Home
ಸುದ್ದಿಜಾಲ

DTH Bills : ಟಿವಿ ವೀಕ್ಷಕರೇ, DTH ರೀಚಾರ್ಜ್ ಇನ್ಮುಂದೆ ದುಬಾರಿ!?..ಇಲ್ಲಿದೆ ಮಾಹಿತಿ

ಈಗಂತೂ ಪ್ರತಿಯೊಬ್ಬರ ಮನೆಯಲ್ಲೂ ಡಿಟಿಹೆಚ್‌ ಬಳಕೆ ಮಾಡಲಾಗುತ್ತದೆ. ಅದರಲ್ಲೂ ವಿವಿಧ ಪ್ರಯೋಜನ ನೀಡುವ ಹಲವು ಡಿಟಿಹೆಚ್‌ ಆಯ್ಕೆಗಳು ಗ್ರಾಹಕರಿಗೆ ಲಭ್ಯವಿದ್ದು, ಈ ಮೂಲಕ ತಮಗೆ ಬೇಕಾದ ಟಿವಿ ಚಾನಲ್‌ಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ಆದರೆ, ಈಗ ತಿಂಗಳಿಗೆ ನೀಡಲಾಗುತ್ತಿರುವ ಹೆಚ್ಚುವರಿ ಬಿಲ್‌ ಹೊರತಾಗಿಯೂ ಇನ್ನೂ ಹೆಚ್ಚಿನ ಬಿಲ್ ಪಾವತಿ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ.

ಟಿವಿ ವೀಕ್ಷಕರೇ, DTH ರೀಚಾರ್ಜ್ ಇನ್ಮುಂದೆ ದುಬಾರಿ!?..ಇಲ್ಲಿದೆ ಮಾಹಿತಿ

ಹೌದು, ಈ ತಿಂಗಳ ಆರಂಭದಲ್ಲಿ ಜಾರಿಗೆ ಬಂದಿರುವ ಹೊಸ ಟ್ಯಾರಿಪ್‌ ಕಾರಣದಿಂದಾಗಿ ಇನ್ನೇನು ಮುಂದಿನ ವಾರದಲ್ಲೇ ಹೆಚ್ಚಿನ ಬಿಲ್‌ ಪಾವತಿ ಮಾಡುವ ಮೂಲಕ ಟಿವಿ ಚಾನಲ್‌ಗಳನ್ನು ವೀಕ್ಷಣೆ ಮಾಡಬೇಕಾಗಿದೆ. ಇನ್ನು ಈ ಟ್ಯಾರಿಪ್‌ ಆದೇಶದಿಂದ ಡಿಟಿಹೆಚ್‌ ಆಪರೇಟರ್‌ಗಳು ಆಕ್ರೋಶಕ್ಕೆ ಒಳಗಾಗಿ ಪ್ರತಿರೋಧ ಸಹ ಒಡ್ಡಿದ್ದರು. ಹಾಗಿದ್ರೆ, ಯಾವ ಉದ್ದೇಶದಿಂದ ಬಿಲ್‌ ಹೆಚ್ಚಿಗೆ ಮಾಡಲಾಗುತ್ತಿದೆ?, ಇದಕ್ಕೂ ಓಟಿಟಿಗೂ ಇರುವ ಸಂಬಂಧ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಓಟಿಟಿ ಪ್ರಾಬಲ್ಯ

ಇಂದು ಬಹುಪಾಲು ಎಲ್ಲರ ಟಿವಿ, ಫೋನ್‌ಗಳಲ್ಲೂ ಓಟಿಟಿ ಪ್ರಾಬಲ್ಯ ಸಾಧಿಸಿದೆ. ಯಾಕೆಂದರೆ ಓಟಿಟಿಯಲ್ಲಿ ಪ್ರಸಾರವಾಗುವ ಮಾಹಿತಿ ಹಾಗೂ ಮನರಂಜನಾ ಶೋಗಳು ಟಿವಿಗಳಲ್ಲಿ ಪ್ರಸಾರವಾಗುವ ಶೋಗಳಿಗಿಂತ ಹೆಚ್ಚು ಭಿನ್ನವಾಗಿದ್ದು, ಹಲವಾರು ಜನರಿಗೆ ಇಷ್ಟವಾದ ಕಂಟೆಂಟ್‌ಗಳು ಅದರಲ್ಲಿ ಇರುತ್ತವೆ. ಅಷ್ಟೇ ಅಲ್ಲದೆ, ಅಗತ್ಯಕ್ಕೆ ತಕ್ಕಂತೆ ಬೇಕಾದ ಶೋಗಳನ್ನು ಬೇಕಾದ ಸಮಯದಲ್ಲಿ ವೀಕ್ಷಣೆ ಮಾಡುವ ಅವಕಾಶ ಸಹ ಇರುವುದರಿಂದ ಇಂದು ಓಟಿಟಿ ಪ್ಲಾಟ್‌ಫಾರ್ಮ್‌ಗಳು ಭಾರೀ ಜನಪ್ರಿಯತೆ ಗಳಿಸಿಕೊಂಡಿವೆ.

