Home
ಸುದ್ದಿಜಾಲ

ನಿಮ್ಮ ಮಕ್ಕಳು ಮೊಬೈಲ್‌ ಬಳಕೆ ಮಾಡಲು ಯೋಗ್ಯವಾದ ವಯಸ್ಸು ಇದು!?

ಸ್ಮಾರ್ಟ್‌ಫೋನ್‌ ಕ್ರೇಜ್‌ ಮಕ್ಕಳಲ್ಲಿ ಎಷ್ಟರಮಟ್ಟಿಗೆ ಇದೆ ಎಂದರೆ ಲಾಲಿಹಾಡಿನ ಬದಲಾಗಿ ಸಿನಿಮಾ ಹಾಡು ಆಲಿಸುವ ಹಾಗೂ ಚಂದಮಾಮನ ನೋಡುವ ಬದಲಾಗಿ ಮೊಬೈಲ್‌ನಲ್ಲಿ ವಿಡಿಯೋ ನೋಡುವ ಮಟ್ಟಕ್ಕೆ ಬಂದಿದ್ದಾರೆ. ಮೊಬೈಲ್‌ ಕೊಡಲಿಲ್ಲ ಎಂದರೆ ಅವರ ಅರ್ಭಟವನ್ನು ತಡೆದು ನಿಲ್ಲಿಸಲು ಸಾಧ್ಯವಾಗದ ಪರಿಸ್ಥಿತಿಗೆ ಪೋಷಕರು ತಲುಪಿದ್ದಾರೆ. ಈ ನಡುವೆ ನಿಮ್ಮ ಮಕ್ಕಳಿಗೆ ಯಾವ ಯವಸ್ಸಿನಲ್ಲಿ ಫೋನ್‌ ಕೊಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಹೌದು, ಸ್ಮಾರ್ಟ್‌ಫೋನ್‌ ಬಳಕೆ ಒಂದು ಅನಿವಾರ್ಯವಾಗಿದೆ. ಆದರೆ, ಮಕ್ಕಳಿಗೆ ಸ್ಮಾರ್ಟ್‌ಫೋನ್‌ ನೀಡುವುದು ಅನಿವಾರ್ಯವೂ ಅಲ್ಲ, ಅಗತ್ಯವೂ ಅಲ್ಲ. ಆದರೆ, ಮಕ್ಕಳೂ ಬಳಕೆ ಮಾಡಬಹುದಾದ ಫೀಚರ್ಸ್‌ ಅನ್ನು ಈ ಫೋನ್‌ಗಳು ಹೊಂದಿರುವುದರಿಂದ ಗಂಭೀರ ಸಮಸ್ಯಗಳೇನು ಇದರಿಂದ ಕಂಡುಬರುವುದಿಲ್ಲವಾದರೂ ಇದನ್ನು ಬಳಕೆ ಮಾಡುವ ಮಕ್ಕಳ ಮನಸ್ಥಿತಿ ಮೇಲೆ ಆಧಾರವಾಗಿರುತ್ತದೆ.

ನಿಮ್ಮ ಮಕ್ಕಳು ಮೊಬೈಲ್‌ ಬಳಕೆ ಮಾಡಲು ಯೋಗ್ಯವಾದ ವಯಸ್ಸು ಇದು!?

ಇಂದು ನಾವು ಸ್ಮಾರ್ಟ್‌ಫೋನ್ ಇಲ್ಲದ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲದಂತೆ ಆಗಿದೆ. ಗೇಮಿಂಗ್‌ನಿಂದ ಹಿಡಿದು ಲೆಕ್ಕಾಚಾರಗಳವರೆಗೆ ಫೋನ್‌ಗಳು ಎಲ್ಲಾ ಕಾರ್ಯಕ್ಕೂ ಅಗತ್ಯವಾಗಿವೆ. ಇದರೊಂದಿಗೆ ಇಂಟರ್ನೆಟ್ ಬಳಕೆ ಮಾಡಿಕೊಂಡು ವಿಡಿಯೋಗಳು ಮತ್ತು ಕಂಟೆಂಟ್‌ ಪ್ರವೇಶಕ್ಕೆ ಮಕ್ಕಳಿಗೂ ಅನುವು ಮಾಡಿಕೊಡಲಾಗುತ್ತದೆ. ಆದರೆ, ನಿಮ್ಮ ಮಗುವಿಗೆ ನೀವು ಸ್ಮಾರ್ಟ್‌ಫೋನ್‌ ಅನ್ನು ಹಸ್ತಾಂತರಿಸುವ ಮೊದಲು ಅವರು ಮೊಬೈಲ್‌ ಬಳಕೆ ಮಾಡಲು ಸರಿಯಾದ ವಯಸ್ಸು ಯಾವುದು ನೀವು ಎಂದಾದರೂ ಯೋಚಿಸಿದ್ದೀರಾ?

