Home
ಸುದ್ದಿಜಾಲ

ಪಾರ್ಟ್‌ಟೈಮ್‌‌ ಉದ್ಯೋಗದಿಂದ ಉಚಿತ ಐಫೋನ್‌ವರೆಗೆ: ಈ ವರ್ಷ ಸ್ಕ್ಯಾಮರ್‌ಗಳು ಹೇಗೆಲ್ಲಾ ವಂಚನೆ ಮಾಡಿದ್ದಾರೆ ಗೊತ್ತಾ?

ಭಾರತದಲ್ಲಿ ತಂತ್ರಜ್ಞಾನ (Technology) ಅಭಿವೃದ್ಧಿ ಆಗುತ್ತಿದ್ದಂತೆ ಹಲವಾರು ರೀತಿಯ ಪ್ರಯೋಜನಗಳು ಜನರಿಗೆ ಸಿಗುತ್ತಿದೆ. ಆದರೆ ಅಷ್ಟೇ ಪ್ರಮಾಣದಲ್ಲಿ ಕೆಲವರು ಇದನ್ನು ದುರುಪಯೋಗ ಕೂಡ ಮಾಡಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಈ ವರ್ಷ ಸಾಕಷ್ಟು ಸೈಬರ್‌ ಕ್ರೈಮ್‌ ಪ್ರಕರಣ (cybercrime case) ಬೆಳಕಿಗೆ ಬಂದಿವೆ.

ಹೌದು, ನಾವು ಇದೀಗ ಹೊಸ ವರ್ಷಕ್ಕೆ ಕಾಲಿಡಲು ತುದಿಗಾಲಲ್ಲಿ ನಿಂತಿದ್ದೇವೆ. ಈ ವೇಳೆ ಕೊಂಚ ಹಿಂದಕ್ಕೆ ಹೋದರೆ ಹಲವಾರು ಘಟನೆಗಳು ನಮ್ಮ ಕಣ್ಣ ಮುಂದೆ ಹೋಗುತ್ತವೆ. ಅಂದರೆ ಈ ವರ್ಷ ಪಾರ್ಟ್‌ಟೈಮ್‌‌ ಉದ್ಯೋಗ ನೀಡುತ್ತೇವೆ ಎಂದು ನಂಬಿಸಿ ಮೋಸ (Scam) ಮಾಡುವುದರಿಂದ ಹಿಡಿದು ಉಚಿತ ಐಫೋನ್ ನೀಡುತ್ತೇವೆ ಎಂದು ಹೇಳುವ ಮೂಲಕ ಸಾಕಷ್ಟು ರೀತಿಯಲ್ಲಿ ಜನರಿಗೆ ವಂಚನೆ ಮಾಡಲಾಗಿದೆ. ಹಾಗಿದ್ರೆ, ಈ ವರ್ಷ ಜನರನ್ನು ಸ್ಕ್ಯಾಮರ್‌ಗಳು ಹೇಗೆಲ್ಲಾ ಮೋಸ ಮಾಡಿದ್ದಾರೆ? ಅನ್ನೋ ವಿವರ ಇಲ್ಲಿದೆ ನೋಡಿ.

ಈ ವರ್ಷ ಸ್ಕ್ಯಾಮರ್‌ಗಳು ಜನರನ್ನು ಹೇಗೆಲ್ಲಾ ವಂಚನೆ ಮಾಡಿದ್ದಾರೆ ಗೊತ್ತಾ?

