Home
ಸುದ್ದಿಜಾಲ

ನಿಮ್ಮ ಮನೆಯ ಸೀಲಿಂಗ್‌ ಫ್ಯಾನ್‌ನಿಂದ ಸರಿಯಾಗಿ ಗಾಳಿ ಬರುತ್ತಿಲ್ಲವೇ? ಮೊದಲು ಈ ಕೆಲಸ ಮಾಡಿ!

ಪ್ರತಿಯೊಬ್ಬರ ಮನೆಯಲ್ಲೂ ಈಗಂತೂ ಸೀಲಿಂಗ್‌ ಫ್ಯಾನ್‌ (ceiling fan) ಬಳಕೆ ಮಾಡುತ್ತಾರೆ. ಅದಾಗ್ಯೂ ಸ್ವಲ್ಪ ಹಣವಂತರು ಎಸಿ ಹಾಗೂ ಇನ್ನಿತರೆ ಕೂಲಿಂಗ್‌ ಡಿವೈಸ್‌ಗಳನ್ನು(Cooling device) ಬಳಕೆ ಮಾಡಬಹುದು. ಆದರೆ ಬಹು ಮನೆಗಳಲ್ಲಿ ಇರುವ ಈ ಸೀಲಿಂಗ್‌ ಫ್ಯಾನ್‌ ಆರಂಭದಲ್ಲಿ ಕೆಲಸ ಮಾಡಿದಂತೆ ಕಾಲಾನಂತರದಲ್ಲಿ ಅದರ ಸಾಮರ್ಥ್ಯ ಕಡಿಮೆ ಆದಂತೆ ಕಾಣಿಸುತ್ತದೆ. ಈ ವೇಳೆ ನೀವು ಈ ಕೆಲಸ ಮಾಡಿದ್ರೆ ಖಂಡಿತಾ ಯಾವುದೇ ಸಮಸ್ಯೆ ಇರುವುದಿಲ್ಲ.

ಹೌದು, ನಮ್ಮ ದೇಶದ ಹವಾಮಾನವನ್ನು (weather) ಯಾರಿಗೂ ಸಹ ಊಹಿಸಲು ಸಾಧ್ಯವಿಲ್ಲ. ಹಲವು ರೀತಿಯ ವಾತಾವರಣದ ಅನುಭವ ಎಲ್ಲರಿಗೂ ಆಗಿರುತ್ತದೆ. ಆದರೆ, ಈ ಎಲ್ಲಾ ಸಮಯಲ್ಲಿ ಮನೆಯಲ್ಲಿ ಉತ್ತಮವಾಗಿ ನಿದ್ದೆ ಮಾಡಬೇಕು ಎಂದರೆ ಫ್ಯಾನ್‌ ಅಗತ್ಯ. ಯಾವುದೇ ಹವಾಮಾನ ಇದ್ದರೂ ಸಹ ಮನೆಗಳಲ್ಲಿ ಫ್ಯಾನ್‌ ರನ್‌ ಆಗುತ್ತಲೇ ಇರುತ್ತದೆ. ಆದರೆ ಈ ಫ್ಯಾನ್‌ನಿಂದ ಸರಿಯಾಗಿ ಗಾಳಿ ಬರುತ್ತಿಲ್ಲ ಎಂದಾದರೆ ನೀವೇ ಇದನ್ನು ಈ ರೀತಿಯಲ್ಲಿ ಸರಿಪಡಿಸಿಕೊಳ್ಳಿ.

ನಿಮ್ಮ ಮನೆಯ ಸೀಲಿಂಗ್‌ ಫ್ಯಾನ್‌ನಿಂದ ಸರಿಯಾಗಿ ಗಾಳಿ ಬರುತ್ತಿಲ್ಲವೇ?

ಗಾಳಿಯ ಕೊರತೆ : ಕೆಲವರ ಮನೆಯಲ್ಲಿ ಎಸಿ ಇದ್ದರೂ ಸಹ ಅದನ್ನು ಬಳಕೆ ಮಾಡದೆ ಫ್ಯಾನ್‌ ಮೊರೆ ಹೋಗುತ್ತಾರೆ. ಯಾಕೆಂದರೆ ಎಸಿ ವಿದ್ಯುತ್ ಬಿಲ್‌ ಅನ್ನು ಹೆಚ್ಚಿಗೆ ಮಾಡುತ್ತದೆ ಎಂಬುದು ತಿಳಿದಿದೆ. ಕೆಲವೊಮ್ಮೆ ಶಾಖದ ತೀವ್ರತೆಯು ಫ್ಯಾನ್‌ನ ವೇಗವನ್ನು ಜಾಸ್ತಿ ಮಾಡುವಂತೆ ಮಾಡುತ್ತದೆ. ಆದರೂ ಸಹ ಸರಿಯಾಗಿ ಗಾಳಿ ಬರದೆ ಅದೆಷ್ಟೋ ಜನ ನಿದ್ದೆ ಇಲ್ಲದೆ ಸಮಸ್ಯೆ ಅನುಭವಿಸುವುದು ಉಂಟು.

