Subscribe to Gizbot

ಬಾತು ಕೋಳಿಗೆ ಬಲ ನೀಡಿದ ಹೊಸ 3ಡಿ ಪ್ರಿಂಟರ್‌ ಕಾಲು

Written By:

ನಿಮ್ಮ ಪ್ರೀತಿಯ ಸಾಕು ಪ್ರಾಣಿಯ ಕಾಲಿಗೆ ಏಟು ಬಿದ್ದು ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಚಿಂತೆಯಲ್ಲಿದ್ದೀರಾ?ಹಾಗಾದ್ರೆ ಇನ್ನು ಮುಂದೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲ.ನಿಮ್ಮ ಸಾಕು ಪ್ರಾಣಿ ಪಕ್ಷಿಯ ಕಾಲಿಗೆ ಏಟಾದ್ರೂ ತನ್ನದೇ ಕಾಲಿನಲ್ಲಿ ನಡೆಯಬಹುದು.

ಇದು ಸಾಧ್ಯವಾಗಿದ್ದು 3ಡಿ ಪ್ರಿಂಟರ್‌ನಿಂದ. ಕೆನಡಾದ ಮೆಕ್ಯಾನಿಕ್‌ ಎಂಜಿನಿಯರ್‌‌‌ Terence Loring ಮನೆಯಲ್ಲಿದ್ದ ಮರಿ ಬಾತುಕೋಳಿ ಮೇಲೆ ಕೋಳಿಯೊಂದು ದಾಳಿ ಮಾಡಿ ಅದರ ಬಲಗಾಲಿಗೆ ಬಲವಾದ ಪೆಟ್ಟು ಬಿದ್ದಿತ್ತು. ಪೆಟ್ಟಿನಿಂದಾಗಿ ಬಾತುಕೋಳಿ ಬಲಗಾಲು ಸ್ವಾಧೀನ ಕಳೆದುಕೊಂಡು ಒಂದೇ ಕಾಲಿನಲ್ಲಿ ಕಷ್ಟಪಟ್ಟು ನಡೆಯುತ್ತಿತ್ತು.ಬಾತುಕೋಳಿ ಕಷ್ಟವನ್ನು ಸಹಿಸದೇ 3ಡಿ ಪ್ರಿಂಟರ್‌ ಮೂಲಕ ಹೊಸ ಕಾಲು ನಿರ್ಮಿಸುವ ಸಾಧ್ಯತೆಯನ್ನು Terence Loring ಯೋಚಿಸಿ 3ಡಿ ಪ್ರಿಂಟರ್‌ ಸಾಧನಗಳನ್ನು ನಿರ್ಮಿಸುವ ಕಂಪೆನಿಗೆ ತಮ್ಮ ಸಮಸ್ಯೆ ಹೇಳಿದ್ದಾರೆ.

ಹೊಸ ರೀತಿಯ ಸವಾಲು ಸ್ವೀಕರಿಸಿದ ಕಂಪೆನಿ ಬಾತುಕೋಳಿ ಕಾಲನ್ನು ಸ್ಕ್ಯಾನ್‌ ಮಾಡಿ ವಿವಿಧ ಮಾದರಿಯ ಕಾಲುಗಳನ್ನು ತಯಾರಿಸಿತ್ತು.ಆದರೆ ಬಾತು ಕೋಳಿಯ ಕಾಲು ಮತ್ತು ಹೊಸ ರಬ್ಬರ್‌ ಮಿಶ್ರಿತ ಪ್ಲಾಸ್ಟಿಕ್‌ ಕಾಲು ಸಂಧಿಸುವ ಜಾಗದ ಗಾತ್ರದಲ್ಲಿ ಸಮಸ್ಯೆ ಎದುರಾಗಿತ್ತಂತೆ. ಕೊನೆಗೆ ಈ ಸಮಸ್ಯೆಯನ್ನು ಪರಿಹರಿಸಿ ಸರಿಯಾದ ಗಾತ್ರ ಕಾಲನ್ನು ತಯಾರಿಸಿದ್ದು ಈಗ ಈ ಪ್ಲಾಸ್ಟಿಕ್‌ ರಬ್ಬರ್‌ ಮಿಶ್ರಣದಿಂದ ತಯಾರಾದ ಕಾಲಿನ ಮೂಲಕ ಬಾತುಕೋಳಿ ಮೊದಲಿನಂತೆ ನಡೆಯುತ್ತದೆ,ಓಡುತ್ತದೆ.

ಇದನ್ನೂ ಓದಿ: 24 ಗಂಟೆಯಲ್ಲಿ ಮನೆ ಕಟ್ಟುವ ಹೊಸ 3ಡಿ ಪ್ರಿಂಟರ್‌!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಬಾತು ಕೋಳಿಗೆ ಬಲ ನೀಡಿದ ಹೊಸ 3ಡಿ ಪ್ರಿಂಟರ್‌ ಕಾಲು

1

ಸ್ವಾಧೀನ ಕಳೆದುಕೊಂಡ ಬಾತು ಕೋಳಿಯ ಬಲಗಾಲು

 ಬಾತು ಕೋಳಿಗೆ ಬಲ ನೀಡಿದ ಹೊಸ 3ಡಿ ಪ್ರಿಂಟರ್‌ ಕಾಲು

2

ಕಂಪ್ಯೂಟರ್‌ ಗ್ರಾಫಿಕ್ಸ್‌ ಕಾಲು

 ಬಾತು ಕೋಳಿಗೆ ಬಲ ನೀಡಿದ ಹೊಸ 3ಡಿ ಪ್ರಿಂಟರ್‌ ಕಾಲು

3

3ಡಿ ಪ್ರಿಂಟರ್‌ನಿಂದ ತಯಾರಾದ ಪ್ಲಾಸ್ಟಿಕ್‌ ರಬ್ಬರ್‌ ಮಿಶ್ರಿತ ಕಾಲಿನ ಮಾದರಿ

 ಬಾತು ಕೋಳಿಗೆ ಬಲ ನೀಡಿದ ಹೊಸ 3ಡಿ ಪ್ರಿಂಟರ್‌ ಕಾಲು

4

3ಡಿ ಪ್ರಿಂಟರ್‌ನಿಂದ ತಯಾರಾದ ಪ್ಲಾಸ್ಟಿಕ್‌ ರಬ್ಬರ್‌ ಮಿಶ್ರಿತ ಕಾಲಿನ ಮಾದರಿ

 ಬಾತು ಕೋಳಿಗೆ ಬಲ ನೀಡಿದ ಹೊಸ 3ಡಿ ಪ್ರಿಂಟರ್‌ ಕಾಲು

5

3ಡಿ ಪ್ರಿಂಟರ್‌ನಿಂದ ತಯಾರಾದ ಪ್ಲಾಸ್ಟಿಕ್‌ ರಬ್ಬರ್‌ ಮಿಶ್ರಿತ ಕಾಲಿನಲ್ಲಿ ಬಾತುಕೋಳಿ

6

ವಿಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot