Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ಗಳು ಈ ಮೂರು ವಿಶೇಷ ತಂತ್ರಜ್ಞಾನದಿಂದ ಇನ್ನಷ್ಟು ಹಗುರವಾಗಲಿವೆ!

ಇಟ್ಟಿಗೆ ಗಾತ್ರ ಇದ್ದ ಫೋನ್‌ಗಳು ಇಂದು ಬೆರಳಲ್ಲಿಯೇ ಸುಲಭವಾಗಿ ಹಿಡಿದುಕೊಳ್ಳಬಹುದಾದ ರೂಪ ಪಡೆದುಕೊಂಡಿವೆ. ಇದಕ್ಕೆ ಕಾರಣ ಸ್ಮಾರ್ಟ್‌ಫೋನ್‌ ತಂತ್ರಜ್ಞಾನದಲ್ಲಿ ಆದ ತೀವ್ರಗತಿಯ ಬೆಳವಣಿಗೆಗಳು. ಇದರ ನಡುವೆ ಕೆಲವು ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪೆನಿಗಳು ಫೋನ್‌ ಅನ್ನು ಇನ್ನೂ ಹಗುರವಾಗಿ ನಿರ್ಮಿಸುವ ಗುರಿ ಹೊಂದಿವೆ.

ಹೌದು, ಈಗಾಗಲೇ ವಿವಿಧ ರೀತಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಪ್ರೊಸೆಸರ್‌, ಕ್ಯಾಮೆರಾ ಫೀಚರ್ಸ್‌ ಹಾಗೂ ಬ್ಯಾಟರಿ ಸಾಮರ್ಥ್ಯ ಸೇರಿದಂತೆ ವಿವಿಧ ಆಯ್ಕೆಗಳ ಮೇಲೆ ಹೆಚ್ಚು ಕೇಂದ್ರೀಕರಿಸುತ್ತಿವೆ. ಅದಾಗ್ಯೂ ಇನ್ನು ಐದು ವರ್ಷಗಳಲ್ಲಿ ಫೋನ್‌ಗಳು ತೆಳ್ಳಗಿನ ರೂಪ ಪಡೆಯಲಿದ್ದು, ಇದಕ್ಕಾಗಿ ಈ ಪ್ರಮುಖ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಿವೆ. ಹಾಗಿದ್ರೆ, ಏನಿದು ಹೊಸ ತಂತ್ರಜ್ಞಾನ?, ಫೋನ್‌ಗಳು ಹಗುರವಾಗಲು ಇವು ಹೇಗೆ ಸಹಾಯ ಮಾಡುತ್ತದೆ ಎಂಬ ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಸ್ಮಾರ್ಟ್‌ಫೋನ್‌ಗಳು ಈ ಮೂರು ವಿಶೇಷ ತಂತ್ರಜ್ಞಾನದಿಂದ ಇನ್ನಷ್ಟು ಹಗುರವಾಗಲಿವೆ!

ಗ್ರ್ಯಾಫೀನ್ ಬ್ಯಾಟರಿಗಳು(Graphene Batteries): ಕಂಪೆನಿಗಳು ಸದ್ಯಕ್ಕೆ ವೇಗದ ಚಾರ್ಜಿಂಗ್ ಫೀಚರ್ಸ್‌ ಬಗ್ಗೆ ಕಾರ್ಯನಿರ್ವಹಿಸುತ್ತಿವೆ. ಆದರೆ ಮುಂದಿನ ಐದು ವರ್ಷಗಳಲ್ಲಿ ಗ್ರ್ಯಾಫೀನ್ ಬ್ಯಾಟರಿ ವಿಷಯ ಭಾರೀ ಸದ್ದು ಮಾಡಲಿದ್ದು, ಈ ಬ್ಯಾಟರಿಗಳು ಸ್ಮಾರ್ಟ್‌ಫೋನ್‌ ಅನ್ನು ಹಗುರವಾಗಿ ನಿರ್ಮಾಣ ಮಾಡಲು ಸಹಾಯ ಮಾಡಲಿದೆ. ಈ ಬ್ಯಾಟರಿ ಹೆಕ್ಸಾಗೋನಲ್ ಜಾಲರಿಯಲ್ಲಿ ಜೋಡಿಸಲಾದ ಇಂಗಾಲದ ಪರಮಾಣುಗಳ ಒಂದು ಲೇಯರ್‌ನಿಂದ ಮಾಡಿದ ವಸ್ತುವಾಗಿದೆ.

