Home
ಸುದ್ದಿಜಾಲ

ಯೂಟ್ಯೂಬ್‌ನಲ್ಲಿ ಅಶ್ಲೀಲ ವಿಡಿಯೋಗಳು, ಅಪ್‌ಲೋಡ್‌ ಮಾಡಿದ್ಯಾರು? ಹೇಗೆ ಸಾಧ್ಯ? ಗೂಗಲ್‌ಗೂ ತಲೆನೋವಾದ ಸಮಸ್ಯೆ!

ಯೂಟ್ಯೂಬ್‌ (YouTube) ಅತ್ಯಂತ ಜನಪ್ರಿಯ ಆನ್‌ಲೈನ್ ವಿಡಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಅಗ್ರಸ್ಥಾನದಲ್ಲಿದೆ. ಈ ಮೂಲಕ ಜನರು ಕ್ಷಣ ಮಾತ್ರದಲ್ಲಿ ಜಾಗತಿಜವಾಗಿ ಜರುಗುವ ಮಾಹಿತಿ ಹಾಗೂ ಮನರಂಜನೆ ಪಡೆಯುತ್ತಿದ್ದಾರೆ. ಈ ನಡುವೆ ಯೂಟ್ಯೂಬ್‌ ನಲ್ಲಿ ಅಶ್ಲೀಲ ವಿಡಿಯೋಗಳನ್ನು ಸಹ ಅಪ್‌ಲೋಡ್ ಮಾಡಬಹುದು ಎಂಬುದು ನಿಮಗೆ ಗೊತ್ತಾ?.

ಹೌದು, ಯೂಟ್ಯೂಬ್‌ ಪ್ಲಾಟ್‌ಫಾರ್ಮ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ಅಪ್‌ಲೋಡ್ ಮಾಡಬಹುದಾಗಿದೆ. ಅರೇ ಅದೇಗೆ ಸಾಧ್ಯ, ಮಕ್ಕಳು ಮಯಸ್ಕರೆಲ್ಲಾ ಸೇರಿ ಒಟ್ಟಾಗಿ ಸ್ಟ್ರೀಮ್‌ ಮಾಡುವ ಈ ಪ್ಲಾಟ್‌ಫಾರ್ಮ್‌ನಲ್ಲಿ ಅಶ್ಲೀಲ ವಿಡಿಯೋಗಳೇ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಆದರೆ, ಇಲ್ಲೊಂದು ಸಮಸ್ಯೆ ಖಂಡಿತಾ ಇದೆ. ಹಾಗಿದ್ರೆ, ಏನಿದು ಸಮಸ್ಯೆ?, ಯೂಟ್ಯೂಬ್‌ನಲ್ಲಿ ಯಾಕೆ ಈ ಬದಲಾವಣೆ? ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಯೂಟ್ಯೂಬ್‌ನಲ್ಲಿ ಅಶ್ಲೀಲ ವಿಡಿಯೋಗಳು, ಅಪ್‌ಲೋಡ್‌ ಮಾಡಿದ್ಯಾರು? ಹೇಗೆ ಸಾಧ್ಯ?

ಯೂಟ್ಯೂಬ್‌ನಲ್ಲಿ ಅಶ್ಲೀಲ ವಿಡಿಯೋ: ಜನಪ್ರಿಯ ಆನ್‌ಲೈನ್ ವೀಡಿಯೊ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನಲ್ಲಿ ಕಂಟೆಂಟ್‌ ಮಾಡರೇಶನ್ ಅಲ್ಗಾರಿದಮ್‌ಗಳನ್ನು ಬೈಪಾಸ್ ಮಾಡುವ ಮೂಲಕ ಸ್ಪಷ್ಟ ವಯಸ್ಕ ಕಂಟೆಂಟ್‌ ಅಪ್‌ಲೋಡ್ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುವ ದೋಷವನ್ನು ಪತ್ತೆ ಮಾಡಲಾಗದೆ. ಸೂಕ್ತವಲ್ಲದ ಕಂಟೆಂಟ್‌ ಅನ್ನು ತೆಗೆದುಹಾಕುವ ಪ್ರಯತ್ನಗಳ ಹೊರತಾಗಿಯೂ, ಯೂಟ್ಯೂಬ್‌ನಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ.

ಯೂಟ್ಯೂಬ್‌ ಹ್ಯಾಕರ್‌ಗಳು ಎಂಬ ಸ್ವಯಂ ಘೋಷಿತ ವ್ಯಕ್ತಿಗಳ ಗುಂಪೊಂದು ಸ್ಪಷ್ಟ ವಯಸ್ಕರ ಕಂಟೆಂಟ್‌ನೊಂದಿಗೆ ಈ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ನೀಡಿದೆ. ಇಲ್ಲಿ ಕಂಟೆಂಟ್ ಮಾಡರೇಶನ್ ನಲ್ಲಿ ದೋಷ ಮತ್ತೆ ಮಾಡಿ ಈ ಕೆಲಸ ಮಾಡುತ್ತಿದ್ದಾರೆ. ಅಂದರೆ ಅವರು ಜನಪ್ರಿಯ ವಯಸ್ಕ ಸೈಟ್‌ಗಳಿಂದ ಯೂಟ್ಯೂಬ್‌ಗೆ ನೇರವಾಗಿ ವಿಡಿಯೋಗಳನ್ನು ವರ್ಗಾಯಿಸುವ ಮಟ್ಟಕ್ಕೆ ಇಳಿದಿದ್ದಾರೆ.