ಅರೆಕಾಲಿಕ ಉದ್ಯೋಗಗಳು: ನೀವು ಟೆಲಿಗ್ರಾಮ್ ಅಥವಾ ವಾಟ್ಸಾಪ್‌ ಬಳಕೆ ಮಾಡುತ್ತಿದ್ದೀರಿ ಎಂದಾದರೆ ಒಮ್ಮೆಯಾದರೂ ಈ ಪಾರ್ಟ್‌ ಟೈಮ್‌ ಜಾಬ್‌ ಬಗ್ಗೆ ಸಂದೇಶ ಸ್ವೀಕಾರ ಮಾಡಿರುತ್ತೀರಿ. ಇದರಲ್ಲಿ ಹೋಟೆಲ್‌ಗಳನ್ನು ರೇಟಿಂಗ್ ಮಾಡುವುದು ಅಥವಾ ವಿಮರ್ಶೆಗಳನ್ನು ಬರೆಯುವ ಕೆಲಸ ನೀಡಲಾಗುತ್ತದೆ. ಇದಕ್ಕೆ ತಕ್ಕ ಹಣ ನೀಡಲಾಗುತ್ತದೆ ಎಂದು ನಂಬಿಸಿ ನಂತರ ಸ್ವಲ್ಪ ಹಣ ನೀಡಿ ಜನರನ್ನು ತಮ್ಮ ಜಾಲದೊಳಗೆ ಸಿಲುಕಿಸುತ್ತಾರೆ. ಅಂದರೆ ನಿಮಗೆ ಹೆಚ್ಚಿನ ಹಣ ಬರಲು ಹೂಡಿಕೆ ಮಾಡಿ ಎಂದು ಮಾಲ್‌ವೇರ್‌ ಆಧಾರಿತ ಲಿಂಕ್‌ ಸೆಂಡ್‌ ಮಾಡಿ ಜನರ ಬಳಿ ಇರುವ ಹಣವನ್ನು ದೋಚುವ ಕೆಲಸ ಮಾಡಲಾಗುತ್ತದೆ.

ಆನ್‌ಲೈನ್ ಕೊರಿಯರ್ ಹಗರಣ: ಮತ್ತೊಂದು ಮೋಸ ಎಂದರೆ ಆನ್‌ಲೈನ್ ಕೊರಿಯರ್ ಹಗರಣ(Online Courier Scam). ವಂಚಕರು ಸಂತ್ರಸ್ತರನ್ನು ಸಂಪರ್ಕ ಮಾಡಿ ನಿಮಗೆ ಬಂದಿರುವ ಪಾರ್ಸೆಲ್‌ ಅನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಭಾರೀ ಹಣ ಹಾಗೂ ಚಿನ್ನ ಇದೆ ಎಂದು ನಂಬಿಸುತ್ತಾರೆ. ಜೊತೆಗೆ ನಿಮಗೆ ಇದು ಬೇಕು ಎಂದರೆ ಇಂತಿಷ್ಟು ಹಣ ಪಾವತಿ ಮಾಡಬೇಕು ಇಲ್ಲ ಎಂದರೆ ಇದನ್ನು ನಾವೇ ಇಟ್ಟುಕೊಳ್ಳುತ್ತೇವೆ ಎಂದು ಸ್ಕ್ಯಾಮರ್‌ಗಳು (scammers) ಹೇಳುತ್ತಾರೆ. ಹಣ ಅಥವಾ ಚಿನ್ನದ ಆಸೆಗೆ ಬಿದ್ದು, ಜನರು ಅವರು ಕೇಳುವ ಹಣವನ್ನು ಪಾವತಿ ಮಾಡುತ್ತಾರೆ. ಆದರೆ ಇದಾದ ಬಳಿಕ ಯಾವ ಪಾರ್ಸೆಲ್‌ ಸಹ ತಲುಪುವುದಿಲ್ಲ. ಈ ಮೊದಲು ನಿಮಗೆ ಪಾರ್ಸೆಲ್‌ ಕಳುಹಿಸಲಾಗಿದೆ ಎಂದು ಹೇಳಿ ಕರೆ ಮಾಡಿದ್ದ ನಂಬರ್‌ ಸಹ ಆಫರ್ ಆಗಿರುತ್ತದೆ.

ಈ ವರ್ಷ ಸ್ಕ್ಯಾಮರ್‌ಗಳು ಜನರನ್ನು ಹೇಗೆಲ್ಲಾ ವಂಚನೆ ಮಾಡಿದ್ದಾರೆ ಗೊತ್ತಾ?