ಈ ವಸ್ತು ಹೆಚ್ಚಿನ ಶಕ್ತಿ, ನಮ್ಯತೆ, ವಾಹಕತೆ ಮತ್ತು ಪಾರದರ್ಶಕತೆಯಂತಹ ಅನೇಕ ಅತ್ಯುತ್ತಮ ಗುಣಲಕ್ಷಣಗಳನ್ನು ಹೊಂದಿದ್ದು, ಈ ಮೂಲಕ ಸಾಂಪ್ರದಾಯಿಕ ಲಿಥಿಯಂ-ಐಯಾನ್ ಬ್ಯಾಟರಿಗಳಿಗಿಂತ ಹೆಚ್ಚಿನ ಶಕ್ತಿಯ ಸಾಂದ್ರತೆ, ವೇಗವಾದ ಚಾರ್ಜಿಂಗ್ ಮತ್ತು ದೀರ್ಘಾವಧಿಯ ಬ್ಯಾಕಪ್‌ ಅನ್ನು ನೀಡಲಿವೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ಈ ಬ್ಯಾಟರಿ ಬಳಕೆ ಹೆಚ್ಚಾಗಲಿದೆ.

ಸ್ಮಾರ್ಟ್‌ಫೋನ್‌ಗಳು ಈ ಮೂರು ವಿಶೇಷ ತಂತ್ರಜ್ಞಾನದಿಂದ ಇನ್ನಷ್ಟು ಹಗುರವಾಗಲಿವೆ!

ಸುರುಳಿಯಾಕಾರದ ಡಿಸ್‌ಪ್ಲೇ : ಈಗಾಲೇ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಅದರಂತೆ ಮುಂದಿನ ದಿನಗಳಲ್ಲಿ ಬಳಕೆಗೆ ಬರುವ ರೋಲ್ ಅಪ್ ಡಿಸ್‌ಪ್ಲೇಗಳು ಎಲ್ಲದಕ್ಕೂ ಹೊಂದಿಕೊಳ್ಳುವ ಡಿಸ್‌ಪ್ಲೇ ಆಗಿರಲಿದ್ದು, ಇದನ್ನು ಸುತ್ತಿ ಇಡಬಹುದಾಗಿದೆ. ಈ ಡಿಸ್‌ಪ್ಲೇ ಯಾವುದೇ ಡಿವೈಸ್‌ನ ತೂಕವನ್ನು ಹೆಚ್ಚು ಮಾಡದೆಯೇ ಯಾವುದೇ ದೊಡ್ಡ ಗಾತ್ರದ ಡಿವೈಸ್‌ಗಳಿಗೂ ಹೊಂದಿಕೊಳ್ಳುವ ಸಾಮರ್ಥ್ಯ ಪಡೆಯಲಿವೆ.

