Home
ಸುದ್ದಿಜಾಲ

ನೀವು ದಿನವೂ ಬಳಸುವ ಗೂಗಲ್‌ನ ಈ ಆಪ್‌ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ

ಗೂಗಲ್‌ ತನ್ನ ಸುಧಾರಿತ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಬಳಕೆದಾರರು ರೋಮಾಂಚನಗೊಳ್ಳುವ ವಿವಿಧ ಸೌಲಭ್ಯವನ್ನು ನೀಡುತ್ತಾ ಬರುತ್ತಿದೆ. ಇದರ ಭಾಗವಾಗಿಯೇ ಈಗಾಗಲೇ ಗೂಗಲ್‌ನ ಆಪ್‌ಗಳು ಹಾಗೂ ಇನ್ನಿತರೆ ಸೇವೆಗಳು ಸಾಕಷ್ಟು ಹೊಸ ಫೀಚರ್ಸ್‌ ಪಡೆದುಕೊಂಡಿವೆ. ಅದರಂತೆ ಗೂಗಲ್‌, ಗೂಗಲ್‌ ಎಐ ಅನ್ನು ವ್ಯವಸ್ಥಿತವಾಗಿ ತನ್ನ ಸೇವೆಗಳಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದು, ಇದರಿಂದಾಗಿ ಬಳಕೆದಾರರು ಇನ್ನಷ್ಟು ವಿಶೇಷ ರೀತಿಯಲ್ಲಿ ಗೂಗಲ್‌ ಸೇವೆ ಪಡೆದುಕೊಳ್ಳುತ್ತಿದ್ದಾರೆ.

ನೀವು ದಿನವೂ ಬಳಸುವ ಗೂಗಲ್‌ನ ಈ ಆಪ್‌ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?

ಹೌದು, ಗೂಗಲ್ ಸರ್ಚ್‌, ಮ್ಯಾಪ್‌, ಗೂಗಲ್‌ ಕ್ಲೌಡ್‌, ಗೂಗಲ್‌ ಫೋಟೋಗಳು ಸೇರಿದಂತೆ ಇನ್ನಿತರೆ ವಿಭಾಗದಲ್ಲಿ ಬಳಕೆದಾರರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ಎಐ (Google Artificial Intelligence) ಅನ್ನು ಬಳಕೆ ಮಾಡಲಾಗುತ್ತಿದೆ. ಹಾಗಿದ್ರೆ, ಈ ಗೂಗಲ್‌ ಯಾವೆಲ್ಲಾ ಆಪ್‌ಗಳಲ್ಲಿ ಕೆಲಸ ಮಾಡಲಿದೆ?, ಈ ಎಐ ನಿಂದ ಬಳಕೆದಾರರಿಗೆ ಆಗುತ್ತಿರುವ ಅನುಕೂಲಗಳು ಏನೇನು? ಎಂಬ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಏನಿದು ಕೃತಕ ಬುದ್ಧಿಮತ್ತೆ (ಎಐ)?
ಕೃತಕ ಬುದ್ಧಿಮತ್ತೆ (AI) ಎನ್ನುವುದು ಕಂಪ್ಯೂಟರ್‌ಗಳು ವಿವಿಧ ಸುಧಾರಿತ ಕಾರ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವ ತಂತ್ರಜ್ಞಾನದ ಗುಂಪಾಗಿದೆ. ಅದರಲ್ಲೂ ಮಾತನಾಡುವ ಮತ್ತು ಲಿಖಿತ ಭಾಷೆಯನ್ನು ವೀಕ್ಷಿಸುವ, ಅರ್ಥಮಾಡಿಕೊಳ್ಳುವ ಮತ್ತು ಭಾಷಾಂತರಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಜೊತೆಗೆ ಡೇಟಾವನ್ನು ವಿಶ್ಲೇಷಿಸುವುದು, ಶಿಫಾರಸುಗಳನ್ನು ಮಾಡುವುದು ಸೇರಿದಂತೆ ಇನ್ನೂ ಹೆಚ್ಚಿನ ಕೆಲಸಗಳು ಇದರಿಂದ ಸಾಧ್ಯ.

