ವಾಷಿಂಗ್ ಮೆಷಿನ್ ವಿಚಾರದಲ್ಲಿ ಎಂದಿಗೂ ಈ ತಪ್ಪು ಮಾಡದಿರಿ... ಈ ಹವ್ಯಾಸವನ್ನು ಈಗಲೇ ಬದಲಿಸಿಕೊಳ್ಳಿ!
ವಾಷಿಂಗ್ ಮೆಷಿನ್ (Washing machine) ಬಳಕೆ ಇಂದು ವ್ಯಾಪಕವಾಗುತ್ತಿದೆ. ಅದರಲ್ಲೂ ಸುಧಾರಿತ ಫೀಚರ್ಸ್‌ಗಳೊಂದಿಗೆ ಕಂಪೆನಿಗಳು ಹೊಸ ಹೊಸ ವಾಷಿಂಗ್ ಮೆಷಿನ್ ಅನ್ನು ಅನಾವರಣ ಮಾಡಿಕೊಂಡು ಬರುತ್ತಿವೆ. ಅದರಲ್ಲೂ ಮೂರು ಸಾವಿರದಿಂದ ಹಿಡಿದು ಲಕ್ಷದ ವರೆಗೂ ಇದು ಲಭ್ಯ ಇದ್ದು, ಜನರು ತಮ್ಮ ಅಗತ್ಯಕ್ಕೆ ತಕ್ಕಂತೆ ಇವುಗಳನ್ನು ಖರೀದಿ ಮಾಡಿ ಬಳಕೆ ಮಾಡುತ್ತಾರೆ. ಆದರೆ, ಈ ವೇಳೆ ಈ ವಿಷಯದ ಬಗ್ಗೆ ತಿಳಿಯದಿದ್ದರೆ ಮೆಷಿನ್ ಕೆಲವೇ ದಿನಗಳಲ್ಲಿ ಹಾಳಾಗಲಿದೆ.
ಹೌದು, ನೀರು ಅಥವಾ ಸಮಯವನ್ನು ಉಳಿಸುವ ಉದ್ದೇಶದಿಂದ ವಾಷಿಂಗ್ ಮೆಷಿನ್‌ನಲ್ಲಿ ಬಹಳಷ್ಟು ಬಟ್ಟೆಗಳನ್ನು ಹಾಕುವುದು ಸಾಮಾನ್ಯ. ಆದರೆ, ಈ ರೀತಿ ಮಾಡುವುದರಿಂದ ವಾಷಿಂಗ್ ಮೆಷಿನ್ ಗೆ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತವೆ ಎಂಬ ಬಗ್ಗೆ ತಿಳಿದಿದೆಯಾ?, ಹಾಗಿದ್ರೆ, ವಾಷಿಂಗ್ ಮೆಷಿನ್ ಬೇಗನೆ ಹಾಳಾಗಬಾರದು ಎಂದರೆ ಏನು ಮಾಡಬೇಕು?, ಹೆಚ್ಚಿನ ಬಟ್ಟೆ ಒಗೆಯಲು ಯಾವ ವಾಷಿಂಗ್ ಮೆಷಿನ್ ಬೆಸ್ಟ್ ಎಂಬ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆಗಳನ್ನು ಓವರ್‌ಲೋಡ್ ಮಾಡಬೇಡಿ: ಇದು ಬಹಳಷ್ಟು ಜನರಿಗೆ ಸಾಮಾನ್ಯವಾಗಿ ತಿಳಿದ ವಿಚಾರ. ಆದರೆ ಇನ್ನೂ ಹಲವರಿಗೆ ಈ ಬಗ್ಗೆ ಅರಿವು ಇರೋದಿಲ್ಲ. ಪರಿಣಾಮ ವಾಷಿಂಗ್ ಮೆಷಿನ್ ನಲ್ಲಿ ನೀರು ತುಂಬಿ ತುಳುಕೋವರೆಗೂ ಮಾಡಿ ಅದರಲ್ಲಿ ಬಟ್ಟೆ ಹಾಕಿ ಒಗೆಯಲು ಮುಂದಾಗುತ್ತಾರೆ. ಇದಕ್ಕೆ ಪ್ರಮುಖ ಕಾರಣ ವಾರದಲ್ಲಿ ಒಂದೇ ದಿನ ಬಟ್ಟೆ ವಾಷ್ ಮಾಡುವ ಹವ್ಯಾಸ, ಜೊತೆಗೆ ಒಂದೇ ಬಾರಿಗೆ ಹೆಚ್ಚು ಬಟ್ಟೆ ಹಾಕಿದ್ರೆ ಚೆನ್ನಾಗಿ ತೊಳೆಯುತ್ತದೆ ಎಂದುಕೊಳ್ಳುವುದು.
