Home
ಸುದ್ದಿಜಾಲ

ಐಫೋನ್‌ 15 ಫೋನ್‌ಗಳ ಬ್ಯಾಟರಿ ಸಾಮರ್ಥ್ಯ ಹೇಗಿದೆ ಗೊತ್ತಾ?, ಇಲ್ಲಿದೆ ವಿವರ!

ಆಪಲ್‌ನ ಐಫೋನ್‌ 15 ಸರಣಿ ಫೋನ್‌ಗಳನ್ನೇನ್ನೋ ಈ ಹಿಂದೆ ಲಾಂಚ್‌ ಮಾಡಲಾಗಿತ್ತು.ಆದರೆ, ಅವುಗಳ ಈ ಒಂದು ವಿಶೇಷ ಫೀಚರ್ಸ್‌ ಮಾತ್ರ ಬಳಕೆದಾರರು ಹೊಸ ಐಫೋನ್‌ ಖರೀದಿ ಮಾಡುವವರೆಗೂ ತಿಳಿಯುತ್ತಿರಲಿಲ್ಲ. ಆದರೆ, ಈ ವಿಷಯ ಈಗಾಗಲೇ ಬಹಿರಂಗಗೊಂಡಿದೆ.

ಹೌದು, ಆಫಲ್‌ನಲ್ಲಿ ಈವರೆಗೂ ಘೋಷಣೆ ಮಾಡಲಾಗದ ಫೀಚರ್ಸ್‌ ಏನೆಂದರೆ ಬ್ಯಾಟರಿ ಸಾಮರ್ಥ್ಯ. ಈಗ ಐಫೋನ್‌ 15 ಸರಣಿಯ ಎಲ್ಲಾ ಫೋನ್‌ಗಳ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಮಾಹಿತಿ ತಿಳಿದುಬಂದಿದೆ. ಸಾಮಾನ್ಯವಾಗಿ ಆಪಲ್ ಈ ಹಿಂದಿನಿಂದಲೂ ಸಹ ಫೋನ್‌ಗಳ ಬ್ಯಾಟರಿ ಸಾಮರ್ಥ್ಯವನ್ನು ಮುಚ್ಚಿಡುವುದು ಸಾಮಾನ್ಯವಾದ ಸಂಗತಿಯಾಗಿದೆ. ಹಾಗಿದ್ರೆ, ಯಾವೆಲ್ಲಾ ಫೋನ್‌ಗಳು ಏನೆಲ್ಲಾ ಫೀಚರ್ಸ್‌ ಆಯ್ಕೆ ಪಡೆದುಕೊಂಡಿವೆ?, ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಫೋನ್‌ 15 ಫೋನ್‌ಗಳ ಬ್ಯಾಟರಿ ಸಾಮರ್ಥ್ಯ ಹೇಗಿದೆ ಗೊತ್ತಾ?, ಇಲ್ಲಿದೆ ವಿವರ!

ಐಫೋನ್ 15 ಸರಣಿ ಬ್ಯಾಟರಿ ಸಾಮರ್ಥ್ಯ ಬಹಿರಂಗ: ಆಪಲ್ ಸಾಮಾನ್ಯವಾಗಿ ತನ್ನ ಐಫೋನ್ ಬ್ಯಾಟರಿ ಸಾಮರ್ಥ್ಯಗಳನ್ನು ಮುಚ್ಚಿಡುತ್ತದೆ ಎಂಬುದು ಹಲವಾರು ಜನರಿಗೆ ಗೊತ್ತಿರುವ ಸಂಗತಿ. ಆದರೆ, ಚೀನೀ ನಿಯಂತ್ರಕ ಡೇಟಾಬೇಸ್‌ನಿಂದ ಇತ್ತೀಚಿನ ಆವಿಷ್ಕಾರವು ಇತ್ತೀಚಿನ ಐಫೋನ್ 15 ಸರಣಿಯ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಬೆಳಕು ಚೆಲ್ಲಿದೆ. ಡೇಟಾವು ಐಫೋನ್ 15 ಪ್ರೊ ಮ್ಯಾಕ್ಸ್ ಅತಿದೊಡ್ಡ ಬ್ಯಾಟರಿ ಘಟಕವನ್ನು ಹೊಂದಿದೆ ಎಂದು ತಿಳಿದುಬಂದಿದೆ. ಆದರೆ ಐಫೋನ್ 15 ಪ್ರೊ ಮಾತ್ರ ಚಿಕ್ಕ ಸಾಮರ್ಥ್ಯ್ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.

