Subscribe to Gizbot

2016ರ ಆಕಾಶದ ಅದ್ಭುತಗಳು: ಮಿಸ್‌ ಮಾಡದೇ ನೋಡಿ

Written By:

ದಿನನಿತ್ಯ ಅದೇ ಕೆಲಸ ಅದೇ ಜೀವನ ಚಕ್ರ ಎಲ್ಲರಿಗೂ ಕೆಲವೊಮ್ಮೆ ಬೇಸರವೆನಿಸಿ ಪ್ರವಾಸ ಹೊರಡುವುದು ಸಹಜ. ಅಂತೆಯೇ ಇತ್ತೀಚಿನ ದಿನಗಳಲಂತೂ ಈ ಪ್ರವಾಸ ಕಾರ್ಯಕ್ರಮಗಳು ಅಧಿಕವಾಗಿವೆ. ಆದ್ರೆ ಈ ಪ್ರವಾಸಗಳಲ್ಲಿ ಕೇವಲ ಭೂಮಿಯ ಮೇಲಿನ ಸುಂದರ ತಾಣಗಳನ್ನು, ಪರಿಸರ ವಿಸ್ಮಯಗಳನ್ನು ನೋಡುವುದು ಮಾತ್ರ ಎಲ್ಲರಿಗೂ ಗೊತ್ತಿದೆ. ಆದ್ರೆ ಆಕಾಶದಲ್ಲಿನ ಅದ್ಧುತ, ಅಚ್ಚರಿಗಳನ್ನು ನೋಡುವ ಅವಕಾಶ ಖಗೋಳಶಾಸ್ತ್ರಜ್ಞರಿಗೆ ಮತ್ತು ಬಾಹ್ಯಾಕಾಶ ಕೇಂದ್ರಗಳ ಗಗನಯಾತ್ರಿಗಳಿಗೆ ಮಾತ್ರ. ಆದ್ರೆ ಕೆಲವೊಂದು ಅಚ್ಚರಿಗಳನ್ನು ಸಾಮಾನ್ಯ ಜನರು ಸಹ ನೋಡಬಹುದು. ಸೂರ್ಯನ ಕಕ್ಷೆಯಲ್ಲಿ ಈ ವರ್ಷ ಅದ್ಭುತ ಉಲ್ಕಾಪಾತಗಳು ನಡೆಯಲಿವೆ.

ಓದಿರಿ : ಏಲಿಯನ್‌ ಪತ್ತೆಗೆ ಹೊಸ ಮಾರ್ಗ ಕಂಡುಹಿಡಿದ ವಿಜ್ಞಾನಿಗಳು

2016ರಲ್ಲಿ ಆಕಾಶದಲ್ಲಿ ಅತ್ಯದ್ಭುತವಾದ ಗ್ರಹಣಗಳು ಏರ್ಪಡಲಿದ್ದು ಜನರು ಸ್ಕೈವಾಚ್‌ ಮಾಡಲು ಈ ವರ್ಷ ಉತ್ತಮ ಅವಕಾಶ.. ಹಾಗಾದರೆ ಈ ವರ್ಷ ಆಕಾಶದಲ್ಲಿನ ಅಂತಹ ವಿಶೇಷತೆಗಳೇನು ಎಂಬುದನ್ನು ಈ ಲೇಖನ ಓದಿ ತಿಳಿಯಿರಿ. ನೆನಪಿಡಿ ಆಕಾಶದಲ್ಲಿ ಏರ್ಪಡುವ ಈ ಗ್ರಹಣಗಳನ್ನು ಕೆಲವನ್ನು ಬರಿಗಣ್ಣಿನಿಂದ ನೋಡಬಹುದು, ಮತ್ತು ಇನ್ನು ಕೆಲವು ಗ್ರಹಣಗಳನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಜನವರಿ 19

ಜನವರಿ 19

ವಾಕ್ಸಿಂಗ್ ಉತ್ತಲ ಚಂದ್ರ ಅತ್ಯಂತ ಪ್ರಕಾಶಮಾನವಾದ ನಕ್ಷತ್ರದ ಮುಂದೆ ಜನವರಿ 19 ರಂದು ದಾಟಲಿದೆ. ಇದು ಕಿತ್ತಳೆ ಬಣ್ಣದ ನೆರಳನ್ನು ಪಡೆಯಲಿದೆ. ಈ ನಕ್ಷತ್ರ ಗ್ರಹಣ ಕೆನಡಾ, ಅಮೇರಿಕ ಪ್ರದೇಶದಲ್ಲಿ ಹೆಚ್ಚು ಕಾಣಿಸಲಿದೆ.

ಮಾರ್ಚ್‌ 8-9

ಮಾರ್ಚ್‌ 8-9

ಸಂಪೂರ್ಣ ಸೂರ್ಯ ಗ್ರಹಣವು ಈ ವರ್ಷದ ಮಾರ್ಚ್‌ 8-9ರಲ್ಲಿ ಜರುಗಲಿದೆ.

ಮಾರ್ಚ್‌ 23

ಮಾರ್ಚ್‌ 23

ಎರಡು ವಾರಗಳು ಭೂಮಿ ಮತ್ತು ಸೂರ್ಯನ ಚಲನೆಯ ನಡುವೆ ಚಂದ್ರನು ತನ್ನ ಇತರೆ ಕಕ್ಷೆಯಿಂದ ಬಂದು ಭೂಮಿಯ ನೆರಳಿನ ಮೇಲೆ ಹಾದುಹೋಗಲಿದೆ.