ಗೂಗಲ್‌ ಸರ್ಚ್‌
ತಕ್ಷಣಕ್ಕೆ ನಮಗೆ ಯಾವುದೇ ಮಾಹಿತಿ ಬೇಕು ಎಂದರೂ ಮೊದಲು ಬಳಕೆ ಮಾಡಲು ಮುಂದಾಗುವುದು ಗೂಗಲ್‌ ಸರ್ಚ್‌ ಇಂಜಿನ್‌ ಅನ್ನು. ಅಂದರೆ ಗೂಗಲ್‌ ಕ್ರೋಮ್‌ಗೆ. ಅದರಂತೆ ಗೂಗಲ್‌ ಎಐ ಈ ವಿಭಾಗದಲ್ಲಿ ತನ್ನದೇ ಆದ ಸೇವೆ ನೀಡುತ್ತಿದ್ದು, ಬಳಕೆದಾರರಿಗೆ ಹೊಸ ಇನ್‌ಪುಟ್‌ಗಳೊಂದಿಗೆ ಹೊಸ ಭಾಷೆಗಳಲ್ಲಿ ಹುಡುಕಲು ಅನುಕೂಲ ಮಾಡಿಕೊಡುತ್ತದೆ. ಅದರಲ್ಲೂ ಮಾಹಿತಿಯನ್ನು ಕ್ಯಾಮೆರಾ ಮೂಲಕ ಹುಡುಕುವುದು ಅಥವಾ ಟ್ಯೂನ್ ಅನ್ನು ಹಮ್ಮಿಂಗ್ ಮಾಡುವುದು ಸೇರಿದಂತೆ ಹಲವು ರೀತಿಯಲ್ಲಿ ಸರ್ಚ್‌ ಮಾಡಲು ಸಹಕಾರಿ.

ನೀವು ದಿನವೂ ಬಳಸುವ ಗೂಗಲ್‌ನ ಈ ಆಪ್‌ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?

ಗೂಗಲ್‌ ಮ್ಯಾಪ್
ಗೂಗಲ್‌ ಮ್ಯಾಪ್‌ ಅನ್ನು ದಿನನಿತ್ಯವೂ ಹಲವು ಮಂದಿ ಬಳಕೆ ಮಾಡುತ್ತಾರೆ. ಈ ಮ್ಯಾಪ್‌ ವಿಭಾಗದಲ್ಲೂ ಸಹ ಸಾಕಷ್ಟು ಸುಧಾರಿತ ಫೀಚರ್ಸ್‌ ಪರಿಚಯಿಸಿರುವ ಗೂಗಲ್‌ ಇದರಲ್ಲೂ ಸಹ ಎಐ ಅನ್ನು ಬಳಕೆ ಮಾಡಿಕೊಂಡು ಇನ್ನಷ್ಟು ಸೌಲಭ್ಯ ನೀಡುತ್ತಿದೆ. ಹಾಗೆಯೇ ಇದರಲ್ಲಿ ಪ್ರಮುಖವಾಗಿ ಟ್ರಾಫಿಕ್ ಸ್ಟೇಟಸ್‌ ಮತ್ತು ವಿಳಂಬಗಳ ಬಗ್ಗೆ ನವೀಕೃತ ಮಾಹಿತಿಯನ್ನು ಒದಗಿಸಲು ಇದು ಸಹಾಯ ಮಾಡಲಿದೆ. ಜೊತೆಗೆ ಆಟೋಮ್ಯಾಟಿಕ್‌ ಆಗಿ ಸಮಯ ಮತ್ತು ವೇಗ ಮಿತಿಗಳಂತಹ ವಿಷಯಗಳನ್ನು ಇದು ನವೀಕರಿಸುತ್ತದೆ.

ಗೂಗಲ್‌ ಫೋಟೋಗಳು
ಗೂಗಲ್‌ ಫೋಟೋ ವಿಭಾಗದಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆಗಳು ಕಂಡುಬಂದಿವೆ. ಇದರ ನಡುವೆ ಈ ವಿಭಾಗದಲ್ಲಿಯೂ ಎಐ ಪ್ರದಾನ ಕೆಲಸ ಮಾಡಲಿದ್ದು, ಜನರ ಹೆಸರು, ಸ್ಥಳ ಇತ್ಯಾದಿಗಳ ಮೂಲಕ ಫೋಟೋಗಳನ್ನು ಹುಡುಕಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇದನ್ನು ಗೂಗಲ್‌ ಈ ಎಐ ಅನ್ನು ಗೂಗಲ್‌ ಫೋಟೋಗಳಿಗೆ 2015 ರಲ್ಲಿ ಪರಿಚಯಿಸಿತ್ತು. ಇತ್ತೀಚೆಗೆ ಹೊಸ ಎಐ ಫೀಚರ್ಸ್‌ ಪರಿಚಯಿಸಲಾಗಿದ್ದು, ಬಳಕೆದಾರರು ಮರೆತುಹೋದ ನೆನಪುಗಳನ್ನು ಮರುಪರಿಶೀಲಿಸಲು ಅನುವು ಮಾಡಿಕೊಡುತ್ತದೆ.