ಈ ಸಂಬಂಧ ಬ್ಲೂಮ್‌ಬರ್ಗ್‌ ವರದಿ ಮಾಡಿದ್ದು, ಆಪಲ್‌ನ ಐಫೋನ್‌ 15 ಪ್ರೊ ವಿಶ್ವಾದ್ಯಂತ ಪೂರ್ವ-ಆರ್ಡರ್‌ಗಳನ್ನು ತೆರೆಯುತ್ತಿದ್ದಂತೆ ಹೆಚ್ಚಿನ ಬೇಡಿಕೆಯನ್ನು ಕಾಣುತ್ತಿದೆಯಂತೆ. ಅದರಂತೆ ಬುಕ್‌ ಮಾಡಿದವರಿಗೆ ಆರಂಭಿಕ ವಿತರಣಾ ಅಂದಾಜು ನವೆಂಬರ್‌ವರೆಗೆ ವಿಸ್ತರಣೆ ಆಗಲಿದೆ ಎಂದು ಹೇಳಲಾಗಿದೆ. ಗಮನಾರ್ಹವಾಗಿ, ಭಾರತದಲ್ಲಿ 1,59,900 ರೂ.ಗಳಿಂದ ಪ್ರಾರಂಭವಾಗುವ ಪ್ರೊ ಮ್ಯಾಕ್ಸ್ ಮಾದರಿಯು ಯುಎಸ್‌ನಲ್ಲಿ ನವೆಂಬರ್ ಮಧ್ಯದಿಂದ ಆರಂಭ ಆಗಲಿವೆ.

ಇನ್ನು ಹೆಚ್ಚು ಸೀಮಿತವಾದ ಪ್ರೋ ಮ್ಯಾಕ್ಸ್ ಮಾದರಿಗಳಿಗಾಗಿ ಭಾರತವು ಎಂಟು ವಾರಗಳವರೆಗೆ ಕಾಯಬೇಕಿದೆ. ಹೆಚ್ಚಿನ ಮುಂಗಡ-ಆರ್ಡರ್‌ಗಳು ಬರುವುದರಿಂದ ಈ ವಿಳಂಬ ಪ್ರವೃತ್ತಿಯು ಮುಂದುವರಿಯಬಹುದು ಹಾಗೆಯೇ ಫೋನ್‌ ಕೈ ಸೇರಲು ಇನ್ನೂ ಹಲವು ದಿನಗಳಾಗಬಹುದು ಎಂದು ಹೇಳಲಾಗುತ್ತಿದೆ.

ಹೊಸದಾಗಿ ಬಿಡುಗಡೆಯಾದ ಐಫೋನ್ 15 3,349mAh ಬ್ಯಾಟರಿಯನ್ನು ಹೊಂದಿದೆ ಎನ್ನಲಾಗಿದೆ. ಆದರೆ, ಐಫೋನ್‌ 15 ಪ್ಲಸ್‌ 4,383mAh ಘಟಕವನ್ನು ಪಡೆದಿದ್ದು, ಐಫೋನ್‌ 15 ಪ್ರೊ 3,274mAh ಬ್ಯಾಟರಿಯೊಂದಿಗೆ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆ. ಆದರೆ ಐಫೋನ್‌ 15 ಪ್ರೊ ಮ್ಯಾಕ್ಸ್‌ 4,422mAh ಬ್ಯಾಟರಿಯನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.

ಇನ್ನು ಐಫೋನ್ 14 3,279mAh ಬ್ಯಾಟರಿಯನ್ನು ಹೊಂದಿದ್ದರೆ, ಐಫೋನ್ 14 ಪ್ಲಸ್ 4,325mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿತ್ತು. ಜೊತೆಗೆ ಐಫೋನ್‌ 14 ಪ್ರೊ 3,200mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡರೆ ಐಫೋನ್‌ 14 ಪ್ರೊ ಮ್ಯಾಕ್ಸ್‌ 4,323mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆಯುವ ಮೂಲಕ ವಿಶೇಷ ಎನಿಸಿತ್ತು. ಈ ಎರಡೂ ಮಾದರಿಯ ಫೋನ್‌ಗಳನ್ನು ಹೋಲಿಕೆ ಮಾಡಿ ನೋಡಿದರೆ ಬ್ಯಾಟರಿ ಸಾಮರ್ಥ್ಯ ವಿಚಾರದಲ್ಲಿ ಅಷ್ಟೇನು ಬದಲಾವಣೆಯನ್ನು ನಾವು ಗಮನಿಸುವ ಅಗತ್ಯವಿಲ್ಲ.

