ಫೇಸ್‌ಬುಕ್‌ನಲ್ಲಿನ್ನು ಕೇವಲ 26 ಸ್ನೇಹಿತರ ಆಯ್ಕೆ ಸುದ್ದಿ ನಿಜವೇ?
ಸುಳ್ಳು ಸುದ್ದಿಗಳನ್ನು ತಡೆಯಲು ವಾಟ್ಸ್ಆಪ್ ಮೆಸೇಜ್ ಫಾರ್ವರ್ಡ್ ಮಾಡುವುದಕ್ಕೆ ಮಿತಿ ಏರಿದ ನಂತರ ಮತ್ತೊಂದು ಸುಳ್ಳುಸುದ್ದಿ ಹುಟ್ಟಿಕೊಂಡಿದೆ. ಫೇಸ್‌ಬುಕ್ ನ್ಯೂಸ್‌ಫೀಡ್‌ನಲ್ಲಿ ಪೋಸ್ಟ್ ಮಾಡಿದ ಬಳಿಕ ಸ್ನೇಹಿತರನ್ನು ಆಯ್ಕೆ ಮಾಡುವಂತೆ ಹೇಳಲಾಗುತ್ತದೆ. ಅದರಲ್ಲಿ ಕೇವಲ 26 ಸ್ನೇಹಿತರನ್ನು ಆಯ್ಕೆ ಮಾಡಲು ಮಾತ್ರ ಅವಕಾಶವಿದೆ ಎಂಬ ಹೊಸ ಸುಳ್ಳು ಸುದ್ದಿ ಹುಟ್ಟಿದೆ.
ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ವಾಟ್ಸ್ಆಪ್ ತೆಗೆದುಕೊಂಡ ಕ್ರಮ ಕೈಗೊಂಡ ನಂತರ, ಫೇಸ್‌ಬುಕ್ ಕೂಡ ಇಂತಹ ಕ್ರಮ ಕೈಗೊಂಡಿದೆ ಎಂದು ಸುಳ್ಳು ಸುದ್ದಿ ಹರಿಬಿಡಲಾಗಿದೆ. ಸದ್ಯ ಈ ಸುಳ್ಳಸುದ್ದಿಯ ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಸುಳ್ಳು ಸುದ್ದಿಯನ್ನು ಫೇಸ್‌ಬುಕ್ ಬಳಕೆದಾರರು ನಂಬುತ್ತಿರುವುದನ್ನು ಎಲ್ಲಾ ಮಾಧ್ಯಮಗಳು ವರದಿಮಾಡಿವೆ.

ಫೇಸ್‌ಬುಕ್‌ನಲ್ಲಿ ನಿಮ್ಮ ಆಯ್ಕೆಯಂತೆ ನಿಮ್ಮ ಯಾವುದೇ ಪೋಸ್ಟ್ ಗಳನ್ನು ಇತರರು ನೋಡಬಹುದು. ಆದರೆ, ನಿಮ್ಮ ಫೇಸ್‌ಬುಕ್ ನ್ಯೂಸ್‌ಫೀಡ್ ಪೋಸ್ಟ್‌ಗಳನ್ನು ನಿಮ್ಮ ಸ್ನೇಹಿತರಲ್ಲಿ ಕೇವಲ 26 ಜನ ಮಾತ್ರ ನೋಡುವಂತೆ ಫೇಸ್‌ಬುಕ್‌ನಲ್ಲಿ ಮಿತಿ ಹೇರಿದ್ದು, ಪೋಸ್ಟ್ ಅನ್ನು ಅವರಿಗೆ ಮಾತ್ರ ಟ್ಯಾಗ್ ಮಾಡಿ ಎಂದು ಹೇಳಿರುವ ಸುಳ್ಳುಸುದ್ದಿಯು ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆದರೆ, ವಾಸ್ತವವಾಗಿ ಫೇಸ್‌ಬುಕ್ ಯಾವುದೇ ರಿತಿಯ ಬದಲಾವಣೆಗಳನ್ನು ಮಾಡಿಕೊಂಡಿಲ್ಲ. ಈಗ ಹಬ್ಬಿರುವ ಸುಳ್ಳು ಸುದ್ದಿಯಂತೆ ನ್ಯೂಸ್‌ಫೀಡ್‌ನಲ್ಲಿ ಪೋಸ್ಟ್ ಮಾಡಿದ ಬಳಿಕ ಸ್ನೇಹಿತರನ್ನು ಆಯ್ಕೆ ಮಾಡುವ ಮಿತಿಯನ್ನೂ ಹೇರಿಲ್ಲ ಎಂಬುದು ಸ್ಪಷ್ಟವಾಗಿದೆ. ಸುಳ್ಳುಸುದ್ದಿಯನ್ನು ತಡೆಯಲು ಆದ ಒಂದು ಬದಲಾವಣೆಯೇ ಮತ್ತೆ ಸುಳ್ಳುಸುದ್ದಿಯಾಗಿ ಹುಟ್ಟಿರುವುದು ಇಲ್ಲಿ ಸ್ಪಷ್ಟವಾಗಿದೆ.

ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಏನೆಂದರೆ, ಫೇಸ್‌ಬುಕ್ ಕಳೆದ ವರ್ಷದಿಂದಲೇ ಸ್ನೇಹಿತರ ನ್ಯೂಸ್‌ಫೀಡ್‌ಗಳನ್ನು ನೋಡುವ ಸಮಯಾವಕಾಶವನ್ನು ಹೆಚ್ಚಿಸಿದೆ. ಸುದ್ದಿಗಳಿಗಿಂತಲೂ ಖಾತೆದಾರರ ಸ್ನೇಹಿತರ ಪೋಸ್ಟ್‌ಗಳೂ ಫೇಸ್‌ಬುಕ್ ಖಾತೆಯಲ್ಲಿ ಹೆಚ್ಚು ಕಾಣಿಸುವಂತೆ ಫೇಸ್‌ಬುಕ್ ಮಾರ್ಪಾಡುಮಾಡಿದೆ ಎಂಬ ಸತ್ಯ ಸುದ್ದಿಯನ್ನು ಈ ಸುಳ್ಳುಸುದ್ದಿ ಮರೆಮಾಚಿದೆ.!
ಓದಿರಿ: ವಾಟ್ಸ್‌ಆಪ್ ಹೇಗೆ ದುಡ್ಡು ಮಾಡುತ್ತೆ ಅಂತ ಗೊತ್ತಾದ್ರೆ ಬೆಚ್ಚಿಬೀಳ್ತೀರಾ!!


Click it and Unblock the Notifications








