ಆನ್‌ಲೈನ್ ಶಾಪಿಂಗ್ ಮಾಡುವಾಗ ಎಚ್ಚರ!..ಅಪ್ಪಿತಪ್ಪಿಯೂ ಹೀಗೆ ಮಾಡಬೇಡಿ!
ಪ್ರಸ್ತುತ ಸಾಲು ಸಾಲು ಹಬ್ಬಗಳು ಇದ್ದು, ಈ ನಿಟ್ಟಿನಲ್ಲಿ ಪ್ರಮುಖ ಆನ್‌ಲೈನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ವಿಶೇಷ ಸೇಲ್ ಮೇಳಗಳನ್ನು ಆಯೋಜಿಸಿವೆ. ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿಲು ಇ ಕಾಮರ್ಸ್ ತಾಣಗಳು ಭರಪೂರ ಕೊಡುಗೆಗಳನ್ನು ಘೋಷಿಸುತ್ತವೆ. ಮುಖ್ಯವಾಗಿ ಇ ಕಾಮರ್ಸ್ ದೈತ್ಯ ಸಂಸ್ಥೆಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ತಾಣಗಳು ಪೈಪೋಟಿಗೆ ಬಿದ್ದವರಂತೆ ಭಾರೀ ಡಿಸ್ಕೌಂಟ್ ಆಫರ್ ತಿಳಿಸುತ್ತವೆ. ವಾಟ್ಸಾಪ್ ಗ್ರೂಪ್, ಫೇಸ್‌ಬುಕ್ ಹಾಗೂ ಇನ್ನಿತರ ಸೋಶಿಯಲ್ ಮೀಡಿಯಾಗಳಲ್ಲಿ ಕೊಡುಗೆಗಳ ಲಿಂಕ್ ಹರಿದಾಡುತ್ತವೆ. ಆದರೆ ಆನ್‌ಲೈನ್‌ನಲ್ಲಿ ಖರೀದಿಸುವ ಗ್ರಾಹಕರು ಎಚ್ಚರ ವಹಿಸುವುದು ಅತೀ ಮುಖ್ಯ.

ಹೌದು, ಹಬ್ಬಗಳು ಬಂದರೇ ಇ ಕಾಮರ್ಸ್ ತಾಣಗಳು, ಆನ್‌ಲೈನ್ ಶಾಪಿಂಗ್ ಸೈಟ್‌ಗಳು ಗರಿಗೆದರಿ ಬಿಡುತ್ತವೆ. ವಿಶೇಷ ಕೊಡುಗೆಗಳ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗುತ್ತವೆ. ಅಧಿಕ ರಿಯಾಯಿತಿ ಸೇಲ್‌ನ ಕೊಡುಗೆಗಳ ಲಿಂಕ್‌ಗಳು ಸಹ ಸೋಶಿಯಲ್ ಮೀಡಿಯಾ ಸೈಟ್‌ಗಳಲ್ಲಿ ಹರಿದಾಡುತ್ತವೆ. ಈ ರೀತಿ ಹರಿದಾಡುವ ಆಫರ್ ಲಿಂಕ್ ಕ್ಲಿಕ್ ಮಾಡುವ ಮುನ್ನ ಎಚ್ಚರವಹಿಸುವುದು ಅಗತ್ಯ. ಕೆಲವೊಮ್ಮೆ ನಕಲಿ ಲಿಂಕ್‌ಗಳಾಗಿರಬಹುದು. ನಿಮ್ಮ ಹಣ ಕಬಳಿಸುವ ದುರುದ್ದೇಶದ ಲಿಂಕ್ ಆಗಿರಬಹುದು. ಹೀಗಾಗಿ ಆನ್‌ಲೈನ್ ಶಾಪಿಂಗ್ ಮಾಡುವಾಗ ಅವಸರ ಬೇಡಿ. ಎಚ್ಚರ ಅಗತ್ಯ. ಈ ನಿಟ್ಟಿನಲ್ಲಿ ಇಂದಿನ ಲೇಖನದಲ್ಲಿ ಆನ್‌ಲೈನ್ ಶಾಪಿಂಗ್ ಮಾಡುವಾಗ ಗಮನಿಸಬೇಕಾದ ಕೆಲವು ಪ್ರಮುಖ ಅಂಶಗಳ ಬಗ್ಗೆ ತಿಳಿಸಲಾಗಿದೆ ಮುಂದೆ ಓದಿರಿ.