ಈ ಡಿಸ್‌ಪ್ಲೇನಿಂದ ಕೇವಲ ಫೋನ್‌ನ ತೂಕ ಅಥವಾ ಗಾತ್ರ ಕಡಿಮೆ ಆಗುತ್ತದೆ ಎನ್ನುವ ವಿಷಯ ಅಷ್ಟೇ ಅಲ್ಲದೆ ಇವುಗಳು ಆರ್ಗ್ಯಾನಿಕ್‌ ಲೈಟ್‌ ಎಮಿಟಿಂಗ್‌ ಡಯೋಡ್ (OLED) ತಂತ್ರಜ್ಞಾನದ ಆಧಾರದ ಮೇಲೆ ನಿರ್ಮಾಣ ಆಗಲಿದ್ದು, ಪ್ರಕಾಶಮಾನವಾದ ನೋಟ ಹಾಗೂ ರೋಮಾಂಚಕ ಬಣ್ಣಗಳನ್ನು ಒದಗಿಸಲಿದೆ. ಜೊತೆಗೆ ಕಡಿಮೆ ಬ್ಯಾಟರಿ ಶಕ್ತಿಯನ್ನು ಪಡೆದುಕೊಳ್ಳುತ್ತವೆ.

ಅಂಡರ್ ಸ್ಕ್ರೀನ್ ಕ್ಯಾಮೆರಾ: ಈ ತಂತ್ರಜ್ಞಾನ ಈಗ ಭಾರೀ ಸುದ್ದಿಯಲ್ಲಿದೆ. ಹಾಗೆಯೇ ಕೆಲವು ದೊಡ್ಡ ಮಟ್ಟದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪೆನಿಗಳು ಈಗಾಗಲೇ ಈ ಆಯ್ಕೆಯನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೇರಿಸಲು ಮುಂದಾಗಿವೆ. ಇನ್ನು ಈ ಅಂಡರ್-ಡಿಸ್ಪ್ಲೇ ಕ್ಯಾಮೆರಾಗಳು ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ಕೆಳಗೆ ಇರಿಸಲಾದ ಕ್ಯಾಮೆರಾಗಳಾಗಿದ್ದು, ಇದರಿಂದಾಗಿ ನಾಚ್ ಅಥವಾ ಹೋಲ್ ಕಟೌಟ್‌ಗಳ ಅಗತ್ಯವನ್ನು ಬೇಡವಾಗಿಸುತ್ತವೆ.

ಸ್ಮಾರ್ಟ್‌ಫೋನ್‌ಗಳು ಈ ಮೂರು ವಿಶೇಷ ತಂತ್ರಜ್ಞಾನದಿಂದ ಇನ್ನಷ್ಟು ಹಗುರವಾಗಲಿವೆ!

ಈ ಸೌಲಭ್ಯದಿಂದ ಬಳಕೆದಾರರಿಗೆ ಹೆಚ್ಚು ಸಮಗ್ರ ವೀಕ್ಷಣೆಯ ಅನುಭವ ಸಿಗಲಿದ್ದು, ಕ್ಯಾಮೆರಾ ಉದ್ದೇಶಕ್ಕಾಗಿಯೇ ಫೋನ್‌ಗಳು ಹೆಚ್ಚಿನ ಡಿಸ್‌ಪ್ಲೇ ಸ್ಥಳವನ್ನು ಪಡೆಯುವ ಅಗತ್ಯವಿರುವುದಿಲ್ಲ. ಹೀಗಾಗಿ ನಾಚ್ ಶೈಲಿ ಇಲ್ಲದ ತೆಳುವಾದ ಮತ್ತು ಚಿಕ್ಕದಾದ ಸ್ಮಾರ್ಟ್‌ಫೋನ್ ಅನ್ನು ತಯಾರಿಸಲು ಸಹಕಾರಿಯಾಗಲಿದೆ. ಈ ಪ್ರಮುಖ ಮೂರು ತಂತ್ರಜ್ಞಾನದಲ್ಲಿ ನಿರ್ಮಾಣ ಆಗುವ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರಲು ನಾವು ಇನ್ನೂ ಕೆಲವು ವರ್ಷಗಳು ಕಾಯಬೇಕಿದೆ.

Best Mobiles in India

English summary
A new technology is being discovered in the smartphone segment every day, through which consumers can use a very light smartphone in a few years. Graphene batteries, Rollable display, under screen camera will play a special role in this.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+