ಈ ಹ್ಯಾಕರ್‌ಗಳು ಯೂಟ್ಯೂಬ್‌ನ ಕಂಟೆಂಟ್ ಮಾಡರೇಶನ್ ಅಲ್ಗಾರಿದಮ್‌ಗಳನ್ನು ಹೇಗೆ ಬೈಪಾಸ್ ಮಾಡುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು, 404 ಮೀಡಿಯಾದ ವರದಿಗಾರ ಇಮ್ಯಾನುಯೆಲ್ ಮೈಬರ್ಗ್ ಯೂಟ್ಯೂಬ್‌ ಹಂಟರ್ಸ್ ಎಂದು ಕರೆಯಲ್ಪಡುವ ಡಿಸ್ಕಾರ್ಡ್ ಗುಂಪನ್ನು ಸೇರಿಕೊಂಡಿದ್ದಾರೆ. ಈ ಮೂಲಕ ಕಂಡುಬಂದ ಮಾಹಿತಿ ಏನೆಂದರೆ ಅವರು ಪ್ಲಾಟ್‌ಫಾರ್ಮ್‌ನಲ್ಲಿ NSFW ಕಂಟೆಂಟ್‌ ಅನ್ನು ಶೇರ್‌ ಮಾಡಲು ಹಾಗೂ ಪತ್ತೆ ಮಾಡಲು ಮುಂದಾಗಿರುವುದು.

ಗಮನಿಸಬೇಕಾದ ವಿಷಯ ಏನೆಂದರೆ ಯೂಟ್ಯೂಬ್‌ ವಯಸ್ಕರ ಕಂಟೆಂಟ್‌ ವಿರುದ್ಧ ನೀತಿಗಳನ್ನು ಹೊಂದಿದೆ. ಆದರೆ ಇದು ಶೈಕ್ಷಣಿಕ, ಸಾಕ್ಷ್ಯಚಿತ್ರ, ವೈಜ್ಞಾನಿಕ ಅಥವಾ ಕಲಾತ್ಮಕ ಕಂಟೆಂಟ್‌ನಂತಹ ಕೆಲವು ಸಂದರ್ಭಗಳಲ್ಲಿ ನಗ್ನತೆಯನ್ನು ಅನುಮತಿಸುತ್ತದೆ. ಸ್ಪಷ್ಟವಾಗಿ, ಹೆಚ್ಚಿನ ಹಾರ್ಡ್‌ಕೋರ್ ಅಶ್ಲೀಲತೆ ಈ ವರ್ಗಗಳಿಗೆ ಹೊಂದಿಕೆಯಾಗುವುದಿಲ್ಲ. ಈ ಕೆಲವು ಹ್ಯಾಕರ್‌ಗಳು ಯೂಟ್ಯೂಬ್‌ನ ವಿಡಿಯೋ ಟ್ಯಾಗಿಂಗ್ ವ್ಯವಸ್ಥೆಯಲ್ಲಿನ ದೋಷದ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಮೈಬರ್ಗ್ ಪತ್ತೆ ಮಾಡಿದ್ದಾರೆ.

ಲಕ್ಷಾಂತರ ವಿಶೇಷ ಅಕ್ಷರಗಳು, ನಿರ್ದಿಷ್ಟವಾಗಿ ಹೊಸ ಸಾಲಿನ ಅಕ್ಷರಗಳು, ಚಾನಲ್ ಅಥವಾ ವಿಡಿಯೋ ಶೀರ್ಷಿಕೆಗಳಂತಹ ಸಾಮಾನ್ಯ ಗುರುತಿಸುವಿಕೆಗಳಿಲ್ಲದೆಯೇ ವಿಡಿಯೋಗಳನ್ನು ಪರಿಣಾಮಕಾರಿಯಾಗಿ ರಚಿಸುವುದರ ಜೊತೆಗೆ ಲೈಕ್ ಮತ್ತು ಶೇರ್‌ ವಿಡಿಯೋ ಅಂಕಿ-ಅಂಶಗಳೊಂದಿಗೆ ಪ್ಲಾಟ್‌ಫಾರ್ಮ್‌ನಲ್ಲಿ ಈ ರೀತಿಯ ವಿಡಿಯೋಗಳನ್ನು ಅಪ್‌ಲೋಡ್‌ ಮಾಡುವ ಮಾರ್ಗ ಕಂಡುಕೊಂಡಿದ್ದಾರಂತೆ. ದುರಂತ ಏನೆಂದರೆ ಈ ವಿಡಿಯೋಗಳನ್ನು ಟ್ರ್ಯಾಕ್ ಮಾಡಲು ಮತ್ತು ತೆಗೆದುಹಾಕಲು ಯೂಟ್ಯೂಬ್‌ಗೆ ಸವಾಲಾಗಿದೆ ಎನ್ನಲಾಗಿದೆ.