ಮೇ 21

ಮೇ 21

ಮೇ ತಿಂಗಳಿನಲ್ಲಿ ಮಂಗಳನ ಜೊತೆಗೆ "ಬ್ಲೂ ಮೂನ್‌" ಅಂದರೆ ಸಂಪೂರ್ಣ ಚಂದ್ರನ ಮೂರು ಮತ್ತು ನಾಲ್ಕನೇ ಮಧ್ಯದಲ್ಲಿ ಕಾಣಿಸುವ ಚಂದ್ರನ ಚಲನೆ ಕಾಣಿಸಲಿದೆ.

ಮೇ 18 ಇಂದ ಜೂನ್‌ 3

ಮೇ 18 ಇಂದ ಜೂನ್‌ 3

ರೆಡ್‌ ಪ್ಲಾನೆಟ್‌ ಎಂದು ಹೆಸರಾದ ಮಂಗಳ ಗ್ರಹವು ಹಳದಿ ಮತ್ತು ಕಿತ್ತಳೆ ಬಣ್ಣ ಮಿಶ್ರಿತವಾಗಿ ನಕ್ಷತ್ರದ ರೀತಿಯಲ್ಲಿ ಹೊಳೆಯಲಿದೆ.

 ಜುಲೈ 29

ಜುಲೈ 29

ಈ ವರ್ಷದಲ್ಲಿ ಮತ್ತೊಂದು ಎರಡನೇ ಸೂರ್ಯಗ್ರಹಣ ನೆಡೆಯಲಿದೆ. ಆದರೆ ಸೂರ್ಯಗ್ರಹಣವು ಪಶ್ಚಿಮ ಕೆನಡಾದಲ್ಲಿ ಮತ್ತು ಅಮೇರಿಕದಲ್ಲಿ ಸೂರ್ಯ ಮೂಡುವ ಮುನ್ನ ಕಾಣಿಸಲಿದೆ.

 ಆಗಸ್ಟ್‌ 11-12

ಆಗಸ್ಟ್‌ 11-12

ವರ್ಷದ ಅತ್ಯುತ್ತಮ ಉಲ್ಕಾಪಾತವು ಆಗಸ್ಟ್‌ 11-12 ದಿನಾಂಕದಲ್ಲಿ ಕಾಣಿಸಲಿದೆ.

ಆಗಸ್ಟ್‌ 28

ಆಗಸ್ಟ್‌ 28

ಸೂರ್ಯ ಮುಳುಗಿದ ನಂತರದಲ್ಲೇ ಪಶ್ಚಿಮದ ದಕ್ಷಿಣಪಶ್ಚಿಮ ಆಕಾಶದಲ್ಲಿ ಬುದ್ಧಿವಂತ ಎರಡು ಗ್ರಹಗಳಾದ ವೆನಸ್‌ ಮತ್ತು ಜುಪಿಟರ್‌ ಗಳು ನೇರವಾಗಿ ಹತ್ತಿರವಾಗಲಿವೆ.

 ಅಕ್ಟೋಬರ್‌ 19

ಅಕ್ಟೋಬರ್‌ 19

ಕ್ಷಯಿಸುತ್ತಿರುವ ಉಲ್ಕಾಪಾತ ಚಂದ್ರನು ಮತ್ತೆ ಅಕ್ಟೋಬರ್‌ 19 ರಂದು ಪೂರ್ವ ಕೆನಡಾ ಮತ್ತು ಭಾಗಶಃ ಅಮೇರಿಕ ಪ್ರದೇಶದಲ್ಲಿ ಗೂಳಿ ಕಂಗಳಿನ ನಕ್ಷತ್ರದ ಮೇಳೆ ಹಾದುಹೋಗಲಿದೆ.

ನವೆಂಬರ್ 14

ನವೆಂಬರ್ 14

ನವೆಂಬರ್‌ 14 ರಂದು ಪೂರ್ಣ ಚಂದ್ರನು ಕಾಣಿಸಲಿದ್ದಾನೆ. ಚಂದ್ರನ ಮೇಲಿನ ವಸ್ತುಗಳು ನಿಕರವಾಗಿ ಭೂಮಿಗೆ ಕಾಣಿಸುವಂತೆ ಪ್ರದರ್ಶಿತವಾಗುತ್ತದೆ. ಆದ್ದರಿಂದ ಇದು ಸೂಪರ್‌ಮೂನ್‌ ಎಂದು ಹೆಸರು ಪಡೆದಿದೆ.

ಡಿಸೆಂಬರ್‌ 13-14

ಡಿಸೆಂಬರ್‌ 13-14

ಡಿಸೆಂಬರ್‌ ಜೆಮಿಂಡ್ ಉಲ್ಕಾಪಾತವು ಡಿಸೆಂಬರ್‌ನಲ್ಲಿ ಮತ್ತೆ ಗೂಳಿ ಕಣ್ಣಿನ ನಕ್ಷತ್ರದ ಮೇಳೆ ಹಾದುಹೋಗಲಿದೆ. ಇದು ಅಧಿಕ ಸುಂದರವಾಗಿ ಕಾಣುವಲ್ಲಿ ಪ್ರಖ್ಯಾತವಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಲೇಖನಗಳಿಗಾಗಿ ಲೈಕ್‌ ಮಾಡಿ ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌ ಹಾಗೂ ನಿರಂತರ ಲೇಖನಗಳನ್ನು ಓದಲು ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ ಫಾಲೋ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Don't Miss These 12 Must-See Skywatching Events of 2016. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot