ಹೆಚ್ಚು ಸಿಮ್‌ ಕಾರ್ಡ್‌ ಬಳಕೆ ಮಾಡುವ ಗ್ರಾಹಕರೇ, ಇಲ್ಲಿ ಗಮನಿಸಿ!

|

ಭಾರತದಾದ್ಯಂತ ಗ್ರಾಹಕರು ತಮ್ಮ 9 ಕ್ಕೂ ಹೆಚ್ಚು ಸಂಪರ್ಕ ಹೊಂದಿರುವ ಸಿಮ್‌ಗಳನ್ನು ಮರುಪರಿಶೀಲಿಸುವಂತೆ ದೂರಸಂಪರ್ಕ ಇಲಾಖೆಯು (Department of Telecommunications) ಕೇಳಿಕೊಂಡಿದೆ. ಪರಿಶೀಲನೆ ಮಾಡದಿದ್ದಲ್ಲಿ ಆ ಸಿಮ್‌ಗಳ ಸಂಪರ್ಕ ಕಡಿತಗೊಳಿಸುವಂತೆ ಆದೇಶವನ್ನು ಹೊರಡಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಅಸ್ಸಾಂ ರಾಜ್ಯಗಳಲ್ಲಿ, 6 ಕ್ಕಿಂತ ಹೆಚ್ಚು ಸಂಪರ್ಕ ಹೊಂದಿರುವ ಗ್ರಾಹಕರ ಸಿಮ್ ಅನ್ನು ಪರಿಶೀಲಿಸಲಾಗುತ್ತದೆ.

ಸ್ವಯಂಚಾಲಿತ

ಆರ್ಥಿಕ ಅಪರಾಧ, ಸ್ವಯಂಚಾಲಿತ ಕರೆಗಳು ಮತ್ತು ವಂಚನೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ. ಡಿಸೆಂಬರ್ 7 ರಂದು ದೂರಸಂಪರ್ಕ ಇಲಾಖೆ ಹೊರಡಿಸಿರುವ ಆದೇಶದಂತೆ ಚಂದಾದಾರರಿಗೆ ಯಾವ ಸಂಪರ್ಕವನ್ನು ಮುಂದುವರಿಸಬೇಕು ಮತ್ತು ಯಾವುದನ್ನು ನಿಷ್ಕ್ರಿಯಗೊಳಿಸಬೇಕು ಎಂಬ ಆಯ್ಕೆಯನ್ನು ನೀಡಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕಂಡುಬಂದರೆ

ಎಲ್ಲಾ TSPಗಳು (ಟೆಲಿಕಾಂ ಸೇವಾ ಪೂರೈಕೆದಾರರು) ಸೇರಿದಂತೆ ಪ್ರತಿ ವ್ಯಕ್ತಿಗೆ (6 ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಅಸ್ಸಾಂ LSA) 9 ಕ್ಕಿಂತ ಹೆಚ್ಚು ಸಂಪರ್ಕಗಳಿವೆ ಎಂದು ಕಂಡುಬಂದರೆ, ಎಲ್ಲಾ ಮರು-ಪರಿಶೀಲನೆಗಾಗಿ ಮೊಬೈಲ್ ಸಂಪರ್ಕಗಳನ್ನು ಫ್ಲ್ಯಾಗ್ ಮಾಡಲಾಗುವುದು ಎಂದು ದೂರಸಂಪರ್ಕ ಇಲಾಖೆಯು (DoT) ಆದೇಶವು ತಿಳಿಸಿದೆ.