ನೀವು ದಿನವೂ ಬಳಸುವ ಗೂಗಲ್‌ನ ಈ ಆಪ್‌ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?

ಯೂಟ್ಯೂಬ್‌
ಯೂಟ್ಯೂಬ್‌ ಅನ್ನು ಯಾರು ತಾನೆ ಬಳಕೆ ಮಾಡುವುದಿಲ್ಲ ಹೇಳಿ. ಈ ಪ್ಲಾಟ್‌ಫಾರ್ಮ್‌ನಲ್ಲಿ ಮಾಹಿತಿ, ಮನರಂಜನೆ ಹೇರಳವಾಗಿ ಲಭ್ಯವಾಗುವುದರಿಂದ ಬಳಕೆದಾರರ ಸಂಖ್ಯೆ ಸಹ ಹೆಚ್ಚಿದೆ. ಅಂತೆಯೇ ಈ ಪ್ಲಾಟ್‌ಫಾರ್ಮ್‌ ಅನ್ನು ಸುಲಭವಾಗಿ ಬಳಕೆ ಮಾಡಲು ಎಐ ಅನುವು ಮಾಡಿಕೊಡಲಿದ್ದು. ವಿಡಿಯೋಗಳಿಗೆ ಶೀರ್ಷಿಕೆಗಳನ್ನು ಆಟೋಮ್ಯಾಟಿಕ್‌ ಆಗಿ ರಚಿಸಲು ಇದು ಸಹಾಯ ಮಾಡುತ್ತದೆ. ಇದರೊಂದಿಗೆ ಕಿವುಡರು ಅಥವಾ ಶ್ರವಣ ದೋಷವುಳ್ಳವರು ಸೇರಿದಂತೆ ಹೆಚ್ಚಿನ ಜನರು ಯೂಟ್ಯೂಬ್‌ ಬಳಕೆ ಮಾಡುವಂತೆ ಪ್ರೇರೇಪಿಸುತ್ತದೆ.

ಗೂಗಲ್ ಅಸಿಸ್ಟೆಂಟ್‌
ಗೂಗಲ್ ಅಸಿಸ್ಟೆಂಟ್‌ ಇತ್ತೀಚೆಗೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವ ಸೇವೆಯಾಗಿದೆ. ಗೂಗಲ್‌ ಅಸಿಸ್ಟೆಂಟ್‌ನಲ್ಲಿ ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ (NLP) ಅನ್ನು ತರಲು ಎಐ ಬಳಕೆ ಮಾಡಲಾಗಿದ್ದು, ನೀವು ಕೇಳುವ ಪ್ರಶ್ನೆಗೆ ಉತ್ತರಿಸಲು ಅಥವಾ ಪರಿಹಾರ ನೀಡಲು ಇದು ಸಹಾಯಕವಾಗಿದೆ.

ನೀವು ದಿನವೂ ಬಳಸುವ ಗೂಗಲ್‌ನ ಈ ಆಪ್‌ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?

ಜಿ-ಮೇಲ್‌
ಜಿ-ಮೇಲ್‌ ಅಗತ್ಯವಾದ ಸೇವೆಯಾಗಿದ್ದು, ಇದರಲ್ಲಿ ಅಕ್ಷರ ತಪ್ಪಾದ ವೇಳೆ ಸರಿಪಡಿಸಲು ಹಾಗೂ ಸ್ಪ್ಯಾಮ್ ಫಿಲ್ಟರ್‌ನಂತಹ ಕೆಲಸ ಮಾಡಲು ಈ ಎಐ ಅನ್ನು ಬಳಕೆ ಮಾಡಲಾಗುತ್ತದೆ. ಈ ಮೂಲಕ ಸುಲಭವಾಗಿ ತಪ್ಪಿಲ್ಲದ ಸಂದೇಶ ರವಾನೆ ಮಾಡಲು ಹಾಗೂ ಅನಗತ್ಯ ಮೆಸೆಜ್‌ಗಳಿಂದ ದೂರ ಇರಲು ಅನುಕಲ ಮಾಡಿಕೊಡುತ್ತದೆ.

