ಅಮೆಜಾನ್‌ ಡ್ರೋನ್‌ ದಾರಿಯನ್ನು ಹ್ಯಾಕ್‌ ಮಾಡಬಹುದಂತೆ!

Posted By:

ಅಮೆಜಾನ್‌.ಕಾಂ ಎರಡು ವರ್ಷದೊಳಗಡೆ ಡ್ರೋನ್‌‌ ಮೂಲಕ ಗ್ರಾಹಕರ ಮನೆಗೆ ಉತ್ಪನ್ನಗಳನ್ನು ತಲುಪಿಸುವ ಯೋಜನೆಯನ್ನು ಬಹಿರಂಗ ಪಡಿಸಿದೆ. ಆದರೆ ಈ ಯೋಜನೆ ಆರಂಭವಾಗುವ ಮೊದಲೇ ಹ್ಯಾಕರ್‌‌ಗಳು ಅಮೆಜಾನ್‌.ಕಾಂಗೆ ಬಿಸಿ ಮುಟ್ಟಿಸಲು ಆರಂಭಿಸಿದ್ದಾರೆ.

ಅಮೆರಿಕ ಕಂಪ್ಯೂಟರ್‌ ಸೆಕ್ಯೂರಿಟಿ ತಜ್ಞ,ಹ್ಯಾಕರ್‌ ಸ್ಯಾಮಿ ಕಮ್‌ಕರ್‌(Samy Kamkar) ಅಮೆಜಾನ್‌.ಕಾಂ ಡ್ರೋನ್‌ ವ್ಯವಸ್ಥೆಯನ್ನೇ ಸುಲಭವಾಗಿ ಹ್ಯಾಕ್‌ ಮಾಡಬಹುದು ಎಂದು ತನ್ನ ಬ್ಲಾಗ್‌ನಲ್ಲಿ ವಿವರಿಸಿದ್ದಾನೆ.ಈ ಡ್ರೋನ್‌‌ಗಳಲ್ಲಿ ವಸ್ತುಗಳನ್ನು ಸಾಗಿಸಲು ಪ್ರತ್ಯೇಕ ಇಂಟರ್‌ನೆಟ್ ಸಂಚಾರ­ಜಾಲವನ್ನು ರಚಿಸಲಾಗುತ್ತದೆ. ಆದರೆ ಈ ಇಂಟರ್‌ನೆಟ್‌ ಜಾಲವನ್ನು ವೈಫೈ ಮೂಲಕ ಹ್ಯಾಕ್‌ ಮಾಡಿ ಡ್ರೋನ್‌ ದಾರಿಯನ್ನೇ ಬದಲಾಯಿಸಬಹುದು ಎಂದು ಹೇಳಿದ್ದಾನೆ.

ಹೇಗೆ ಇದನ್ನು ಹ್ಯಾಕ್‌ ಮಾಡಬಹುದು ಎಂದು ಸ್ಯಾಮಿ ಕಮ್‌ಕರ್‌ ವಿವರಿಸುವ ವಿಡಿಯೋ ಇಲ್ಲಿದೆ.ಜೊತೆಗೆ ಈ ಹೊಸ ಡ್ರೋನ್‌ ಕಲ್ಪನೆಗೆ ಸಮಸ್ಯೆಯಾಗಬಲ್ಲ ಕೆಲವು ಅಂಶಗಳ ಬಗ್ಗೆಯೂ ಮಾಹಿತಿ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಅಮೆಜಾನ್‌ ಡ್ರೋನ್‌ ದಾರಿಯನ್ನು ಹ್ಯಾಕ್‌ ಮಾಡಬಹುದಂತೆ!

ಅಮೆಜಾನ್‌ ಡ್ರೋನ್‌ ದಾರಿಯನ್ನು ಹ್ಯಾಕ್‌ ಮಾಡಬಹುದಂತೆ!

ಅಮೆಜಾನ್‌ ಡ್ರೋನ್‌ ಹ್ಯಾಕ್‌ ಮಾಡುವ ಬಗ್ಗೆ ಸ್ಯಾಮಿ ಕಮ್‌ಕರ್‌ ವಿವರಣೆ

 ಕಳ್ಳತನ:

ಕಳ್ಳತನ:

ಅಮೆಜಾನ್‌ ಪ್ರಯೋಗ:ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!


ಅಮೆಜಾನ್‌ ಕಂಪೆನಿ ತನ್ನ ವಿಡಿಯೋದಲ್ಲಿ ತೋರಿಸಿದಂತೆ ಡ್ರೋನ್‌ ಗ್ರಾಹಕನ ಮನೆಯ ದಾರಿಯನ್ನು ಜಿಪಿಎಸ್‌ ಮೂಲಕ ಪತ್ತೆ ಹಚ್ಚಿ ಉತ್ಪನ್ನವನ್ನು ಇಳಿಸಿ ಹೋಗುತ್ತದೆ. ಇಲ್ಲಿ ಸಮಸ್ಯೆಯಾಗುವುದು ಮನೆಗೆ ಇಳಿಸಿದ ಮೇಲೆ ಗ್ರಾಹಕನೇ ಉತ್ಪನ್ನವನ್ನು ತೆಗೆದುಕೊಂಡು ಹೋಗಬೇಕಿಲ್ಲ.ಯಾರು ಬೇಕಾದರೂ ಈ ಉತ್ಪನ್ನವನ್ನು ತೆಗೆದುಕೊಂಡು ಹೋಗಬಹುದು. ಈ ಮೂಲಕ ವಸ್ತುವನ್ನು ಕದಿಯುವ ಸಾಧ್ಯತೆ ಇಲ್ಲದಿಲ್ಲ.

