ಸ್ಮಾರ್ಟ್‌ಟಿವಿ ಬಳಿಯೇ ಎಸಿ ಇದೆಯೇ? ಈಗಲೇ ಬದಲಾಯಿಸಿ, ಯಾಕಂದ್ರೆ!?
ಈಗಂತೂ ಪ್ರತಿಯೊಬ್ಬರ ಮನೆಯಲ್ಲೂ ಸಹ ಸ್ಮಾರ್ಟ್‌ಟಿವಿ (Smart TV ) ಬಳಕೆ ಮಾಡಲಾಗುತ್ತದೆ. ಈ ಮೂಲಕ ಸಮಾಜದಲ್ಲಿ ಆಗು ಹೋಗುವ ವಿಚಾರಗಳನ್ನು ತಿಳಿದುಕೊಳ್ಳುತ್ತಾರೆ. ಇದರೊಂದಿಗೆ ಉತ್ತಮ ಮನರಂಜನೆ ಸಹ ಲಭ್ಯ. ಈ ನಡುವೆ ಮನೆಯಲ್ಲಿ ಎಸಿ ಬಳಕೆ ಸಹ ಸಾಮಾನ್ಯವಾಗಿದೆ. ಅದರಂತೆ ಸ್ಮಾರ್ಟ್‌ಟಿವಿ ಬಳಿಯೇ ಎಸಿ (AC,Air Conditioner) ಬಳಕೆ ಮಾಡುವವರು ತಪ್ಪದೇ ಈ ಎಚ್ಚರಿಕೆ ವಹಿಸಿಬೇಕಿದೆ.
ಹೌದು, ಹವಾನಿಯಂತ್ರಣಗಳು ಅಂದರೆ ಎಸಿಯನ್ನು ಇಂದಿನ ದಿನಗಳಲ್ಲಿ ನಗರ ಹಾಗೂ ಮಹಾನಗರಗಳಲ್ಲಿ ಸಾಮಾನ್ಯವಾಗಿ ಬಳಕೆ ಮಾಡಲಾಗುತ್ತದೆ. ಎಸಿ ಹಾಗೂ ದೊಡ್ಡ ಸ್ಮಾರ್ಟ್‌ಟಿವಿ ಬಳಕೆ ಇಂದು ಇಂದು ರೀತಿಯ ಪ್ರತಿಷ್ಠೆಯಾಗಿಯೂ ಕಾಣಿಸಿಕೊಳ್ಳುತ್ತದೆ. ಆದರೆ, ಇವೆರಡನ್ನೂ ಅಕ್ಕ ಪಕ್ಕ ಇಟ್ಟು ಬಳಕೆ ಮಾಡಲು ಮುಂದಾಗಿದ್ದರೆ ಈಗಲೇ ಅವುಗಳನ್ನು ಬೇರೆ ಮಾಡಿ. ಅರೇ.. ಇದರಿಂದ ಏನು ಸಮಸ್ಯೆ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಿದ್ದರೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಎಸಿ ಬಳಿ ಟಿವಿ ಹಾಕಬೇಡಿ: ನಗರದಲ್ಲಿನ ಹಲವಾರು ಮನೆಗಳಿಗೆ ಸ್ಮಾರ್ಟ್‌ಟಿವಿ ಹಾಗೂ ಎಸಿ ಅಗತ್ಯವೂ ಹೌದು. ಆದರೆ ಇವೆರಡನ್ನೂ ಒಂದೇ ಕಡೆ ಇರಿಸುವುದು ಮಾತ್ರ ಒಳ್ಳೆಯದಲ್ಲ. ಈ ಬಗ್ಗೆ ಈಗಾಗಲೇ ಕೆಲವು ಜನರಿಗೆ ತಿಳಿದಿರುತ್ತದೆ. ಆದರೆ, ಇನ್ನೂ ಹಲವಾರು ಜನರು ಇವೆರಡನ್ನೂ ಒಂದೇ ಕಡೆ ಇಟ್ಟರೆ ಮನೆ ಆಕರ್ಷಕವಾಗಿ ಕಾಣುತ್ತದೆ ಎಂದು ಭಾವಿಸಿರುತ್ತಾರೆ. ಆದರೆ, ಈ ರೀತಿ ಮಾಡುವುದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆ ನಿರ್ಮಾಣವಾಗಲು ದಾರಿ ಮಾಡಿಕೊಟ್ಟಂತೆ.