ಇ ಕಾಮರ್ಸ್‌ಗಳ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿ ಮಾಡಿ:
ಹಬ್ಬದ ಸಂದರ್ಭಗಳಲ್ಲಿ ಇ ಕಾಮರ್ಸ್ ತಾಣಗಳು ಅಧಿಕ ಕೊಡುಗೆ ನೀಡುತ್ತವೆ. ಈ ವೇಳೆ ವಾಟ್ಸಾಪ್ ಸೇರಿದಂತೆ ಕೆಲವು ಸೋಶಿಯಲ್ ಮೀಡಿಯಾಗಳಲ್ಲಿ ಈ ಲಿಂಕ್ ಮೂಲಕ ಶಾಪಿಂಗ್ ಮಾಡಿ ಭರ್ಜರಿ ರಿಯಾಯಿತಿ ಪಡೆಯಿರಿ ಎನ್ನುವಂತಹ ಮೆಸೆಜ್‌ಗಳ ಬಗ್ಗೆ ಎಚ್ಚರ ವಹಿಸಿ. ಅವಸರದಲ್ಲಿ ಇಂತಹ ಲಿಂಕ್ ಮೂಲಕ ಖರೀದಿ ಮಾಡಲು ಹೋದರೇ ನೀವು ಮೋಸ ಹೋಗುವ ಸಾಧ್ಯತೆಗಳು ಅಧಿಕ. ಏಕೆಂದರೇ ಅದು ನಕಲಿ ಇ ಕಾಮರ್ಸ್ ಸೈಟ್ ಆಗಿರಬಹುದು. ಹೀಗಾಗಿ ಇ ಕಾಮರ್ಸ್ ತಾಣಗಳ ಅಧಿಕೃತ ಅಪ್ಲಿಕೇಶನ್ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕವೇ ಖರೀದಿ ಮಾಡಿ

ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ
ಇ ಕಾಮರ್ಸ್ ತಾಣಗಳಲ್ಲಿ ಖರೀದಿಗೆ ಮುಂದಾಗುವ ಬಹುತೇಕರು ಆನ್‌ಲೈನ್ ಪೇಮೆಂಟ್ ಮಾಡಿ ಬಿಡುತ್ತಾರೆ. ಅದಕ್ಕಾಗಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಇ ಕಾಮರ್ಸ್ ಸೈಟ್‌ಗಳಲ್ಲಿ ಸೇವ್ ಮಾಡಿಬಿಡುತ್ತಾರೆ. ಆದರೆ ಕೆಲವೊಮ್ಮೆ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಸೇವ್ ಮಾಡುವುದು ಸೂಕ್ತವಲ್ಲ. ಏಕೆಂದರೇ ಇದರಿಂದ ಕೆಲವೊಮ್ಮೆ ಅಪಾಯ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಸೇವ್ ಮಾಡದೇ, ಖರೀದಿಸುವಾಗ ಮಾತ್ರ ನಮೂದಿಸಬಹುದು.