ಅಷ್ಟೇ ಅಲ್ಲದೆ ಒಂದೇ ಬಾರಿಗೆ ಹಾಕಿದ್ರೆ ನೀರನ್ನು ಉಳಿಕೆ ಮಾಡಬಹುದು ಹಾಗೂ ಡಿಟರ್ಜೆಂಟ್ ಪೌಡರ್ ಉಳಿಸಬಹುದು, ಇದೆಲ್ಲಕ್ಕಿಂತ ಮಿಗಿಲಾಗಿ ವಿದ್ಯುತ್ ಬಿಲ್‌ನಲ್ಲಿ ಉಳಿಸಬಹುದು ಎಂದುಕೊಂಡಿದ್ದಾರೆ. ಆದರೆ, ಏನೋ ಒಂದು ಮಾಡಲು ಹೋಗಿ ಮತ್ತೊಂದು ಆಯ್ತು ಎಂಬಂತೆ ಈ ರೀತಿ ಏನಾದರೂ ನೀವು ಈವರೆಗೂ ಮಾಡುತ್ತಿದ್ದರೆ ಈಗಲೇ ನಿಮ್ಮ ಹವ್ಯಾಸ ಬದಲಿಸಿಕೊಳ್ಳಿ, ಈ ಮೂಲಕ ವಾಷಿಂಗ್ ಮೆಷಿನ್ ದೀರ್ಘಕಾಲಿಕವಾಗಿ ಬಾಳಿಕೆ ಬರುವಂತೆ ಮಾಡಿ.
ನೀವು ಈ ವೇಳೆ ಗಮನಿಸಬೇಕಾದ ಪ್ರಮುಖ ಮಾಹಿತಿ ಏನೆಂದರೆ ಪ್ರತಿ ತೊಳೆಯುವ ಯಂತ್ರವು ಕೆ.ಜಿ. ಸಾಮರ್ಥ್ಯದೊಂದಿಗೆ ಕಂಡುಬರುತ್ತದೆ. ಅಂದರೆ ನೀವು ಅಂಗಡಿಗೆ ಹೋದಾಗ ಮಾರಾಟಗಾರ ಎಷ್ಟು ಕೆಜಿ ಸಾಮರ್ಥ್ಯ ಇರುವ ಮೆಷಿನ್ ಬೇಕು ಎಂದೇ ಕೇಳುವುದು. ಈ ನಡುವೆ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 6 ಕೆ.ಜಿ ಯಿಂದ 10 ಕೆ.ಜಿ. ವರೆಗೂ ಸಾಮರ್ಥ್ಯ ಇರುವ ವಾಷಿಂಗ್ ಮೆಷಿನ್ ಕಾಣಬಹುದು. ಈ ಮೂಲಕ ನಿಮ್ಮ ಮನೆಯಲ್ಲಿ ಎಷ್ಟು ಜನರು ಇದ್ದಾರೆ ಎಂಬುದರ ನಿಮಗೆ ಅಗತ್ಯ ಇರುವ ವಾಷಿಂಗ್ ಮೆಷಿನ್ ಅನ್ನು ಕೊಂಡುಕೊಳ್ಳಬಹುದು.
