Home
ಸುದ್ದಿಜಾಲ

Microphone: ಸ್ಮಾರ್ಟ್‌ಫೋನ್‌ಗಳಲ್ಲಿನ ಈ 2 ಮೈಕ್ರೊಫೋನ್‌ ಹೇಗೆಲ್ಲಾ ಕೆಲಸ ಮಾಡಲಿವೆ ಗೊತ್ತಾ!?

ಸ್ಮಾರ್ಟ್‌ಫೋನ್ (Smartphone) ಎಂದಾಕ್ಷಣ ಅಥವಾ ಹೊಸ ಸ್ಮಾರ್ಟ್‌ಫೋನ್‌ ಖರೀದಿ ಮಾಡಲು ಇಚ್ಚಿಸಿದಾಗ ನಮ್ಮ ಕಣ್ಣ ಮುಂದೆ ಬರುವ ವಿಷಯ ಏನೆಂದರೆ ಡಿಸ್‌ಪ್ಲೇ, ವಿನ್ಯಾಸ, ಪ್ರೊಸೆಸರ್‌, ಕ್ಯಾಮೆರಾ ಹಾಗೂ ಇತ್ಯಾದಿ. ಆದರೆ, ಪ್ರತಿ ಸ್ಮಾರ್ಟ್‌ಫೋನ್‌ ಸಹ ಎರಡು ಮೈಕ್ರೊಫೋನ್‌ ಹೊಂದಿರುತ್ತದೆ ಎಂಬುದು ನಿಮಗೆ ಎಂದಾದರೂ ಗೊತ್ತಾ?.

ಹೌದು, ಸ್ಮಾರ್ಟ್‌ಫೋನ್‌ನಲ್ಲಿ ಹಲವಾರು ರೀತಿಯ ಅಂಶಗಳಿವೆ. ಆದರೆ ಅಗತ್ಯವಾಗಿ ಇರಬೇಕಾದ ಸೌಲಭ್ಯಗಳಲ್ಲಿ ಮೈಕ್ರೊಫೋನ್‌ ಸಹ ಒಂದು. ಆದರೆ ಸಾಮಾನ್ಯ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಪ್ರೊಸೆಸರ್, ಡಿಸ್‌ಪ್ಲೇ, ಸ್ಕ್ರೀನ್, ರೆಸಲ್ಯೂಶನ್ ಮತ್ತು ಇತರ ವಿಷಯಗಳ ಬಗ್ಗೆ ಖಂಡಿತವಾಗಿಯೂ ತಿಳಿದಿರುತ್ತದೆ. ಆದರೆ, ಈ ಎರಡು ಮೈಕ್ರೊಫೋನ್‌ (Microphone) ಬಗ್ಗೆ ಬಹಳಷ್ಟು ಮಂದಿಗೆ ತಿಳಿದಿರುವುದಿಲ್ಲ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಈ ಎರಡೂ ಮೈಕ್ರೊಫೋನ್‌ಗಳ ಕೆಲಸ ಏನು ಅಂತಾ ತಿಳಿಯೋಣ.

ಸ್ಮಾರ್ಟ್‌ಫೋನ್‌ಗಳಲ್ಲಿನ ಈ 2 ಮೈಕ್ರೊಫೋನ್‌ ಹೇಗೆಲ್ಲಾ ಕೆಲಸ ಮಾಡಲಿವೆ ಗೊತ್ತಾ!?

ಸಾಮಾನ್ಯವಾಗಿ ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಮುದಾಗಿದ್ರೆ ನೀವು ಅದರ ಬಗ್ಗೆ ತಿಳಿದಿರಬೇಕು. ಕಾರಣ ಏನೆಂದರೆ ಮೈಕ್ರೊಫೋನ್ ಇಲ್ಲದೆ ನೀವು ಸ್ಮಾರ್ಟ್‌ಫೋನ್‌ನಲ್ಲಿ ಮಾತನಾಡಲು ಅಥವಾ ಇನ್ನೊಂದು ಬದಿಯಿಂದ ಬರುವ ಧ್ವನಿಯನ್ನು ಆಲಿಸಲು ಸಾಧ್ಯವೇ ಆಗುವುದಿಲ್ಲ. ಆದ್ದರಿಂದ, ಸ್ಮಾರ್ಟ್‌ಫೋನ್‌ಗಳಲ್ಲಿನ ಮೈಕ್ರೊಫೋನ್ ಉತ್ತಮ ಪಾತ್ರ ವಹಿಸುತ್ತವೆ.

