ಸುಂದರ್ ಪಿಚೈ ಬಳಕೆ ಮಾಡುವ ಸ್ಮಾರ್ಟ್‌ಫೋನ್ ಯಾವುದು? ಅಚ್ಚರಿ ಪಡ್ತೀರ!
ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ಸಾಮಾನ್ಯವಾಗಿ ಯಾವೆಲ್ಲಾ ಸ್ಮಾರ್ಟ್‌ಡಿವೈಸ್ ಬಳಕೆ ಮಾಡುತ್ತಾರೆ ಎನ್ನುವ ಕುತೂಹಲ ಸಾಮಾನ್ಯ ಜನರಿಗೆ ಇದ್ದೇ ಇರುತ್ತದೆ. ಅದರಲ್ಲೂ ಟೆಕ್ ದೈತ್ಯ ಗೂಗಲ್ ಸಿಇಒ ಆಗಿರುವ ಸುಂದರ್ ಪಿಚೈ ವಿಷಯಕ್ಕೆ ಬಂದಾಗ ಸಾಮಾನ್ಯವಾಗಿ ಈ ಕುತೂಹಲ ಹೆಚ್ಚಾಗಿಯೇ ಇರುತ್ತದೆ. ಅದರಂತೆ ಕೊನೆಗೂ ಪಿಚೈ ಅವರು ತಾವು ಬಳಕೆ ಮಾಡುವ ಸ್ಮಾರ್ಟ್‌ಫೋನ್ ಯಾವುದು ಎಂದು ತಿಳಿಸಿದ್ದಾರೆ.
ಹೌದು, ಗೂಗಲ್ ಸಿಇಒ ಸುಂದರ್ ಪಿಚೈ ಅವರು ಯೂಟ್ಯೂಬರ್ ಔನ್ ಮೈನಿ ಅವರ ಸಂದರ್ಶನದಲ್ಲಿ ಹಲವಾರು ಕುತೂಹಲಕಾರಿ ಮಾಹಿತಿಯನ್ನು ನೀಡಿದ್ದಾರೆ. ಇದರೊಂದಿಗೆ ಅವರು ಬಳಕೆ ಮಾಡುವ ಸ್ಮಾರ್ಟ್‌ಫೋನ್ ಯಾವುದು ಎಂಬ ಬಗ್ಗೆಯೂ ತಿಳಿಸಿದ್ದು, ಈ ವಿಷಯ ಕೇಳಿ ಬಹಳಷ್ಟು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ, ಪಿಚೈ ಯಾವೆಲ್ಲಾ ಫೋನ್‌ಗಳನ್ನು ಬಳಕೆ ಮಾಡುತ್ತಾರೆ?, ಯಾವ ಉದ್ದೇಶಕ್ಕೆ ಬಳಕೆ ಮಾಡುತ್ತಾರೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಸುಂದರ್ ಪಿಚೈ ಯಾವ ಫೋನ್ ಬಳಕೆ ಮಾಡುತ್ತಾರೆ?: ಸ್ಮಾರ್ಟ್‌ಫೋನ್‌ಗಳ ಭವಿಷ್ಯದ ಕುರಿತು ಸಂದರ್ಶನದಲ್ಲಿ ಮಾತನಾಡುವ ವೇಳೆ ಪಿಚೈ ಅವರು ಇಂಟ್ರೆಸ್ಟಿಂಗ್ ಮಾಹಿತಿ ನೀಡಿದ್ದು, ಅದರಂತೆ ಪಿಕ್ಸೆಲ್ ಫೋನ್‌ಗಳಲ್ಲಿ ಹೆಚ್ಚು ಕೇಂದ್ರೀಕರಿಸಿದ್ದಾರಂತೆ. ಹಾಗೆಯೇ ಪಿಕ್ಸೆಲ್ ಪೋನ್ ಅನ್ನು ಸಹ ಬಳಕೆ ಮಾಡುತ್ತಿದ್ದು, ಈ ಫೋನ್ ಜೊತೆಗೆ ಇನ್ನೂ ಎರಡು ಇತರೆ ಬ್ರ್ಯಾಂಡ್‌ನ ಫೋನ್‌ಗಳನ್ನು ಸಹ ಇವರು ಬಳಕೆ ಮಾಡುತ್ತಿದ್ದಾರೆ.
ಸುಂದರ್ ಪಿಚೈ ಅವರು ತಮ್ಮದೇ ಕಂಪೆನಿಯ ಅಂದರೆ ಗೂಗಲ್‌ನ ಪಿಕ್ಸೆಲ್ 7 ಪ್ರೊ ಸ್ಮಾರ್ಟ್‌ಫೋನ್ ಜೊತೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಹಾಗೂ ಐಫೋನ್ ಅನ್ನು ಸಹ ಬಳಕೆ ಮಾಡುತ್ತಾರಂತೆ. ಆದರೆ, ಈ ಫೋನ್‌ಗಳನ್ನು ಕೇವಲ ಪರೀಕ್ಷಾ ದೃಷ್ಟಿಯಿಂದ ಬಳಕೆ ಮಾಡುತ್ತೇನೆ ಎಂದು ತಿಳಿಸಲಾಗಿದ್ದು, ಈ ಮೂಲಕ ಒಟ್ಟಾರೆ ಮೂರು ಫೋನ್‌ಗಳನ್ನು ಇವರು ಬಳಕೆ ಮಾಡುತ್ತಿದ್ದಾರೆ ಎನ್ನುವ ಇಂಟ್ರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ.