ಡೇಟಿಂಗ್ ಹಗರಣ: ಆನ್‌ಲೈನ್ ಡೇಟಿಂಗ್ ಆಪ್‌ಗಳನ್ನು ಹೆಚ್ಚಾಗಿ ಮೋಸ ಮಾಡಲು ಬಳಕೆ ಮಾಡಲಾಗಿದೆ. ಸ್ಕ್ಯಾಮರ್‌ಗಳು ತಮ್ಮ ಪಾಲುದಾರರನ್ನು ವಂಚಿಸಲು ಬಂಬಲ್ ಅಥವಾ ಟಿಂಡರ್‌ನಂತಹ ಜನಪ್ರಿಯ ಡೇಟಿಂಗ್ ಅಪ್ಲಿಕೇಶನ್‌ಗಳನ್ನೇ ಗುರಿ ಮಾಡಿದ್ದಾರೆ. ಈ ವಂಚನೆಗಳ ವಿರುದ್ಧ ಜಾಗರೂಕರಾಗಿರಲು, ನೀವು ವ್ಯಕ್ತಿಯ ಹಿನ್ನೆಲೆಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು ಜೊತೆಗೆ ಪರಿಚಯ ಆದ ತಕ್ಷಣವೇ ನಿಮ್ಮ ಎಲ್ಲಾ ಮಾಹಿತಿಯನ್ನು ಅವರಿಗೆ ನೀಡಬೇಡಿ.

ಲಾಟರಿ ಹಗರಣ: ಐಫೋನ್ 15 ಸರಣಿಯನ್ನು (iPhone 15 series) ಉಚಿತವಾಗಿ ನೀಡಲಾಗುತ್ತದೆ ಎನ್ನುವ ಲಾಟರಿ ಆಧಾರಿತ ಮೆಸೆಜ್‌ ಅನ್ನು ನೀವು ಸ್ವೀಕಾರ ಮಾಡಿರಬಹುದೇನೋ. ಲಕ್ಕಿ ಡ್ರಾ ಸ್ಕ್ಯಾಮ್‌ಗಳ ಮೂಲಕ ಜನರನ್ನು ವಂಚಿಸುವ ಮಾರ್ಗ ಇದಾಗಿತ್ತು. ಆದರೆ ತಕ್ಷಣವೇ ಎಚ್ಚೆತ್ತ ಸೈಬರ್‌ ಕ್ರೈಂ ಪೊಲೀಸರು ಆರಂಭದಲ್ಲೇ ಈ ರೀತಿಯ ಮೆಸೆಜ್‌ಗಳು ಅಥವಾ ಲಕ್ಕಿ ಡ್ರಾ ಬಗ್ಗೆ ಎಚ್ಚರಿಕೆ ನೀಡಿ ಜನರು ಹೆಚ್ಚು ಮೋಸ ಹೋಗದಂತೆ ತಡೆದರು.

ಈ ವರ್ಷ ಸ್ಕ್ಯಾಮರ್‌ಗಳು ಜನರನ್ನು ಹೇಗೆಲ್ಲಾ ವಂಚನೆ ಮಾಡಿದ್ದಾರೆ ಗೊತ್ತಾ?

ಎಐ ಆಧಾರಿತ ಹಗರಣ: ಇನ್ನು ಈ ವರ್ಷ ಎಐ ಬಳಕೆ ಮುಗಿಲು ಮುಟ್ಟಿದೆ. ಡೀಪ್‌ಫೇಕ್ ತಂತ್ರಜ್ಞಾನವನ್ನು (Deepfake technology) ಬಳಸಿಕೊಂಡು ವಿವಿಧ ರೀತಿಯಲ್ಲಿ ಜನರಿಗೆ ಮೋಸ ಮಾಡಲಾಗಿದೆ. ಇದರಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಘನತೆಗೂ ಧಕ್ಕೆ ತರಲಾಗಿತ್ತು. ಹಾಗೆಯೇ ಇತ್ತೀಚಿನ ಪ್ರಕರಣದಲ್ಲಿ ಓರ್ವ ವಾಟ್ಸಾಪ್‌ ಬಳಕೆದಾರರು ಆಸ್ಪತ್ರೆಯ ತುರ್ತು ಪರಿಸ್ಥಿತಿ ಹಿನ್ನೆಲೆ ಹಣವನ್ನು ವಂಚಕರಿಂದ ನೀಡಿದ್ದಾರೆ. ಅಪರಿಚಿತ ಸಂಖ್ಯೆಯಿಂದ ಬಂದ ಕರೆಯಲ್ಲಿ ಡೀಪ್‌ಫೇಕ್ ಬಳಕೆ ಮಾಡಲಾಗಿತ್ತು ಅನ್ನೋದು ವಿಶೇಷ.
Best Mobiles in India

English summary
From part-time jobs to free iPhone, here's how people were scammed this year from scammers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+