 ಡ್ರೋನ್‌ ಮೇಲೆ ಶೂಟ್‌:

ಡ್ರೋನ್‌ ಮೇಲೆ ಶೂಟ್‌:

ಅಮೆಜಾನ್‌ ಪ್ರಯೋಗ:ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!


ಅಮೆಜಾನ್‌ ತನ್ನ ಹೊಸ ಯೋಜನೆಯನ್ನು ಪ್ರಕಟಿಸುತ್ತಿದ್ದಂತೆ ಅಮೆರಿಕದಲ್ಲಿ ಕೆಲವರು ಸ್ವಾಗತಿಸಿದರೆ ಕೆಲವರು ತಮ್ಮ ಮನೆಯ ಮೇಲೆ ಹಾರಾಡಿದ್ರೆ ಅದನ್ನು ಹೊಡೆದು ಬೀಳಿಸುವುದಾಗಿ ಟ್ವೀಟರ್‌‌ನಲ್ಲಿ ಹೇಳಿದ್ದಾರೆ. ಒಂದು ವೇಳೆ ಜನರು ಈ ರೀತಿ ಮಾಡಿದ್ದಲ್ಲಿ ಡ್ರೋನ್‌ ಹೇಗೆ ತನ್ನ ಬಳಕೆದಾರರ ಮನೆಗೆ ವಸ್ತುವನ್ನು ತಲುಪಿಸುತ್ತದೆ? ಈ ರೀತಿಯ ಸಮಸ್ಯೆಗಳನ್ನು ಅಮೆಜಾನ್‌ ನಿವಾರಿಸಬೇಕಾಗುತ್ತದೆ.

ವಿಳಾಸ :

ವಿಳಾಸ :

ಅಮೆಜಾನ್‌ ಪ್ರಯೋಗ:ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!


ಸದ್ಯ ಆನ್‌ಲೈನ್‌ ಶಾಪಿಂಗ್‌ ವಸ್ತುಗಳನ್ನು ವಿತರಿಸುವವರು ವಿಳಾಸ ಗೊತ್ತಿಲ್ಲದಿದ್ದರೆ ಬಳಕೆದಾರರಿಗೆ ಕರೆ ಮಾಡಿ ವಿಳಾಸ ತಿಳಿದು ವಸ್ತುಗಳನ್ನು ವಿತರಿಸುತ್ತಾರೆ.ಆದರೆ ಅಮೆಜಾನ್ ಡ್ರೋನ್‌ ಒಂದು ವೇಳೆ ಜಿಪಿಎಸ್‌ ಮೂಲಕ ಬಳಕೆದಾರರ ಮನೆಯ ದಾರಿಯನ್ನು ಕಂಡುಹಿಡಿಯಲು ಸಾಧ್ಯವಾಗದೇ ಇದ್ದಲ್ಲಿ ಏನು ಮಾಡುತ್ತದೆ? ಪುನಃ ಹಿಂದುರುಗಿ ಹೋಗಲಿದೆಯೇ? ಅಥವಾ ಮತ್ತೇ ಪುನಃ ಸರಿಯಾದ ದಾರಿಯನ್ನು ದಾರಿಯನ್ನು ಹುಡುಕತ್ತದೆಯೇ? ಈ ರೀತಿಯ ಅನೇಕ ಸಮಸ್ಯೆಗಳು ಅಮೆಜಾನ್‌ ಮುಂದಿದೆ.

 ವಾಯು ಸಂಚಾರದಲ್ಲಿ ಬದಲಾವಣೆ

ವಾಯು ಸಂಚಾರದಲ್ಲಿ ಬದಲಾವಣೆ

ಅಮೆಜಾನ್‌ ಪ್ರಯೋಗ:ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!

ಡ್ರೋನ್‌ ಹಾರಾಟವನ್ನು ಆರಂಭಿಸುವುದಾದರೂ ಆಯಾ ಪ್ರದೇಶದ ವಿಮಾನ ಸಂಚಾರ ನಿಯಮಗಳಲ್ಲಿ ಬದಲಾವಣೆ ಮಾಡುವುದು ಅನಿವಾರ್ಯ. ಈಗಾಗಲೇ ಅಮೆಜಾನ್‌.ಕಾಂ ಅಮೆರಿಕದ ಎಫ್‌ಎಎ(Federal Aviation Administration) ಚರ್ಚಿಸಿದೆ ಎಂದು ಹೇಳಿದೆ.

 ಡ್ರೋನ್‌ ಕೆಳಗಡೆ ಬೀಳಬಾರದು

ಡ್ರೋನ್‌ ಕೆಳಗಡೆ ಬೀಳಬಾರದು

ಅಮೆಜಾನ್‌ ಪ್ರಯೋಗ:ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!


ಇನ್ನೂಈ ಡ್ರೋನ್‌ಗಳು ಹಾರಿಕೊಂಡು ಹೋಗುತ್ತಿರುವ ವೇಳೆ ಜನರಿಗೆ ಅಥವಾ ಕಟ್ಟಡಗಳಿಗೆ ಡಿಕ್ಕಿ ಹೊಡೆದು ಬೀಳಬಾರದು.ಬ್ಯಾಟರಿ ಚಾರ್ಜ್‌‌‌ ಖಾಲಿಯಾಗಿ ಕೆಳಗೆ ಬೀಳದಂತೆ ಎಚ್ಚರವಹಿಸಬೇಕಾಗುತ್ತದೆ.ಒಂದು ವೇಳೆ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಅಮೆರಿಕದಲ್ಲಿ ಯಶಸ್ವಿಯಾದಲ್ಲಿ ನಂತರ ಎಲ್ಲಾ ದೇಶಗಳಲ್ಲೂ ಈ ಹೊಸ ಡ್ರೋನ್‌ ಪರಿಕಲ್ಪನೆ ಆರಂಭವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot