ಸುನಾಮಿಯಂತೆ ಎಂಟ್ರಿ ಕೊಟ್ಟಿದೆ ಡೈಸನ್ ಏರ್ ಪ್ಯೂರಿಫೈಯರ್!..7,000ರೂ. ಡಿಸ್ಕೌಂಟ್!
ಏರ್ ಪ್ಯೂರಿಫೈಯರ್ ಡಿವೈಸ್ ಹಾಗೂ ಗೃಹ ಶುಚಿತ್ವದ ಡಿವೈಸ್‌ಗಳಿಗೆ ಹೆಸರುವಾಸಿ ಆಗಿರುವ ಡೈಸನ್ ಸಂಸ್ಥೆಯು ಇದೀಗ ಭಾರತದಲ್ಲಿ ಹೊಸ ಏರ್ ಪ್ಯೂರಿಫೈಯರ್ ಲಾಂಚ್ ಮಾಡಿದೆ. ಅದುವೇ 'ಡೈಸನ್ ಪ್ಯೂರಿಫೈಯರ್ ಕೂಲ್ ಜನ್ 1' ಏರ್ ಪ್ಯೂರಿಫೈಯರ್ ಆಗಿದ್ದು, ಈ ಪ್ಯೂರಿಫೈಯರ್ ಸಂಸ್ಥೆಯ ಕೋರ್ ಫಿಲ್ಟರೇಶನ್ ತಂತ್ರಜ್ಞಾನ ಮತ್ತು HEPA ಫಿಲ್ಟರ್‌ಗಳನ್ನು ಒಳಗೊಂಡಿದೆ.
ಹೌದು, ಡೈಸನ್ ಸಂಸ್ಥೆಯು ಹೊಸ ಏರ್ ಪ್ಯೂರಿಫೈಯರ್ ಸಾಧನ ಪರಿಚಯಿಸಿದೆ. ಇದು ಚಳಿಗಾಲದಲ್ಲಿ ಹೊರಾಂಗಣ AQI (ವಾಯು ಗುಣಮಟ್ಟ ಸೂಚ್ಯಂಕ) ಹೆಚ್ಚಳವನ್ನು ನಿರೀಕ್ಷಿಸುತ್ತಾ, ಡೈಸನ್ ತನ್ನ HEPA H13 ಫಿಲ್ಟರ್ ಅದರ ಪ್ಯೂರಿಫೈಯರ್ ಕೂಲ್ ಜೆನ್ 1, 99.95 ಪ್ರತಿಶತದಷ್ಟು ಮಾಲಿನ್ಯಕಾರಕಗಳನ್ನು 0.1 ಮೈಕ್ರಾನ್‌ಗಳಷ್ಟು ಪರಿಣಾಮಕಾರಿಯಾಗಿ ಸೆರೆಹಿಡಿಯಲು ಸಮರ್ಥವಾಗಿದೆ ಎಂದು ತಿಳಿಸಿದೆ. ಕೋಣೆಯ ಶುದ್ಧೀಕರಣಕ್ಕಾಗಿ ಈ ಏರ್ ಪ್ಯೂರಿಫೈಯರ್ ಪ್ರತಿ ಸೆಕೆಂಡಿಗೆ 290 ಲೀಟರ್ ಗಾಳಿಯ ಹರಿವನ್ನು ಒದಗಿಸುತ್ತದೆ ಎಂದು ಹೇಳಿದೆ.

ಡೈಸನ್ ಪ್ಯೂರಿಫೈಯರ್ ಕೂಲ್ ಜನ್ 1 (Dyson Purifier Cool Gen 1) ಅಲರ್ಜಿನ್ ಮತ್ತು ಬ್ಯಾಕ್ಟೀರಿಯಾ ನಿವಾರಿಸುವ ಫೀಚರ್ಸ್‌ಗಳನ್ನು ಒಳಗೊಂಡಿದೆ. ಅಲ್ಲದೇ ಈ ಏರ್ ಪ್ಯೂರಿಫೈಯರ್ ಬಿಳಿ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇನ್ನುಳಿದಂತೆ ಡೈಸನ್ ಪ್ಯೂರಿಫೈಯರ್ ಕೂಲ್ ಜನ್ 1 ಡಿವೈಸ್‌ನ ಬೆಲೆ ಎಷ್ಟು ಹಾಗೂ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡೈಸನ್ ಪ್ಯೂರಿಫೈಯರ್ ಕೂಲ್ ಜನ್ 1 ಫೀಚರ್ಸ್
ಪ್ಯೂರಿಫೈಯರ್ ಕೂಲ್ ಜೆನ್1 ಸಾಧನವು ಎಲ್ಇಡಿ ಸ್ಕ್ರೀನ್ ಅನ್ನು ಹೊಂದಿದೆ. ಇದನ್ನು ನೈಜ ಸಮಯದಲ್ಲಿ ಒಳಾಂಗಣ ಮಾಲಿನ್ಯದ ಮಟ್ಟವನ್ನು ವೀಕ್ಷಿಸಲು ಬಳಸಬಹುದು. ಇದು ಏರ್ ಪ್ಯೂರಿಫೈಯರ್ ಕಣಗಳ ಮಾಲಿನ್ಯವನ್ನು ಆಟೋಮ್ಯಾಟಿಕ್ ಆಗಿ ಪತ್ತೆ ಮಾಡುತ್ತದೆ. ಇದು ನಿಶ್ಯಬ್ದ ಕಾರ್ಯಾಚರಣೆ ಸೆಟ್ಟಿಂಗ್‌ಗಳು ಮತ್ತು ಮಂದ ಬೆಳಕಿನ ಡಿಸ್‌ಪ್ಲೇ ನೈಟ್ ಮೋಡ್ ಆಯ್ಕೆ ಸಹ ಪಡೆದುಕೊಂಡಿದೆ. ಹಾಗೆಯೇ ಏರ್ ಪ್ಯೂರಿಫೈಯರ್ ಅನ್ನು ಆಟೋಮ್ಯಾಟಿಕ್ ಆಗಿ ಸ್ಥಗಿತಗೊಳಿಸಲು ಸ್ಲೀಪ್ ಟೈಮರ್ ಕಾರ್ಯದ ಆಯ್ಕೆ ಪಡೆದಿದೆ.

