Home
ಸುದ್ದಿಜಾಲ

'ಎಸ್ಕೋಬಾರ್'ನಿಂದ 'ಫೋಲ್ಡೆಬಲ್‌' ಸ್ಮಾರ್ಟ್‌ಫೋನ್‌ ಬಿಡುಗಡೆ!.ಬೆಲೆ ಎಷ್ಟು?

ಸ್ಮಾರ್ಟ್‌ಫೋನ್ ಜಮಾನ ದಿನದಿಂದ ದಿನಕ್ಕೆ ಬದಲಾಗುತ್ತಾ ಸಾಗಿದೆ. ಇತ್ತೀಚಿಗೆ ಭಿನ್ನ ಡಿಸೈನ್‌ನಲ್ಲಿ ಹೊಸತನಗಳೊಂದಿಗೆ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗುತ್ತಿವೆ. ಆ ಪೈಕಿ ಸದ್ಯ ಫೋಲ್ಡೆಬಲ್‌ ಮಾದರಿಯ ಸ್ಮಾರ್ಟ್‌ಫೋನ್‌ ಡಿಸೈನ್‌ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್‌ ಹುಟ್ಟುಹಾಕಿದೆ. ಇತ್ತೀಚಿಗಷ್ಟೆ ಸ್ಯಾಮ್‌ಸಂಗ್‌ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ಆ ಸಾಲಿಗಿಗ ಮತ್ತೊಂದು ಕಂಪನಿ ಸೇರಿಕೊಂಡಿದೆ.

ಎಸ್ಕೋಬಾರ್

ಹೌದು, ಎಸ್ಕೋಬಾರ್ ಕಂಪನಿಯು ಇದೀಗ 'ಎಸ್ಕೋಬಾರ್ ಫೋಲ್ಡ್‌ 1' ಹೆಸರಿನ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಫೋಲ್ಡ್‌ ಮತ್ತು ರಾಯಲ್‌ ಫ್ಲೆಕ್ಸಿಪೈ ಫೋನ್‌ಗಳ ಪ್ರೇರಣೆಯಿಂದ ಈ ಸ್ಮಾರ್ಟ್‌ಫೋನ್ ರಚಿಸಲಾಗಿದೆ ಎನ್ನಲಾಗಿದೆ. ಎಸ್ಕೋಬಾರ್‌ ಫೋಲ್ಡ್‌ 1 ಫೋನಿನ ಪ್ರಮುಖ ಹೈಲೈಟ್ಸ್‌ಯೆಂದರೇ ಈ ಫೋನ್ ಡಿಸೈನ್ ಮತ್ತು ಫೋಲ್ಡ್ ರಚನೆ ಆಗಿದೆ ಜೊತೆಗೆ ಬೆಲೆಯು ಸಹ ಗಮನ ಸೆಳೆಯುತ್ತದೆ. ಹಾಗಾದರೇ ಎಸ್ಕೋಬಾರ್ ಫೋಲ್ಡ್ 1' ಸ್ಮಾರ್ಟ್‌ಫೋನ್ ಫೀಚರ್ಸ್‌ಗಳೆನು ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

'ಎಸ್ಕೋಬಾರ್ ಫೋಲ್ಡ್‌ 1' ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ರಚನೆಯು ಫೋಲ್ಡೆಬಲ್ ಮಾದರಿಯಲ್ಲಿದ್ದು, ಎರಡು ಸ್ಕ್ರೀನ್‌ ರಚನೆಯನ್ನು ಒಳಗೊಂಡಿದೆ. 1920 x 1444 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 7.8 ಇಂಚಿನ ಫ್ಲೆಕ್ಸಿಬಲ್ AMOLED ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 4:3 ಆಗಿದ್ದು, ಸ್ಕ್ರೀನಿನ ಪ್ರತಿ ಇಂಚಿನ ಪಿಕ್ಸಲ್ ಸಾಮರ್ಥ್ಯವು 308PPI ಆಗಿದೆ. ಹಾಗೆಯೇ ಫೋನ್ ಸುತ್ತಳತೆಯು 134 mm x 190.35 mm x 7.6mm ಆಗಿದೆ.