ಇನ್ನೂ ಒಂದು ಫೋನ್ ಬಳಕೆ ಮಾಡಲು ನಮ್ಮಂತಹ ಸಾಮಾನ್ಯ ಜನರಿಗೆ ಸಮಯ ಇರುವುದಿಲ್ಲ. ಅಂತಹುದರಲ್ಲಿ ಅವರು ಒಬ್ಬ ಸಿಇಒ ಆಗಿ ಹೇಗೆ ಮೂರು ಫೋನ್‌ಗಳನ್ನು ಬಳಕೆ ಮಾಡುತ್ತಾರೆ ಎನ್ನುವ ಪ್ರಶ್ನೆ ಸಹ ನಿಮ್ಮಲ್ಲಿ ಮೂಡಿರಬಹುದು. ಇದಕ್ಕೆ ಉತ್ತರ ಸಹ ನೀಡಿರುವ ಪಿಚೈ ಅವರು ಸ್ಮಾರ್ಟ್‌ಫೋನ್‌ಗಳನ್ನು ಬಳಕೆ ಮಾಡಲು ಸಾಕಷ್ಟು ಸಮಯವನ್ನು ಹೊಂದಿರುತ್ತಾರಂತೆ. ಅದರಲ್ಲೂ ಪ್ರಯಾಣ ಮಾಡುವಾಗ ಇವುಗಳ ಬಳಕೆ ಹೆಚ್ಚಿರುತ್ತದೆ ಎಂದು ತಿಳಿಸಿದ್ದಾರೆ.
ಮುಂದುವರೆದು ತಮ್ಮ ಫೋನ್‌ಗಳ ಬಗ್ಗೆ ಮಾಹಿತಿ ನೀಡಿರುವ ಪಿಚೈ, ನಾನು ಇಮೇಲ್‌ಗಳನ್ನು ಪರಿಶೀಲಿಸಲು ನನ್ನ ಸ್ಮಾರ್ಟ್‌ಫೋನ್ ಹೆಚ್ಚಾಗಿ ಬಳಕೆ ಮಾಡುತ್ತಿರುತ್ತೇನೆ. ಅದರಲ್ಲೂ ಹಗುರವಾದ ಫೋನ್ ಅನ್ನು ಬಳಸಲು ಹೆಚ್ಚು ಇಷ್ಟಪಡುತ್ತೇವೆ ಎಂದೂ ಸಹ ತಿಳಿಸಿದ್ದಾರೆ. ಜೊತೆಗೆ ಈಗ ಪಿಕ್ಸೆಲ್ 7 ಪ್ರೊ ಫೋನ್ ಅನ್ನು ಬಳಕೆ ಮಾಡುತ್ತಿದ್ದರೂ ಸಹ ಸ್ಯಾಮ್‌ಸಂಗ್ ಗ್ಯಾಲಕ್ಸಿಯಿಂದ ಹಿಡಿದು ಹೊಸ ಪಿಕ್ಸೆಲ್ ಫೋಲ್ಡ್‌ನಿಂದ ಐಫೋನ್‌ವರೆಗೆ ಯಾವೆಲ್ಲಾ ಹೊಸ ಫೋನ್‌ಗಳು ಲಾಂಚ್ ಆಗುತ್ತವೆಯೋ ಅವುಗಳನ್ನು ಪರೀಕ್ಷೆ ದೃಷ್ಟಿಯಿಂದ ಬಳಕೆ ಮಾಡುತ್ತಾರಂತೆ.

ಹಾಗಿದ್ರೆ ಮೂರು ಫೋನ್ ಬಳಕೆ ಮಾಡುವ ಪಿಚೈ ಅವರು ಎಲ್ಲದ್ದಕ್ಕೂ ಬೇರೆ ಬೇರೆ ಸಿಮ್ ಅನ್ನು ಬಳಕೆ ಮಾಡಬೇಕಲ್ಲವೇ ಎಂದು ನೀವೇನಾದರೂ ಅಂದುಕೊಂಡಿದ್ದರೆ ನಿಮ್ಮ ಅನಿಸಿಕೆ ಸರಿಯಾಗಿಯೇ ಇದೆ. ಹೌದು, ಇವರು ತಮ್ಮ ವಿಭಿನ್ನ ಸ್ಮಾರ್ಟ್‌ಫೋನ್‌ಗಳಿಗೆ ವಿಭಿನ್ನ ಸಿಮ್ ಕಾರ್ಡ್‌ಗಳನ್ನು ಹೊಂದಿದ್ದಾರೆ. ಈ ಬಗ್ಗೆ ಅವರೇ ಸ್ಪಷ್ಟಪಡಿಸಿದ್ದಾರೆ. ಇನ್ನುಳಿದಂತೆ ಈ ಸಂದರ್ಶನ ಯೂಟ್ಯೂಬ್‌ನಲ್ಲಿ ಲಭ್ಯವಿದ್ದು, ಈ ವಿಡಿಯೋ ಈಗಾಗಲೇ 2.5 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.


Click it and Unblock the Notifications