ಈ ವಿಷಯದಲ್ಲಿ ನಾವಿಂದು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಅವರನ್ನು ನೆನಪು ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಅವರು ತಮ್ಮ ಮಕ್ಕಳಿಗೆ 14 ವರ್ಷ ತುಂಬುವವರೆಗೆ ಮೊಬೈಲ್ ಫೋನ್‌ಗಳನ್ನು ನೀಡಿರಲಿಲ್ಲ ಎಂದರೆ ನೀವು ನಂಬಲೇಬೇಕು. ಇದಿಷ್ಟೇ ಅಲ್ಲ ಇಂದಿಗೂ ಅವರು ಊಟದ ಟೇಬಲ್‌ನಲ್ಲಿ ಮೊಬೈಲ್ ಫೋನ್ ಬಳಸುವುದನ್ನು ನಿಷೇಧಿಸಿದ್ದಾರೆ, ಜೊತೆಗೆ ಬಳಕೆಯ ಸಮಯವನ್ನು ಸಹ ನಿಗದಿಪಡಿಸಿದ್ದಾರೆ.

ಮೊಬೈಲ್‌ ಬಳಕೆ ಮಾಡಲು ಉತ್ತಮ ವಯಸ್ಸು ಯಾವುದು?: ಈ ಮಾಹಿತಿ ಬಹುಶಃ ಬಹುಪಾಲು ಮಂದಿಗೆ ತಿಳಿದಿರುವುದಿಲ್ಲ. ಕೆಲವು ವರದಿಗಳ ಪ್ರಕಾರ ಹತ್ತರಿಂದ ಹನ್ನೆರಡನೇ ವಯಸ್ಸಿಗೆ ಬಂದ ಮಕ್ಕಳಿಗೆ ಪೋಷಕರು ಫೋನ್‌ ನೀಡಬಹುದಾಗಿದೆ. ಯಾಕೆಂದರೆ ಮಕ್ಕಳು ತಮ್ಮ ಪೋಷಕರೊಂದಿಗೆ ಎಲ್ಲಾ ರೀತಿಯಲ್ಲೂ ಸ್ವಲ್ಪ ಮಟ್ಟಿಗೆ ವ್ಯವಹಾರ ಜ್ಞಾನ ಪಡೆದುಕೊಂಡಿರುತ್ತಾರೆ. ಜೊತೆಗೆ ಮಕ್ಕಳು ಸಂವಹನವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದಾಗ ಅವರಿಗೆ ಸಂವಹನದ ಗ್ಯಾಜೆಟ್ ಅನ್ನು ಪರಿಚಯಿಸಲು ಸರಿಯಾದ ಸಮಯ ಎಂದು ತಜ್ಞರು ಹೇಳಿದ್ದಾರೆ.

ನಿಮ್ಮ ಮಕ್ಕಳು ಮೊಬೈಲ್‌ ಬಳಕೆ ಮಾಡಲು ಯೋಗ್ಯವಾದ ವಯಸ್ಸು ಇದು!?

ಇನ್ನು ಪ್ಯೂ ಸಂಶೋಧನಾ ಕೇಂದ್ರದ ಸಮೀಕ್ಷೆಯ ಮಾಹಿತಿಯಂತೆ 13 ರಿಂದ 17 ವರ್ಷ ವಯಸ್ಸಿನ ಶೇ.95% ಮಕ್ಕಳು ಸ್ಮಾರ್ಟ್‌ಫೋನ್‌ಗೆ ಎಂಟ್ರಿಯಾಗಿದ್ದಾರೆ ಎಂದು ತಿಳಿಸಲಾಗಿದೆ. 2014-2015 ರ ವರದಿಗೂ 2022 ರ ಸಮೀಕ್ಷೆಗೂ ಡೇಟಾವನ್ನು ಹೋಲಿಕೆ ಮಾಡಿಕೊಂಡು ನೋಡಿದರೆ 15 ರಿಂದ 17 ವರ್ಷ ವಯಸ್ಸಿನವರು ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಪ್ರವೇಶವನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಇದಿಷ್ಟೇ ಅಲ್ಲದೆ ಕಳೆದ 8 ವರ್ಷಗಳಲ್ಲಿ ಹದಿಹರೆಯದವರಲ್ಲಿ ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಾಗಿದೆ. 2014-2015 ರ ಅಧ್ಯಯನವನ್ನು ಉಲ್ಲೇಖಿಸಿರುವ ಪ್ಯೂ ಸಂಶೋಧನಾ ಕೇಂದ್ರ, ಹಿಂದಿನ ಅಧ್ಯಯನದಲ್ಲಿ 73% ಹದಿಹರೆಯದವರು ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದರು. ಆದಾಗ್ಯೂ, ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಕಂಪ್ಯೂಟರ್‌ಗಳು ಅಥವಾ ಗೇಮಿಂಗ್ ಕನ್ಸೋಲ್‌ಗಳಿಗೆ ಪ್ರವೇಶವು ಸಂಖ್ಯಾ ವಿಭಾಗದಲ್ಲಿ ಬದಲಾಗದೆ ಉಳಿದಿದೆ.

