Google search: ಗೂಗಲ್‌ನಲ್ಲಿ 2023 ರಲ್ಲಿ ಜನ ಏನೆಲ್ಲಾ ಸರ್ಚ್ ಮಾಡಿದ್ದಾರೆ ಗೊತ್ತಾ!? ಇಲ್ಲಿದೆ ಸಂಪೂರ್ಣ ಲಿಸ್ಟ್
ಗೂಗಲ್ (Google) ಎಲ್ಲವನ್ನೂ ಸಾಧ್ಯವಾಗಿಸುವ ಸಾಮರ್ಥ್ಯ ಪಡೆದಿದೆ. ಅದರಲ್ಲೂ ಎಐ ಬಲವನ್ನೂ ನೀಡಲಾಗಿದ್ದು, ಈ ಮೂಲಕ ಬಳಕೆದಾರರು ಇನ್ನಷ್ಟು ದೊಡ್ಡ ಮಟ್ಟದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಈ ನಡುವೆ ಈ ವರ್ಷ ಗೂಗಲ್‌ನಲ್ಲಿ ಜನರು ಏನೇನೆಲ್ಲಾ ಸರ್ಚ್ ಮಾಡಿದ್ದಾರೆ ಅನ್ನೋ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ.
ಹೌದು, ಗೂಗಲ್ ಪ್ರತಿವರ್ಷದ ಅಂತ್ಯದಲ್ಲಿ ಆ ವರ್ಷದಲ್ಲಿ ಜನರು ಏನೆಲ್ಲಾ ಹೆಚ್ಚಾಗಿ ಸರ್ಚ್ (Google search) ಮಾಡಿದ್ದಾರೆ ಅನ್ನುವ ಮಾಹಿತಿಯನ್ನು ತಿಳಿಸುತ್ತದೆ. ಅದರಂತೆ ನಾವು 2023ರ ಅಂತ್ಯದಲ್ಲಿದ್ದು, ಈ ವರ್ಷ ಬಳಕೆದಾರರು ಯಾವ ವಿಷಯವನ್ನು ಹೆಚ್ಚು ಜಾಲಾಡಿದ್ದಾರೆ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ವಿಷಯಗಳನ್ನು ಜನರು ಜಾಲಾಡಿದ್ದಾರೆ ಎಂದು ತಿಳಿಯೋಣ.

2023 ರಲ್ಲಿ ಗೂಗಲ್‌ನಲ್ಲಿ ಮಾಡಲಾದ ಹೆಚ್ಚಿನ ಸರ್ಚ್: ಡಿಸೆಂಬರ್ ಅಂತ್ಯ ಮತ್ತು ಹೊಸ ವರ್ಷದ ಆರಂಭದಲ್ಲಿ ನಾವಿದ್ದು, ಈ ಸಮಯದಲ್ಲಿ ಈ ವರ್ಷ ಏನೆಲ್ಲಾ ನಡೆದಿದೆ ಎಂದು ತಿಳಿದುಕೊಳ್ಳಲು ಎಲ್ಲರಿಗೂ ಬಹಳ ಕುತೂಹಲ ಇದ್ದೇ ಇರುತ್ತದೆ. ಅದರಂತೆ ಕೆಲವು ವಿಷಯಗಳು ಈ ವರ್ಷದಲ್ಲಿ ಟ್ರೆಂಡ್ ನಲ್ಲಿದ್ದು, ಜಾಗತಿಕವಾಗಿ ಬಹಳ ಸದ್ದು ಮಾಡಿವೆ. ಅದರಲ್ಲಿ ಪ್ರಮುಖವಾಗಿ ಭಾರತದಲ್ಲಿ ಚಂದ್ರಯಾನ (Chandrayaan) ವಿಷಯ ಸಖತ್ ಸೌಂಡ್ ಮಾಡಿದೆ.
2023 ರಲ್ಲಿನ ಗೂಗಲ್ ಟ್ರೆಂಡಿಂಗ್ ಸರ್ಚ್ ಲಿಸ್ಟ್:
- ಚಂದ್ರಯಾನ-3
- ಕರ್ನಾಟಕ ಚುನಾವಣಾ ಫಲಿತಾಂಶ
- ಇಸ್ರೇಲ್ ಸುದ್ದಿ
- ಸತೀಶ್ ಕೌಶಿಕ್
- ಬಜೆಟ್ 2023
- ಟರ್ಕಿ ಭೂಕಂಪ
- ಅತೀಕ್ ಅಹಮದ್
- ಮ್ಯಾಥ್ಯೂ ಪೆರ್ರಿ
- ಮಣಿಪುರ ಸುದ್ದಿ
- ಒಡಿಶಾ ರೈಲು ಅಪಘಾತ