ಗೂಗಲ್‌ ಜಾಹೀರಾತು
ಗೂಗಲ್‌ ಜಾಹೀರಾತು ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಪ್ರಪಂಚದಾದ್ಯಂತ ಗ್ರಾಹಕರನ್ನು ತಲುಪಲು ಇದು ಸುಲಭ ಮಾರ್ಗ. ಅದರಂತೆ ಇದರಲ್ಲೂ ಸಹ ಎಐ ತನ್ನದೇ ಆದ ವಿಶೇಷ ಕೆಲಸವನ್ನು ಮಾಡುತ್ತಾ ಬರುತ್ತಿದೆ. ಅಂದರೆ ಪರ್ಫಾರ್ಮೆನ್ಸ್ ಮ್ಯಾಕ್ಸ್ ಫೀಚರ್ಸ್‌ ಜಾಹೀರಾತುದಾರರು ತಮ್ಮ ಪ್ರಚಾರದ ಗುರಿಗಳನ್ನು ಗೂಗಲ್‌ ಗೆ ಸರಳವಾಗಿ ತಿಳಿಸಲು ಮತ್ತು ಅವರ ಸೃಜನಾತ್ಮಕ ಸ್ವತ್ತುಗಳನ್ನು ಹಂಚಿಕೊಳ್ಳಲು ಸಹಾಯ ಮಾಡಲಿದೆ. ಹಾಗೆಯೇ ಯಾವೆಲ್ಲಾ ಪ್ಲಾಟ್‌ಫಾರ್ಮ್‌ನಲ್ಲಿ ಏನೆಲ್ಲಾ ಜಾಹೀರಾತುಗಳನ್ನು ಜನರು ವೀಕ್ಷಣೆ ಮಾಡುತ್ತಾರೋ ಅದನ್ನು ಆಧರಿಸಿ ಲ್ಯಾಂಡ್‌ಸ್ಕೇಪ್ ವಿಡಿಯೋ ಜಾಹೀರಾತು ಅಥವಾ ಲಂಬ ಹಾಗೂ ಚೌಕದ ಶೈಲಿಯ ಜಾಹೀರಾತುಗಳಾಗಿ ಆಟೋಮ್ಯಾಟಿಕ್‌ ಆಗಿ ಮರು ಫಾರ್ಮ್ಯಾಟ್ ಮಾಡಲು ಎಐ ಪ್ರಮುಖ ಪಾತ್ರ ವಹಿಸುತ್ತದೆ.

ಗೂಗಲ್‌ ಕ್ಲೌಡ್
ಗೂಗಲ್‌ ಕ್ಲೌಡ್ ನಲ್ಲಿಯೂ ಎಐ ಅಗತ್ಯ ಕೆಲಸಗಳನ್ನು ಮಾಡಲಿದೆ. ಡಾಕ್ಯುಮೆಂಟ್ ಪ್ರಕ್ರಿಯೆಗಾಗಿ DocAI, ಕಾಲ್ ಸೆಂಟರ್ ಕಾರ್ಯಾಚರಣೆಗಳಿಗಾಗಿ ಕಾಂಟ್ಯಾಕ್ಟ್‌ ಸೆಂಟರ್‌ AI, ವೀಡಿಯೊ ಮತ್ತು ಇಮೇಜ್ ವಿಶ್ಲೇಷಣೆಗಾಗಿ ವರ್ಟೆಕ್ಸ್ ವಿಷನ್ AI ಸೇರಿದಂತೆ ಇತರೆ ಎಐ ಸೇವೆಗಳನ್ನು ಇದರಲ್ಲಿ ನೀಡಲಾಗಿದೆ.

Best Mobiles in India

English summary
Google has made itself influential in almost every corner of the technology segment. In between, Google AI service is also important, know how it will work in all these apps of Google. Details in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+