ಇದರ ಅರ್ಥ ಏನೆಂದರೆ ಹದಿಹರೆಯದ ಮಕ್ಕಳು 2022 ರಲ್ಲಿ 95% ಸ್ಮಾರ್ಟ್‌ಫೋನ್‌ ಬಳಕೆಗೆ ಎಂಟ್ರಿಯಾಗಿದ್ದು, ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಅನ್ನು ಹೊಂದಿದ್ದ ಹದಿಹರೆಯದ ಮಕ್ಕಳ ಸಂಖ್ಯೆ 2014 ಮತ್ತು 2022 ರಲ್ಲಿ ಕ್ರಮವಾಗಿ 87% ಮತ್ತು 90% ಆಗಿದೆ ಎಂದು ತಿಳಿಸಲಾಗಿದೆ. ಅದರಲ್ಲೂ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಕೋವಿಡ್‌ ಸಹ ಇದಕ್ಕೆ ಪ್ರಮುಖ ಕಾರಣವಾಗಿದೆ.

ನಿಮ್ಮ ಮಕ್ಕಳು ಮೊಬೈಲ್‌ ಬಳಕೆ ಮಾಡಲು ಯೋಗ್ಯವಾದ ವಯಸ್ಸು ಇದು!?

ಸಾಂಕ್ರಾಮಿಕ ರೋಗವು ಎಲ್ಲಾ ರೀತಿಯ ಪಾಠವನ್ನು ಕಲಿಸಿದ್ದು, ಇದರೊಂದಿಗೆ ಸ್ಮಾರ್ಟ್‌ಫೋನ್‌ನ ಮೇಲೆ ಹೆಚ್ಚು ಅವಲಂಬಿತರಾಗುವಂತೆ ಮಾಡಿದೆ. ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಿದ್ದಾಗ ಆ ವೇಳೆ ಕೊರೊನಾ ಹರಡುವುದನ್ನು ತಡೆಯಲು ಆರಂಭದಲ್ಲಿ ಜನರು ಮನೆಯೊಳಗೆ ಇರುವಂತೆ ಕೇಳಿಕೊಳ್ಳಲಾಗಿತ್ತು. ಆ ವೇಳೆ ಸ್ಮಾರ್ಟ್‌ಫೋನ್‌ಗಳು ಜಗತ್ತನ್ನೇ ಒಂದು ರೀತಿಯಲ್ಲಿ ರಕ್ಷಣೆ ಮಾಡಿವೆ. ಜೊತೆಗೆ ಸ್ಮಾರ್ಟ್‌ಫೋನ್‌ಗಳು ಮಕ್ಕಳ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡಿರುವುದನ್ನು ಮರೆಯುವಂತಿಲ್ಲ.

ಇನ್ನು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸ್ಮಾರ್ಟ್‌ಫೋನ್ ಬಳಕೆ ಮಾಡಲು ಸೀಮಿತಗೊಳಿಸಲಾಗಿದೆ. ಮಕ್ಕಳು ವಂಚನೆಯ ಬಲೆಗೆ ಬೀಳದಂತೆ ಪೋಷಕರು ಸ್ಮಾರ್ಟ್‌ಫೋನ್ ಬಳಕೆಯ ಮೇಲೆ ಕಂಟ್ರೋಲ್‌ ಹೊಂದಿರಬೇಕಾಗುತ್ತದೆ. ಇದರೊಂದಿಗೆ ಬಳಕೆಯ ಸಮಯದ ಮಿತಿ, ಬ್ರೌಸರ್ ಇತಿಹಾಸವನ್ನು ಪರಿಶೀಲಿಸುವುದು ಪೋಷಕರ ದೊಡ್ಡ ಜವಬ್ದಾರಿಯಾಗಿದೆ ಎಂದು ಅಧ್ಯಯನಗಳು ಹೇಳುತ್ತವೆ.

Best Mobiles in India

English summary
Children between the ages of ten and twelve can start using smartphones. Experts also say that when children begin to understand communication, it is the right time to introduce them to a communication gadget.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+