ಇನ್ನು ಬ್ಯಾಟರಿ ಸಾಮರ್ಥ್ಯವನ್ನು ಇನ್ನೂ ಹೆಚ್ಚುಗೆ ಮಾಡಬೇಕು ಎಂಬ ಮಾತುಗಳು ಆಗಾಗ್ಗೆ ಕೇಳಿಬರುತ್ತಲೇ ಇರುತ್ತವೆ. ಈ ಕಾರಣಕ್ಕೆ ಆಪಲ್ ಹೊಸ ಫೋನ್‌ನ ಬ್ಯಾಟರಿ ಅವಧಿಯ ಬಗ್ಗೆ ಮಾತ್ರ ಮಾತನಾಡಿದೆ. ಅಂದರೆ ಹಿಂದಿನ ಆವೃತ್ತಿಗೆ ಹೋಲಿಸಿದರೆ ಜನರು ಉತ್ತಮ ಅನುಭವವನ್ನು ಪಡೆಯುತ್ತಾರೆ ಎಂದಷ್ಟೇ ತಿಳಿಸಲಾಗಿದೆ. ಈ ಮೂಲಕ ವ್ಯತ್ಯಾಸಗಳು ಸೂಕ್ಷ್ಮವಾಗಿರುತ್ತವೆ ಎಂಬುದನ್ನು ತೋರಿಸಿದೆ.

ಐಫೋನ್ 15 ಸರಣಿ ಬೆಲೆ : 128GB ಬೇಸ್ ಹೊಂದಿರುವ ಐಫೋನ್‌ 15 ಬೆಲೆ 79,900 ರೂ.ಗಳಾಗಿದೆ. ಹಾಗೆಯೇ 256GB ಮಾದರಿಯು 89,900 ರೂ.ಗಳಿಗೆ ಮಾರಾಟವಾಗಲಿದೆ. 512GB ಆವೃತ್ತಿಯು ಗ್ರಾಹಕರಿಗೆ 1,09,900 ರೂಪಾಯಿಗಳ ಬೆಲೆಯೊಂದಿಗೆ ಕಾಣಿಸಿಕೊಳ್ಳಲಿದೆ. ಇದರೊಂದಿಗೆ 128GB ಹೊಂದಿರುವ ಐಫೋನ್‌ 15 ಪ್ಲಸ್‌ 89,900 ರೂ.ಗಳು ಮತ್ತು 256GB ರೂಪಾಂತರಕ್ಕೆ 99,900 ರೂ.ಗಳ ಬೆಲೆ ಇರಲಿದೆ. ಜೊತೆಗೆ 512GB ಮಾದರಿ 1,19,900 ರೂ.ಗೆ ಮಾರಾಟವಾಗಲಿದೆ.

ಉಳಿದಂತೆ 128GB ಮಾದರಿಯೊಂದಿಗೆ ಐಫೋನ್‌ 15 ಪ್ರೊ 1,34,900 ರೂ.ಗಳ ಬೆಲೆಯೊಂದಿಗೆ ಕಾಣಿಸಿಕೊಳ್ಳಲಿದ್ದು, 256GB ರೂಪಾಂತರವು ನಿಮಗೆ 1,44,900 ರೂ.ಗಳಲ್ಲಿ ಲಭ್ಯ ಇರಲಿದೆ. ಹಾಗೆಯೇ 512GB ಮಾದರಿ 1,64,900 ರೂಗಳಿಗೆ ಮತ್ತು 1TB ಮಾದರಿ 1,84,900 ರೂ.ಗಳಿಗೆ ಲಭ್ಯ ಇರಲಿದೆ.

Best Mobiles in India

English summary
One of the so far unannounced features of the Apple is the battery capacity. Now the information about the battery capacity of all iPhone 15 series phones is known.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+