ಆದರೆ ನೀವು ಫ್ಯಾನ್‌ ಅನ್ನು ಕಡಿಮೆ ವೇಗದಲ್ಲಿ ಬಳಕೆ ಮಾಡಿದ್ರೆ ಖಂಡಿತಾ ಉತ್ತಮ ಅನುಭವ ಸಾಧ್ಯ. ಇದರಿಂದ ತಾಜಾ ಗಾಳಿ ಮತ್ತು ತಂಪಾದ ವಾತಾವರಣ ನಿರ್ಮಾಣ ಆಗಲಿದ್ದು, ಚೆನ್ನಾಗಿ ನಿದ್ದೆ ಮಾಡಲು ಅನುಕೂಲವಾಗಲಿದೆ. ಈ ಮೂಲಕ ಮರುದಿನವನ್ನು ಉಲ್ಲಾಸದಿಂದ ಪ್ರಾರಂಭಿಸಬಹುದಾಗಿದೆ. ಆದರೆ, ನಿರಂತರವಾಗಿ ಫ್ಯಾನ್‌ ಬಳಕೆ ಮಾಡುವುದರಿಂದಾಗಿ ಫ್ಯಾನ್‌ನಿಂದ ಬರುವ ಗಾಳಿ ಕಡಿಮೆ ಆಗುವ ಸಾಧ್ಯತೆ ಹೆಚ್ಚು.

ಫ್ಯಾನ್‌ನಿಂದ ಸರಿಯಾಗಿ ಗಾಳಿ ಬಾರದೆ ಇದ್ದರೆ ತಕ್ಷಣಕ್ಕೆ ಹೊಸ ಫ್ಯಾನ್‌ ಖರೀದಿ ಮಾಡಲು ಮುಂದಾಗಬೇಡಿ. ಇದು ನಿಮ್ಮ ವೆಚ್ಚವನ್ನು ಹೆಚ್ಚಿಗೆ ಮಾಡಬಹುದು. ಬದಲಾಗಿ, ಸ್ವಲ್ಪ ಎಚ್ಚರಿಕೆಯ ನಿರ್ವಹಣೆಯೊಂದಿಗೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸೀಲಿಂಗ್ ಫ್ಯಾನ್ ಅನ್ನು ಹೊಸ ರೀತಿಯಲ್ಲಿ ಚಾಲನೆ ಆಗುವಂತೆ ಮಾಡಬಹುದು. ಮನೆಯಲ್ಲಿ ಸೀಲಿಂಗ್ ಫ್ಯಾನ್ ಕಡಿಮೆ ಆಗುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ ಬಹುಶಃ ಸೀಲಿಂಗ್ ಫ್ಯಾನ್ ಬ್ಲೇಡ್ ಗಳ ಮೇಲಿನ ಧೂಳು ಅಷ್ಟೇ.

ಫ್ಯಾನ್ ಬ್ಲೇಡ್ ಸ್ವಚ್ಛವಾಗಿದ್ದರೆ ಫ್ಯಾನ್ ವೇಗವಾಗಿ ತಿರುಗುತ್ತದೆ ಎಂಬುದು ಎಷ್ಟು ಸತ್ಯವೋ ಫ್ಯಾನ್ ಬ್ಲೇಡ್‌ಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಅಷ್ಟೇ ಮುಖ್ಯ. ಫ್ಯಾನ್ ಬ್ಲೇಡ್‌ಗಳನ್ನು ವಾರಕ್ಕೆ ಒಮ್ಮೆಯಾದರೂ ಬಟ್ಟೆಯಿಂದ ಸ್ವಚ್ಛಗೊಳಿಸಿ. ಯಾಕೆಂದರೆ ಅತಿಯಾದ ಕಸ ಕೂತರೆ ಫ್ಯಾನ್‌ ನಿಧಾನವಾಗಿ ಬಾಗಿಕೊಳ್ಳುತ್ತದೆ. ಇದು ಉತ್ತಮ ಗಾಳಿಯನ್ನು ಪಸರಿಸಲು ಅಡ್ಡಿಪಡಿಸುತ್ತದೆ.

ಇದರೊಂದಿಗೆ ನೀವು ಫ್ಯಾನ್‌ನಿಂದ ಉತ್ತಮ ಗಾಳಿಯನ್ನು ಪಡೆಯಲು ಬಯಸಿದರೆ ಸಡಿಲವಾದ ಬ್ಲೇಡ್‌ಗಳನ್ನು ಬದಲಾಯಿಸುವುದು ಒಳ್ಳೆಯದು. ಅದರಲ್ಲೂ ಗಾಳಿ ಸರಿಯಾಗಿ ಬರಬೇಕು ಎಂದರೆ ಸೀಲಿಂಗ್ ಫ್ಯಾನ್ ಅನ್ನು ಎಲ್ಲಿ ಇರಿಸಲಾಗಿದೆ ಎಂಬುದು ಸಹ ಪ್ರಮುಖವಾದ ವಿಷಯವಾಗಿದೆ. ಈ ಕಾರಣಕ್ಕೆ ಸೀಲಿಂಗ್ ಫ್ಯಾನ್ ಅನ್ನು ಕೋಣೆಯ ಮಧ್ಯಭಾಗದಲ್ಲಿ ಇರಿಸಬೇಕು. ಜತೆಗೆ ನೆಲದಿಂದ ಕನಿಷ್ಠ 7 ಅಡಿ ಎತ್ತರದಲ್ಲಿರಬೇಕು.

