Home
ಸುದ್ದಿಜಾಲ

ಫೇಸ್‌ಬುಕ್‌ ಸಂಸ್ಥಾಪಕನ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌!

By Ashwath

ಜಗತ್ತಿನ ನಂಬರ್‌ ಒನ್‌ ಸೋಶಿಯಲ್‌ ನೆಟ್‌ವರ್ಕ್‌ ಫೇಸ್‌‌ಬುಕ್‌ ಹ್ಯಾಕ್‌ ಆಗಿದೆ. ಪ್ಯಾಲೆಸ್ಟೈನ್‌ ಹ್ಯಾಕರ್‌ ಒಬ್ಬ ಫೇಸ್‌ಬುಕ್‌ ಒಡೆಯನ ಫೇಸ್‌‌ಬುಕ್‌ ಅಕೌಂಟ್‌‌ನ್ನೇ ಹ್ಯಾಕ್‌ ಮಾಡುವ ಮೂಲಕ ಫೇಸ್‌ಬುಕ್‌ಗೆ ಬಿಸಿ ಮುಟ್ಟಿಸಿದ್ದಾನೆ.

ಫೇಸ್‌ಬುಕ್‌ ತನ್ನ ಬಳಕೆದಾರರ ಅಕೌಂಟ್‌ಗೆ ಸುರಕ್ಷತೆ ನೀಡುವುದಕ್ಕೆ ಹೊಸ ತಂತ್ರವನ್ನು ಹೂಡಿರುವುದನ್ನು ನೀವು ಓದಿರಬಹುದು. ಫೇಸ್‌ಬುಕ್‌ನ್ನು ಹ್ಯಾಕ್‌ ಮಾಡಿ ಬಳಕೆದಾರರ ಖಾಸಗಿ ಮಾಹಿತಿ ಕದಿಯದೇ 24 ಗಂಟೆಯೊಳಗೆ ಫೇಸ್‌ಬುಕ್‌ಗೆ ಹ್ಯಾಕ್‌ ಮಾಡಿರುವ ಮಾಹಿತಿ ತಿಳಿಸಿದ್ದಲ್ಲಿ ಫೇಸ್‌ಬುಕ್‌ ಹ್ಯಾಕರ್‌‌ಗಳಿಗೆ 500 ಡಾಲರ್‍ ನೀಡುತ್ತದೆ.

ಈ ಬಹುಮಾನ ಪಡೆಯಲು ಪ್ಯಾಲೆಸ್ಟೈನ್‌ ಖಾಲಿ ಶ್ರೀಥ್‌(Khalil Shreateh) ಎನ್ನುವ ಹ್ಯಾಕರ್‌ ಫೇಸ್‌ಬುಕ್‌ ಬಳಕೆದಾರರ ಅಕೌಂಟ್‌ ಹ್ಯಾಕ್‌ ಮಾಡಿ ಅವರ ವಾಲ್‌ನಲ್ಲಿ ಬೇರೊಬ್ಬರು ಮಾಹಿತಿಯನ್ನು ಪೋಸ್ಟ್‌ ಮಾಡಬಹುದು ಎಂದು ಫೇಸ್‌ಬುಕ್‌ಗೆ ತಿಳಿಸಿದ್ದಾನೆ.ಈ ಹ್ಯಾಕಿಂಗ್‌ ಮಾಹಿತಿ ತಿಳಿಸಿದ್ದಕ್ಕೆ ಫೇಸ್‌ಬುಕ್‌ ತನಗೆ 500 ಡಾಲರ್‍ ನೀಡಿ ಅಭಿನಂದಿಸುತ್ತದೆ ಎಂದು ಯೋಚಿಸುತ್ತಿದ್ದ ಖಾಲಿಗೆ ಫೇಸ್‌ಬುಕ್‌ 'ಈ ಕೋಡ್‌ನಲ್ಲಿ ಯಾವುದೇ ಎರರ್‌ ಇಲ್ಲ' ಎಂದು ಪ್ರತಿಕ್ರಿಯಿಸಿ ಬಹುಮಾನ ನೀಡದೇ ನಿರಾಸೆ ಮಾಡಿದೆ.