ಪ್ರೊಸೆಸರ್ ಬಲ

ಪ್ರೊಸೆಸರ್ ಬಲ

'ಎಸ್ಕೋಬಾರ್ ಫೋಲ್ಡ್‌ 1' ಸ್ಮಾರ್ಟ್‌ಫೋನ್ ಆಕ್ಟಾಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ವೇಗವನ್ನು ಪಡೆದಿದೆ. ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 9 ಪೈ ಓಎಸ್‌ ಬೆಂಬಲ ಒದಗಿಸಲಾಗಿದೆ. ಇದರೊಂದಿಗೆ ಈ ಫೋನ್ 6GB ಮತ್ತು 8GB of RAM ಜೊತೆಗೆ 128GB/512GB/256GB ಸ್ಟೋರೇಜ್ ಆಯ್ಕೆಯ ವೇರಿಯಂಟ್‌ಗಳನ್ನು ಹೊಂದಿದೆ. ಹಾಗೆಯೇ ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೂ ಬಾಹ್ಯ ಮೆಮೊರಿ ಹೆಚ್ಚಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

'ಎಸ್ಕೋಬಾರ್ ಫೋಲ್ಡ್‌ 1' ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಅವುಗಳು ಹಿಂಬದಿಯ ಹಾಗೂ ಸೆಲ್ಫಿ ಕ್ಯಾಮೆರಾ ಆಗಿಯು ಕಾರ್ಯನಿರ್ವಹಿಸುತ್ತವೆ. ಅವುಗಳಲ್ಲಿ ಪ್ರಥಮ ಕ್ಯಾಮೆರಾ 16ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದರೇ, ಇನ್ನು ಸೆಕೆಂಡರಿ ಕ್ಯಾಮೆರಾವು 20ಎಂಪಿ ಸೆನ್ಸಾರ್ ಪಡೆದಿದೆ. ಇದರೊಂದಿಗೆ ಎಲ್‌ಇಡಿ ಫ್ಲ್ಯಾಶ್‌ ಲೈಟ್‌ ಸಹ ನೀಡಲಾಗಿದೆ.

ಬ್ಯಾಟರಿ ಬಾಳಿಕೆ

ಬ್ಯಾಟರಿ ಬಾಳಿಕೆ

'ಎಸ್ಕೋಬಾರ್ ಫೋಲ್ಡ್‌ 1' ಸ್ಮಾರ್ಟ್‌ಫೋನ್ 4,000mAh ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಇದಕ್ಕೆ ಬೆಂಬಲವಾಗಿ 25W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆಯನ್ನು ನೀಡಲಾಗಿದೆ. ಹಾಗೆಯೇ ಯುಎಸ್‌ಬಿ ಟೈಪ್‌ ಸಿ-ಪೋರ್ಟ್‌, ಫಿಂಗರ್‌ಪ್ರಿಂಟ್ ಸೆನ್ಸಾರ್‌, ಬ್ಲೂಟೂತ್, ವೈಫೈ ಸೇರಿದಂತೆ ಇತ್ತಿಚಿನ ಹಲವು ಅಗತ್ಯ ಫೀಚರ್ಸ್‌ಗಳನ್ನು ನೀಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

'ಎಸ್ಕೋಬಾರ್ ಫೋಲ್ಡ್‌ 1' ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್‌ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ 6GB ಮತ್ತು 8GB of RAM ಜೊತೆಗೆ 128GB/512GB/256GB ಆಗಿವೆ. 128GB ಸ್ಟೋರೇಜ್ ವೇರಿಯಂಟ್‌ $349 (ಅಂದಾಜು 25,100ರೂ.) ಹಾಗೆಯೇ 512GB $499 (ಅಂದಾಜು 35,800ರೂ) ಆಗಿದೆ. ಇನ್ನು ಈ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಎಸ್ಕೋಬಾರ್ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
Escobar, brother of Pablo Escobar, has released a Escobar Fold 1 smartphone. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+