ಹೊರಹೋಗುವ

ನಿಯಮಗಳ ಪ್ರಕಾರ ಬಳಕೆಯಲ್ಲಿಲ್ಲದ ಡೇಟಾಬೇಸ್‌ನಿಂದ ಎಲ್ಲಾ ಫ್ಲ್ಯಾಗ್ ಮಾಡಲಾದ ಮೊಬೈಲ್ ಸಂಪರ್ಕಗಳನ್ನು ತೆಗೆದುಹಾಕಲು ಟೆಲಿಕಾಂ ಆಪರೇಟರ್‌ಗಳಿಗೆ ದೂರಸಂಪರ್ಕ ಇಲಾಖೆಯು (DoT) ಕೇಳಿದೆ. ಫ್ಲ್ಯಾಗ್ ಮಾಡಿದ ಸಂಪರ್ಕದ ಹೊರಹೋಗುವ (ಡೇಟಾ ಸೇವೆ ಸೇರಿದಂತೆ) ಸೌಲಭ್ಯವನ್ನು 30 ದಿನಗಳಲ್ಲಿ ಸ್ಥಗಿತಮಾಡಲಾಗುತ್ತದೆ ಮತ್ತು ಒಳಬರುವ ಕರೆ ಸೇವೆಯನ್ನು 45 ದಿನಗಳಲ್ಲಿ ಸ್ಥಗಿತಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಪದೇ ಪದೇ ಸಿಮ್ ಪೋರ್ಟ್ ಮಾಡಬಹುದೇ?

ಪದೇ ಪದೇ ಸಿಮ್ ಪೋರ್ಟ್ ಮಾಡಬಹುದೇ?

ಬಳಕೆದಾರರು ಎಷ್ಟು ಬಾರಿ ಬೇಕಾದರೂ ಪೋರ್ಟ್ (PORT) ಮಾಡಬಹುದು. ಇದಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದರೆ ಯಾವುದೇ ನೆಟ್‌ವರ್ಕ್‌ಗೆ ಪೋರ್ಟ್ ಆಗಬೇಕಾದರೂ, ಪ್ರಸ್ತುತ ಇರುವ ನೆಟ್‌ವರ್ಕ್‌ನಲ್ಲಿ ಬಳಕೆದಾರರು ಕನಿಷ್ಟ 90 ದಿನ ಪೂರೈಸಬೇಕು. ಈ ನಿರ್ದಿಷ್ಟ ಅವಧಿ ಪೂರ್ಣಗೊಳಿಸದೇ ಇನ್ನೊಂದು ಟೆಲಿಕಾಂಗೆ ಪೋರ್ಟ್ ಮಾಡಲು ಸಾಧ್ಯ ಆಗುವುದಿಲ್ಲ. ಹೀಗಾಗಿ ಬಳಕೆದಾರರು ಪದೇ ಪದೇ ಸಿಮ್ ಪೋರ್ಟ್ ಮಾಡಬಹುದು. ಆದರೆ ಕಡಿಮೆ ಎಂದರೂ ಒಂದು ನೆಟ್‌ವರ್ಕ್‌ನಲ್ಲಿ 90 ದಿನಗಳ ಅವಧಿ ಪೂರೈಸಿರಬೇಕು. ಹಾಗಾದರೇ ಮೊಬೈಲ್ ಪೋರ್ಟ್‌ ಮಾಡುವ ಹಂತಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೊಬೈಲ್‌ ನಂಬರ್ ಪೋರ್ಟ್ ಮಾಡಲು ಈ ಕ್ರಮಗಳನ್ನು ಅನುಸರಿಸಿ:

ಮೊಬೈಲ್‌ ನಂಬರ್ ಪೋರ್ಟ್ ಮಾಡಲು ಈ ಕ್ರಮಗಳನ್ನು ಅನುಸರಿಸಿ:

* ಸಿಮ್ ಪೋರ್ಟ್‌ ಮಾಡಲು UPC (ಯೂನಿಕ್ ಪೋರ್ಟಿಂಗ್ ಕೋಡ್) ಅಗತ್ಯ.
* ಅದಕ್ಕಾಗಿ ಮೊದಲು UPC (ಯೂನಿಕ್ ಪೋರ್ಟಿಂಗ್ ಕೋಡ್) ಜನರೇಟ್ ಮಾಡುವುದು.
* ಕ್ಯಾಪಿಟಲ್ ಅಕ್ಷರಗಳಲ್ಲಿ PORT-ಸ್ಪೇಸ್‌-ನಿಮ್ಮ ನೊಬೈಲ್ ಸಂಖ್ಯೆ ನಮೂದಿಸಿ. 1900 ನಂಬರ್‌ಗೆ ಎಸ್‌ಎಮ್‌ಎಸ್‌ ಮಾಡುವುದು.
* ಆ ಬಳಿಕ UPC ಎಸ್‌ಎಮ್‌ಎಸ್‌ ಲಭ್ಯವಾಗುತ್ತದೆ.
* ಪೋರ್ಟ್ ಆಗ ಬಯಸುವ ಟೆಲಿಕಾಂ ಸಂಸ್ಥೆಯ ಸರ್ವೀಸ್ ಸೆಂಟರ್‌ಗೆ ಭೇಟಿ ನೀಡುವುದು.
* Customer Acquisition Form (CAF) ತುಂಬುವುದು ಮತ್ತು ಕೆವೈಸಿ ದಾಖಲಾತಿ ನೀಡುವುದು.
* 5 ದಿನಗಳ ಒಳಗಾಗಿ ಸಿಮ್ ಪೋರ್ಟ್ ಆಗುವುದು.