ಫೇಸ್‌ಬುಕ್‌ನ ಪ್ರತಿಕ್ರಿಯೆಗೆ ಸಿಟ್ಟಿಗೆದ್ದ ಖಾಲಿ ಫೇಸ್‌‌ಬುಕ್‌ ಸಂಸ್ಥಾಪಕ ಜುಕರ್‌ಬರ್ಗ್‌ ಅಕೌಂಟ್‌ನ್ನೇ ಹ್ಯಾಕ್‌‌ ಮಾಡಿದ್ದಾನೆ. ಹ್ಯಾಕ್‌ ಮಾಡಿ ಜುಕರ್‌‌ಬರ್ಗ್‌ನ ವಾಲ್‌ನಲ್ಲೇ ತಾನು ಹ್ಯಾಕ್‌ ಮಾಡಿರುವ ವಿಚಾರವನ್ನು ಪೋಸ್ಟ್‌ ಮಾಡಿ ತಿಳಿಸಿದ್ದಾನೆ.ಅಷ್ಟೇ ಅಲ್ಲದೇ ತಾನು ಯಾವ ರೀತಿ ಫೇಸ್‌ಬುಕ್‌ನ್ನು ಹ್ಯಾಕ್‌ ಮಾಡಿದ್ದೇನೆ ಎನ್ನುವುದನ್ನು ತನ್ನ ಬ್ಲಾಗ್‌ನಲ್ಲಿ ವೀಡಿಯೋ ಮುಖಾಂತರ ಹಂತ ಹಂತವಾಗಿ ವಿವರಿಸಿದ್ದಾನೆ.

ಒಟ್ಟಿನಲ್ಲಿ ಈಗ ಮತ್ತೊಮ್ಮೆ ಫೇಸ್‌ಬುಕ್‌ನಲ್ಲಿ ಬಳಕೆದಾರ ಅಕೌಂಟ್‌ ಸುರಕ್ಷತೆಯಯ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ. ಹೀಗಾಗಿ ಇಲ್ಲಿ ಹ್ಯಾಕರ್‌ ಖಾಲಿ ಶ್ರೀಥ್‌ ಏನೆಲ್ಲ ಕೆಲಸ ಮಾಡಿದ್ದಾನೆ ಎನ್ನುವುದಕ್ಕೆ ಅವನು ಜುಕರ್‌ಬರ್ಗ್‌ ವಾಲ್‌ನಲ್ಲಿ ಮಾಡಿರುವ ಪೋಸ್ಟ್‌, ಫೇಸ್‌‌ಬುಕ್‌ ಇವನಿಗೆ ನೀಡಿರುವ ಉತ್ತರದ ಫೋಟೋ ಇಲ್ಲಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಇವರಿಂದ ದೂರವಿರಿ

ಇದನ್ನೂ ಓದಿ: ನಿಮ್ಮ ಎಲ್ಲಾ ಫೇಸ್‌ಬುಕ್‌ ಲೈಕ್‌,ಕಮೆಂಟ್‌ಗಳು ಸೇವ್‌ ಆಗುವುದು ಇಲ್ಲಿ

ಫೇಸ್‌ಬುಕ್‌ ಸಂಸ್ಥಾಪಕನ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌

ಫೇಸ್‌ಬುಕ್‌ ಸಂಸ್ಥಾಪಕನ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌

ಜುಕರ್‌ಬರ್ಗ್ ವಾಲ್‌ನಲ್ಲಿ ಖಾಲಿ ಶ್ರೀಥ್‌ ಪೋಸ್ಟ್‌

ಖಾಲಿ ಶ್ರೀಥ್‌ಗೆ ಫೇಸ್‌ಬುಕ್‌ ಕಳುಹಿಸಿದ ಇಮೇಲ್‌

ಫೇಸ್‌ಬುಕ್‌ ಸಂಸ್ಥಾಪಕನ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌

ಫೇಸ್‌ಬುಕ್‌ ಸಂಸ್ಥಾಪಕನ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌

ಖಾಲಿ ಶ್ರೀಥ್‌(Khalil Shreateh),ಹ್ಯಾಕರ್‌

ಫೇಸ್‌ಬುಕ್‌ ಸಂಸ್ಥಾಪಕನ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌

ಫೇಸ್‌ಬುಕ್‌ ಸಂಸ್ಥಾಪಕನ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌

ಖಾಲಿ ಶ್ರೀಥ್‌(Khalil Shreateh) ಫೇಸ್‌ಬುಕ್‌ ಅಕೌಂಟ್‌ ಮತ್ತು ಬ್ಲಾಗ್‌ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ: ಫೇಸ್‌ಬುಕ್‌ ಅಕೌಂಟ್‌ ,ಬ್ಲಾಗ್‌ ಅಕೌಂಟ್‌

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+