ಬಳಕೆದಾರರಿಗೆ ಧ್ವನಿ ರವಾನಿಸುತ್ತದೆ: ಈಗ ಎರಡೂ ಮೈಕ್ರೊಫೋನ್‌ಗಳ ಕೆಲಸದ ಬಗ್ಗೆ ತಿಳಿಯೋಣ. ಇದರಲ್ಲಿ ಒಂದು ಮೈಕ್ರೊಫೋನ್‌ ಸ್ಮಾರ್ಟ್‌ಫೋನ್ ಕೆಳಭಾಗದಲ್ಲಿ ಇರುತ್ತದೆ. ನೀವು ಗಮನಿಸಿರಬಹುದು ಫೋನ್‌ಗಳು ತಳಭಾಗದಲ್ಲಿ ಸಣ್ಣ ರಂಧ್ರವನ್ನು ಹೊಂದಿರುತ್ತವೆ. ಅದೇ ರಂಧ್ರದಲ್ಲಿ ಈ ಮೈಕ್ರೊಫೋನ್ ಇರಲಿದೆ. ಇದು ಯಾವಾಗಲೂ ಬಳಕೆದಾರರ ತುಟಿಗಳ ಹತ್ತಿರವೇ ಇರಲಿದೆ. ಪರಿಣಾಮ ನಿಮ್ಮ ಮಾತನ್ನ ತಕ್ಷಣವೇ ಸೆಳೆದು ಇತರ ಬಳಕೆದಾರರಿಗೆ ರವಾನಿಸುತ್ತದೆ.

ಸ್ಮಾರ್ಟ್‌ಫೋನ್‌ಗಳಲ್ಲಿನ ಈ 2 ಮೈಕ್ರೊಫೋನ್‌ ಹೇಗೆಲ್ಲಾ ಕೆಲಸ ಮಾಡಲಿವೆ ಗೊತ್ತಾ!?

ನಾಯ್ಸ್‌ ಕ್ಯಾನ್ಸಲಿಂಗ್‌ ಮೈಕ್ರೊಫೋನ್‌: ಇನ್ನೊಂದು ಮೈಕ್ರೊಫೋನ್‌ ಬಗ್ಗೆ ಮಾಹಿತಿ ತಿಳಿಯುವುದಾದರೆ, ಇದು ಫೋನ್‌ನ ಮೇಲ್ಭಾಗದಲ್ಲಿ ಇರುತ್ತದೆ. ಅಂದರೆ ಫೋನ್‌ ಅನ್ನು ನೀವು ಕಿವಿಯ ಬಳಿ ಇರಿಸಿದಾಗ ಇದರ ಸಾಮರ್ಥ್ಯ ನಿಮಗೆ ತಿಳಿಯುತ್ತದೆ. ಯಾಕೆಂದರೆ ಈ ಮೈಕ್ರೊಫೋನ್‌ ನಿಮ್ಮ ಸುತ್ತಮುತ್ತಲಿನ ಶಬ್ದವನ್ನು ಕಡಿಮೆ ಮಾಡಿ ನೀವು ಕರೆಯಲ್ಲಿರುವ ಬೇರೆಯವರಿಗೆ ನಿಮ್ಮ ಸ್ಪಷ್ಟ ಮಾತು ಕೇಳುವಂತೆ ಮಾಡುತ್ತದೆ. ಅಂದರೆ ಈ ಮೈಕ್ ನಿಮ್ಮ ಸುತ್ತಲಿನ ಶಬ್ದವನ್ನು ನಿರ್ಬಂಧಿಸುತ್ತದೆ.