ಸಾಮಾನ್ಯವಾಗಿ ಸ್ಮಾರ್ಟ್‌ಟಿವಿ ಮಾತ್ರವಲ್ಲದೆ ಯಾವುದೇ ಶಾಖವನ್ನು ಉತ್ಪಾದಿಸುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ಎಸಿ ಬಳಿ ಸ್ಥಾಪಿಸಬಾರದು. ಅಂದರೆ ಕಂಪ್ಯೂಟರ್‌ನಂತಹ ಶಾಖ ಉತ್ಪಾದಿಸುವ ಮತ್ತು ವಿದ್ಯುತ್ ಪರಿವರ್ತಿಸುವ ಯಾವುದೇ ಡಿವೈಸ್‌ಗಳು ಎಸಿ ಬಳಿ ಇರಬಾರದು ಎಂದು ತಂತ್ರಜ್ಞರು ಹೇಳುತ್ತಾರೆ. ಯಾಕೆಂದರೆ ಇದು ಪ್ರಮುಖ ಸುರಕ್ಷತಾ ಮಾರ್ಗವಾಗಿದ್ದು, ಇದು ಎಸಿ ಚಾಲನೆಗೆ ಅಡ್ಡಿ ಉಂಟು ಮಾಡುತ್ತದೆ.
ಇನ್ನು ಹವಾನಿಯಂತ್ರಣದ ಸಮೀಪದಲ್ಲಿ ಅಂದರೆ ಎಸಿ ಬಳಿ ಟಿವಿಗಳಂತಹ ಉಪಕರಣಗಳನ್ನು ಇಡುವುದರಿಂದ ಎಸಿಯ ಕಾರ್ಯಕ್ಷಮತೆಯ ನೇರ ಮೇಲೆ ಪರಿಣಾಮ ಬೀರುತ್ತದೆ. ಉಳಿದಂತೆ ಎಸಿ ಮತ್ತು ಸ್ಮಾರ್ಟ್ ಟಿವಿ ಎರಡಕ್ಕೂ ಕಾರ್ಯನಿರ್ವಹಿಸಲು ವಿದ್ಯುತ್ ಅಗತ್ಯವಿರುತ್ತದೆ. ಕೋಣೆಯಲ್ಲಿನ ವಿದ್ಯುತ್ ಸರ್ಕ್ಯೂಟ್‌ಗಳು ಎರಡೂ ಡಿವೈಸ್‌ಗಳ ಸಂಯೋಜಿತ ವಿದ್ಯುತ್ ಲೋಡ್ ಅನ್ನು ನಿರ್ವಹಿಸಲು ಸಮರ್ಪಕವಾಗಿ ವಿನ್ಯಾಸಗೊಳಿಸದಿದ್ದರೆ ಅದು ಓವರ್‌ಲೋಡ್‌ಗೆ ಕಾರಣವಾಗಬಹುದು. ಇದು ಸರ್ಕ್ಯೂಟ್ ಬ್ರೇಕರ್ ಟ್ರಿಪ್ ಆಗುತ್ತದೆ.