ಅದಾಗ್ಯೂ ಅನೇಕ ವಿಡಿಯೋಗಳನ್ನು ಅಳಿಸಲಾಗಿದೆ. ಆದರೂ ಎಲ್ಲಾ ವಿಡಿಯೋಗಳನ್ನ ತೆಗೆದುಹಾಕಲಾಗಿಲ್ಲ. ಯೂಟ್ಯೂಬ್‌ಗೆ ಮಾತ್ರವಲ್ಲದೆ ಗೂಗಲ್‌ಗೂ ಸಹ ಇದನ್ನು ಪರಿಹರಿಸಲು ಕಷ್ಟವಾಗಿದೆಯಂತೆ. ಪ್ರತಿಕ್ರಿಯೆಗಾಗಿ ಮೈಬರ್ಗ್ ಗೂಗಲ್‌ ಅನ್ನು ವಿಚಾರಿಸಿದಾಗ ವಕ್ತಾರರು ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಮೊದಲು ನಿರ್ದಿಷ್ಟ ವಿಡಿಯೋ ಲಿಂಕ್ ಅನ್ನು ಕೇಳಿದ್ದಾರಂತೆ.

ಈ ಸಂಬಂಧ ಗೂಗಲ್ ಪ್ರತಿಕ್ರಿಯೆ ನೀಡಿದ್ದು, ಯೂಟ್ಯೂಬ್‌ನಲ್ಲಿ ಈಗ ಈ ರೀತಿಯ ವಿಡಿಯೋಗಳು ಕಡಿಮೆ ಸಂಖ್ಯೆಯಲ್ಲಿವೆ ಎಂದು ನಮಗೆ ತಿಳಿದಿದೆ. ನಾವು ಇದನ್ನು ಸರಿಪಡಿಸಲು ಮತ್ತು ಪ್ಲಾಟ್‌ಫಾರ್ಮ್‌ನಿಂದ ಈ ಕಂಟೆಂಟ್‌ ಅನ್ನು ತೆಗೆದುಹಾಕಲು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದೆ. ಏನೇ ಆದರೂ ಈ ಪರಿಸ್ಥಿತಿಯು ಯೂಟ್ಯೂಬ್‌ನ ಕಂಟೆಂಟ್‌ ಮಾಡರೇಶನ್ ಸಿಸ್ಟಮ್‌ನಲ್ಲಿ ಗಮನಾರ್ಹವಾದ ದುರ್ಬಲತೆಯನ್ನು ಎತ್ತಿ ತೋರಿಸಿದ್ದಂತೂ ಎಲ್ಲರಿಗೂ ತಿಳಿಯುವಂತೆ ಆಗಿದೆ.

ಯೂಟ್ಯೂಬ್‌ನಲ್ಲಿ ಅಶ್ಲೀಲ ವಿಡಿಯೋಗಳು, ಅಪ್‌ಲೋಡ್‌ ಮಾಡಿದ್ಯಾರು? ಹೇಗೆ ಸಾಧ್ಯ?

ಪ್ಲಾಟ್‌ಫಾರ್ಮ್‌ಗೆ ಈ ಕಂಟೆಂಟ್‌ ಅನ್ನು ಅಪ್‌ಲೋಡ್ ಮಾಡಲು ದೋಷವನ್ನು ಬಳಸಿಕೊಳ್ಳಲಾಗಿದ್ದು, ಕೆಲವು ವಿಡಿಯೋಗಳನ್ನು ತೆಗೆದುಹಾಕಲಾಗಿದೆಯಾದರೂ, ಸಮಸ್ಯೆಯ ವ್ಯಾಪ್ತಿಯು ಅಸ್ಪಷ್ಟವಾಗಿಯೇ ಉಳಿದಿದೆ ಮತ್ತು ಭವಿಷ್ಯದಲ್ಲಿ ಅಂತಹ ಕಂಟೆಂಟ್‌ ವಿರುದ್ಧ ಯೂಟ್ಯೂಬ್‌ ಹೇಗೆ ಹೋರಾಡುತ್ತದೆ ಎಂಬ ಪ್ರಶ್ನೆಯೂ ಈ ವೇಳೆ ಮೂಡಲಿದೆ. ಈ ಮೂಲಕ ಬಳಕೆದಾರರು ಆತಂಕದಲ್ಲಿ ಇದನ್ನು ಸ್ಟ್ರೀಮ್‌ ಮಾಡುವಂತೆ ಆಗಿದೆ.

Best Mobiles in India

English summary
A bug that allows users to upload adult content by bypassing content moderation algorithms on popular online video platform YouTube .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+