ಆನ್‌ಲೈನ್‌ನಲ್ಲಿ ಖರೀದಿಸುವ ಉತ್ಪನ್ನಗಳ ವಾರೆಂಟಿ ಬಗ್ಗೆ ತಿಳಿಯಿರಿ:
ಆನ್‌ಲೈನ್ ಶಾಪಿಂಗ್ ಪ್ರಿಯರೇ, ಆನ್‌ಲೈನ್‌ನಲ್ಲಿ ಯಾವುದೇ ಎಲೆಕ್ಟ್ರಾನಿಕ್ ಅಥವಾ ಗ್ಯಾಡ್ಜೆಟ್ಸ್ ಉತ್ಪನ್ನ ಖರೀದಿಸುವಾಗ ಸ್ವಲ್ಪ ಎಚ್ಚರ ವಹಿಸಿ. ಆಫರ್‌ನಲ್ಲಿ ಖರೀದಿಸುವ ಆ ಉತ್ಪನ್ನ ವಾರೆಂಟಿ/ಗ್ಯಾರೆಂಟಿ ಪಡೆದಿದೆಯೇ?..ಇಲ್ಲವೇ ತಿಳಿದುಕೊಂಡು ಖರೀದಿಸುವುದು ಉತ್ತಮ.

ಇ ಕಾಮರ್ಸ್‌ನಲ್ಲಿ ಕ್ಯಾಶ್‌ಆನ್ ಡೆಲಿವರಿ ಆಯ್ಕೆ ಉತ್ತಮ:
ಹಬ್ಬದ ಸೀಸನ್‌ನಲ್ಲಿ ಇ ಕಾಮರ್ಸ್ ತಾಣಗಳು ಭರ್ಜರಿ ರಿಯಾಯಿತಿ ನೀಡುತ್ತವೆ. ಹಾಗೆಯೇ ನೋ ಕಾಸ್ಟ್ ಇಎಮ್‌ಐ ಸೌಲಭ್ಯ ಸಹ ಒದಗಿಸುತ್ತವೆ. ಆದರೆ ಇ ಕಾಮರ್ಸ್ ತಾಣಗಳ ಮೂಲಕ ಉತ್ಪನ್ನಗಳನ್ನು ಖರೀದಿಸುವಾಗ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡುವುದು ಉತ್ತಮ ಆಗಿದೆ. ಉತ್ಪನ್ನ ನಿಮ್ಮ ಕೈ ಸೇರಿದಾಗ ಹಣ ನೀಡಬಹುದು. ಇದರಿಂದಾಗಿ ಮೋಸ ಹೋಗುವ ಭಯ ಇರದು.

ಆನ್‌ಲೈನ್‌ನಲ್ಲಿ ಖರೀದಿ ಉತ್ತಮವೇ ಒಮ್ಮೆ ಪರೀಶಿಲಿಸಿ:
ಯಸ್, ಹಬ್ಬ ವೇಳೆಯಲ್ಲಿ ಇ ಕಾಮರ್ಸ್ ತಾಣಗಳು ಭಾರೀ ಕೊಡುಗೆ, ಡಿಸ್ಕೌಂಟ್ ಘೋಷಿಸುತ್ತವೆ. ಹಾಗಂತ ನೇರವಾಗಿ ಖರೀದಿಸುವ ಮುನ್ನ ಆಫ್‌ಲೈನ್ ಮಾರುಕಟ್ಟೆಯಲ್ಲಿ ಆ ಉತ್ಪನ್ನದ ಬೆಲೆ ಹಾಗೂ ಕೊಡುಗೆ ಬಗ್ಗೆ ಒಮ್ಮೆ ಚೆಕ್ ಮಾಡುವುದು ಉತ್ತಮ. ಇದರಿಂದ ನಿಜಕ್ಕೂ ಇ ಕಾಮರ್ಸ್ ತಾಣದಲ್ಲಿ ಹೆಚ್ಚಿನ ರಿಯಾಯಿತಿ ಇದೆಯಾ ಅಥವಾ ಇಲ್ಲವೇ ತಿಳಿಯುತ್ತದೆ. ಕಂಪೇರ್ ಮಾಡಿದಾಗ ಅಧಿಕ ರಿಯಾಯಿತಿ ಇದೆ ಅನಿಸಿದರೇ ಖರೀದಿಸಲು ಮುಂದಾಗಬಹುದು.


Click it and Unblock the Notifications