ಇದರೊಂದಿಗೆ ಆನ್‌ಲೈನ್ ಕಂಟೆಂಟ್ ಮತ್ತು ಸ್ಟ್ರೀಮಿಂಗ್ ಸೇವೆಗಳನ್ನು ಪ್ರವೇಶಿಸಲು ಸ್ಮಾರ್ಟ್ ಟಿವಿಗಳು ಸಾಮಾನ್ಯವಾಗಿ ವೈ-ಫೈ ಸಂಪರ್ಕವನ್ನು ಅವಲಂಭಿಸಿವೆ. ಎಸಿ ಯುನಿಟ್ ಸಹ ವೈ-ಫೈ ಸಿಗ್ನಲ್‌ಗೆ ಸಂಭಾವ್ಯವಾಗಿ ಹಸ್ತಕ್ಷೇಪ ಮಾಡುವ ವಿದ್ಯುತ್ಕಾಂತೀಯ ಹಸ್ತಕ್ಷೇಪವನ್ನು (EMI) ಹೊರಸೂಸಬಹುದು. ಅಂತಹ ಸಂದರ್ಭಗಳಲ್ಲಿ ನೀವು ವೈ-ಫೈ ಕಾರ್ಯಕ್ಷಮತೆಯಲ್ಲಿ ಇಳಿಕೆ ಅಥವಾ ಸ್ಮಾರ್ಟ್ ಟಿವಿಯೊಂದಿಗಿನ ಸಂಪರ್ಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ತಗ್ಗಿಸಲು, ವೈ-ಫೈ ರೂಟರ್ ಅನ್ನು ಎಸಿ ಯುನಿಟ್‌ನಿಂದ ದೂರದಲ್ಲಿ ಇರಿಸಿ.

ಇದರೊಂದಿಗೆ ಕೆಲವು ಸ್ಮಾರ್ಟ್ ಟಿವಿಗಳು ಮತ್ತು ಎಸಿ ಘಟಕಗಳು ರಿಮೋಟ್ ಕಂಟ್ರೋಲ್ ಕಾರ್ಯಕ್ಕಾಗಿ ಅತಿಗೆಂಪು (ಐಆರ್) ಸಂಕೇತಗಳನ್ನು ಬಳಕೆ ಮಾಡುತ್ತವೆ. ಇದು ಅಸಾಮಾನ್ಯವಾಗಿದ್ದರೂ, ಎರಡೂ ಡಿವೈಸ್‌ಗಳಿಂದ ಐಆರ್ ಸಿಗ್ನಲ್‌ಗಳು ಅತಿಕ್ರಮಿಸಿದರೆ ಹಸ್ತಕ್ಷೇಪದ ಸಾಧ್ಯತೆ ಹೆಚ್ಚಾಗಿರುತ್ತದೆ. ಎಸಿ ಅಥವಾ ಟಿವಿಗೆ ರಿಮೋಟ್ ಕಂಟ್ರೋಲ್ ಅನ್ನು ಬಳಸುವಾಗ ಇದು ತೊಂದರೆಗಳನ್ನು ಉಂಟುಮಾಡಬಹುದು.
ಎಸಿ ಫಿಲ್ಟರ್ ಅನ್ನು ಸ್ವಚ್ಛಗೊಳಿಸಿ: ಇದೆಲ್ಲದರ ಜೊತೆಗೆ ಮಳೆಗಾಲದಲ್ಲಿ ವಿಶೇಷ ಕಾಳಜಿ ವಹಿಸಬೇಕಾದ ಇನ್ನೊಂದು ವಿಷಯವೆಂದರೆ ಏರ್ ಕಂಡಿಷನರ್ ಫಿಲ್ಟರ್‌ಗಳನ್ನು ಸ್ವಚ್ಛಗೊಳಿಸುವುದು. ನೀವು ಕನಿಷ್ಟ ಎರಡು ವಾರಗಳಿಗೊಮ್ಮೆ ಫಿಲ್ಟರ್ ಅನ್ನು ಸ್ವಚ್ಛಗೊಳಿಸದಿದ್ದಲ್ಲಿ ಧೂಳು ಮತ್ತು ಶಿಲಾಖಂಡರಾಶಿಗಳ ದಪ್ಪ ಲೇಯರ್ ಅದರ ಮೇಲೆ ಉಂಟಾಗಿ ಇದು ಫಿಲ್ಟರ್‌ನ ಕಾರ್ಯ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಎಸಿ ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು.


Click it and Unblock the Notifications