ಇನ್ನು ನೀವು ಫೋನ್‌ನಲ್ಲಿ ಮಾತನಾಡುವಾಗ ಎರಡೂ ಮೈಕ್‌ಗಳು ಏಕಕಾಲದಲ್ಲಿ ಸಕ್ರಿಯವಾಗಿರಲಿವೆ. ಕೆಳಗಿನ ಮೈಕ್ ನಿಮ್ಮ ಧ್ವನಿಯನ್ನು ಗುರುತಿಸಿದರೆ, ಮೇಲಿನ ಮೈಕ್ ಸುತ್ತಮುತ್ತಲಿನ ಶಬ್ದವನ್ನು ಪತ್ತೆ ಮಾಡಿ ಅದನ್ನು ನಿರ್ಬಂಧಿಸುವ ಕೆಲಸ ಮಾಡುತ್ತದೆ. ಇದಾದ ನಂತರ ಎರಡೂ ಧ್ವನಿಗಳು ಸ್ಮಾರ್ಟ್‌ಫೋನ್‌ನ ಸಾಫ್ಟ್‌ವೇರ್ ಅನ್ನು ತಲುಪುತ್ತವೆ. ಇಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಮೇಲಿನ ಮೈಕ್ರೊಫೋನ್‌ನಿಂದ ಬರುವ ಶಬ್ದವನ್ನು ಬಹಳ ಅಚ್ಚುಕಟ್ಟಾಗಿ ನಿವಾರಿಸುತ್ತದೆ. ಈ ಪ್ರಕ್ರಿಯೆಯನ್ನು ನಾಯ್ಸ್‌ ಕ್ಯಾನ್ಸಲೇಶನ್‌ ಎಂದೂ ಸಹ ಕರೆಯಲಾಗುತ್ತದೆ.

ಇನ್ನು ಫೋನ್‌ಗಳಲ್ಲಿ ಚಿಕ್ಕ ಎಲೆಕ್ಟ್ರೆಟ್ ಕಂಡೆನ್ಸರ್ ಅಥವಾ ಎಮ್‌ಇಎಮ್‌ಎಸ್‌ ಮೈಕ್ರೊಫೋನ್‌ಗಳನ್ನು (Electret condenser or MEMS microphone) ಬಳಕೆ ಮಾಡಲಾಗುತ್ತದೆ. ಈ ಮೈಕ್‌ಗಳು ಕಡಿಮೆ ಶಕ್ತಿಯಲ್ಲಿಯೇ ಕಾರ್ಯನಿರ್ವಹಿಸುವ ಸಾಮರ್ಥ್ಯ ಪಡೆದುಕೊಂಡಿವೆ. ಈ ಶಕ್ತಿಯನ್ನು ಸೆಲ್ ಫೋನ್ ಬ್ಯಾಟರಿಯಿಂದ ಸುಲಭವಾಗಿ ಪೂರೈಸಲಾಗುತ್ತದೆ. ಜೊತೆಗೆ ಫೋನ್‌ನ ಸರ್ಕ್ಯೂಟ್ರಿಯೊಳಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಹಾಗೆಯೇ ಈ ಎಲೆಕ್ಟ್ರೆಟ್ ಮೈಕ್ರೊಫೋನ್ ಒಂದು ರೀತಿಯ ಕಂಡೆನ್ಸರ್ ಮೈಕ್ರೊಫೋನ್ ಆಗಿದ್ದು ಅದು ಶಾಶ್ವತವಾಗಿ ಧ್ರುವೀಕೃತ ಕ್ಯಾಪ್ಸುಲ್ ಅನ್ನು ಹೊಂದಿರುತ್ತದೆ.

ಸ್ಮಾರ್ಟ್‌ಫೋನ್‌ಗಳಲ್ಲಿನ ಈ 2 ಮೈಕ್ರೊಫೋನ್‌ ಹೇಗೆಲ್ಲಾ ಕೆಲಸ ಮಾಡಲಿವೆ ಗೊತ್ತಾ!?

ಈ ನಾಯ್ಸ್‌ ಕ್ಯಾನ್ಸಲೇಶನ್‌ ಆಯ್ಕೆ ಇರುವ ಮೈಕ್ರೊಫೋನ್‌ಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಇಯರ್‌ಬಡ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಅಷ್ಟೇ ಅಲ್ಲದೆ ಇವು ತುಂಬಾ ಪರಿಣಾಮಕಾರಿಯೂ ಹೌದು. ಯಾಕೆಂದರೆ ಇಯರ್‌ಬಡ್ಸ್‌ ಕೇವಲ ಕಿವಿ ಬಳಿ ಮಾತ್ರ ಇರುತ್ತವೆ. ಈ ವೇಳೆ ನೀವು ಮಾತನಾಡಿದ್ರೆ ಅದನ್ನು ತಕ್ಷಣವೇ ಇತರೆ ಶಬ್ದಗಳಿಂದ ಫಿಲ್ಟರ್‌ ಮಾಡಿ ಉತ್ತಮ ಧ್ವನಿಯನ್ನು ರವಾನಿಸುವ ಕೆಲಸ ಮಾಡುತ್ತವೆ.

Best Mobiles in India

English summary
There are several types of elements in a smartphone. But a microphone is also one of the essential facilities. Accordingly, every smartphone has two microphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+