ಇದರ ನಡುವೆ ಡಿಟಿಹೆಚ್‌ ಪೂರೈಕೆದಾರರು ತಮ್ಮ ಗ್ರಾಹಕರಿಗೆ ಒಪ್ಪಂದದ ಭಾಗವಾಗಿ ಓಟಿಟಿ ಚಂದಾದಾರಿಕೆಗಳನ್ನು ನೀಡಲು ಪ್ರಾರಂಭಿಸಿದ್ದು, ಈ ಮೂಲಕ ಮುಂಬರುವ ಕೆಲವು ವಾರದಲ್ಲೇ ಹೆಚ್ಚಿನ ಬೆಲೆ ನೀಡುವ ಮೂಲಕ ಟಿವಿಯಲ್ಲಿ ಶೋಗಳನ್ನು ವೀಕ್ಷಣೆ ಮಾಡಬೇಕಿದೆ.

ಟಿವಿ ವೀಕ್ಷಕರೇ, DTH ರೀಚಾರ್ಜ್ ಇನ್ಮುಂದೆ ದುಬಾರಿ!?..ಇಲ್ಲಿದೆ ಮಾಹಿತಿ

ಡಿಟಿಹೆಚ್‌ ಬಿಲ್ ಹೆಚ್ಚಾಗಲು ಕಾರಣ ಏನು?

ಫೆಬ್ರವರಿ 1 ರಿಂದ ಜಾರಿಗೆ ಬಂದಿರುವ ಹೊಸ ಟ್ಯಾರಿಫ್ ಆದೇಶ 3.0 ನಿಂದಾಗಿ ಈ ಎಲ್ಲಾ ಬೆಳವಣಿಗೆಗಳು ಕಂಡುಬರುತ್ತಿವೆ. ಅದರಲ್ಲೂ ಈ ಆದೇಶವನ್ನು ಜಾರಿ ಮಾಡಲು ಮುಂದಾದಾಗ ಟ್ರಾಯ್‌ ತೀವ್ರವಾಗಿ ಡಿಟಿಹೆಚ್ ಆಪರೇಟರ್‌ಗಳ ಪ್ರತಿರೋಧವನ್ನೂ ಸಹ ಎದುರಿಸಿತ್ತು. ಅದಾಗ್ಯೂ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.

ಹಾಗೆಯೇ, ಅಖಿಲ ಭಾರತ ಡಿಜಿಟಲ್ ಕೇಬಲ್ ಫೆಡರೇಶನ್ ಸದಸ್ಯರು ಹೊಸ ಶುಲ್ಕದ ಆದೇಶ 3.0 ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಮನರಂಜನೆ ವಿಷಯದಲ್ಲಿ ಓಟಿಟಿ ಪ್ರಾಬಲ್ಯ ಹೊಂದಿರುವುದರಿಂದ ದೊಡ್ಡ ನಷ್ಟವನ್ನು ಉಂಟುಮಾಡುತ್ತದೆ ಎಂದು ಕೋರ್ಟ್‌ಗೆ ಸದಸ್ಯರು ಮನವಿ ಮಾಡಿದ್ದರು. ಅದಾಗ್ಯೂ ಜನವರಿ 6, 2023 ರಂದು ಹೊಸ ಆಡಳಿತಕ್ಕೆ ತಡೆ ನೀಡಲು ಕೇರಳ ಹೈಕೋರ್ಟ್ ನಿರಾಕರಿಸಿತ್ತು.