ಸಿಮ್ ಪೋರ್ಟ್‌ ಮಾಡುವುದು ಹೇಗೆ?..ಇಲ್ಲಿದೆ ಮಾಹಿತಿ:

ಸಿಮ್ ಪೋರ್ಟ್‌ ಮಾಡುವುದು ಹೇಗೆ?..ಇಲ್ಲಿದೆ ಮಾಹಿತಿ:

ಸಿಮ್ ಪೋರ್ಟ್ ಸೇವೆ ಪ್ರಾರಂಭಿಸಲು, ಬಳಕೆದಾರರು ತಮ್ಮ ಮೊಬೈಲ್‌ ಸಂಖ್ಯೆಯಿಂದ, ಫೋನ್‌ನಲ್ಲಿರುವ ನಾರ್ಮಲ್ ಮೆಸೇಜಿಂಗ್ ಅಪ್ಲಿಕೇಶನ್ ಮೂಲಕ ಎಸ್‌ಎಮ್‌ಎಸ್‌ ಕಳುಹಿಸಬೇಕು. ಮೆಸೆಜ್‌ನಲ್ಲಿ ‘PORT' ಎಂದು ಬರೆಯುವುದು ನಂತರ ಸ್ಪೇಸ್ ‘ಮೊಬೈಲ್ ಸಂಖ್ಯೆ' ನಮೂದಿಸುವುದು ಬಳಿಕ 1900 ನಂಬರ್‌ಗೆ ಎಸ್‌ಎಮ್‌ಎಸ್‌ ಕಳುಹಿಸುವುದು. ಎಸ್‌ಎಮ್‌ಎಸ್‌ ಸೆಂಡ್ ಆದ ಬಳಿಕ ಬಳಕೆದಾರರ ಇನ್‌ಬಾಕ್ಸ್‌ಗೆ ಸಿಮ್ ಪೋರ್ಟಿಂಗ್ ಕೋಡ್ ಲಭ್ಯವಾಗುವುದು.

ಹೊಸ ಸಿಮ್ ಖರೀದಿಸಲು ಅವಶ್ಯ ಇರುವ ದಾಖಲೆಗಳು

ಹೊಸ ಸಿಮ್ ಖರೀದಿಸಲು ಅವಶ್ಯ ಇರುವ ದಾಖಲೆಗಳು

ಹೊಸ ಸಿಮ್ ಪಡೆಯುವ ಸಮಯದಲ್ಲಿ, ಬಳಕೆದಾರರು ದೃಢೀಕರಣಕ್ಕಾಗಿ ಗುರುತಿನ ಪುರಾವೆ (POI) ಮತ್ತು ವಿಳಾಸದ ಪುರಾವೆ (POA) ಅನ್ನು ನೀಡುವುದು ಅಗತ್ಯ. ಹಾಗಾದರೇ ಹೊಸ ಸಿಮ್ ಪಡೆಯಲು ಈ ಕೆಳಗೆ ಸೂಚಿಸಲಾದ ಅಗತ್ಯ ದಾಖಲೆಗಳಲ್ಲಿ ಯಾವುದಾರೂ ಒಂದು ದಾಖಲೆ ಇದ್ದರೂ ಸರಿ.
* ಆಧಾರ್ ಕಾರ್ಡ್
* ವೋಟರ್ ಐಡಿ
* ಪಾಸ್‌ಪೋರ್ಟ್‌
* ಡ್ರೈವಿಂಗ್ ಲೈಸೆನ್ಸ್‌

Best Mobiles in India

English summary
Do You Using Multiple SIM Cards? Be warned. DoT has come up with this new rule.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X