2023 ರಲ್ಲಿ ಇಂಡಿಯಾದಲ್ಲಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಹೆಸರು:
- ಕಿಯಾರಾ ಅಡ್ವಾಣಿ
- ಶುಭಮನ್ ಗಿಲ್
- ರಚಿನ್ ರವೀಂದ್ರ
- ಮೊಹಮ್ಮದ್ ಶಮಿ
- ಎಲ್ವಿಶ್ ಯಾದವ್
- ಸಿದ್ಧಾರ್ಥ್ ಮಲ್ಹೋತ್ರಾ
- ಗ್ಲೆನ್ ಮ್ಯಾಕ್ಸ್‌ವೆಲ್
- ಡೇವಿಡ್ ಬೆಕ್ಹ್ಯಾಮ್
- ಸೂರ್ಯಕುಮಾರ್ ಯಾದವ್
- ಟ್ರಾವಿಸ್ ಹೆಡ್
2023 ರಲ್ಲಿ ಹೆಚ್ಚು ಸರ್ಚ್ ಮಾಡಲಾದ ಸಿನಿಮಾ ಹಾಗೂ ಓಟಿಟಿ ಶೋಗಳು:
- ಫರ್ಜಿ
- ವೆಡ್‌ನೆಸ್‌ಡೇ
- ಅಸುರ
- ರಾಣಾ ನಾಯ್ಡು
- ದಿ ಲಾಸ್ಟ್ ಆಫ್ ಅಸ್
- ಹಗರಣ 2003
- ಬಿಗ್ ಬಾಸ್ 17
- ಗನ್ಸ್ ಆಂಡ್ ಗುಲಾಬ್ಸ್
- ಸೆಕ್ಸ್/ಲೈಫ್
- ತಾಜಾ ಖಬರ್
2023 ರಲ್ಲಿ ಹೆಚ್ಚು ಹುಡುಕಲ್ಪಟ್ಟ ಪ್ರವಾಸಿ ತಾಣಗಳು:
- ವಿಯೆಟ್ನಾಂ
- ಗೋವಾ
- ಬಾಲಿ
- ಶ್ರೀಲಂಕಾ
- ಥೈಲ್ಯಾಂಡ್
- ಕಾಶ್ಮೀರ
- ಮಡಿಕೇರಿ
- ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
- ಇಟಲಿ
- ಸ್ವಿಟ್ಜರ್ಲೆಂಡ್

ಈ ನಡುವೆ ಏನು, ಹೇಗೆ ಎಂಬ ವಿಷಯಗಳನ್ನು ಹೆಚ್ಚಾಗಿ ಸರ್ಚ್ ಮಾಡಲಾಗಿದ್ದು, ಅವು ಯಾವುವು ಅನ್ನೋದನ್ನು ಇಲ್ಲಿ ನೋಡಿ.
- G20 ಎಂದರೇನು?
- ಯುಸಿಸಿ ಎಂದರೇನು?
- ಚಾಟ್ ಜಿಪಿಟಿ ಎಂದರೇನು?
- ಹಮಾಸ್ ಎಂದರೇನು?
- 28 ಸೆಪ್ಟೆಂಬರ್ 2023 ರಂದು ಏನು?
- ಚಂದ್ರಯಾನ 3 ಎಂದರೇನು?
- ಇನ್‌ಸ್ಟಾಗ್ರಾಮ್ ನಲ್ಲಿ ಥ್ರೆಡ್ಸ್ ಎಂದರೇನು?
- ಕ್ರಿಕೆಟ್‌ನಲ್ಲಿ ಸಮಯ ಮೀರಿದೆ ಎಂದರೇನು?
- ಐಪಿಎಲ್‌ನಲ್ಲಿ ಪ್ರಭಾವಿ ಆಟಗಾರ ಎಂದರೇನು?
- ಸೆಂಗೋಲ್ ಎಂದರೇನು?
ಇದರೊಂದಿಗೆ ಕೆಲವು ಹೇಗೆ ಎಂಬ ವಿಷಯದ ಆಧಾರದಲ್ಲೂ ಸರ್ಚ್ ಮಾಡಲಾಗಿದೆ. ಅವುಗಳ ಲಿಸ್ಟ್ ಇಲ್ಲಿದೆ:
- ಮನೆಮದ್ದುಗಳಿಂದ ಚರ್ಮ ಮತ್ತು ಕೂದಲಿಗೆ ಸೂರ್ಯನಿಂದ ಉಂಟಾಗುವ ಹಾನಿಯನ್ನು ತಡೆಯುವುದು ಹೇಗೆ?
- ಯೂಟ್ಯೂಬ್ ನಲ್ಲಿ 5k ಫಾಲೋವರ್ಸ್ ಪಡೆಯುವುದು ಹೇಗೆ?
- ಕಬಡ್ಡಿಯಲ್ಲಿ ಉತ್ತಮ ಸಾಧನೆ ಮಾಡುವುದು ಹೇಗೆ?
- ಕಾರಿನ ಮೈಲೇಜ್ ಅನ್ನು ಹೇಗೆ ಸುಧಾರಿಸುವುದು?
- ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗುವುದು ಹೇಗೆ?
- ರಕ್ಷಾಬಂಧನದಂದು ನನ್ನ ತಂಗಿಯನ್ನು ಅಚ್ಚರಿಗೊಳಿಸುವುದು ಹೇಗೆ?
- ಶುದ್ಧ ಕಾಂಜೀವರಂ ರೇಷ್ಮೆ ಸೀರೆಯನ್ನು ಗುರುತಿಸುವುದು ಹೇಗೆ?
- ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಅನ್ನು ಹೇಗೆ ಪರಿಶೀಲಿಸುವುದು?
- ವಾಟ್ಸಾಪ್ ಚಾನೆಲ್ ಅನ್ನು ಹೇಗೆ ರಚಿಸುವುದು?
- ಇನ್‌ಸ್ಟಾಗ್ರಾಮ್ ನಲ್ಲಿ ನೀಲಿ ಟಿಕ್ ಅನ್ನು ಹೇಗೆ ಪಡೆಯುವುದು?


Click it and Unblock the Notifications