ಇದೆಲ್ಲದರ ನಡುವೆ ಟೆಲಿಕಾಂ ಆಪರೇಟರ್ ಟ್ರಾಯ್‌ ಫೆಬ್ರವರಿ 1 ರಿಂದ ಆದೇಶವನ್ನು ಜಾರಿಗೆ ತಂದಿದ್ದು, ಇದರ ಎಫೆಕ್ಟ್‌ ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಬೀರಲಿದೆ ಎನ್ನಲಾಗಿದೆ. ಅದರಲ್ಲೂ ಸುಮಾರು 80 ರಷ್ಟು ಡಿಪಿಓ ಗಳು ಈಗಾಗಲೇ ಪ್ರಸಾರಕರೊಂದಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ ಹಾಗೂ ಇತ್ತೀಚಿನ ಎನ್‌ಟಿಓ ಗೂ ಸಹ ಒಪ್ಪಿಗೆ ನೀಡಲಾಗಿದೆ.

ಟಿವಿ ವೀಕ್ಷಕರೇ, DTH ರೀಚಾರ್ಜ್ ಇನ್ಮುಂದೆ ದುಬಾರಿ!?..ಇಲ್ಲಿದೆ ಮಾಹಿತಿ

ಏರಿಕೆ ಎಷ್ಟಾಗಲಿದೆ?

ಸಾಮಾನ್ಯವಾಗಿ ಈ ಡಿಟಿಹೆಚ್‌ ಸೇವೆಯನ್ನು ಬಡ, ಮಧ್ಯಮ ವರ್ಗದ ಜನರು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇನ್ನೂ ಕೆಲ ಪ್ರದೇಶದಲ್ಲಿ ಅದರಲ್ಲೂ ಹಳ್ಳಿಗಳಲ್ಲಿ ಓಟಿಟಿ ಸೇವೆಯನ್ನು ಹೇಗೆ ಬಳಕೆ ಮಾಡಬೇಕು ಎಂಬ ಬಗ್ಗೆ ಅರಿವಿಲ್ಲ. ಅದಾಗ್ಯೂ ಈ ಹೊಸ ನಿಯಮದಿಂದ ಅನಿವಾರ್ಯವಾಗಿ ಹೆಚ್ಚಿನ ಹಣ ಪಾವತಿ ಮಾಡಬೇಕಾಗುತ್ತದೆ. ಖುಷಿ ವಿಷಯ ಏನೆಂದರೆ ಇದನ್ನು ಒಂದೇ ಬಾರಿಗೆ ಎಲ್ಲಾ ಕಡೆ ಅನ್ವಯಿಸುವ ಬದಲಾಗಿ ಹಂತ ಹಂತವಾಗಿ ಹಾಗೂ ವ್ಯವಸ್ಥಿತವಾಗಿ ಬಿಲ್ ಬೆಲೆ ಹೆಚ್ಚಿಸಲು ಕಂಪೆನಿಗಳು ಮುಂದಾಗಿವೆ.

ಅದರಂತೆ ಡಿಟಿಹೆಚ್ ಚಂದಾದಾರರು ತಮ್ಮ ಡಿಟಿಹೆಚ್ ಬಿಲ್‌ಗಳಲ್ಲಿ ಸುಮಾರು 25 ರೂ. ಗಳಿಂದ 50 ರೂ. ಗಳ ಹೆಚ್ಚಿನ ಶುಲ್ಕವನ್ನು ನೀಡಬೇಕಾಗುತ್ತದೆ ಎನ್ನಲಾಗಿದೆ. ಇದರ ನಡುವೆ ಮುಂದಿನ ನಾಲ್ಕರಿಂದ ಆರು ವಾರಗಳಲ್ಲಿ ಬೆಲೆಗಳನ್ನು ಹಂತಹಂತವಾಗಿ ಹೆಚ್ಚಿಸಲಾಗುವುದು ಎಂದು ಟಾಟಾ ಪ್ಲೇ ವಕ್ತಾರರು ಮಾಹಿತಿ ನೀಡಿದ್ದಾರೆ.

Best Mobiles in India

English summary
DTH bills will go up in the next few weeks because of Tariff Order 3.0 that came into effect from February 1.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+