ಇನ್ನು ಫಿಲ್ಟರ್ ಅನ್ನು ಬದಲಾಯಿಸುವ ಸಮಯ ಬಂದಾಗ ಈ ಡಿವೈಸ್ ಬಳಕೆದಾರರಿಗೆ ಅಲರ್ಟ್ ನೀಡುತ್ತದೆ. ಅಲ್ಲದೇ ಈ ಸಾಧನ ನಿರ್ವಹಣೆ ಕೂಡಾ ಸುಲಭಗೊಳಿಸುತ್ತದೆ. ಗಾಳಿಯನ್ನು ಸ್ವಚ್ಛಗೊಳಿಸುವ ಭಾಗವಾಗಿ ಏರ್ ಪ್ಯೂರಿಫೈಯರ್ ಅಲರ್ಜಿನ್ ಮತ್ತು ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ. ಅಲ್ಲದೇ ಇದು ಅನಿಲಗಳು, ವಾಸನೆಗಳು ಮತ್ತು VOC ಗಳನ್ನು ಸೆರೆ ಹಿಡಿಯುತ್ತದೆ.
ಶುದ್ಧೀಕರಿಸಿದ ತಂಪಾಗಿಸುವ ಗಾಳಿಯನ್ನು ಪರಿಣಾಮಕಾರಿಯಾಗಿ ವಿತರಣೆ ಮಾಡಲು ಈ ಏರ್ ಪ್ಯೂರಿಫೈಯರ್ ಕಂಪನಿಯ ಕೋರ್ ಫಿಲ್ಟರೇಶನ್ ಮತ್ತು ಏರ್ ಫ್ಲೋ ತಂತ್ರಜ್ಞಾನದ ನೆರವು ಪಡೆಯುತ್ತದೆ. ಹಾಗೆಯೇ ಇದರ ಜೊತೆಯಲ್ಲಿ, ಆಣ್ವಿಕ ಮಟ್ಟದಲ್ಲಿ ಅಲ್ಟ್ರಾ-ಫೈನ್ ಕಣಗಳು, ಅಲರ್ಜಿನ್ಗಳು, ಬ್ಯಾಕ್ಟೀರಿಯಾಗಳು ಮತ್ತು ವೈರಸ್ಗಳನ್ನು ಸೆರೆಹಿಡಿಯಲು ಆಕ್ಟಿವೇಟೆಡ್ ಕಾರ್ಬನ್ ಅನ್ನು ಬಳಕೆ ಮಾಡಲಾಗುತ್ತದೆ.

ಡೈಸನ್ ಪ್ಯೂರಿಫೈಯರ್ ಕೂಲ್ ಜನ್ 1 ಸಾಧನವು ಸಂಸ್ಥೆಯ ಪ್ಯೂರಿಫೈಯರ್ ಲಿಸ್ಟ್‌ಗೆ ಹೊಸ ಸೇರ್ಪಡೆ ಆಗಿದೆ. ಇದರಲ್ಲಿ ಪ್ಯೂರಿಫೈಯರ್ ಕೂಲ್ ಫಾರ್ಮಾಲ್ಡಿಹೈಡ್, ಪ್ಯೂರಿಫೈಯರ್ ಕೂಲ್ ಮತ್ತು ಪ್ಯೂರಿಫೈಯರ್ ಬಿಗ್ + ಕ್ವೈಟ್ ಸಹ ಸೇರಿವೆ.
ಬೆಲೆ ಎಷ್ಟು ಮತ್ತು ಲಭ್ಯತೆಯ ಮಾಹಿತಿ
ಡೈಸನ್ ಪ್ಯೂರಿಫೈಯರ್ ಕೂಲ್ ಜನ್ 1 ಡಿವೈಸ್ ಭಾರತದಲ್ಲಿ 39,900 ರೂ. ಪ್ರೈಸ್‌ಟ್ಯಾಗ್ ಪಡೆದಿದೆ. ಆದಾಗ್ಯೂ, ಡೈಸನ್ ಸಂಸ್ಥೆಯು ಹಬ್ಬದ ವೇಳೆಯಲ್ಲಿ 7,000ರೂ. ರಿಯಾಯಿತಿಯನ್ನು ಲಭ್ಯ ಮಾಡುತ್ತದೆ. ಹೀಗಾಗಿ ಈ ಡಿವೈಸ್ ಅನ್ನು ಗ್ರಾಹಕರು 32,900ರೂ. ಗಳ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಸಂಸ್ಥೆಯ ಅಧಿಕೃತ ವೆಬ್‌ಸೈಟ್ Dyson.in ಅಥವಾ ಡೈಸನ್ ಡೆಮೊ ಸ್ಟೋರ್‌ಗಳಿಂದ ನೇರವಾಗಿ ಈ ಡಿವೈಸ್ ಖರೀದಿಸುವಾಗ ಮಾತ್ರ ರಿಯಾಯಿತಿಯನ್ನು ಪಡೆಯಬಹುದು ಎಂಬುದನ್ನು ಗಮನಿಸಿ.


Click it and Unblock the Notifications








