ಸ್ಲಿಪ್ ಟ್ರ್ಯಾಕಿಂಗ್ ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ ಜಿಮ್ನಾಸ್ಟಿಕ್ಸ್, ಯೋಗ, ಹೈಕಿಂಗ್, ನೃತ್ಯ, ಸೈಕ್ಲಿಂಗ್, ವಾಕಿಂಗ್ ಸೇರಿದಂತೆ 110 ಸ್ಪೋರ್ಟ್ಸ್ ಮೋಡ್‌ಗಳಿಗೆ ಬೆಂಬಲವನ್ನು ನೀಡಲಿದೆ.

ವಾಚ್ ಆರ್ ಟಾಕ್ ಗೋ ಮೂಲಕ ಬಳಕೆದಾರರು ತಮ್ಮ ದೈಹಿಕ ಚಟುವಟಿಕೆಗಳನ್ನು ಉತ್ತಮವಾಗಿ ಟ್ರ್ಯಾಕ್ ಮಾಡಬಹುದು. ಇದು ಅವಧಿ ಟ್ರ್ಯಾಕಿಂಗ್ ಅನ್ನು ಕೂಡ ಹೊಂದಿದ್ದು, ನೀರು ಕುಡಿಯುವುದು ಮತ್ತು ಕುಳಿತುಕೊಳ್ಳುವ ರಿಮೈಂಡರ್‌ಗಳನ್ನು ಕೂಡ ನೀಡಲಿದೆ. ಜೊತೆಗೆ ಇದು ಉಸಿರಾಟದ ವ್ಯಾಯಾಮವನ್ನು ಸಹ ಬೆಂಬಲಿಸುತ್ತದೆ. ಅಲ್ಲದೆ ರೂಟ್ ಟ್ರ್ಯಾಕಿಂಗ್, ಅಲಾರಾಂ, ಮ್ಯೂಸಿಕ್/ಕ್ಯಾಮೆರಾ ಕಂಟ್ರೋಲ್, ಫೈಂಡ್ ಫೋನ್ , ವೆದರ್ ಅಪ್ಡೇಟ್ ಮತ್ತು GPS ನಂತಹ ಫೀಚರ್ಸ್ ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಡಿಜೊ ವಾಚ್ ಆರ್ ಟಾಕ್ ಗೋ 3,999ರೂ. ಬೆಲೆಯನ್ನು ಹೊಂದಿದೆ. ಈ ವಾಚ್ ಫ್ಲಿಪ್‌ಕಾರ್ಟ್ ಮೂಲಕ ನವೆಂಬರ್ 30 ರಿಂದ ಖರೀದಿಗೆ ಲಭ್ಯವಿರುತ್ತದೆ. ಇದು ಥಂಡರ್ ಬ್ಲೂ, ಕ್ಲಾಸಿಕ್ ಬ್ಲ್ಯಾಕ್ ಮತ್ತು ಸಿಲ್ವರ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.


Click it and Unblock the Notifications