ಅಂದರೆ ನಿಮ್ಮ ಮನೆಯಲ್ಲಿ ಇಬ್ಬರು ಅಥವಾ ಮೂವರು ಇದ್ದರೆ 6 ಕೆ.ಜಿ. ಸಾಮರ್ಥ್ಯದ ವಾಷಿಂಗ್ ಮೆಷಿನ್ ಸಾಕು. ಆದರೆ ಐದು ಅಥವಾ ಅದಕ್ಕಿಂತ ಹೆಚ್ಚಿನ ಜನ ಇದ್ದರೆ ನೀವು 10 ಕೆ.ಜಿ. ಸಾಮರ್ಥ್ಯದ ಮೆಷಿನ್ ಅನ್ನು ಖರೀದಿ ಮಾಡಬೇಕಾಗುತ್ತದೆ. ಅದರ ಬದಲಾಗಿ ನೀವು 6 ಕೆ.ಜಿ. ವಾಷಿಂಗ್ ಮೆಷಿನ್ ಖರೀದಿಸಿ ಇದ್ದ ಬದ್ದ ಬಟ್ಟೆಗಳನ್ನೆಲ್ಲಾ ತುಂಬಿ ವಾಷ್ ಮಾಡಲು ಮುಂದಾದರೆ ಶೀಘ್ರವೇ ಮೆಷಿನ್ ಗುಜರಿ ಸೇರುತ್ತದೆ.
ಈ ಓವರ್‌ಲೋಡ್‌ನಿಂದಾಗಿ ಹಲವು ರೀತಿಯ ಸಮಸ್ಯೆಗಳು ಎದುರಾಗಲಿದ್ದು, ಅದರಲ್ಲಿ ಪ್ರಮುಖವಾಗಿ ಮೆಷಿನ್‌ನ ಯಂತ್ರದ ಕಾರ್ಯಕ್ಷಮತೆಯು ಹದಗೆಡುತ್ತದೆ. ಹಾಗೆಯೇ ಅದರ ಜೀವಿತಾವಧಿಯೂ ಕಡಿಮೆಯಾಗಲಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಓವರ್ ಲೋಡ್‌ನಿಂದಾಗಿ ಬಟ್ಟೆಯಿಂದ ಸಾಬೂನು ಸರಿಯಾಗಿ ಹೊರ ಬರುವುದಿಲ್ಲ. ಅಂದರೆ ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸಲೂ ಸಾಧ್ಯವಾಗುದಿಲ್ಲ.

ಓವರ್‌ಲೋಡ್ ಆದಾಗ ಖಂಡಿತಾ ಅಪಾಯ ಆಗುವ ಸಾಧ್ಯತೆ ಹೆಚ್ಚೇ ಇರುತ್ತದೆ. ಅಂದರೆ ಸ್ಪಿನ್ ಚಕ್ರದಲ್ಲಿ ಸಮಸ್ಯೆಗಳು ಎದುರಾಗುತ್ತಚವೆ, ಅದರಲ್ಲೂ ಸ್ಪಿನ್ ಸೈಕಲ್ ಅನ್ನು ಬಟ್ಟೆಗಳನ್ನು ಒಣಗಿಸಲು ಬಳಕೆ ಮಾಡಲಾಗುತ್ತದೆ. ಆದರೆ, ಅದರ ತುಂಬಾ ಬಟ್ಟೆಗಳೆ ಇದ್ದಾಗ ಅದು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದು ಮೆಷಿನ್‌ಗೂ ಹಾನಿ, ಬಟ್ಟೆಯೂ ಹಾನಿ. ಪರಿಣಾಮ ವಾಷಿಂಗ್ ಮೆಷಿನ್ ಎಷ್ಟು ಕೆಜಿ ಸಾಮರ್ಥ್ಯ ಹೊಂದಿದೆಯೋ ಅಷ್ಟು ಬಟ್ಟೆ ಹಾಗೂ ನೀರನ್ನು ಮಾತ್ರ ಹಾಕಿ.


Click it and Unblock the Notifications