ಸೀಲಿಂಗ್ ಫ್ಯಾನ್ ಮಾದರಿಗಳಲ್ಲಿ 29 ಇಂಚುಗಳಿಂದ 54 ಇಂಚುಗಳವರೆಗೆ ಲಭ್ಯವಿದೆ. ಇವುಗಳಲ್ಲಿ 52 ಇಂಚಿನ ಮಾದರಿಯ ಫ್ಯಾನ್ ಅತ್ಯುತ್ತಮ ಗಾಳಿಯನ್ನು ನೀಡುತ್ತದೆ ಎಂಬುದು ನಿಮಗೆ ತಿಳಿದಿರಲಿ. ಸೀಲಿಂಗ್ ಫ್ಯಾನ್‌ನ ತಿರುಗುವ ವೇಗವು ಉಪಕರಣದ ಗಾತ್ರ ಮತ್ತು ನಿರ್ಮಾಣದಂತಹ ಹಲವಾರು ಅಂಶಗಳ ಮೇಲೆ ಆಧಾರವಾಗಿರುತ್ತದೆ. ಸರಾಸರಿ, ಸೀಲಿಂಗ್ ಫ್ಯಾನ್ ಆರ್‌ಪಿಎಮ್‌ 50 ಮತ್ತು 100 ರ ನಡುವೆ ಇರುತ್ತದೆ.

ಇನ್ನು 48 ಇಂಚಿನ ಫ್ಯಾನ್ 315 ಮತ್ತು 365 ಆರ್‌ಪಿಎಂ ನಡುವೆ ತಿರುಗುತ್ತದೆ. ಹಾಗಾಗಿ ಫ್ಯಾನ್ ಆಯ್ಕೆ ಮಾಡುವಾಗ ಈ ವಿಷಯ ಕಡ್ಡಾಯವಾಗಿ ನಿಮ್ಮ ತಲೆಯಲ್ಲಿ ಇರಲಿ. ಹಾಗೆಯೇ ವೇಗಕ್ಕೆ ಸಂಬಂಧಿಸಿದ ಇತರ ಪ್ರಮುಖ ಅಂಶವೆಂದರೆ ಸೀಲಿಂಗ್ ಫ್ಯಾನ್‌ನಲ್ಲಿರುವ ಕೆಪಾಸಿಟರ್. ಕೆಪಾಸಿಟರ್‌ಗಳು ಫ್ಯಾನ್ ಅನ್ನು ವೇಗವಾಗಿ ತಿರುಗುವಂತೆ ಮಾಡುತ್ತದೆ ಮತ್ತು ಅದನ್ನು ಸರಾಗವಾಗಿ ಚಲಾಯಿಸಲು ಅನುವು ಮಾಡಿಕೊಡುತ್ತದೆ.

ನಿಮ್ಮ ಮನೆಯ ಸೀಲಿಂಗ್‌ ಫ್ಯಾನ್‌ನಿಂದ ಸರಿಯಾಗಿ ಗಾಳಿ ಬರುತ್ತಿಲ್ಲವೇ?

ಜೊತೆಗೆ ಫ್ಯಾನ್ ವೇಗವು ಕಡಿಮೆಯಿದ್ದರೆ ಗುಣಮಟ್ಟದ ಕೆಪಾಸಿಟರ್ ಅನ್ನು ಖರೀದಿ ಮಾಡಿ ಬದಲಾಯಿಸಿ. ಈ ಕೆಲಸವನ್ನು ಆಗಾಗ್ಗೆ ಮಾಡುವುದು ಅನಿವಾರ್ಯ. ಈ ಕಾರಣಗಳ ಹೊರತಾಗಿ, ವೈರಿಂಗ್ ಸಮಸ್ಯೆಗಳು, ಇನ್‌ಸ್ಟಾಲಿಂಗ್‌ ದೋಷಗಳು ಮತ್ತು ಫ್ಯಾನ್ ಮೋಟಾರ್ ಸಮಸ್ಯೆಗಳು ಸಹ ಫ್ಯಾನ್ ನಿಧಾನಗೊಳ್ಳಲು ಕಾರಣವಾಗಬಹುದು. ಸೀಲಿಂಗ್ ಫ್ಯಾನ್‌ನ ವಿದ್ಯುತ್ ಬಳಕೆಯು ಅದು ಕಾರ್ಯನಿರ್ವಹಿಸುವ ವೇಗಕ್ಕೆ ಅನುಗುಣವಾಗಿರುತ್ತದೆ. ಕಡಿಮೆ ವೇಗದಲ್ಲಿ ಕಡಿಮೆ ಶಕ್ತಿಯನ್ನು ಬಳಕೆ ಮಾಡುತ್ತದೆ.

Best Mobiles in India

English summary
If the fan in your house is not providing proper ventilation, get a new experience by cleaning it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+